ಹೊಕ್ಕುಳಿಗೆ ಎಣ್ಣೆ ಹಾಕಿದರೆ ಎಷ್ಟೊಂದು ಲಾಭ ಗೊತ್ತಾ? ಹೊಳೆಯುವ ತುಟಿಗೂ ಇದಕ್ಕೂ ಇದೆ ಸಂಬಂಧ

ಬೇವು, ಟೀ ಟ್ರೀ, ಲಿಂಬೆ, ದ್ರಾಕ್ಷಿ ಬೀಜ ಮತ್ತು ಬಾದಾಮಿ  ಎಣ್ಣೆ ಮಸಾಜ್‍ಗೆ ಅತ್ಯುತ್ತಮವಾಗಿದ್ದು ಹೊಕ್ಕಳನ್ನು ಶುದ್ಧೀಕರಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ. ಹಾಗಾದರೆ ದೇಹದ ಇತರ ಭಾಗಗಳಿಗೆ ಎಣ್ಣೆ ಹಚ್ಚುವುದರಿಂದ ಲಾಭವಾದಂತೆ, ಹೊಕ್ಕಳಿಗೂ ಎಣ್ಣೆ ಹಚ್ಚುವುದರಿಂದ ಲಾಭವಿದೆಯೇ? ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಕೇವಲ ಆ ಭಾಗಕ್ಕೆ ಮಾತ್ರವಲ್ಲ, ಇಡೀ ದೇಹಕ್ಕೆ ಅದರಿಂದ ಪ್ರಯೋಜನವಾಗುತ್ತದೆ. ಇದು ವೇದಗಳಲ್ಲಿ ಮತ್ತು ಆಯುರ್ವೇದದಲ್ಲಿ ವಿವರಿಸಲಾದ ಪ್ರಾಚೀನ ಪದ್ಧತಿಯಾಗಿದ್ದು, ಅದರ ಪ್ರಕಾರ ಹೆಂಗಸರು ಮತ್ತು ಗಂಡಸರು ಇಡೀ ದೇಹವನ್ನು ಪೋಷಿಸಲು ತಮ್ಮ ಹೊಕ್ಕಳಿಗೆ ಎಣ್ಣೆಯನ್ನು ಹಾಕುತ್ತಿದ್ದರು. ನಿಮ್ಮ ಹೊಕ್ಕಳಿಗೂ ದೇಹದಾದ್ಯಂತ ಇರುವ ರಕ್ತನಾಳಗಳಿಗೂ ಸಂಬಂಧವಿದೆ. ಹಾಗಾಗಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ವಿವಿಧ ಕಾಯಿಲೆಗಳು ಗುಣವಾಗಬಹುದು.


  ಇರೆಮಿಯಾದ ಸಂಸ್ಥಾಪಕಿ ಪ್ರೀತಿ ಚಡಾ ಅವರೊಂದಿಗೆ ಐಎಎನ್‍ಎಸ್ ನಡೆಸಿದ ಸಂದರ್ಶನದಲ್ಲಿ, ಹೊಕ್ಕಳಿಗೆ ಎಣ್ಣೆ ಹಾಕುವುದರ ಪ್ರಾಮುಖ್ಯತೆಯನ್ನು ಹಂಚಿಕೊಂಡಿದ್ದಾರೆ.


  ಹೊಕ್ಕುಳಿಗೆ ಏಕೆ ಎಣ್ಣೆ ಹಾಕಬೇಕು?
  ಸಾಮಾನ್ಯವಾಗಿ ಹೇಳುವುದಾದರೆ, ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಹೆಚ್ಚಿನ ಅಮ್ಮಂದಿರು ತಮ್ಮ ಮಕ್ಕಳಿಗೆ ಹೇಳಿ ಕೊಟ್ಟಂತೆ ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ದೇಹದಲ್ಲಿರುವ ನರ ಸಂಪರ್ಕಗಳ ಸರಿಪಡಿಸಲು ಮತ್ತು ಸಮತೋಲನಗೊಳಿಸಲು ಸಹಾಯವಾಗುತ್ತದೆ.


  ಎಣ್ಣೆ ಹಾಕುವುದರಿಂದ ಪ್ರಯೋಜನಗಳು
  ಸಾಮಾನ್ಯವಾಗಿ ಜನರು ಹೊಕ್ಕಳಿಗೆ ಸಾಸಿವೆ ಎಣ್ಣೆ, ಹಸುವಿನ ತುಪ್ಪ ಅಥವಾ ತೆಂಗಿನ ಎಣ್ಣೆಯನ್ನು ಹಾಕುತ್ತಾರೆ. ಆದರೆ ತಾಪನದ ಅಂಶಗಳಂತ ಆಯುರ್ವೇದಿಯ ಗುಣಗಳನ್ನು ಹೊಂದಿಲ್ಲದೆ ಇರುವುದರಿಂದ ಅದು ನಿಷ್ಪ್ರಯೋಜಕ. ಬೇವು, ಟೀ ಟ್ರೀ, ಲಿಂಬೆ, ದ್ರಾಕ್ಷಿ ಬೀಜ ಮತ್ತು ಬಾದಾಮಿ  ಎಣ್ಣೆ ಮಸಾಜ್‍ಗೆ ಅತ್ಯುತ್ತಮವಾಗಿದ್ದು ಹೊಕ್ಕಳನ್ನು ಶುದ್ಧೀಕರಿಸುತ್ತದೆ. ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ  ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗಿ ಆರೋಗ್ಯಕರ ಚರ್ಮ ನಮ್ಮದಾಗುತ್ತದೆ. ಹೊಕ್ಕಳು ಬೇಗನೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಒಳಗಿನಿಂದ ಪೋಷಣೆ ನೀಡುತ್ತದೆ.


  ಇದನ್ನೂ ಓದಿ: ವೈದ್ಯೆ, ತಾಯಿ ಆಗಿರುವವಳಿಗೆ ಬಾಡಿ ಬಿಲ್ಡಿಂಗ್ ಏಕೆ ಎಂದು ಅತ್ತೆ-ಮಾವ ಕೊಂಕು ಮಾತಾಡಿದ್ದರು, ಆದರೆ ಈಗ..

  ಅದನ್ನು ಅಭ್ಯಾಸ ಮಾಡುವುದು ಹೇಗೆ?
  ಈ ಪ್ರಕ್ರಿಯೆಗೆ ಕೇವಲ ಎರಡೇ ನಿಮಿಷ ಸಾಕು. ನಿಮ್ಮ ಹೊಕ್ಕಳಿಗೆ ಎಣ್ಣೆಯನ್ನು ಹಾಕಿ ಅಷ್ಟೆ. ಅದಾದ ಬಳಿಕ 5-10 ನಿಮಿಷ ಹೊಕ್ಕಳಿನ ಗುಂಡಿಯ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಳ್ಳೆಯ ಫಲಿತಾಂಶಕ್ಕಾಗಿ ನಿತ್ಯವೂ ರಾತ್ರಿ ಮಲಗುವ ಮುನ್ನ ಅಥವಾ ಸ್ನಾನದ ನಂತರ ಇದನ್ನು ಮಾಡಿ. ರಾತ್ರಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇರುತ್ತೀರಿ.


  ಮುಟ್ಟಿನ ದಿನಗಳಲ್ಲಿ, ಹೊಕ್ಕುಳಿಗೆ ತೆಂಗಿನೆಣ್ಣೆ ಹಾಕುವುದರಿಂದ, ನೋವು ಕಡಿಮೆಯಾಗುತ್ತದೆ. ಹೊಕ್ಕುಳ ಗುಂಡಿ, ನಿಮ್ಮ ಹೊಕ್ಕುಳಿನ ಮಧ್ಯೆ ಇರುವ ಸಣ್ಣ ಭಾಗವಾಗಿರಬಹುದು, ಆದರೆ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಉತ್ತರ ನೀಡಬಲ್ಲ ಕೋಣೆಯಾಗಿದೆ. ಹೊಕ್ಕಳಿಗೂ, ದೇಹದಾದ್ಯಂತ ಇರುವ ರಕ್ತನಾಳಗಳಿಗೂ ಸಂಬಂಧವಿದೆ. ಹಾಗಾಗಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ವಿವಿಧ ಕಾಯಿಲೆಗಳು ಗುಣವಾಗಬಹುದು.


  ಕೊಳೆ ತೆಗೆಯುತ್ತದೆ :ಹೊಕ್ಕುಳ ಗುಂಡಿಯನ್ನು ಸ್ವಚ್ಚಗೊಳಿಸುವುದರಿಂದ, ಅಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ತೆಗೆದು ಹಾಕಬಹುದು, ಆ ಮೂಲಕ ಹೊಟ್ಟೆ ಹಾಗೂ ಹೊಕ್ಕುಳಿನ ಪ್ರದೇಶವನ್ನು ಸಂಭಾವ್ಯ ಕಾಯಿಲೆಗಳಿಂದ ರಕ್ಷಿಸಬಹುದು.


  ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ:ನಿಮಗೆ ಕಾಂತಿಯುತ ತ್ವಚೆ ಬೇಕೆಂದರೆ ನಿತ್ಯವೂ ನಿಮ್ಮ ಹೊಕ್ಕುಳ ಗುಂಡಿಗೆ ಮಸಾಜ್ ಮಾಡಿ. ಅದಕ್ಕಾಗಿ ಬೇವಿನ ಎಣ್ಣೆ, ರೋಸ್‍ಶಿಪ್ ಎಣ್ಣೆ, ತೆಂಗಿನ ಎಣ್ಣೆ ಮತ್ತು ಲಿಂಬೆಯ ಎಸೆನ್ಶಿಯಲ್ ಎಣ್ಣೆಗಳನ್ನು ಬಳಸಬಹುದು.


  ತುಟಿಗೆ ಹೊಳಪು ನೀಡುತ್ತದೆ :ನಿತ್ಯವೂ ಮಲಗುವ ಮುನ್ನ ಹೊಕ್ಕುಳಿಗೆ ಎಣ್ಣೆ ಹಾಕಿದರೆ, ನಿಮ್ಮ ತುಟಿಗಳು ಒಡೆಯುವುದಿಲ್ಲ.


  ಕಣ್ಣಿಗೆ ಉತ್ತಮ :ದೃಷ್ಟಿದೋಷದ ಸಮಸ್ಯೆ ಇದ್ದರೆ, ತೆಳು ಮಾಡಿದ ಸಾಸಿವೆ ಎಣ್ಣೆನ್ನು ಹೊಕ್ಕುಳಿಗೆ ಬಳಸಿ. ಕಣ್ಣಿನ ಸುತ್ತ ಕಪ್ಪು ವರ್ತುಲಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ.

  Published by:Kavya V
  First published: