• Home
  • »
  • News
  • »
  • lifestyle
  • »
  • Omicron Prevention: ದೇಶದಲ್ಲಿ ಒಮಿಕ್ರಾನ್ ವೈರಸ್ ಉಪ ರೂಪಾಂತರದ ಆರ್ಭಟ, ರಕ್ಷಣಾತ್ಮಕ ಕ್ರಮಗಳು ಹೀಗಿವೆ!

Omicron Prevention: ದೇಶದಲ್ಲಿ ಒಮಿಕ್ರಾನ್ ವೈರಸ್ ಉಪ ರೂಪಾಂತರದ ಆರ್ಭಟ, ರಕ್ಷಣಾತ್ಮಕ ಕ್ರಮಗಳು ಹೀಗಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಮಿಕ್ರಾನ್ ವೈರಸ್ ನ ಉಪ ರೂಪಾಂತರ ಆತಂಕ ಹೆಚ್ಚಿಸಿದೆ. ಒಮಿಕ್ರಾನ್ ವೈರಸ್ ನ ಉಪ ರೂಪಾಂತರದ ರೋಗ ಲಕ್ಷಣಗಳು ಗಂಭೀರವಾಗಿಲ್ಲ. ಆದರೆ ಇದು ಪ್ರತಿಕಾಯ ಕಡಿಮೆ ಮಾಡುವ ಹಾಗೂ ವೇಗವಾಗಿ ಹರಡುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂಬುದು ಕಂಡು ಬಂದಿದೆ. ಜನರು ಮಾರಣಾಂತಿಕ ವೈರಸ್ ನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು.

ಮುಂದೆ ಓದಿ ...
  • Share this:

    ಕೊರೊನಾ ವೈರಸ್ (Corona Virus) ಸಾಂಕ್ರಾಮಿಕ ಚಳಿಗಾಲದ ಈ ದಿನಗಳಲ್ಲಿ ಮತ್ತೆ ಹೆಚ್ಚುತ್ತಿದೆ. ಕೊರೊನಾ ಸಾಂಕ್ರಾಮಿಕ ಮತ್ತೆ ದೇಶದಲ್ಲಿ (Country) ಉಲ್ಬಣವಾಗುತ್ತಿದ್ದು, ಜನರಲ್ಲಿ (People) ಜೀವಭಯ ಹೆಚ್ಚಿಸಿದೆ. ಕೊರೊನಾ ಒಮಿಕ್ರಾನ್ ವೈರಸ್ ನ ಉಪ ರೂಪಾಂತರ ಜಗತ್ತಿನಾದ್ಯಂತ ತನ್ನ ತಾಂಡವ ನಡೆಸುತ್ತಿದೆ. ಒಮಿಕ್ರಾನ್ ವೈರಸ್ ನ ಉಪ ರೂಪಾಂತರ (Omicron Virus Sub Variant) ಪ್ರಪಂಚದಾದ್ಯಂತ ಹಾನಿ ಉಂಟು ಮಾಡುತ್ತಿದೆ. ಈಗ ಭಾರತದಲ್ಲೂ ಒಮಿಕ್ರಾನ್ ವೈರಸ್ ನ ಉಪ ರೂಪಾಂತರದ ಸೋಂಕು ತಟ್ಟಿದೆ. ಒಮಿಕ್ರಾನ್ ವೈರಸ್ ನ ಉಪ ರೂಪಾಂತರಗಳಾದ ಎಕ್ಸ್ ಬಿಬಿ (ಬಿಎ.2.75 ಮತ್ತು ಬಿಜೆ.1 ರ ಸಂಯೋಜನೆ), ಬಿಕ್ಯೂ.1 ಮತ್ತು ಬಿಕ್ಯೂ.1.1, ಬಿಎಫ್.7 ಕಾರಣದಿಂದ ಕೊರೋನಾದ ಹೊಸ ಅಲೆ ಹೆಚ್ಚಿದೆ.


    ಒಮಿಕ್ರಾನ್ ವೈರಸ್ ನ ಉಪ ರೂಪಾಂತರ ಅಲೆ


    ಒಮಿಕ್ರಾನ್ ವೈರಸ್ ನ ಉಪ ರೂಪಾಂತರ ಆತಂಕ ಹೆಚ್ಚಿಸಿದೆ. ಒಮಿಕ್ರಾನ್ ವೈರಸ್ ನ ಉಪ ರೂಪಾಂತರದ ರೋಗ ಲಕ್ಷಣಗಳು ಗಂಭೀರವಾಗಿಲ್ಲ. ಆದರೆ ಇದು ಪ್ರತಿಕಾಯ ಕಡಿಮೆ ಮಾಡುವ ಹಾಗೂ ವೇಗವಾಗಿ ಹರಡುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂಬುದು ಕಂಡು ಬಂದಿದೆ. ಜನರು ಮಾರಣಾಂತಿಕ ಒಮಿಕ್ರಾನ್ ವೈರಸ್ ನ ಉಪ ರೂಪಾಂತರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು.


    ಓಮಿಕ್ರಾನ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಿ


    ಚಳಿಗಾಲ ಸಮೀಪಿಸುತ್ತಿದ್ದಂತೆ ಕೋವಿಡ್ ಸೋಂಕಿನ ಹೊಸ ಅಲೆಯ ಸಂಭವ ಹೆಚ್ಚು ಎಂದಿದ್ದಾರೆ ತಜ್ಞರು. ಬೂಸ್ಟರ್ ಲಸಿಕೆ ಹಾಗೂ ಕೋವಿಡ್ ವ್ಯಾಕ್ಸಿನೇಷನ್ ಮಾತ್ರವಲ್ಲದೇ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವುದು ಓಮಿಕ್ರಾನ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಪೌಷ್ಟಿಕತಜ್ಞ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ, ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಹಾರಗಳು ಚಳಿಗಾಲದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಕರೋನಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.


