• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Liver Disease: ಬೊಜ್ಜಿನಿಂದ ಎದುರಾಗುತ್ತೆ ಯಕೃತ್ತಿನ ಕಾಯಿಲೆ: ಈ ರೀತಿಯ ಲೈಫ್​ಸ್ಟೈಲ್ ಫಾಲೋ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

Liver Disease: ಬೊಜ್ಜಿನಿಂದ ಎದುರಾಗುತ್ತೆ ಯಕೃತ್ತಿನ ಕಾಯಿಲೆ: ಈ ರೀತಿಯ ಲೈಫ್​ಸ್ಟೈಲ್ ಫಾಲೋ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಿತ್ತಜನಕಾಂಗದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು, ನಿಮ್ಮ ಅಪಾಯಗಳನ್ನು ಕಡಿಮೆ ಮಾಡುವತ್ತ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಅಂದರೆ ಬೊಜ್ಜನ್ನು ಕರಗಿಸುವುದು ಅಥವಾ ತಡೆಗಟ್ಟುವುದು ಎಂದರ್ಥ.

  • Share this:

ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಯಕೃತ್ತು (Liver) ಒಂದಾಗಿದ್ದು, ಇದು ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ ಅಂತ ಹೇಳಬಹುದು. ಇದು ಹಾನಿಗೊಳಗಾದ ಕೋಶಗಳನ್ನು ಪುನರ್ ನಿರ್ಮಿಸಲು ಮತ್ತು ಸರಿಪಡಿಸಲು ಪ್ರೋಟೀನ್ ಗಳನ್ನು (Protein) ಉತ್ಪಾದಿಸುತ್ತದೆ. ದೇಹಕ್ಕೆ ಅಗತ್ಯವಿರುವ ಕಬ್ಬಿಣವನ್ನು ಸಂಗ್ರಹಿಸುತ್ತದೆ, ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ದೇಹವು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಪಿತ್ತಜನಕಾಂಗದ ಸಂಯೋಜನೆಯು ಸಣ್ಣ ಪ್ರಮಾಣದ ಕೊಬ್ಬನ್ನು ಒಳಗೊಂಡಿರುತ್ತದೆ. ಅತಿಯಾಗಿ ಮದ್ಯವನ್ನು (Alcohol) ಕುಡಿಯುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆಗಾಗ್ಗೆ ಮಾರಣಾಂತಿಕವಾಗುವ ಯಕೃತ್ತಿನ ಕಾಯಿಲೆಗಳಿಗೆ ಪ್ರಾಥಮಿಕ ಕಾರಣವೆಂದರೆ ಸ್ಥೂಲಕಾಯ ಅಥವಾ ಬೊಜ್ಜು (Cholesterol) ಅಂತ ಹೇಳಬಹುದು. ಅತಿಯಾದ ಮದ್ಯಪಾನ ಮತ್ತು ಬೊಜ್ಜು ಎರಡರ ಪರಿಣಾಮವಾಗಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತವೆ.


ಸಾಂದರ್ಭಿಕ ಚಿತ್ರ


ಪಿತ್ತಜನಕಾಂಗದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು, ನಿಮ್ಮ ಅಪಾಯಗಳನ್ನು ಕಡಿಮೆ ಮಾಡುವತ್ತ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಅಂದರೆ ಬೊಜ್ಜನ್ನು ಕರಗಿಸುವುದು ಅಥವಾ ತಡೆಗಟ್ಟುವುದು ಎಂದರ್ಥ. ನಮ್ಮ ಜೀವನಶೈಲಿ ಸಹ ಅನೇಕ ಬಾರಿ ನಮ್ಮ ಸ್ಥೂಲಕಾಯತೆಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಕೆಲವು ಬದಲಾವಣೆಗಳು ಈ ಸ್ಥೂಲಕಾಯತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.


ಸ್ಥೂಲಕಾಯತೆಯನ್ನು ನಿವಾರಿಸಲು ನಿಮ್ಮ ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ:


1. ವಾಸ್ತವಿಕ ಗುರಿಗಳನ್ನು ರಚಿಸಿಕೊಳ್ಳಿ


ವ್ಯಕ್ತಿಗಳು ತಮ್ಮ ತಿನ್ನುವ ನಡವಳಿಕೆಯನ್ನು ಬದಲಾಯಿಸಿಕೊಂಡಾಗ ಅವರ ತೂಕ ಸಹ ಕಡಿಮೆಯಾಗಲು ಶುರುವಾಗುತ್ತದೆ. ಹೊಸ ಆಹಾರದ ಕಡೆಗೆ ಆಕರ್ಷಿತರಾಗುವ ಮುಂಚೆ ನೀವು ವಾಸ್ತವಿಕ, ನಿರ್ವಹಿಸಬಹುದಾದ ಡಯಟ್ ಗುರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.


2. ಆರೋಗ್ಯಕರ ಆಹಾರವನ್ನು ಸೇವಿಸಿ


ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ ಅಂತ ವೈದ್ಯರು ಜನರಿಗೆ ಸದಾ ಹೇಳುತ್ತಿರುತ್ತಾರೆ. ನಮ್ಮ ದೇಹಕ್ಕೆ ಒಂದು ನಿರ್ದಿಷ್ಟವಾದ ಆಹಾರ ಅಗತ್ಯವಿಲ್ಲದಿದ್ದರೆ, ಅದನ್ನು ದೂರವಿಡುವುದು ಒಳ್ಳೆಯದು. ತಮ್ಮ ದೇಹದ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು, ಜನರು ವಿವಿಧ ರೀತಿಯ ಆಹಾರಗಳನ್ನು ಸೇವಿಸಬೇಕು. ಹೀಗೆ ಒಟ್ಟಿನಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ದೇಹದ ಆರೋಗ್ಯಕ್ಕೆ ಒಳ್ಳೆಯದು.


ಸಾಂದರ್ಭಿಕ ಚಿತ್ರ


3. ನಿಮ್ಮ ಭಾವನೆಗಳ ಮೇಲೆ ಗಮನ ಇರಲಿ


ಜನರು ಸಾಂದರ್ಭಿಕವಾಗಿ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಆಹಾರವನ್ನು ಬಳಸುತ್ತಾರೆ.  ಒಬ್ಬ ವ್ಯಕ್ತಿ ತಾನು ಸಂತೋಷವಾಗಿದ್ದಾಗ, ಅತೃಪ್ತರಾಗಿದ್ದಾಗ, ಬೇಸರವಾಗಿರುವಾಗ, ಉತ್ಸಾಹಿಯಾಗಿರುವಾಗ, ಒಂಟಿತನ ಅಥವಾ ಒತ್ತಡವನ್ನು ಅನುಭವಿಸುತ್ತಿದ್ದರೆ ಅವರು ಕೆಲವೊಮ್ಮೆ ಹೊಟ್ಟೆ ಹಸಿವಾಗದೆ ಇದ್ದರೂ ಸಹ ಹೆಚ್ಚು ತಿನ್ನಬಹುದು. ಈ ರೀತಿಯ ಸಂದರ್ಭವನ್ನು ನೀವು ಸರಿಯಾಗಿ ನಿಭಾಯಿಸಲು, ನೀವು ನಿಜವಾಗಿಯೂ ಹಸಿದಿದ್ದೀರಾ ಅಥವಾ ನಮಗಿರುವ ಭಾವನೆಗಳನ್ನು ನಿಭಾಯಿಸಲು ತಿನ್ನುತ್ತಿದ್ದೀವಾ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.


4. ಚೆನ್ನಾಗಿ ನಿದ್ರೆ ಮಾಡಿರಿ


ನಿದ್ರೆಯು ಸಾಮಾನ್ಯವಾಗಿ ವಿಶ್ರಾಂತಿಗೆ ಸಂಬಂಧಿಸಿದೆ. ರಾತ್ರಿಯಲ್ಲಿ ಮಾಡುವ ಒಳ್ಳೆಯ ನಿದ್ರೆ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ. ಇದು ಗ್ಲೂಕೋಸ್ ಚಯಾಪಚಯ, ನ್ಯೂರೋ ಎಂಡೋಕ್ರೈನ್ ಕೋಶಗಳು ಮತ್ತು ದೇಹದ ಪರಿಣಾಮಕಾರಿ ಕಾರ್ಯಾಚರಣೆಗೆ ಅಗತ್ಯವಾದ ಇತರ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಸಾಕಷ್ಟು ನಿದ್ರೆ ಮಾಡುವುದು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಅತಿಯಾಗಿ ತಿನ್ನುವುದು ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು.


ಸಾಂದರ್ಭಿಕ ಚಿತ್ರ


5. ಸಾಕಷ್ಟು ನೀರು ಕುಡಿಯಿರಿ


ಸಾಮಾನ್ಯವಾಗಿ ಉತ್ತಮ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಒಳ್ಳೆಯದು ಅಂತಾರೆ ವೈದ್ಯರು. ಒಬ್ಬ ವ್ಯಕ್ತಿಯ ದ್ರವ ಅವಶ್ಯಕತೆಗಳು ಅವರ ಒಟ್ಟಾರೆ ಆರೋಗ್ಯ, ದೇಹದ ತೂಕ ಮತ್ತು ದೈಹಿಕ ಚಟುವಟಿಕೆಯ ಮಟ್ಟದಿಂದ ಪ್ರಭಾವಿತವಾಗುತ್ತವೆ. ಸಾಮಾನ್ಯ ಸೋಡಾದಂತಹ ಕ್ಯಾಲೋರಿ ಹೊಂದಿರುವ ಪಾನೀಯಗಳ ಬದಲಿಗೆ ನೀರು ಕುಡಿಯುವುದು ಒಳ್ಳೆಯದು. ಏಕೆಂದರೆ ನೀರಿನಲ್ಲಿ ಯಾವುದೇ ಕ್ಯಾಲೊರಿಗಳಿರುವುದಿಲ್ಲ ಮತ್ತು ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ.


6. ಮಾಡುವ ವ್ಯಾಯಾಮವನ್ನು ಆನಂದಿಸಿ


ಪ್ರತಿದಿನ ವ್ಯಾಯಾಮ ಮಾಡುವುದು ನಿಮಗೆ ಕಷ್ಟವಾಗಬಾರದು. ಇದು ಒಂದು ಆನಂದದಾಯಕವಾದ ಚಟುವಟಿಕೆ ಆಗಬೇಕು ಎಂದರೆ ನೀವು ಜಿಮ್ ಗೆ ಹೋಗಿ ತೂಕಗಳನ್ನು ಎತ್ತುವ ಬದಲಿಗೆ ಸೈಕ್ಲಿಂಗ್, ಈಜು, ನೃತ್ಯ ಇತ್ಯಾದಿಗಳ ಮೂಲಕ ಕೆಲವು ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು.




ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಮತ್ತು ಆರೋಗ್ಯಕರ ಆಯ್ಕೆಗಳನ್ನು ಮಾಡುವುದು ಯಕೃತ್ತಿನ ಕಾಯಿಲೆಗಳು ಮತ್ತು ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು