ಇಂದು ವಿಶ್ವ ಯೋಗ ದಿನ: ಅರಿಯೋಣ ನಿತ್ಯದ ಜೀವನದಲ್ಲಿ ಯೋಗಾಸನದ ಮಹತ್ವ

news18
Updated:June 21, 2018, 7:16 AM IST
ಇಂದು ವಿಶ್ವ ಯೋಗ ದಿನ: ಅರಿಯೋಣ ನಿತ್ಯದ ಜೀವನದಲ್ಲಿ ಯೋಗಾಸನದ ಮಹತ್ವ
news18
Updated: June 21, 2018, 7:16 AM IST
ನ್ಯೂಸ್ 18 ಕನ್ನಡ 

ಸಂಸ್ಕೃತ ಭಾಷೆಯಲ್ಲಿ, ಯೋಗ ಎಂದರೆ "ಏಕತೆ". ಈ ಪದವು ಮಾನಸಿಕ ಮತ್ತು ದೈಹಿಕ ಸುಸ್ಥಿತಿಗಳ ಸಾಮರಸ್ಯವಾಗಿದೆ. ಯೋಗದ ಎಲ್ಲ ವ್ಯಾಯಾಮಗಳು ಮನಸ್ಸನ್ನು ಶುಚಿಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ. ಇಂತಹ ಯೋಗದ ಕುರಿತು ವಿಶ್ವ ಯೋಗ ದಿನವಾದ ಇಂದು ಕೊಂಚ ಅರಿಯೋಣ.

ಯೋಗ ತರಗತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲಿಗೆ, ಪ್ರತಿಯೊಬ್ಬರೂ ಮನಸ್ಸನ್ನು ಮುಕ್ತಗೊಳಿಸಬೇಕು, ನಂತರ ಉಸಿರಾಟದ ವ್ಯಾಯಾಮ, ಕೊನೆಯದಾಗಿ ಸ್ನಾಯುಗಳ ವ್ಯಾಯಾಮದಿಂದ ಕೊನೆಗೊಳ್ಳುತ್ತದೆ. ವ್ಯಾಯಾಮ ಆರಂಭಕ್ಕೆ ಮೂರು ಗಂಟೆಗಳ ಮೊದಲು, ಹೊಟ್ಟೆ ತುಂಬ ಆಹಾರ ತಿನ್ನುವುದನ್ನು ಶಿಫಾರಸು ಮಾಡುವುದಿಲ್ಲ.

ಯೋಗದ ಪ್ರಯೋಜನಗಳು

ಆರೋಗ್ಯ:  ಯೋಗ ದೇಹವನ್ನು ಬಲಪಡಿಸುತ್ತದೆ. ಪ್ರಮುಖ ಅಂಗಗಳ ಕೆಲಸವನ್ನು ಸುಧಾರಿಸಿ,, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮೆದುಳಿನ ಕಾರ್ಯವನ್ನು ಸಕ್ರಿಯಗೊಳಿಸುವುದರ ಜತೆಗೆ, ಹಾರ್ಮೋನ್​ಗಳ ಸಮತೋಲನವನ್ನು ನಿಯಂತ್ರಿಸುತ್ತದೆ.

ತೂಕವನ್ನು ಕಳೆದುಕೊಳ್ಳಿ:  ಹೆಚ್ಚುವರಿ ಕೊಬ್ಬುನ್ನು ತೆಗೆದುಹಾಕು, ದೇಹವನ್ನು ಸಪೂರ ಮತ್ತು ಸುಂದರವಾಗಿರುಸುತ್ತದೆ.
ಸ್ನಾಯುಗಳನ್ನು ಬಲಪಡಿಸುವುದು:  ದಿನನಿತ್ಯದ ಯೋಗದ ದೇಹದಲ್ಲಿರುವ ಸ್ನಾಯುಗಳನ್ನು ಬಲಪಡಿಸುತ್ತದೆ. ಸ್ನಾಯುಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.
Loading...

ಸೌಂದರ್ಯ:  ಯೋಗ ಧನಾತ್ಮಕವಾಗಿ ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಾಮರಸ್ಯ:  ಯೋಗ ದೇಹದ ಅಗತ್ಯಗಳನ್ನು ಪೂರೈಸಲು ವ್ಯಕ್ತಿಯನ್ನು ಸಜ್ಜುಗೊಳಿಸುತ್ತದೆ.

ಹೆಚ್ಚಿದ ಒತ್ತಡ ಪ್ರತಿರೋಧ: ಒತ್ತಡದ ಸಂದರ್ಭಗಳಿಗೆ ಕಡಿಮೆ ಪ್ರತಿಕ್ರಿಯೆ ಮಾಡುವುದನ್ನು ಯೋಗ ಕಲಿಸುತ್ತದೆ.

ಕೆಟ್ಟ ಪದ್ಧತಿಗಳಿಂದ ನಿರಾಕರಣೆ: ಯೋಗದಲ್ಲಿ ತೊಡಗಿರುವ ಜನರು, ಮದ್ಯ ಮತ್ತು ಮಪಾನ ಮಾಡುವುದನ್ನು ನಿಲ್ಲಿಸುತ್ತಾರೆ.

 
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...