ಸಮುದ್ರ ಆಳದಲ್ಲಿ ಯುದ್ಧ ಟ್ಯಾಂಕರ್; ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಲೆಬನಾನ್

news18
Updated:July 31, 2018, 3:23 PM IST
ಸಮುದ್ರ ಆಳದಲ್ಲಿ ಯುದ್ಧ ಟ್ಯಾಂಕರ್; ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಲೆಬನಾನ್
news18
Updated: July 31, 2018, 3:23 PM IST
-ನ್ಯೂಸ್ 18 ಕನ್ನಡ

ಪ್ರವಾಸಿಗಳನ್ನು ಆಕರ್ಷಿಸಲು ಹಲವು ರೀತಿಯ ಸೌಲಭ್ಯಗಳನ್ನು ಒದಿಗಿಸುವುದು ಕೇಳಿರುತ್ತೇವೆ. ಅಥವಾ ವಿಶೇಷ ರೀತಿಯಲ್ಲಿ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಹಾಗೆಯೇ ಲೆಬನಾನ್​ ಪರಿಸರವಾದಿಗಳು ಕೂಡ ಇತ್ತೀಚೆಗೆ ಹೊಸ ಪ್ರಯತ್ನವೊಂದನ್ನು ಮಾಡಿದ್ದಾರೆ. ದೇಶದಲ್ಲಿದ್ದ ಹಳೆಯ 10 ಯುದ್ಧ ಟ್ಯಾಂಕರ್​ಗಳನ್ನು ಮತ್ತು ಕೆಲ ಶಸ್ತ್ರಸಜ್ಜಿತ ವಾಹನಗಳನ್ನು ಮೆಡಿಟರೇನಿಯನ್ ಸಮುದ್ರದ ಆಳಕ್ಕೆ ಇಳಿಸಿದ್ದಾರೆ. ಸ್ಕೂಬಾ ಡೈವರ್ಸ್​​ಗಳನ್ನು ಆಕರ್ಷಿಸಲು ಲೆಬನಾನ್ ಸರ್ಕಾರ ಈ ಕಾರ್ಯ ಮಾಡಿದ್ದು, ಇದರಿಂದ ಡೈವರ್ಸ್​ಗಳಿಗೆ ಹೊಸ ಅನುಭವ ಸಿಗಲಿದೆ ಎನ್ನಲಾಗಿದೆ.

ಲೆಬನಾನ್ ಸೈನ್ಯದ ಸಹಾಯದೊಂದಿಗೆ ಸಿಡೋನ್ ನಗರದಿಂದ ಮೂರು ಕಿಲೋಮೀಟರ್​ಗಳಷ್ಟು ದೂರದಲ್ಲಿರುವ ಸಮುದ್ರದ ಆಳದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಡಗಿನಲ್ಲಿ ಕ್ರೇನ್​ ನಿಲ್ಲಿಸಿ ಯುದ್ಧ ಟ್ಯಾಂಕರ್​ಗಳನ್ನು ಸಮುದ್ರಕ್ಕೆ ಇಳಿಸಿದ್ದು, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.

ನೀರಿನೊಳಗೆ ಉದ್ಯಾನ ಸೃಷ್ಟಿಸುವ ಉಪಾಯವನ್ನು ಮೊದಲಿಗೆ ಸ್ಥಳೀಯ ಗೆಳೆಯರ ಗುಂಪೊಂದು ಮುಂದಿಟ್ಟಿತ್ತು. ಅದರಂತೆ ಲೆಬನಾನ್ ಸೈನ್ಯದ ಸಹಾಯ ಪಡೆದು ಯೋಜನೆಯನ್ನು ಕೈಗೆತ್ತಿಕೊಂಡರು. ಡೈವರ್ಸ್​ಗಳಿಗೆ ಸ್ವರ್ಗ ಎನಿಸಿಕೊಂಡಿರುವ ಮೆಡಿಟರೇನಿಯನ್ ಸಮುದ್ರದ ಆಳದಲ್ಲಿ ವೀಕ್ಷಿಸಲು ಹಲವು ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಾಹನಗಳು ಆಳದಲ್ಲಿ ಕಾಣಿಸಲಿದೆ ಎಂಬ ನಿರೀಕ್ಷೆಯಿದೆ ಎಂದು ಎನ್​ಜಿಒ ಪ್ರತಿನಿಧಿ ಕಮೆಲ್ ಕೋಝ್ಬರ್ ತಿಳಿಸಿದ್ದಾರೆ.

200 ಕಿ.ಮೀಟರ್​ನಷ್ಟು ಹರಡಿಕೊಂಡಿರುವ ಲೆಬನಾನ್​ನ ಬೀಚ್​ಗಳು ತಾಜ್ಯ ಮತ್ತು ಕಸದ ರಾಶಿಯಿಂದ ಆವರಿಸಿಕೊಳ್ಳುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಕಾಣುವ ಪ್ರಯತ್ನ ಮಾಡಲಾಗುತ್ತಿದೆ. ಲೆಬನಾನ್ ಸುತ್ತಮುತ್ತ ದೇಶದಲ್ಲಿ ಕಂಡು ಬರುತ್ತಿರುವ ರಾಜಕೀಯ ಬಿಕ್ಕಟ್ಟು ಮತ್ತು ಯುದ್ಧಗಳ ಕುರಿತು ವಿಶ್ವದ ಗಮನ ಸೆಳೆಯುವ ಪ್ರಯತ್ನ ಕೂಡ ಇದಾಗಿದೆ.

ಸಮುದ್ರ ಆಳದಲ್ಲಿ ಈ ಟ್ಯಾಂಕರ್​ಗಳನ್ನು ಲೆಬನಾನ್​ ದೇಶದ ಕಡುವೈರಿ ಇಸ್ರೇಲ್​ ದೇಶದ ಕಡೆಗೆ ಗುರಿಯಾಗಿಸಿ ನಿಲ್ಲಿಸಲಾಗಿದೆ. ಈ ಮೂಲಕ ಪ್ಯಾಲೆಸ್ತೀನ್ ವಾಸಿಗಳಿಗೆ ಬೆಂಬಲ ಸೂಚಿಸಲಾಗಿದೆ ಎಂದು ಕೋಝ್ಬರ್ ತಿಳಿಸಿದ್ದಾರೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