    ಮೊಟ್ಟೆ


    ಮೊಟ್ಟೆಯ ವೈಟ್ ಭಾಗ ಸೇವನೆ ಮಾಡುವುದು ದೇಹಕ್ಕೆ ಪ್ರೋಟೀನ್ ನೀಡುತ್ತದೆ. ಮೊಟ್ಟೆಯ ಹಳದಿ ಲೋಳೆ ಭಾಗವು ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್‌ ಮತ್ತು ಮೊಟ್ಟೆಯ ಬಿಳಿ ಭಾಗದಿಂದ ಅಗತ್ಯ ಅಮೈನೋ ಆಮ್ಲ ನೀವು ಸೇವನೆ ಮಾಡುವ ಮೂಲಕ ಪಡೆಯಬಹುದು. ಮೊಟ್ಟೆಗಳು ಮತ್ತು ಅವುಗಳ ಪೌಷ್ಠಿಕಾಂಶದ ಗುಣಲಕ್ಷಣಗಳು ಉರಿಯೂತ ತಡೆಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಆಗಿದೆ.


    ವಾಲ್ನಟ್


    ವಾಲ್ನಟ್ಸ್ ಒಮೆಗಾ -3 ಕೊಬ್ಬಿನಾಮ್ಲ ಹೊಂದಿದೆ. ಜೊತೆಗೆ ಇದು ವಿಟಮಿನ್ ಇ ಮತ್ತು ಪಾಲಿಫಿನಾಲ್ ಸೇರಿ ಅನೇಕ ಇತರ ಜೈವಿಕ ಸಕ್ರಿಯ ಸಂಯುಕ್ತ ಹೊಂದಿದೆ. ವಾಲ್ನಟ್ಸ್ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಜೈವಿಕ ಚಟುವಟಿಕೆ ಹೊಂದಿದೆ. ಇದು ಕ್ಯಾನ್ಸರ್, ಹೃದಯ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ.


    ಅರಿಶಿನ ಮತ್ತು ಕಪ್ಪು ಮೆಣಸು


    ಅರಿಶಿನ ಉರಿಯೂತದ, ಕೊಲೆರೆಟಿಕ್, ಆಂಟಿಮೈಕ್ರೊಬಿಯಲ್ ಮತ್ತು ಕಾರ್ಮಿನೇಟಿವ್ ಗುಣಲಕ್ಷಣ ಹೊಂದಿದೆ. ಅರಿಶಿನವನ್ನು ವಿವಿಧ ಉಸಿರಾಟದ ಪರಿಸ್ಥಿತಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಆಸ್ತಮಾ, ಶ್ವಾಸನಾಳದ ಹೈಪರ್ಆಕ್ಟಿವಿಟಿ ಮತ್ತು ಅಲರ್ಜಿ ತಡೆಯುತ್ತದೆ.


    ಯಕೃತ್ತಿನ ಅಸ್ವಸ್ಥತೆ, ಅನೋರೆಕ್ಸಿಯಾ, ಸಂಧಿವಾತ, ಮಧುಮೇಹದ ಗಾಯಗಳು, ಮೂಗು ಸೋರುವಿಕೆ, ಕೆಮ್ಮು ಮತ್ತು ಸೈನಸೈಟಿಸ್ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ.


    ಪೇರಳೆ ಹಣ್ಣು


    ಪೇರಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ. ಪೇರಳೆಯ ತಿರುಳಿನಲ್ಲಿ ಆಸ್ಕೋರ್ಬಿಕ್ ಆಮ್ಲ, ಕ್ಯಾರೊಟಿನಾಯ್ಡ್ಗಳಿವೆ.


    ಇದು ಉತ್ಕರ್ಷಣ ನಿರೋಧಕ, ಆಂಟಿ-ಹೈಪರ್ಗ್ಲೈಸೆಮಿಕ್ ಚಟುವಟಿಕೆ ಹೊಂದಿದೆ. ಆದರೆ ಬೀಜಗಳು ಗ್ಲೈಕೋಸೈಡ್‌ಗಳು, ಕ್ಯಾರೊಟಿನಾಯ್ಡ್‌ ಮತ್ತು ಫೀನಾಲಿಕ್ ಸಂಯುಕ್ತ ಹೊಂದಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಬೀಜ


    ಸೂರ್ಯಕಾಂತಿ, ಚಿಯಾ, ಅಗಸೆ, ಕುಂಬಳಕಾಯಿ, ಸೌತೆಕಾಯಿ, ಹಲೀಮ್ ಬೀಜ ಸೇರಿ ಎಲ್ಲಾ ಸಾಮಾನ್ಯ ಬೀಜಗಳು ವಿಭಿನ್ನ ಸಂಯೋಜನೆ ಹೊಂದಿವೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಈ ಬೀಜಗಳು ಗಣನೀಯ ಪ್ರಮಾಣದ ಪ್ರೋಟೀನ್, ಫೈಬರ್, ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಫೈಟೊಸ್ಟೆರಾಲ್‌ಗಳು, ಸಂಯುಕ್ತ ಹೊಂದಿದೆ. ಆರೋಗ್ಯಕ್ಕೆ ಪ್ರಯೋಜನಕಾರಿ.

    Published by:renukadariyannavar
    First published: