• Home
  • »
  • News
  • »
  • lifestyle
  • »
  • Sleep And Health: ರಾತ್ರಿ 5 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡ್ತೀರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣ ಅದೇ ಎನ್ನುತ್ತಿದ್ದಾರೆ ವೈದ್ಯರು

Sleep And Health: ರಾತ್ರಿ 5 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡ್ತೀರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣ ಅದೇ ಎನ್ನುತ್ತಿದ್ದಾರೆ ವೈದ್ಯರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Tips: ಹಾಗೆಯೇ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ ಎಂದು ಕೂಡ ಅಧ್ಯಯನ ತಂಡ ಎಚ್ಚರಿಸಿದೆ. ಅರ್ಧ ನಿದ್ರೆಯಿಂದ ದೇಹದ ಚಯಾಪಚಯ ಕ್ರಿಯೆಯು ಗೊಂದಲಕ್ಕೀಡಾಗಿ ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆಯಿದೆ.

  • Share this:

50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ರಾತ್ರಿ ಐದು ಗಂಟೆ (Night) ಅಥವಾ ಅದಕ್ಕಿಂತ ಕಡಿಮೆ ನಿದ್ರೆ (Sleep) ಮಾಡುವ ಜನರು ರಾತ್ರಿ ಸರಿಯಾಗಿ ನಿದ್ದೆ ಮಾಡುವ ಜನರಿಗೆ ಹೋಲಿಸಿದರೆ ಕೆಲ ಅಪಾಯಕರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಪ್ರಕಟವಾದ ಒಂದು ದೊಡ್ಡ ಹೊಸ ಅಧ್ಯಯನವೊಂದು (research) ಬಹಿರಂಗಪಡಿಸಿದೆ.  PLOS ಮೆಡಿಸಿನ್ ಜರ್ನಲ್‌ನಲ್ಲಿ ಮಂಗಳವಾರ ಪ್ರಕಟವಾದ ಅಧ್ಯಯನವು ಯುನೈಟೆಡ್ ಕಿಂಗ್‌ಡಮ್‌ನಲ್ಲಿ (UK) ಸುಮಾರು 8,000 ನಾಗರಿಕ ಸೇವಕರನ್ನು ಬಳಸಿಕೊಂಡು ಈ ಅಧ್ಯಯನವನ್ನು ಮಾಡಿದ್ದು, ಅವರನ್ನು ಹತ್ತಿರದಿಂದ ನೋಡಿ ಈ ವರದಿ ಬಹಿರಂಗ ಮಾಡಿದೆ.  


ಬಹಿರಂಗವಾಯ್ತು ಹೊಸ ವಿಚಾರ


ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಸಂಶೋಧಕರೊಬ್ಬರು ಮಾತನಾಡಿದ್ದು, ದಿನಕ್ಕೆ 5 ಗಂಟೆಗಳಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.  ಇನ್ನು ಈ ಅಧ್ಯಯನದ ಪ್ರಕಾರ 3 ರಲ್ಲಿ 1 ಅಮೇರಿಕನ್​ ಪ್ರಜೆ ಸರಿಯಾಗಿ ನಿದ್ರೆ ಪಡೆಯುವುದಿಲ್ಲ. ಸರಿಸುಮಾರು ಪ್ರತಿಯೊಬ್ಬರೂ ವಾರದಲ್ಲಿ ಕೆಲ ಸಮಯ ನಿದ್ರೆಯ ಸಮಸ್ಯೆಯನ್ನು ಅನುಭವಿಸಿದ್ದಾರೆ.


ನಿದ್ರಾಹೀನತೆಯ ಸಮಸ್ಯೆಯು ಮಾನಸಿಕ ಮತ್ತು ದೈಹಿಕ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿಯೇ ಆರಾಮವಾಗಿ ನಿದ್ರಿಸಿದರೆ ಮಾತ್ರ ಉತ್ತಮ ಆರೋಗ್ಯವನ್ನು ಪಡೆಯಬಹುದು. ಆದರೆ ಅದೇ ನಿದ್ದೆಯಿಂದ ಸ್ಥೂಲಕಾಯತೆ ಸಮಸ್ಯೆ ಕಾಡುತ್ತದೆ ಎಂಬ ಭಯ ಹಲವರಲ್ಲಿದೆ. ಏಕೆಂದರೆ ಹೆಚ್ಚು ಹೊತ್ತು ನಿದ್ರಿಸಿದರೆ ದೇಹ ತೂಕವು ಹೆಚ್ಚಾಗುತ್ತದೆ. ಶರೀರವು ದಪ್ಪಗಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಈ ಅಧ್ಯಯನ ತಂಡವೊಂದು ಕಡಿಮೆ ನಿದ್ರೆ ಮಾಡಿದರೆ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದೆ.


ನಿದ್ರೆ ಮತ್ತು ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಸಂಶೋಧಕರು ವೈಟ್‌ಹಾಲ್ II ನಿಂದ ಡೇಟಾವನ್ನು ಬಳಸಿದ್ದರು. ನಿದ್ರೆಯ ಅವಧಿಯು ವೈಯಕ್ತಿಕ ದೀರ್ಘಕಾಲದ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿದ್ದರೂ, ಲೇಖಕರ ಪ್ರಕಾರ, ಮಲ್ಟಿಮಾರ್ಬಿಡಿಟಿಯೊಂದಿಗಿನ ಅದರ ಸಂಬಂಧದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.


ಇದನ್ನೂ ಓದಿ: ಈ ಆಹಾರಗಳನ್ನು ಮಕ್ಕಳಿಗೆ ಪ್ರತಿದಿನ ತಿನ್ನಿಸಿದ್ರೆ ಕಣ್ಣುಗಳ ಸಮಸ್ಯೆ ಬರಲ್ಲ


ಸಾಮಾನ್ಯವಾಗಿ ಹೇಳುವುದಾದರೆ, ದೀರ್ಘಕಾಲದ ಕಾಯಿಲೆಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಳ ಇರುತ್ತದೆ. ಅಲ್ಲದೇ, ಇದಕ್ಕೆ ನಿರಂತರ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ ಅಥವಾ ದೈನಂದಿನ ಜೀವನದ ಚಟುವಟಿಕೆಗಳನ್ನು ಮಿತಿಗೊಳಿಸುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂದಾಜು 10 ವಯಸ್ಕರಲ್ಲಿ 6 ಜನರು ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ.


ಆರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ


50 ನೇ ವಯಸ್ಸಿನಲ್ಲಿ, ಏಳು ಗಂಟೆಗಳ ನಿದ್ದೆ ಮಾಡುವವರಿಗೆ ಹೋಲಿಸಿದರೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರು ಮಲ್ಟಿಮಾರ್ಬಿಡಿಟಿ ಸಮಸ್ಯೆಯ 30 ಪ್ರತಿಶತ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
60 ನೇ ವಯಸ್ಸಿನಲ್ಲಿ, ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರು 32 ಪ್ರತಿಶತದಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು 70 ರಲ್ಲಿ 40 ಪ್ರತಿಶತದಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.


ದಿನವಿಡೀ ಚಯಾಪಚಯ ಮತ್ತು ಉರಿಯೂತದ ನಿಯಂತ್ರಣದಂತಹ ಹಲವಾರು ದೇಹದ ಕಾರ್ಯಗಳ ನಿಯಂತ್ರಣಕ್ಕೆ ನಿದ್ರೆ ಮುಖ್ಯವಾಗಿದೆ, ಈ ಕಾರ್ಯಗಳಲ್ಲಿ ವ್ಯತ್ಯಾಸವಾದಾಗ ಹಲವಾರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಮತ್ತು ಅಂತಿಮವಾಗಿ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: ಈ ಆಹಾರಗಳನ್ನು ತಿಂದ್ರೆ ಇಡೀ ದಿನ ಆಕ್ಟೀವ್ ಆಗಿರ್ತೀರಂತೆ


ಹಾಗೆಯೇ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ ಎಂದು ಕೂಡ ಅಧ್ಯಯನ ತಂಡ ಎಚ್ಚರಿಸಿದೆ. ಅರ್ಧ ನಿದ್ರೆಯಿಂದ ದೇಹದ ಚಯಾಪಚಯ ಕ್ರಿಯೆಯು ಗೊಂದಲಕ್ಕೀಡಾಗಿ ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆಯಿದೆ. ಆದರೆ ಹೆಚ್ಚು ನಿದ್ರಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.

Published by:Sandhya M
First published: