Gum Health: ಸ್ಥೂಲಕಾಯದಿಂದ ವಸಡಿಗೂ ಸಮಸ್ಯೆಯಿದೆ ಅಂತಿದೆ ಹೊಸ ಅಧ್ಯಯನ.. ಹೇಗೆ ಗೊತ್ತೇ?

ಕೊಬ್ಬು, ನಾರು ಮತ್ತು ಪ್ರೋಟೀನ್ ಉಳ್ಳ ಆಹಾರ ಕ್ರಮವನ್ನು ಅನುಸರಿಸಿ ಹಾಗೆ ಮಾಡುವುದರಿಂದ ನೀವು ಅತಿಯಾಗಿ ತಿನ್ನುವುದನ್ನು ಮತ್ತು ಬೇಡವಿದ್ದರೂ ಆಗುವ ಹಸಿವಿನ ಸಂಕಟ ತಪ್ಪಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೊಜ್ಜು ಅಥವಾ ಸ್ಥೂಲಕಾಯತೆ (Obesity) ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ(Health Problems) ಕಾರಣವಾಗುತ್ತದೆ ಎಂಬುವುದು ಬಹಳಷ್ಟು ಮಂದಿಗೆ ತಿಳಿದಿರುವ ವಿಷಯ. ಅದರಲ್ಲೂ ಈ ದಿನಗಳಲ್ಲಿ, ಸಾಮಾನ್ಯವಾಗಿ ಎಷ್ಟೋ ಕಾಯಿಲೆಗಳು ಬೊಜ್ಜಿನ ಜೊತೆ ಸಂಬಂಧ ಹೊಂದಿರುತ್ತವೆ. ಹಾಗಾಗಿ ವೈದ್ಯರು ಬೊಜ್ಜನ್ನು ಇಳಿಸಿಕೊಳ್ಳುವಂತೆ ಸಲಹೆ ನೀಡುತ್ತಲೇ ಇರುತ್ತಾರೆ. ಬೊಜ್ಜಿಗೂ ಹಲ್ಲುಗಳ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಬಲ್ಲಿರಾ..? ಹೌದು, ಜರ್ನಲ್ ಆಫ್ ಡೆಂಟಲ್ (Journal of Dental Research) ರಿಸರ್ಚ್‍ನಲ್ಲಿ ಪ್ರಕಟವಾದ, “ನೋವೆಲ್ ಪ್ರೀಓಸ್ಟಿಯೋಕ್ಲಾಸ್ಟ್ ಪಾಪ್ಯುಲೇಶನ್ಸ್ (Novel Preoistoclast Populations) ಇನ್ ಒಬೆಸಿಟಿ-ಆಸೋಸಿಯೇಟೆಡ್ ಪೀರಿಯೊಡೊಂಟಲ್ ಡಿಸೀಸ್” (Obesity-Associated Periodontal Disease) ಎಂಬ ಶೀರ್ಷಿಕೆ ಉಳ್ಳ ಅಧ್ಯಯನ ವರದಿಯ ಪ್ರಕಾರ, ಬೊಜ್ಜು ವಸಡಿಗೆ ಸಂಬಂಧಿಸಿದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಅಧಿಕಗೊಳಿಸುತ್ತದೆ. ಅದು ಎಂಡಿಎಸ್‍ಸಿ ಅಥವಾ ಮೈಲಾಯ್ಡ್ ಮೂಲದ ದಮನಕಾರಿ ಕೋಶಗಳ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ಒಂದು ಪರಿಣಾಮವಾಗಿದೆ.

ಅಧ್ಯಯನದ ಪ್ರಕಾರ
ಯುನಿವರ್ಸಿಟಿ ಆಫ್ ಬಫೆಲೋ ನ್ಯೂಸ್ ಸೆಂಟರ್, ಯುಬಿ ಓರಲ್ ಬಯಾಲಜಿ ವಿಭಾಗದ ಪೋಸ್ಟ್ ಡಾಕ್ಟರಲ್ ಅಸೋಸಿಯೇಟ್ ಮತ್ತು ಅಧ್ಯಯನದ ಲೇಖಕ ಕ್ಯುಹ್ವಾನ್ ಕ್ವಾಕ್ ಅವರು, “ ಈ ಸಂಶೋಧನೆಯು ಸ್ಥೂಲಕಾಯತೆಯ ಇದ್ದಾಗ ಆಸ್ಟಿಯೋಕ್ಲಾಸ್ಟ್‌ಗಳಾಗಲು, ಪರಿದಂತದ ಉರಿಯೂತದ ಸಮಯದಲ್ಲಿ ಎಂಡಿಎಸ್‍ಸಿಯ ವಿಸ್ತರಣೆಯು ಹೆಚ್ಚಿದ ಅಲ್ವಿಯೋಲಾರ್ ಮೂಳೆ ನಾಶಕ್ಕೆ ಸಂಬಂಧಿಸಿದೆ ಎಂಬ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ. ಇದನ್ನು ಒಟ್ಟಾಗಿ ತೆಗೆದುಕೊಂಡರೆ, ಸ್ಥೂಲಕಾಯವು ಪರಿದಂತ ಉರಿಯೂತದ ಮೂಳೆ ನಷ್ಟದ ಅಪಾಯ ಹೆಚ್ಚಿಸುತ್ತದೆ ಎಂಬ ದೃಷ್ಟಿಕೋನವನ್ನು ಈ ದತ್ತಾಂಶಗಳು ಬೆಂಬಲಿಸುತ್ತವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Weight Loss Tips: ನೀವು ದಪ್ಪ ಇದ್ರೆ ಚಿಂತೆ ಬೇಡ ಖಾಲಿ ಹೊಟ್ಟೆಲಿ ಇವುಗಳನ್ನ ಕುಡಿಯಿರಿ

ಬೊಜ್ಜಿನ ಸಮಸ್ಯೆಯ ನಿರ್ವಹಣೆಗೆ ಸಲಹೆಗಳು

ಸ್ಥೂಲಕಾಯತೆಯನ್ನು ನೀವು ಹೇಗೆ ಪರಿಶೀಲಿಸಿಕೊಳ್ಳಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ :
- ಸಕ್ಕರೆಯುಕ್ತ ಪಾನೀಯ ಹಾಗೂ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಅವುಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.
- ಕೊಬ್ಬು, ನಾರು ಮತ್ತು ಪ್ರೋಟೀನ್ ಉಳ್ಳ ಆಹಾರ ಕ್ರಮವನ್ನು ಅನುಸರಿಸಿ. ಹಾಗೆ ಮಾಡುವುದರಿಂದ ನೀವು ಅತಿಯಾಗಿ ತಿನ್ನುವುದನ್ನು ಮತ್ತು ಬೇಡವಿದ್ದರೂ ಆಗುವ ಹಸಿವಿನ ಸಂಕಟ ತಪ್ಪಿಸಬಹುದು.
- ಮದ್ಯಪಾನ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ, ಮದ್ಯ ಸೇವನೆ ಕಡಿಮೆ ಮಾಡಿ.
- ಸಂಸ್ಕರಿತ ಆಹಾರ, ಕರಿದ ತಿಂಡಿಗಳು ಮತ್ತು ಕೆಂಪು ಮಾಂಸವನ್ನು ತಿನ್ನಬೇಡಿ. ಏಕೆಂದರೆ, ಆ ರೀತಿಯ ಆಹಾರಗಳಲ್ಲಿ ಸಕ್ಕರೆ, ಕೊಬ್ಬು , ಉಪ್ಪು ಮತ್ತು ಇತರ ಸೇರ್ಪಡೆಗಳು ಅಧಿಕವಾಗಿರುತ್ತವೆ.
- ಆರೋಗ್ಯಕರ ತೂಕ ಮತ್ತು ದೇಹವನ್ನು ಹೊಂದಲು, ಸದಾ ದೈಹಿಕವಾಗಿ ಚಟುವಟಿಕೆಯಿಂದಿರಿ ಮತ್ತು ನಿತ್ಯವೂ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ವಾರಕ್ಕೆ 150 ನಿಮಿಷಗಳ ವ್ಯಾಯಾಮ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

ಈ ಕೆಳಗಿನ ಕೆಲವು ಮಾರ್ಗಗಳನ್ನು ಅನುಸರಿಸಿದರೆ ನೀವು ನಿಮ್ಮ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ :
ದಿನಕ್ಕೆ ಎರಡು ಬಾರಿ ಹಲ್ಲುಜ್ಜಿರಿ ಮತ್ತು ಹಲ್ಲುಗಳ ನಡುವೆ ಆಹಾರದ ಕಣಗಳು ಸಿಲುಕಿಕೊಳ್ಳುವುದನ್ನು ಮತ್ತು ಹಲ್ಲುಗಳು ಕೊಳೆಯುವುದನ್ನು ತಪ್ಪಿಸಲು ಫ್ಲಾಸ್ ಮಾಡುವುದನ್ನು ಮರೆಯಬೇಡಿ.
ಊಟ ಮಾಡಿದ ಕೂಡಲೇ ಹಲ್ಲುಜ್ಜಬೇಡಿ, ಏಕೆಂದರೆ ಆಮ್ಲೀಯ ಪ್ರತಿಕ್ರಿಯೆ ದಂತ ಕವಚದ ಸವೆತಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Weight Loss Tips: ಈ ಆಹಾರಗಳು ರುಚಿಕರ ಮಾತ್ರವಲ್ಲ ತೂಕ ಇಳಿಸಲು ಸಹಕಾರಿ

- ಅತಿಯಾದ ಸಕ್ಕರೆ ಸೇವನೆ ಸಲ್ಲದು, ಅದರಿಂದ ದಂತ ಕುಳಿಗಳ ಅಪಾಯ ಕಟ್ಟಿಟ್ಟ ಬುತ್ತಿ.
- ಪಾಲಕ್, ಬ್ರೊಕೋಲಿ, ಕೇಲ್‌, ಹಾಲು ಮತ್ತಿತರ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಿ.
- ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ತಪಾಸಣೆಗೆಂದು ಹೇಗೆ ಆಗಾಗ ವೈದ್ಯರ ಬಳಿಗೆ ಹೋಗುತ್ತೀರೋ ಹಾಗೆಯೇ, ಆಗಾಗ ದಂತ ವೈದ್ಯರನ್ನು ಭೇಟಿ ಮಾಡಿ ಹಲ್ಲಿನ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಮುಖ್ಯ. ಪ್ರತಿ ತಿಂಗಳು ಹಲ್ಲಿನ ತಪಾಸಣೆ ಮಾಡಿಸಿಕೊಳ್ಳಿ.
Published by:vanithasanjevani vanithasanjevani
First published: