Poori without Oil: ಪೂರಿ ಇಷ್ಟ, ಆದ್ರೆ ಎಣ್ಣೆ ಕಷ್ಟ ಅಂದ್ರಾ? ನಿಮಗಾಗೇ ಇದೆ ಎಣ್ಣೆ ಬಳಸದೆ ಮಾಡುವ ಪೂರಿ!

Healthy Oil less Poori Recipe: ಈ ಪೂರಿ ಪ್ರಿಯರಿಗಾಗಿಯೇ ವಿಶೇಷ ಪೂರಿಯ ರೆಸಿಪಿ ಇದೆ. ಇದನ್ನು ಸವಿದವರೆಲ್ಲಾ ಅದೆಷ್ಟು ಖುಷಿ ಪಟ್ಟಿದ್ದಾರಂತೆ ಗೊತ್ತಾ..ಒಂದ್ಸಲ ಟ್ರೈ ಮಾಡಿ. ಆಗ ಆ ಖುಷಿ ನಿಮಗೂ ಸಿಗಬಹುದು.

ಪೂರಿ

ಪೂರಿ

  • Share this:
Special Oil less Poori Recipe: ಅದೆಷ್ಟೇ ರುಚಿಯಾಗಿದೆ ಎನಿಸಿದರೂ ಪೂರಿಯಿಂದ ಅನೇಕರು ದೂರವೇ ಉಳಿಯುತ್ತಾರೆ, ಇದಕ್ಕೆ ಕಾರಣ ಅದರಲ್ಲಿರೋ ಎಣ್ಣೆ ಅಂಶ. ಇತ್ತೀಚೆಗೆ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸೋದ್ರಿಂದ ಎಣ್ಣೆ ಪದಾರ್ಥಗಳಿಗೆ ಸ್ವಲ್ಪ ಬೇಡಿಕೆ ಕಡಿಮೆ ಎಂದೇ ಹೇಳಬಹುದು. ಮನೆಯಲ್ಲಿ ಇರೋ ಎಲ್ಲಾ ವಯಸ್ಸಿನವರಿಗೂ ಎಣ್ಣೆ ಕಡಿಮೆ ಇರೋ ಆಹಾರವೇ ಇಷ್ಟ. ಆದ್ರೆ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಎಣ್ಣೆಯಿಲ್ಲದೇ ಮಾಡಲು ಸಾಧ್ಯವೇ ಇಲ್ಲ. ಅವುಗಳ ರುಚಿಗೂ ನಾವೆಲ್ಲಾ ಒಗ್ಗಿ ಹೋಗಿಬಿಟ್ಟಿರುತ್ತೇವೆ. ಆದ್ರೆ ಅದೆಷ್ಟೇ ಇಷ್ಟ ಅನ್ಕೊಂಡ್ರೂ ಕೆಲವು ತಿನಿಸುಗಳು ಮಾತ್ರ ಆರೋಗ್ಯಕ್ಕೆ ಸೂಕ್ತ ಅಲ್ಲ ಅನ್ನೋದನ್ನ ನಮ್ಮ ಪ್ರಜ್ಞೆ ಕೂಡಾ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತೆ. ಬಿಪಿ, ಡಯಾಬಿಟಿಸ್, ಕೊಲೆಸ್ಟರಾಲ್, ಹೃದ್ರೋಗ ಹೀಗೆ ನಾನಾ ಖಾಯಿಲೆಗಳು ಇರುವ ಯಾರೇ ಆದ್ರೆ ಮೊದಲು ತ್ಯಜಿಸೋದು ಜಿಡ್ಡಿನ ಪದಾರ್ಥಗಳು.

ಹಾಗಾಗಿ ಪೂರಿ ಬಹುತೇಕ ಮನೆಗಳಲ್ಲಿ ವಿಲನ್ ಎನಿಸಿಕೊಳ್ಳೋ ತಿನಿಸು. ಹದವಾಗಿ ಕೆಂಪಗೆ ಉಬ್ಬಿದ ಬಿಸಿ ಬಿಸಿ ಪೂರಿ ಸಾಗು ಅಥವಾ ಪಲ್ಯದ ಜೊತೆಗೆ ಸವಿಯೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಆರೋಗ್ಯ ಅದಕ್ಕೆ ತಕ್ಕನಾಗಿ ಇರಬೇಕಲ್ಲಾ? ಹಾಗಾಗಿ ಪಾಕ ಪ್ರವೀಣರು ಆರೋಗ್ಯಕ್ಕೂ ಪೂರಕವಾಗುವ ಜೊತೆಗೆ ರುಚಿಗೂ ಹಿತವೆನಿಸುವ ಕೆಲವು ಖಾದ್ಯಗಳನ್ನು ಹುಡುಕುತ್ತಲೇ ಇರುತ್ತಾರೆ. ಈಗ ಈ ಪೂರಿ ಪ್ರಿಯರಿಗಾಗಿಯೇ ವಿಶೇಷ ಪೂರಿಯ ರೆಸಿಪಿ ಇದೆ. ಇದನ್ನು ಸವಿದವರೆಲ್ಲಾ ಅದೆಷ್ಟು ಖುಷಿ ಪಟ್ಟಿದ್ದಾರಂತೆ ಗೊತ್ತಾ..ಒಂದ್ಸಲ ಟ್ರೈ ಮಾಡಿ. ಆಗ ಆ ಖುಷಿ ನಿಮಗೂ ಸಿಗಬಹುದು.

ಯಾಕಂದ್ರೆ ಈ ಪೂರಿಗೆ ಎಣ್ಣೆ ಬಳಕೆ ಇಲ್ಲ, ಇದು ನೀರಿನಲ್ಲಿ ಕರಿಯುವ ಪೂರಿ. ಆಶ್ಚರ್ಯ ಆಯ್ತಾ? ಇದು ಸತ್ಯವಾದ ವಿಚಾರವೇ. ಈ ವಿಶಿಷ್ಟ ಪೂರಿಯ ರೆಸಿಪಿ ಇಲ್ಲಿದೆ:

ಗೋಧಿ ಹಿಟ್ಟು- 1 ಕಪ್

ತರಕಾರಿ ರಸ ಅಥವಾ ಸೊಪ್ಪಿನ ರಸ – 50 ml

ನಿಂಬೆಹಣ್ಣಿನ ರಸ- ಅಗತ್ಯಕ್ಕೆ ತಕ್ಕಷ್ಟು

ಅರ್ಥ ತೆಂಗಿನಕಾಯಿಯಿಂದ ತೆಗೆದ ತೆಂಗಿನ ಹಾಲು

100 ಗ್ರಾಂ ಡ್ರೈ ಫ್ರೂಟ್ಸ್

ಮಾಡುವ ವಿಧಾನ:

ಮೊದಲು ಗೋಧಿ ಹಿಟ್ಟಿಗೆ ತರಕಾರಿ ಅಥವಾ ಸೊಪ್ಪಿನ ರಸವನ್ನು ಸೇರಿಸಿ ಬೇರೆ ನೀರು ಅಥವಾ ಎಣ್ಣೆ ಸೇರಿಸದೇ ಮೃದುವಾಗಿ ಕಲಸಿಕೊಳ್ಳಿ. ನಡುನಡುವೆ ತೆಂಗಿನ ಹಾಲನ್ನು ಸೇರಿಸಿ ಚೆನ್ನಾಗಿ ನಾದಿ. ಜೊತೆಗೇ ನಿಂಬೆ ರಸವನ್ನೂ ಸೇರಿಸಿ. ಇಷ್ಟವಿದ್ದರೆ ನಿಂಬೆ ರಸದ ಬದಲಿಗೆ ನೆಲ್ಲಿಕಾಯಿ ಪುಡಿಯನ್ನೂ ಸೇರಿಸಬಹುದು.

ನಂತರ ಈ ಹಿಟ್ಟನ್ನು ಪೂರಿಯ ಅಳತೆಗೆ ತಕ್ಕಂತೆ ಲಟ್ಟಿಸಿ. ಒಂದು ಬಾಣಲೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ನೀರು ತೆಗೆದುಕೊಳ್ಳಿ. ನೀರು ಚೆನ್ನಾಗಿ ಕುದಿಯಲಿ. ಈಗ ಲಟ್ಟಿಸಿದ ಪೂರಿಯನ್ನು ಜಾಲರಿ ಸೌಟು ಅಥವಾ ಎಣ್ಣೆ ಪದಾರ್ಥ ಕರಿಯುವಾಗ ಬಳಸುವ ಸೌಟಿನ ಮೇಲೆ ಹಾಕಿಕೊಂಡು ಅದನ್ನು ಕುದಿಯುತ್ತಿರುವ ನೀರಿನಲ್ಲಿ ಅದ್ದಿ. ಎರಡು ನಿಮಿಷಗಳವರಗೆ ಹಾಗೇ ಇಡಿ. ಪೂರಿ ಈಗ ಉಬ್ಬಿರುತ್ತದೆ. ಕೂಡಲೇ ಇದನ್ನು ಹೊರಗೆ ತೆಗೆಯಿರಿ. ಎಣ್ಣೆ ಬಳಸದ ಆರೋಗ್ಯಕರ ಪೂರಿ ರೆಡಿ. ಈ ಪೂರಿಯನ್ನು ಸಾಮಾನ್ಯವಾಗಿ ಸಕ್ಕರೆ, ಜೇನುತುಪ್ಪ ಅಥವಾ ಡ್ರೈ ಫ್ರೂಟ್ಸ್ ಜೊತೆಗೆ ತಿನ್ನುತ್ತಾರೆ. ಸಿಹಿಯ ಪದಾರ್ಥ ಬೇಡ ಎನ್ನುವವರು ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸೇವಿಸಬಹುದು. ಇದು ಎಣ್ಣೆಯ ಒಂದಿಷ್ಟೂ ಅಂಶವಿಲ್ಲದ ಆರೋಗ್ಯಕರ ಆಹಾರ. ಚಿಕ್ಕವರಿಂದ ಹಿಡಿದು ಹಿರಿಯರವರಗೆ, ಅನಾರೋಗ್ಯದಿಂದ ಬಳಲುತ್ತಿರುವವರು ಕೂಡಾ ಇದನ್ನು ಯಾವುದೇ ಹಿಂಜರಿಕೆ ಇಲ್ಲದೆ ತಿನ್ನಬಹುದು.
Published by:Soumya KN
First published: