Omicron: ಇವುಗಳನ್ನು ತಿಂದ್ರೆ ಓಮಿಕ್ರಾನ್ ನಿಮ್ಮ ಹತ್ತಿರಕ್ಕೂ ಸುಳಿಯಲ್ವಂತೆ!

ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಹಾಕಿಕೊಳ್ಳುವುದು ಅತ್ಯಗತ್ಯ ನಿಜ, ಆದರೆ ಜೊತೆಗೆ ನಮ್ಮ ದೇಹ ಮತ್ತು ಅದರ ರೋಗ ನಿರೋಧಕ ವ್ಯವಸ್ಥೆಯನ್ನು ವೈರಸ್ ವಿರುದ್ಧ ಹೋರಾಡಲು ಸಿದ್ಧಪಡಿಸುವುದು ಕೂಡ ಬಹಳ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್ -19 ಎರಡನೇ ಅಲೆ(COVID-19 Second Wave)ಯ ಸಮಯದಲ್ಲಿ ಭಾರತ(India)ವು ಅತ್ಯಂತ ದೊಡ್ಡ ಹೊಡೆತವನ್ನು ಅನುಭವಿಸಿತು. ಇತ್ತೀಚೆಗೆ ಪತ್ತೆಯಾಗಿರುವ ಅದರ ರೂಪಾಂತರವಾದ ಓಮಿಕ್ರಾನ್(Omicron) ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವರದಿಯಾಗಿದ್ದು, ಹೆಚ್ಚಿನವರು ಊಹಿಸುತ್ತಿರುವ ಮೂರನೇ ಅಲೆಯಾಗಿ ಅಪ್ಪಳಿಸಬಹುದು ಎಂದು ಕೆಲವರು ಭಯಪಡುತ್ತಿದ್ದಾರೆ. ಮೂರನೇ ಅಲೆ ಹೌದೋ ಅಲ್ಲವೋ, ವೈರಸ್(Virus) ಹರಡುವುದನ್ನು ತಡೆಗಟ್ಟಲು, ನಾವೆಲ್ಲರೂ ಕೋವಿಡ್ -19(COVID-19) ನಿಯಮಗಳನ್ನು ಅನುಸರಿಸುವುದನ್ನು ಮುಂದುವರೆಸುವುದು ಅಗತ್ಯವಾಗಿದೆ.

ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಹಾಕಿಕೊಳ್ಳುವುದು ಅತ್ಯಗತ್ಯ ನಿಜ, ಆದರೆ ಜೊತೆಗೆ ನಮ್ಮ ದೇಹ ಮತ್ತು ಅದರ ರೋಗ ನಿರೋಧಕ ವ್ಯವಸ್ಥೆಯನ್ನು ವೈರಸ್ ವಿರುದ್ಧ ಹೋರಾಡಲು ಸಿದ್ಧಪಡಿಸುವುದು ಕೂಡ ಬಹಳ ಮುಖ್ಯ. ಈ ವಿಷಯದಲ್ಲಿ ಅಲ್ಪಕಾಲಿಕ ರೋಗ ನಿರೋಧಕ ಶಕ್ತಿವರ್ಧಕಗಳು ಯಾವುದೇ ಸಹಾಯ ಮಾಡುವುದಿಲ್ಲ. ಅದರ ಬದಲು ನೀವು ನಿಮ್ಮ ಜೀವನಶೈಲಿ ಬದಲಾಯಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಮತ್ತು ದೀರ್ಘಕಾಲಕ್ಕೆ ಸರಿಯಾದ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂದರೆ ಒಂದು ದಿನ ಅಥವಾ ಒಂದು ವಾರದ ಪ್ರಯತ್ನವಲ್ಲ, ಅದು ಜೀವನಪೂರ್ತಿ ನಿರ್ವಹಿಸುವಂತದ್ದು.

ಇದನ್ನೂ ಓದಿ: Weight Loss Tips: ಬೇಗ ತೂಕ ಇಳಿಸಬೇಕು ಅಂದ್ರೆ ಈ ಟೀಗಳನ್ನು ಕುಡಿಯಿರಿ ಸಾಕು

ಆ ಕುರಿತು ಇಲ್ಲಿವೆ ಒಂದಿಷ್ಟು ಸಲಹೆಗಳು..

1) ಪೌಷ್ಟಿಕಾಂಶಯುಕ್ತ ಆಹಾರ ಸೇವನೆ
ಯಾವುದೇ ಸಪ್ಲಿಮೆಂಟ್‍ಗಳು ರೋಗದಿಂದ ದೂರವಿಡುವುದಿಲ್ಲ ಅಥವಾ ಕಾಪಾಡುವುದಿಲ್ಲ ಎಂಬುವುದನ್ನು ಕೊರೋನಾ ಸಾಂಕ್ರಮಿಕದ ಕಾಲದಲ್ಲೇ ಅರಿತುಕೊಂಡಿದ್ದೇವೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ನಾವು ಮಾಡಬೇಕಾದ ಪ್ರಮುಖ ಕೆಲಸ. ಬ್ರೊಕೋಲಿ, ಕಾಲೆ, ಸ್ಟ್ರಾಬೆರಿ, ಬ್ಲೂಬೆರಿ, ಪಾಲಕ್, ವಾಲ್‍ನಟ್ , ಗ್ರೀನ್ ಟೀ ಮತ್ತಿತರ ಅತ್ಯಧಿಕ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುವ ಆಹಾರಗಳು ಕೇವಲ ಉರಿಯೂತದಿಂದ ಕಾಪಾಡುವುದು ಮಾತ್ರವಲ್ಲ, ಅಸ್ಥಿರ ಸಂಯುಕ್ತಗಳಿಗೆ ಚಿಕಿತ್ಸೆ ನೀಡುತ್ತದೆ ಕೂಡ. ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಅಶ್ವಗಂಧ , ತುಳಸಿ, ಗಿಲೋಯ್‍ನಂತಹ ರೋಗ ನಿರೋಧಕ ಶಕ್ತಿವರ್ಧಕಗಳನ್ನು ಸೇರಿಸಿಕೊಳ್ಳಿ.

2) ಚೆನ್ನಾಗಿ ನೀರು ಕುಡಿಯಿರಿ
ರೋಗ ನಿರೋಧಕ ಶಕ್ತಿ ಸೇರಿದಂತೆ, ದೇಹದ ಕಾರ್ಯ ನಿರ್ವಹಣೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಪರಿಚಲನಾ ವ್ಯವಸ್ಥೆಯಲ್ಲಿನ ದ್ರವವನ್ನು ದುಗ್ಧರಸ ಎನ್ನಲಾಗುತ್ತದೆ, ಅದು ದೇಹದುದ್ದಗಲಕ್ಕೆ ಪ್ರತಿರಕ್ಷಣಾ ಕೋಶಗಳನ್ನು ಒಯ್ಯುತ್ತದೆ. ಅದು ಅಧಿಕವಾಗಿ ನೀರಿನಿಂದ ಮಾಡಲ್ಪಟ್ಟಿದೆ, ಮತ್ತು ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ಅದರ ಚಲನೆಯು ನಿಧಾನಗೊಳ್ಳುತ್ತದೆ, ಹಾಗೂ ಕೆಲವೊಮ್ಮೆ ಅದು ದುರ್ಬಲ ರೋಗ ನಿರೋಧಕ ವ್ಯವಸ್ಥೆಗೆ ಕಾರಣವಾಗುತ್ತದೆ.

3) ಒತ್ತಡ ನಿವಾರಣೆ
ಒತ್ತಡವು ರೋಗಗಳನ್ನು ಆಕರ್ಷಿಸುತ್ತದೆ. ಅವುಗಳನ್ನ ನಿರ್ವಹಿಸಬೇಕೆಂದರೆ ಒತ್ತಡ ನಿವಾರಣೆ ಮಾಡಿಕೊಳ್ಳುವುದು ಅತ್ಯಗತ್ಯ. ಒತ್ತಡ ನಿವಾರಣೆಯ ಎರಡು ಮಾರ್ಗಗಳೆಂದರೆ ನಿಯಮಿತ ಉಸಿರಾಟ ಮತ್ತು ಧ್ಯಾನ. ಒತ್ತಡದ ಮಟ್ಟ ಹೆಚ್ಚಿದರೆ, ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ.

ಇದನ್ನೂ ಓದಿ: Weight Loss Drink: ಈ ಜ್ಯೂಸ್​ಗಳನ್ನು ಕುಡಿಯೋದ್ರಿಂದ ಒಂದು ವಾರದಲ್ಲಿ ತೂಕ ಇಳಿಸಬಹುದು

4) ನಿಯಮಿತ ವ್ಯಾಯಾಮ
ದೈಹಿಕ ಚಟುವಟಿಕೆಯು, ಆರೋಗ್ಯಕರವಾಗಿ ಇರಲು ಮತ್ತು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ ಬೆಂಬಲಿಸಲು ಅತ್ಯಂತ ಅಗತ್ಯವಾಗಿದೆ. ನಿಯಮಿತ ವ್ಯಾಯಾಮವು ಒಟ್ಟಾರೆ ರಕ್ತಪರಿಚಲನೆ ಹೆಚ್ಚಿಸಿ, ಪ್ರತಿರಕ್ಷಣಾ ಕೋಶಗಳು ಮತ್ತು ಇತರ ಅಣುಗಳು ದೇಹದಾದ್ಯಂತ ಸುಲಭವಾಗಿ ಚಲಿಸುವಂತೆ ಮಾಡಿ, ಆ ಮೂಲಕ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಬಹುದು.

5) ನಿಯಮಿತ ಆರೋಗ್ಯ ತಪಾಸಣೆ
ನಿಯಮಿತ ಆರೋಗ್ಯ ತಪಾಸಣೆಯಿಂದ ನಿಮ್ಮ ದೇಹದಲ್ಲಿನ ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಇತರ ಪೌಷ್ಟಿಕಾಂಶಗಳ ಪ್ರಮಾಣದ ಬಗ್ಗೆ ತಿಳಿಯಬಹುದು. ಅದು ರೋಗವನ್ನು ಅದರ ಆರಂಭದಲ್ಲಿಯೇ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ ಹಾಗೂ ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ.
Published by:Latha CG
First published: