ಮಗು ಮಾಡಿಕೊಳ್ಳುವ ಮುಂಚೆ ನೀವು ಆರೋಗ್ಯವಾಗಿರುವುದು ಎಷ್ಟು ಮುಖ್ಯ?

ಅತಿಯಾದ ಬೊಜ್ಜು ಪುರುಷ ಮತ್ತು ಸ್ತ್ರೀ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಸಂತಾನೋತ್ಪತ್ತಿ ಹೊಂದಿರುವ ವಯಸ್ಸಿನ ಮಹಿಳೆಯರ ಜನಸಂಖ್ಯೆಯಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ. ಇದು ಹಾರ್ಮೋನುಗಳ ಅಡಚಣೆ ಮತ್ತು ಬದಲಾಗುತ್ತಿರುವ ಜೀವನ ಶೈಲಿಯೊಂದಿಗೆ ಸಂಬಂಧ ಹೊಂದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:

  ನೀವು ತುಂಬಾ ದಪ್ಪವಾಗಿದ್ದೀರಿ ಮತ್ತು ಅದೇ ಸಮಯದಲ್ಲಿ ನೀವು ಮಗುವಿಗೆ ಜನ್ಮ ನೀಡಲು ಯೋಚಿಸಿದ್ದರೆ, ಮೊದಲು ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು.ದೇಹದಲ್ಲಿ ಅತಿಯಾದ ಬೊಜ್ಜು ಶೇಖರಣೆಯಾಗುವ ಸಮಸ್ಯೆ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಳ್ಳೆಯದಲ್ಲ. ಮಹಿಳೆಯರ ದೇಹದಲ್ಲಿ ಬೊಜ್ಜು ಹೆಚ್ಚಿದ್ದರೆ ಗರ್ಭಾವಸ್ಥೆಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗು ತ್ತದೆ.ಹಲವಾರು ಸಂದರ್ಭಗಳಲ್ಲಿ ಅತಿಯಾದ ಬೊಜ್ಜು ಬಂಜೆತನಕ್ಕೂ ಕಾರಣವಾಗುತ್ತದೆ. ಆದ್ದರಿಂದ, ಗರ್ಭಧಾರಣೆ ಯಾವುದೇ ತೊಂದರೆಯಾಗದಂತೆ ಆಗಲು, ದಂಪತಿ ಆ ಹೆಚ್ಚುವರಿ ತೂಕವನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು. ಪುಣೆಯಲ್ಲಿರುವಂತಹ ನೋವಾ ಐವಿಎಫ್‌ನಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವಂತಹ ಡಾ. ಕರೀಷ್ಮಾ ಡಫ್ಲೆ ಬೊಜ್ಜಿನಿಂದಾಗುವ ಪರಿಣಾಮಗಳು ಮತ್ತು ನಿವಾರಿಸುವ ಮಾರ್ಗಗಳನ್ನು ತಿಳಿಸಿದ್ದಾರೆ.


  ನಿಮ್ಮಲ್ಲಿ ಬೊಜ್ಜು ಇರುವುದನ್ನು ಹೇಗೆ ತಿಳಿಯುವುದು?


  ಅಧಿಕ ತೂಕ ಮತ್ತು ಬೊಜ್ಜಿನ ಬಗ್ಗೆ ಪ್ರಸ್ತುತ ಮಾರ್ಗಸೂಚಿಗಳು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅನ್ನು ಆಧರಿಸಿದೆ. ಇದರ ಸೂತ್ರವು ತೂಕ (ಕೆಜಿ) /ಎತ್ತರ (ಮೀಟರ್) ಭಾಗಿಸಿದಾಗ ಬರುವ ಸಂಖ್ಯೆಯು ನೀವು ಆರೋಗ್ಯದಿಂದ ಇರುವಿರಾ ಎಂದು ತಿಳಿಯಲು ಸಹಾಯ ಮಾಡುತ್ತದೆ. ನೀವು ಕಡಿಮೆ ತೂಕ ಹೊಂದಿದ್ದರೆ, ನಿಮ್ಮ ಬಿಎಂಐ 18.5ಕ್ಕಿಂತ ಕಡಿಮೆ ಇರುತ್ತದೆ ಮತ್ತು ಆರೋಗ್ಯಕರ ತೂಕ ಬಿಎಂಐ 18.5 ರಿಂದ 24.9ರ ಮಧ್ಯದಲ್ಲಿರುತ್ತದೆ. ಪುರುಷರು ಮತ್ತು ಮಹಿಳೆಯರಲ್ಲಿ, ಬಿಎಂಐ 25 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆಗ ವ್ಯಕ್ತಿಯು ಅಧಿಕ ತೂಕ ಹೊಂದಿರುತ್ತಾನೆ ಎಂದರ್ಥ. ಬಿಎಂಐ 30ಕ್ಕಿಂತ ಹೆಚ್ಚಿದ್ದರೆ ವ್ಯಕ್ತಿಯನ್ನು ಅತಿಯಾದ ಬೊಜ್ಜು ಹೊಂದಿರುವವರು ಎಂದು ಹೇಳಲಾಗುತ್ತದೆ.


  ಬೊಜ್ಜು ಮತ್ತು ಬಂಜೆತನದ ನಡುವಿನ ವ್ಯತ್ಯಾಸ ತಿಳಿಯಿರಿ


  ಅತಿಯಾದ ಬೊಜ್ಜು ಪುರುಷ ಮತ್ತು ಸ್ತ್ರೀ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಸಂತಾನೋತ್ಪತ್ತಿ ಹೊಂದಿರುವ ವಯಸ್ಸಿನ ಮಹಿಳೆಯರ ಜನಸಂಖ್ಯೆಯಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದೆ. ಇದು ಹಾರ್ಮೋನುಗಳ ಅಡಚಣೆ ಮತ್ತು ಬದಲಾಗುತ್ತಿ ರುವ ಜೀವನ ಶೈಲಿಯೊಂದಿಗೆ ಸಂಬಂಧ ಹೊಂದಿದೆ.


  ಬೊಜ್ಜಿನಿಂದ ಪುರುಷರು ಮತ್ತು ಮಹಿಳೆಯರು ಅನುಭವಿಸುವ ಸಮಸ್ಯೆಗಳು


  ಅಮೆನೋರಿಯಾ (ಒಂದು ಅಥವಾ ಹೆಚ್ಚು ಋತುಚಕ್ರವನ್ನು ಕಳೆದು ಕೊಳ್ಳುವುದು), ಅನೋವೇಲೇಷನ್ (ಅಂಡೋತ್ಪತ್ತಿಯ ಕೊರತೆ), ಬಂಜೆತನ (ಗರ್ಭಧರಿಸಲು ಅಸಮರ್ಥತೆ) ಇವೆಲ್ಲಾ ಸಮಸ್ಯೆಗಳು ಅಧಿಕ ದೇಹದ ತೂಕ ಹೊಂದಿರುವ ಮಹಿಳೆಯರಲ್ಲಿ ಹೆಚ್ಚಾಗುತ್ತದೆ. ದಪ್ಪಗಿರುವ ಮಹಿಳೆಯರು ಅನಿಯಮಿತ ಋತುಚಕ್ರ, ಅನೋವೇಲೇಶನ್ ಸಮಸ್ಯೆ ಅನುಭವಿಸುವ ಸಾಧ್ಯತೆಯಿದೆ.


  ಇದನ್ನೂ ಓದಿ: Afghanistan Crisis: ಹುಡುಕಿದ ಪತ್ರಕರ್ತ ಸಿಕ್ಕಿಲ್ಲವೆಂದು ಆತನ ಸಂಬಂಧಿಗಳನ್ನು ಕೊಂದ ತಾಲಿಬಾನಿಗಳು!

  ಸಾಮಾನ್ಯ ಮಹಿಳೆಗೆ ಹೋಲಿಸಿದರೆ ದಪ್ಪಗಿರುವ ಮಹಿಳೆಯು ಬಂಜೆತನ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಪುರುಷರ ದೇಹದಲ್ಲಿ ಅತಿಯಾಗಿ ಬೊಜ್ಜು ಇರುವುದರಿಂದ ಲೈಂಗಿಕ ಕ್ರಿಯೆಗೆ ಸಾಕಷ್ಟು ಸಮಸ್ಯೆ ಆಗುತ್ತದೆ ಮತ್ತು ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಸಮಸ್ಯೆ ಎದುರಿಸಬಹುದಾಗಿದೆ.


  ಬೊಜ್ಜನ್ನು ಕಡಿಮೆ ಮಾಡಿಕೊಂಡು ಗರ್ಭಧಾರಣೆಯನ್ನು ಆನಂದಿಸುವುದು ಹೇಗೆ?


  ಸುಲಲಿತವಾದ ಗರ್ಭಧಾರಣೆಗಾಗಿ, ನಿಮ್ಮ ಜೀವನಶೈಲಿಯ ಬದಲಾವಣೆಗಳು, ಆಹಾರ ಬದಲಾಯಿಸುವುದು ಮತ್ತು ದೈನಂದಿನ ವ್ಯಾಯಾಮ ಅಗತ್ಯ. ಕೆಲವು ನಿಗದಿತ ಔಷಧಿಗಳು ವ್ಯಕ್ತಿಯ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಮೊಮ್ಮಗನಿಗೆ 40 ಕೋಟಿ ರೂ. ಆಸ್ತಿಯನ್ನು ಉಡುಗೊರೆ ನೀಡಿದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಪತ್ನಿ ಬಿಂದು

  ನೀವು ಸೇವಿಸುವಂತಹ ಆಹಾರವು ತಾಜಾ ಹಣ್ಣುಗಳು, ತರಕಾರಿ, ಧಾನ್ಯ ಮತ್ತು ಬೀನ್ಸ್ ಅನ್ನು ಒಳಗೊಂಡಿರಬೇಕು. ಎಣ್ಣೆಯುಕ್ತ ಮತ್ತು ಹುರಿದ ಆಹಾರಗಳು, ಬಿಸ್ಕತ್ತುಗಳು, ಹೆಚ್ಚಿನ ಕ್ಯಾಲೋರಿ ಇರುವ ಸಿಹಿತಿಂಡಿಗಳನ್ನು ಕಡಿಮೆ ಮಾಡಿ. ವೈದ್ಯರು ಸೂಚಿಸಿದಂತೆ ನಿಮ್ಮ ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರಕಗಳನ್ನು ಸಮಯಕ್ಕೆ ತೆಗೆದುಕೊಳ್ಳಲು ಮರೆಯಬೇಡಿ.
  ಪ್ರತಿನಿತ್ಯ ತಪ್ಪದೆ ವ್ಯಾಯಾಮ ಮಾಡಿ ಮತ್ತು ನೀವು ಆರೋಗ್ಯವಾಗಿರಲು ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ನೀವು ಇಷ್ಟಪಡುವ ಯಾವುದೇ ಚಟುವಟಿಕೆಗಳನ್ನು ಮಾಡಬಹುದು.

  First published: