Skin Care: ಮಳೆಗಾಲದಲ್ಲಿ ಎಣ್ಣೆ ಚರ್ಮದ ನಿರ್ವಹಣೆಗೆ ಈ ರೀತಿಯ ಆರೈಕೆ ಮಾಡಿ

ಚರ್ಮರೋಗ ತಜ್ಞೆ ಚೈತ್ರಾ ವಿ ಆನಂದ್ ಅವರು, ತಮ್ಮ ಇನ್‍ಸ್ಟಾಗ್ರಾಂ ಪುಟದಲ್ಲಿ, ಈ ಸಮಸ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಸರಳ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ. ಅವು ನಿಮ್ಮ ಚರ್ಮವನ್ನು ಆಳವಾಗಿ ಕ್ಲೆನ್ಸ್ ಮಾಡಲು ಮತ್ತು ಎಣ್ಣೆ ಹಾಗೂ ಕಲ್ಮಶವನ್ನು ತೆಗೆದು ಹಾಕಲು ಸಹಕಾರಿ ಆಗಬಲ್ಲವು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲದಲ್ಲಿ ಚರ್ಮದ ಆರೈಕೆಯ (Skin Care) ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಾವಶ್ಯಕ. ಏಕೆಂದರೆ, ಋತುವಿನ ಬದಲಾವಣೆಗೆ ತಕ್ಕಂತೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ, ಬಹಳಷ್ಟು ಮಂದಿ ಸಾಮಾನ್ಯವಾಗಿ ಮುಖದ (Face) ಚರ್ಮದ ಮೇಲೆ ಜಿಡ್ಡು ಅಥವಾ ಹೆಚ್ಚುವರಿ ಎಣ್ಣೆ (Oil) ಉತ್ಪತ್ತಿಯಾಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಮಳೆಗಾಲದಲ್ಲಿ (Monsoon) ವಾತಾವರಣದಲ್ಲಿ ಆದ್ರ್ರತೆ ಮತ್ತು ತೇವಾಂಶದಲ್ಲಿ ಏರಿಕೆ ಕಂಡು ಬರುವುದರಿಂದ, ಚರ್ಮದಲ್ಲಿ ಮೊಡವೆಗಲು ಉಂಟಾಗಬಹುದು. ಮುಖ್ಯವಾಗಿ ಎಣ್ಣೆ ಚರ್ಮ ಹೊಂದಿರುವವರಿಗಂತೂ ಬೇಸಿಗೆ (Summer) ಮತ್ತು ಮಳೆಗಾಲದಲ್ಲಿ ಚರ್ಮದ ಆರೈಕೆ ಒಂದು ಸವಾಲೇ ಸರಿ. ಅವರು ಆ ಋತುಗಳಲ್ಲಿ ಹೆಚ್ಚುವರಿ ಸೀಬಮ್ ಉತ್ಪಾದೆಯನ್ನು ನಿರ್ವಹಿಸಲು ಕಷ್ಟಪಡುತ್ತಾರೆ.

ಒಂದು ಡೀಪ್ ಕ್ಲೆನ್ಸರ್ ನಿಮಗೆ ಮುಖದ ಚರ್ಮದಲ್ಲಿನ ಹೆಚ್ಚೂವರಿ ಎಣ್ಣೆ , ಕೂಡಿಕೊಂಡಿರುವ ಕಲ್ಮಶ ಮತ್ತು ಮುಚ್ಚಿಕೊಂಡಿರುವ ರಂಧ್ರಗಳ ತೊಂದರೆಯನ್ನು ನಿವಾರಿಸಲು ಸಹಾಯ ಮಾಡಬಲ್ಲದು. ಚರ್ಮರೋಗ ತಜ್ಞೆ ಚೈತ್ರಾ ವಿ ಆನಂದ್ ಅವರು, ತಮ್ಮ ಇನ್‍ಸ್ಟಾಗ್ರಾಂ ಪುಟದಲ್ಲಿ, ಈ ಸಮಸ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಸರಳ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ. ಅವು ನಿಮ್ಮ ಚರ್ಮವನ್ನು ಆಳವಾಗಿ ಕ್ಲೆನ್ಸ್ ಮಾಡಲು ಮತ್ತು ಎಣ್ಣೆ ಹಾಗೂ ಕಲ್ಮಶವನ್ನು ತೆಗೆದು ಹಾಕಲು ಸಹಕಾರಿ ಆಗಬಲ್ಲವು.

ಎಣ್ಣೆ ಚರ್ಮದ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಮನೆ ಮದ್ದು

ನೀವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ, ಸರಳವಾದ ಡಿಪ್ ಕ್ಲೆನ್ಸ್ ಪ್ಯಾಕ್ ಮಾಡುವ ವಿಧಾನವನ್ನು ಇಲ್ಲಿ ಹಂತ ಹಂತವಾಗಿ ತಿಳಿಸಲಾಗಿದೆ.

1. ಮೊದಲಿಗೆ ಅರ್ಧ ಕಪ್ ಮೊಸರನ್ನು ತೆಗೆದುಕೊಳ್ಳಿ (ಹುಳಿ ಮೊಸರಾಗಿದ್ದರೆ ಉತ್ತಮ).
2. ನಂತರ ಆ ಮೊಸರಿಗೆ ಎರಡು ಟೇಬಲ್ ಚಮಚ ಕಾಫಿ ಪುಡಿಯನ್ನು ಸೇರಿಸಿ.
3. ಆ ಮಿಶ್ರಣಕ್ಕೆ ಒಂದು ಟೀ ಸ್ಪೂನ್ ಅರಶಿನವನ್ನು ಸೇರಿಸಿ ( ತಾಜಾ ತುರಿದ ಅರಶಿನವಿದ್ದರೆ ಇನ್ನೂ ಉತ್ತಮ) ಈ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಆ ಪೇಸ್ಟನ್ನು ನಿಮ್ಮ ಮುಖಕ್ಕೆ ಲೇಪಿಸಿ, 15 ನಿಮಿಷ ಬಿಟ್ಟು ತೊಳೆಯಿರಿ.

ಇದನ್ನೂ ಓದಿ:  Health Tips: ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಒಮ್ಮೆ ಸೇವಿಸಿ ನೋಡಿ

“ಈ ಡಿಐವೈ (Do It Yourself) ಟಿಪ್, ನಿಮಗೆ ಮನೆಯಲ್ಲಿಯೇ ನಿಮ್ಮ ಚರ್ಮವನ್ನು ಆಳವಾಗಿ ಕ್ಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಎಣ್ಣೆಯುಕ್ತ ಮುಚ್ಚಿ ಚರ್ಮವನ್ನು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ, ಚರ್ಮವನ್ನು ಸಂವೇದನಾಶೀಲವಾಗಿಸದೆ, ನಿಧಾನವಾಗಿ ಎಫೋಲಿಯೇಟ್ ಮಾಡುತ್ತದೆ. ಕಾಫಿ ಡಿಕಾಕ್ಷನ್ ಚರ್ಮದಲ್ಲಿನ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಕೂಡಲೇ ಚರ್ಮವನ್ನು ಒಣಗಿಸುತ್ತದೆ.

ಅರಶಿನವು ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿರುವ ಸಾಮಾಗ್ರಿಯಾಗಿದ್ದು, ಚರ್ಮದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಮೇಲ್ಮೈಯನ್ನು ಡಿಸೆನ್ಸಿಟೈಸ್ ಮಾಡುತ್ತದೆ” ಎಂದು ಚರ್ಮರೋಗ ತಜ್ಞೆ ಚೈತ್ರಾ ವಿ ಆನಂದ್ ತಮ್ಮ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಕ್ಲೆನ್ಸಿಂಗ್ ಪ್ಯಾಕ್ ಅನ್ನು ಪ್ರತೀ ಮೂರು ವಾರಕ್ಕೆ ಒಮ್ಮೆಯಾದರೂ ಬಳಸಬೇಕು ಎಂದು ಸಲಹೆ ನೀಡುತ್ತಾರೆ ಅವರು.

ಮಳೆಗಾಲದಲ್ಲಿ ಎಣ್ಣೆ ಚರ್ಮದ ನಿರ್ವಹಣೆಗೆ ಇತರ ಸಲಹೆಗಳು

ಮುಖವನ್ನು ಅತಿಯಾಗಿ ತೊಳೆದುಕೊಳ್ಳುವುದರಿಂದ ಹೆಚ್ಚುವರೀ ಎಣ್ಣೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಒಂದು ದ್ರವ ಆಧಾರಿತ ಕ್ಲೆನ್ಸರ್ ಅನ್ನು ಬಳಸಿ. ವಾತಾವರಣಕ್ಕೆ ಅನುಗುಣವಾಗಿ ಚರ್ಮದ ಆರೈಕೆಯ ಉತ್ಪನ್ನಗಳನ್ನು ಕೂಡ ಬದಲಾಯಿಸಿಕೊಳ್ಳಬೇಕು.

ಇದನ್ನೂ ಓದಿ:  Health Tips: ಕೀಲು ನೋವು ಇರುವವರಿಗೆ ಅತ್ಯಂತ ಪ್ರಯೋಜನಕಾರಿ ಈ ಶುಂಠಿ

ಮಳೆಗಾಲದಲ್ಲಿ ಎಣ್ಣೆ ಆಧಾರಿತ ಉತ್ಪನ್ನಗಳನ್ನು ಬಳಸಬೇಡಿ. ನಿಮ್ಮ ಆಹಾರ ಕ್ರಮದಲ್ಲೂ ಒಂದಿಷ್ಟು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಣ್ಣೆಯ, ಕರಿದ ಪದಾರ್ಥಗಳ ಸೇವನೆ ಮಿತವಾಗಿರಲಿ ಮತ್ತು ನಿಮ್ಮ ಆಹಾರ ಕ್ರಮದಲ್ಲಿ ಋತುಕಾಲಿಕ ಆಹಾರ ವಸ್ತುಗಳನ್ನು ಸೇರಿಸಿ.
Published by:Ashwini Prabhu
First published: