Health Tips| ವಯಸ್ಸಾದವರು ಹೃದಯಾಘಾತದ ಅಪಾಯ ತಪ್ಪಿಸಿಕೊಳ್ಳಲು ಆಸ್ಪಿರಿನ್ ತೆಗೆದುಕೊಳ್ಳುವುದು ಒಳ್ಳೆಯದೇ..?

ಆಸ್ಪಿರಿನ್ ಬಳಕೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಮತ್ತು ವಯಸ್ಸಾದಂತೆ ಅಪಾಯವು ಹೆಚ್ಚಾಗುತ್ತದೆ" ಎಂದು ಡಾ. ಜಾನ್ ವಾಂಗ್ ಎಚ್ಚರಿಸಿದ್ದಾರೆ

ಆಸ್ಪಿರಿನ್ ಔಷಧ.

ಆಸ್ಪಿರಿನ್ ಔಷಧ.

  • Share this:
ಸಾಮಾನ್ಯವಾಗಿ ಯಾವುದೇ ರೀತಿಯ ಹೃದ್ರೋಗವಿಲ್ಲದೇ (Heart Attack) ಇದ್ದರೂ ವಯಸ್ಸಾದವರು ತಮಗೆ ಎಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯು ಆಗುತ್ತದೆಯೋ ಅಂತ ಮುಂಜಾಗ್ರತೆ ಕ್ರಮವಾಗಿ ಪ್ರತಿದಿನ ಕಡಿಮೆ ಡೋಸ್ ಇರುವ ಆಸ್ಪಿರಿನ್ ತೆಗೆದುಕೂಳ್ಳುತ್ತಾರೆ.ಆದರೆ ಆರೋಗ್ಯ ತಜ್ಞರ ಸಮಿತಿಯೊಂದು ಮಂಗಳವಾರ ಬಿಡುಗಡೆ ಮಾಡಿದ ಪ್ರಾಥಮಿಕ ಮಾರ್ಗಸೂಚಿಯಲ್ಲಿ ಯಾವುದೇ ಹೃದ್ರೋಗವಿಲ್ಲದೆ ಇರುವ ವಯಸ್ಕರು ಈ ರೀತಿಯ ಆಸ್ಪಿರಿನ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸಲಹೆ ನೀಡಿದೆ.ಸಾಮಾನ್ಯವಾಗಿ 60ರ ವಯಸ್ಸಿನವರಿಗೆ ರಕ್ತಸ್ರಾವದ ಅಪಾಯಗಳು, ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾಗದಿದ್ದವರಿಗೆ ಆಸ್ಪಿರಿನ್ (Aspirin) ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಯುಎಸ್ ಪ್ರಿವೆಂಟಿವ್ ಸರ್ವೀಸಸ್ ಟಾಸ್ಕ್ ಫೋರ್ಸ್ ತನ್ನ ಕರಡು ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಕ್ತಸ್ರಾವದ ಅಪಾಯಗಳಿಲ್ಲದ 40ರ ವಯಸ್ಸಿನವರಿಗೆ ಇದರಿಂದ ಚಿಕ್ಕಪುಟ್ಟ ಪ್ರಯೋಜನವಿರಬಹುದು ಎಂದು ಸಮಿತಿಯು ಹೇಳಿದೆ ಮತ್ತು 50 ವಯಸ್ಸನ್ನು ದಾಟಿದವರಿಗೆ ಯಾವುದೇ ದೊಡ್ಡ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಬೊಜ್ಜು ಹೊಂದಿರುವವರಿಗೆ ಈ ಹೃದಯಾಘಾತ ಅಥವಾ ಪಾರ್ಶ್ವವಾಯು ಆಗುವ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತವರು ಯಾವುದೇ ವಯೋ ಮಾನದವರಾದರೂ ಆಸ್ಪಿರಿನ್ ಅನ್ನು ನಿಲ್ಲಿಸುವ ಅಥವಾ ಪ್ರಾರಂಭಿಸುವ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡಬೇಕು. ಆಸ್ಪಿರಿನ್ ತೆಗೆದುಕೊಳ್ಳುವುದು ಅವರಿಗೆ ಸರಿಯಾದ ಆಯ್ಕೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಟಫ್ಟ್ಸ್ ವೈದ್ಯಕೀಯ ಕೇಂದ್ರದ ಪ್ರಾಥಮಿಕ ಆರೈಕೆ ತಜ್ಞ ಡಾ. ಜಾನ್ ವಾಂಗ್ ಹೇಳಿದರು.

"ಆಸ್ಪಿರಿನ್ ಬಳಕೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಮತ್ತು ವಯಸ್ಸಾದಂತೆ ಅಪಾಯವು ಹೆಚ್ಚಾಗುತ್ತದೆ" ಎಂದು ಡಾ. ಜಾನ್ ವಾಂಗ್ ಎಚ್ಚರಿಸಿದ್ದಾರೆ.

50 ಮತ್ತು 60 ವಯಸ್ಸಿನ ಕೆಲವು ಜನರು ಮೊದಲ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ತಡೆಗಟ್ಟಲು ಪ್ರತಿದಿನ ಆಸ್ಪಿರಿನ್ ಪರಿಗಣಿಸಬಹುದು ಮತ್ತು ಅವರು ಕೊಲೊರೆಕ್ಟಲ್ ಕ್ಯಾನ್ಸರ್ ವಿರುದ್ಧ ರಕ್ಷಣೆ ಪಡೆಯಬಹುದು ಎಂದು ಸಮಿತಿಯು ಈ ಹಿಂದೆ ಹೇಳಿತ್ತು. ಕೊಲೊರೆಕ್ಟಲ್ ಕ್ಯಾನ್ಸರ್‌ಗೆ ಯಾವುದೇ ಪ್ರಯೋಜನವಾಗುವ ಬಗ್ಗೆ ಇನ್ನೂ ಹೆಚ್ಚಿನ ಪುರಾವೆಗಳ ಅಗತ್ಯವಿದೆ ಎಂದು ನವೀಕರಿಸಿದ ಅಧ್ಯಯನವು ಹೇಳುತ್ತದೆ.

ಇದನ್ನೂ ಓದಿ: Digital age: ಈ ಡಿಜಿಟಲ್‌ ಯುಗದಲ್ಲಿ ನಾವು ನಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ..?

ನವೆಂಬರ್ 8ರವರೆಗೆ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಅವಕಾಶ ನೀಡಲು ಕರಡು ಮಾರ್ಗಸೂಚಿಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಜನರಿಂದ ಬಂದ ಪ್ರತಿಕ್ರಿಯೆಗಳನ್ನು ಪರಿಗಣಿಸಿ ನಂತರ ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಆಸ್ಪಿರಿನ್ ಅನ್ನು ನೋವು ನಿವಾರಕ ಎಂದು ಕರೆಯಲಾಗುತ್ತದೆ. ಆದರೆ ಇದು ರಕ್ತವನ್ನು ತೆಳ್ಳಗೆ ಮಾಡಿ, ಇದು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಆದರೆ ಕಡಿಮೆ ಡೋಸ್ ಇರುವಂತಹ ಆಸ್ಪಿರಿನ್ ಸಹ ಜೀರ್ಣಾಂಗಗಳಲ್ಲಿ ರಕ್ತಸ್ರಾವ ಅಥವಾ ಹುಣ್ಣುಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Beauty Tips: ತನ್ನ ಸಹಜ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ಸಾಯಿ ಪಲ್ಲವಿ..!

ಈಗಾಗಲೇ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾದ ಅನೇಕ ರೋಗಿಗಳಿಗೆ ವೈದ್ಯರು ಪ್ರತಿದಿನ ಕಡಿಮೆ ಡೋಸ್ ಇರುವ ಆಸ್ಪಿರಿನ್ ಅನ್ನು ದೀರ್ಘಕಾಲದಿಂದ ಶಿಫಾರಸು ಮಾಡುತ್ತಿದ್ದಾರೆ. ಸಮಿತಿಯು ಈ ಸಲಹೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಹೇಳಿಲ್ಲ.
Published by:MAshok Kumar
First published: