Onam 2022: ಓಣಂ ಸದ್ಯ ಸ್ಪೆಷಲ್ ಅವಿಲ್​ ನೀವೂ ಟ್ರೈ ಮಾಡಿ, ಇಲ್ಲಿದೆ ನೋಡಿ ರೆಸಿಪಿ

Avial Recipe: ಎಲ್ಲ ತರಕಾರಿಗಳು ಬೆಂದ ನಂತರ ಆ ತರಕಾರಿಗೆ ತಯಾರಿಸಿಕೊಂಡ ತೆಂಗಿನಕಾಯಿ ಮಿಶ್ರಣವನ್ನು ಹಾಕಿ.  ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗ್ಯಾಸ್​ ಆಫ್​ ಮಾಡಿ.

ಅವಿಲ್​

ಅವಿಲ್​

  • Share this:
ಓಣಂ ಹಬ್ಬ (Onam Festival) ಕೇರಳದ (Kerala) ಜನರ ಪ್ರೀತಿಯ ಹಬ್ಬ. ಇದನ್ನು ಆಗಸ್ಟ್​ (August) ಮತ್ತು ಸೆಪ್ಟೆಂಬರ್​ನಲ್ಲಿ (September) ಆಚರಿಸಲಾಗುತ್ತದೆ. ಓಣಂ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ, ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ. ಇದನ್ನು ತಿರು-ಓಣಂ ಅಥವಾ ತಿರುವೊಣಂ ಎಂದೂ ಕರೆಯುತ್ತಾರೆ. ಆಚರಣೆಗಳು ಅಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ, ಇದನ್ನು ಹಬ್ಬದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ಬಗ್ಗೆ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ. ಹಬ್ಬದ ಇತಿಹಾಸ ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಆತನನ್ನ ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ. ಇನ್ನು ಈ ಹಬ್ಬದ ಹತ್ತು ದಿನಗಳನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.

ಎಲ್ಲಾ ಮಲಯಾಳಿಗಳು ಪ್ರತಿ ವರ್ಷ ಓಣಂ ಹಬ್ಬವನ್ನು ಎದುರು ನೋಡುತ್ತಾರೆ. ಇದು ಕೇರಳದ ಸುಗ್ಗಿಯ ಹಬ್ಬ ಮತ್ತು ಮಲಯಾಳಿ ಸಂಸ್ಕೃತಿಯ ಆಚರಣೆ ಅತಿ ದೊಡ್ಡ ಹಬ್ಬವಾಗಿದೆ. ಇದು ಸಾಮಾನ್ಯವಾಗಿ ಆಗಸ್ಟ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಆಚರಿಸಲಾಗುತ್ತದೆ. ಓಣಂ ಆಚರಣೆಯ ಸಂದರ್ಭದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಓಣಂ ಹಬ್ಬವು ಹತ್ತು ದಿನಗಳ ಕಾಲ ಕೇರಳದ ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಈ ಸಮಯದಲ್ಲಿ ಓಣಂ ಸದ್ಯವನ್ನು ಮಾಡಿ ಸವಿಯಲಾಗುತ್ತದೆ.

ಅತ್ಯಂತ ಗಮನಾರ್ಹವಾದ ಓಣಂ ಆಚರಣೆ ಎಂದರೆ ಓಣಂ ಸದ್ಯ, ಬೆರಗುಗೊಳಿಸುವ ದೋಣಿ ರೇಸ್ ಮತ್ತು ಆಕರ್ಷಕವಾದ ಕೈಕೊಟ್ಟಿಕಲಿ ನೃತ್ಯ. ಓಣಂ ಸದ್ಯದ ಮಾಡಲಾಗುವ  ಅವಿಲ್ ಬಹಳ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಸಹ ಬಹಳ ಸುಲಭ.

ಅವಿಯಲ್ ಎಂದೂ ಕರೆಯಲ್ಪಡುವ ಅವಿಲ್ ಕೇರಳದ ಸಾಂಪ್ರದಾಯಿಕ ತರಕಾರಿ ಭಕ್ಷ್ಯವಾಗಿದೆ. ವಿವಿಧ ತರಕಾರಿಗಳು, ತಾಜಾ ತೆಂಗಿನಕಾಯಿ, ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ ಮತ್ತು ಮೊಸರು ಹಾಕಿ ಇದನ್ನು ಮಾಡಲಾಗುತ್ತದೆ. ಹೂಕೋಸು, ಕ್ಯಾರೆಟ್, ಬಟಾಣಿ, ಬೀನ್ಸ್‌ನಂತಹ ಸಾಮಾನ್ಯ ತರಕಾರಿಗಳ್ನು ಇದಕ್ಕೆ ಬಳಸಲಾಗುವುದಿಲ್ಲ. ತರಕಾರಿಗಳು ವಿಭಿನ್ನವಾಗಿರುತ್ತದೆ ಮತ್ತು ಲಭ್ಯವಿರುವುದನ್ನು ಅವಲಂಬಿಸಿ ಹೆಚ್ಚಾಗಿ ಮಾಡಲಾಗುತ್ತದೆ.

ಮಾಹಿತಿ ಪ್ರಕಾರ, ಮಹಾಭಾರತದ ಭೀಮನು ಅವಿಯಲ್ ಅನ್ನು ಕಂಡುಹಿಡಿದನು. ದಂತಕಥೆಯ ಪ್ರಕಾರ, ಅವರ 14 ವರ್ಷಗಳ ವನವಾಸದ ಸಮಯದಲ್ಲಿ, ಭೀಮ ಅಡುಗೆಯವನಾಗಿ ರಾಜ ವಿರಾಟನ ರಾಜಮನೆತನದ ಕೆಲ ಸ ಮಾಡುತ್ತಿದ್ದ. ಆ ಸಮಯದಲ್ಲಿ ಅವರು ಈ ವಿಶೇಷ ಖಾದ್ಯವನ್ನು  ಕಂಡುಹಿಡಿದ ಎಂದು ಹೇಳಲಾಗುತ್ತದೆ.

ಅವಿಲ್​ ಮಾಡಲು ಬೇಕಾಗುವ ಸಾಮಾಗ್ರಿಗಳು

ನುಗ್ಗೆಕಾಯಿ - 5

ಕ್ಯಾರೆಟ್- 4

ಮಂಗಳೂರು ಸೌತೆಕಾಯಿ: 1

ಬಾಳೆಕಾಯಿ- 2

ಕುಂಬಳಕಾಯಿ: ಅರ್ಧ

ಸೋರೆಕಾಯಿ- 1

ಅವಿಲ್​ ಮಾಡುವ ವಿಧಾನ

ಮೊದಲು ಎಲ್ಲಾ ತರಕಾರಿಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.  ಸೋರೆಕಾಯಿ, ಕುಂಬಳಕಾಯಿ, ಡ್ರಮ್ ಸ್ಟಿಕ್ಸ್, ಮಂಗಳೂರು ಸೌತೆಕಾಯಿ, ಬಾಳೆಕಾಯಿ ಮತ್ತು ಹಸಿರು ಬೀನ್ಸ್ ತೊಳೆದು ಒಣಗಿಸಿಕೊಳ್ಳಿ. ನಂತರ ಅವುಗಳನ್ನು ಮಧ್ಯಮದಿಂದ ಉದ್ದವಾಗಿ ಸಿಪ್ಪೆ ತೆಗೆದುಕೊಂಡು ಕತ್ತರಿಸಿಕೊಳ್ಳಿ. ತರಕಾರಿಗಳನ್ನು ಸ್ವಲ್ಪ ದಪ್ಪ, ಹಾಗೂ ಆಲೂಗೆಡ್ಡೆಯನ್ನು ಫ್ರೆಂಚ್ ಫ್ರೈ ರೀತಿಯಲ್ಲಿ ಕತ್ತರಿಸಬೇಕಾಗುತ್ತದೆ. ಕತ್ತರಿಸಿದ ತರಕಾರಿಗಳನ್ನು ಪಕ್ಕಕ್ಕೆ ಇಟ್ಟುಕೊಳ್ಳಿ.

ಇದನ್ನೂ ಓದಿ: ಓಣಂ ಸ್ಪೆಷಲ್​ ಬೀಟ್​ರೂಟ್​ ಪಚಡಿ ಮಾಡೋದು ಬಹಳ ಸುಲಭ, ರೆಸಿಪಿ ಇಲ್ಲಿದೆ

ನಂತರ ಅವುಗಳನ್ನು ಮಧ್ಯಮದಿಂದ ಉದ್ದವಾಗಿ ಸಿಪ್ಪೆ ತೆಗೆದುಕೊಂಡು ಕತ್ತರಿಸಿಕೊಳ್ಳಿ. ತರಕಾರಿಗಳನ್ನು ಸ್ವಲ್ಪ ದಪ್ಪ, ಹಾಗೂ ಆಲೂಗೆಡ್ಡೆಯನ್ನು ಫ್ರೆಂಚ್ ಫ್ರೈ ರೀತಿಯಲ್ಲಿ ಕತ್ತರಿಸಬೇಕಾಗುತ್ತದೆ. ಕತ್ತರಿಸಿದ ತರಕಾರಿಗಳನ್ನು ಪಕ್ಕಕ್ಕೆ ಇಟ್ಟುಕೊಳ್ಳಿ.

ಈಗ ಮೊಸರನ್ನು ಸ್ವಲ್ಪ ನೀರಾಗಿ ಮಾಡಿಕೊಳ್ಳಿ. ನಂತರ ಗ್ರೈಂಡರ್ ಜಾರ್ ಅಥವಾ ಬ್ಲೆಂಡರ್‌ನಲ್ಲಿ 1 ಕಪ್  ತುರಿದ ತೆಂಗಿನಕಾಯಿ, 1 ಟೀಚಮಚ ಜೀರಿಗೆ ಮತ್ತು 2 ರಿಂದ 3 ಹಸಿರು ಮೆಣಸಿನಕಾಯಿಗಳನ್ನು ಹಾಕಿ, ⅓ ಗೆ ½ ಕಪ್ ನೀರು ಸೇರಿಸಿ ಮತ್ತು ಒರಟಾಗಿ ಪೇಸ್ಟ್‌ ರುಬ್ಬಿಕೊಳ್ಳಿ.

ಬಾಣಲೆ ಅಥವಾ ಪಾತ್ರೆಯನ್ನು ತೆಗೆದುಕೊಳ್ಳಿ, ಅದರಲ್ಲಿ ತರಕಾರಿ ಹಾಕಿ, ರುಚಿಗೆ ತಕ್ಕಂತೆ ½ ಟೀಚಮಚ ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ. 1 ಕಪ್ ನೀರು ಸೇರಿಸಿ.  ಎಲ್ಲವನ್ನೂ ಮಿಕ್ಸ್ ಮಾಡಿ. 15 ನಿಮಿಷ ಬೇಯಿಸಿ.

ಇದನ್ನೂ ಓದಿ: ಹಬ್ಬಕ್ಕೆ ಮನೆಗೆ ತರುವ ಗಣಪನ ಸೊಂಡಿಲು ಎಡಕ್ಕೇ ಯಾಕೆ ತಿರುಗಿರುತ್ತೆ? ಇದರ ಹಿಂದಿದೆ ಸಖತ್ ಸ್ಟೋರಿ!

ಎಲ್ಲ ತರಕಾರಿಗಳು ಬೆಂದ ನಂತರ ಆ ತರಕಾರಿಗೆ ತಯಾರಿಸಿಕೊಂಡ ತೆಂಗಿನಕಾಯಿ ಮಿಶ್ರಣವನ್ನು ಹಾಕಿ.  ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗ್ಯಾಸ್​ ಆಫ್​ ಮಾಡಿ, 1 ರಿಂದ 2 ಟೇಬಲ್​ ಸ್ಟೂನ್​ ತೆಂಗಿನ ಎಣ್ಣೆಯನ್ನು ಸೇರಿಸಿದರೆ ಅವಿಲ್​ ರೆಡಿ
Published by:Sandhya M
First published: