Weight Loss: ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ತರಕಾರಿಗಳ ಸೇವನೆ! ಯಾವುದು ಬೆಸ್ಟ್?

ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ದೇಹದ ಶಕ್ತಿಯ ಮಟ್ಟ ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವಿಸುವುದು ಮುಖ್ಯ. ಸ್ಥೂಲಕಾಯದಿಂದ ತೊಂದರೆಗೀಡಾಗಿದ್ದರೆ ಮತ್ತು ತೂಕ ಇಳಿಸುವ ಆಹಾರ ಯೋಜಿಸುತ್ತಿದ್ದರೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿ ಸೇವಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಿಡುವಿಲ್ಲದ ಜೀವನಶೈಲಿ(Lifestyle), ಆಹಾರ ಪದ್ಧತಿಯಲ್ಲಿ (Food Plan) ನಿಯಮಿತ ಡಯಟ್ (Diet) ಫಾಲೋ ಮಾಡದೇ ಇರುವುದು ಫಿಟ್ನೆಸ್ (Fitness) ನ್ನು ಹಾಳು ಮಾಡುತ್ತದೆ. ಅದರಲ್ಲೂ ಅನಾರೋಗ್ಯಕರ ಆಹಾರ ಪದ್ಧತಿ ವೇಟ್ ಹೆಚ್ಚಿಸುವ ಸಾಧ್ಯತೆ ಹೆಚ್ಚು. ಇನ್ನು ಜನರು ತಮಗೆ ಸಮಯವಿಲ್ಲದ ಕಾರಣ ಫಿಟ್ನೆಸ್ ಬಗ್ಗೆ ನಿಯಮಿತವಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಕೆಟ್ಟ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ, ವ್ಯಾಯಾಮ, ವಾಕಿಂಗ್ ಮಾಡದಿರುವುದು ಬೊಜ್ಜಿನ ಸಮಸ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡ್ತಿದೆ. ಸ್ಥೂಲಕಾಯವು ರೋಗಗಳ ಮನೆ ಮಾಡುತ್ತದೆ. ದೇಹದ ದುರ್ಬಲತೆಗೆ ಗುರಿಯಾಗಿಸುತ್ತದೆ. ಹಾಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸುವುದು ಮುಖ್ಯ.

    ಸ್ಥೂಲಕಾಯ ನಿಯಂತ್ರಿಸಲು ಸಕ್ರಿಯವಾಗಿರಿ

    ಜೊತೆಗೆ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಸ್ಥೂಲಕಾಯ ನಿಯಂತ್ರಿಸಲು, ಮೊದಲನೆಯದಾಗಿ ಸರಿಯಾದ ಆಹಾರ ಸೇವನೆ ಮಾಡಬೇಕು. ನಂತರ ದೇಹವನ್ನು ಸಾಧ್ಯವಾದಷ್ಟು ಸಕ್ರಿಯವಾಗಿಡಲು ಪ್ರಯತ್ನಿಸಿ.

    ಬೊಜ್ಜು ನಿಮ್ಮನ್ನು ಬಲಿಪಶು ಮಾಡಬಹುದು. ದೇಹದ ಶಕ್ತಿಯ ಮಟ್ಟ ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವಿಸುವುದು ಮುಖ್ಯ. ಅಂತಹ ಕೆಲವು ಪೋಷಕಾಂಶ ಹೊಂದಿರುವ ತರಕಾರಿಗಳನ್ನು ನಾವು ಇಲ್ಲಿ ನೋಡೋಣ. ಇದು ನಿಮಗೆ ಶಕ್ತಿ ನೀಡುತ್ತದೆ. ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

    ಹೆಲ್ತ್ ಶಾಟ್ಸ್ ಮುಂಬೈನ ಈಟ್‌ರೈಟ್ ದಿ ನ್ಯೂಟ್ರಿಷನ್ ಕ್ಲಿನಿಕ್‌ನಿಂದ ಪೌಷ್ಟಿಕತಜ್ಞ ಮಾಳವಿಕಾ ಅಠವಾಲೆ ಹೇಳುವ ಪ್ರಕಾರ, ಅಣಬೆಗಳ ಪ್ರಯೋಜನಗಳ ಕುರಿತು ಹೇಳಿದ್ದಾರೆ. ಸ್ಥೂಲಕಾಯದಿಂದ ತೊಂದರೆಗೀಡಾಗಿದ್ದರೆ ಮತ್ತು ತೂಕ ಇಳಿಸುವ ಆಹಾರ ಯೋಜಿಸುತ್ತಿದ್ದರೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿ ಸೇವಿಸಿ.

    ತೂಕ ನಷ್ಟಕ್ಕೆ ಯಾವ ತರಕಾರಿ ಸೇವನೆ ಸಹಕಾರಿ?

    ಅಣಬೆ

    ಅಣಬೆಗಳು ಕ್ಯಾಲೋರಿ ಬಹಳ ಕಡಿಮೆ ಹೊಂದಿವೆ. ಅದೇ ವೇಳೆ ಈ ಸೂಪರ್ಫುಡ್ ಫೈಬರ್ ಮತ್ತು ಪ್ರೋಟೀನ್ ನ ಅತ್ಯುತ್ತಮ ಮೂಲ ಆಗಿದೆ. ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡುತ್ತದೆ. ಮತ್ತು ಅದರಲ್ಲಿರುವ ಅಗತ್ಯ ಪೋಷಕಾಂಶಗಳು ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತದೆ. ಇದು ದೇಹದಲ್ಲಿ ಶಕ್ತಿಯ ಮಟ್ಟ ನಿರ್ವಹಿಸುತ್ತದೆ.

    ಪಾಲಕ್ ಸೊಪ್ಪು

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧ ಆಗಿದೆ. ಇದು ದೇಹದ ಹೆಚ್ಚುವರಿ ಕ್ಯಾಲೊರಿ ಬರ್ನ್ ಮಾಡುತ್ತದೆ.

    ಮತ್ತೊಂದೆಡೆ ಪಾಲಕ್ ಸೊಪ್ಪಿನಲ್ಲಿ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆ. ತೂಕ ನಷ್ಟ ಆಹಾರದಲ್ಲಿ ಪಾಲಕ್ ಸೇರಿಸಿ. ಇದು ದೇಹದ ತೂಕ ನಿಯಂತ್ರಿಸುತ್ತದೆ. ಜೊತೆಗೆ ದೇಹದ ಕಬ್ಬಿಣ ಕೊರತೆ ನೀಗಿಸುತ್ತದೆ. ಇದು ಚರ್ಮದ ಹೊಳಪು ಮತ್ತು ಆರೋಗ್ಯ ಕಾಪಾಡುತ್ತದೆ.

    ಕುಂಬಳಕಾಯಿ

    ರಿಸರ್ಚ್‌ಗೇಟ್ ನಡೆಸಿದ ಅಧ್ಯಯನದ ಪ್ರಕಾರ ಕುಂಬಳಕಾಯಿ ಫೈಬರ್‌ನಲ್ಲಿ ಸಮೃದ್ಧ ಆಗಿದೆ. ಇದು ತೂಕ ನಷ್ಟ ನಿರ್ವಹಣೆಗೆ ಆರೋಗ್ಯಕರ ಆಹಾರ. ಜೀವಸತ್ವಗಳು ಮತ್ತು ಪ್ರಮುಖ ಖನಿಜಗಳ ಅತ್ಯುತ್ತಮ ಮೂಲ. ಕುಂಬಳಕಾಯಿ ಸೂಪ್, ಮೇಲೋಗರಗಳು ಮತ್ತು ಸಲಾಡ್‌ ಸೇವಿಸಬಹುದು. ಇದು ನಿಮ್ಮ ಜೀರ್ಣಕಾರಿ ಆರೋಗ್ಯ ಉತ್ತೇಜಿಸುತ್ತದೆ. ಕುಂಬಳಕಾಯಿ ನಿಯಮಿತ ಸೇವನೆ ಹೃದ್ರೋಗ, ಮಧುಮೇಹ ಮತ್ತು ಬೊಜ್ಜು ನಿಯಂತ್ರಿಸುತ್ತದೆ.

    ಬೇಯಿಸಿದ ಆಲೂಗಡ್ಡೆ

    ಬಿಳಿ ಆಲೂಗಡ್ಡೆ ಮತ್ತು ಇತರ ಬೇರು ಹೊಂದಿರುವ ತರಕಾರಿಗಳು ಸಣ್ಣ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ ಹೊಂದಿರುತ್ತವೆ. ಅವು ತೂಕ ನಷ್ಟ ಮತ್ತು ಇತರ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ. ಇದು ಪೊಟ್ಯಾಸಿಯಮ್ನ ಅತ್ಯುತ್ತಮ ಮೂಲ. ಇದು ರಕ್ತದೊತ್ತಡ ನಿಯಂತ್ರಿಸುತ್ತದೆ. ಅತಿಯಾಗಿ ತಿನ್ನುವುದು ಮತ್ತು ಆಗಾಗ್ಗೆ ಹಸಿವಿನ ಸಮಸ್ಯೆ ತಗ್ಗಿಸುತ್ತದೆ.

    ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

    ಎಲೆಕೋಸು

    ಎಲೆಕೋಸು ಹಸಿರು ಎಲೆಗಳ ತರಕಾರಿ. ಇದು ತೂಕ ನಷ್ಟಕ್ಕೆ ಸಹಕಾರಿ. ದೇಹವನ್ನು ನಿರ್ವಿಷಗೊಳಿಸುತ್ತದೆ. ತೂಕ ನಿಯಂತ್ರಿಸುತ್ತದೆ. ಇದು ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಯ ಉತ್ತಮ ಮೂಲ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ.
    Published by:renukadariyannavar
    First published: