Blue Berry Benefits: ಬೊಜ್ಜು-ರಕ್ತದ ಸಕ್ಕರೆ ಪ್ರಮಾಣ ಸಮಸ್ಯೆ ಇದ್ರೆ ಬ್ಲೂಬೆರ್ರಿ ಹಣ್ಣು ತಿನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಮೊದಲ ಆಯ್ಕೆ ಆರೋಗ್ಯ ಆಗಿರಬೇಕು. ಬ್ಲೂಬೆರ್ರಿ ಹಣ್ಣುಗಳು ತಮ್ಮ ಪೋಷಕಾಂಶಗಳ ಕಾರಣದಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿವೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ತೂಕ ನಿರ್ವಹಣೆಗೆ ಸಹಕಾರಿ.

  • Share this:

    ಹುಳಿ, ಸಿಹಿ ಹಾಗೂ ರಸಭರಿತ ಹಣ್ಣುಗಳನ್ನು (Sweet And Juicy Fruits) ತಿನ್ನೋಕೆ ಯಾರು ತಾನೇ ಇಷ್ಟ ಪಡಲ್ಲ ಹೇಳಿ. ದ್ರಾಕ್ಷಿ, ಕಲ್ಲಂಗಡಿ, ಸೇಬು, ಮೋಸಂಬಿ ಹೀಗೆ ಹಲವು ಹಣ್ಣುಗಳು ಹಲವು ರೀತಿಯ ರುಚಿ ನೀಡುತ್ತವೆ. ಬಯಕೆ ಇದ್ದರೆ ನೀವು ಬ್ಲೂಬೆರ್ರಿ (Blue Berry) ಹಣ್ಣು ಸೇವನೆ ಮಾಡುವುದು ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ. ನಮ್ಮ ಮೊದಲ ಆಯ್ಕೆ ಅಂದ್ರೆ ಅದು ಆರೋಗ್ಯ ಆಗಿರಬೇಕು. ಕಡು ನೀಲಿ ಬಣ್ಣದ ಬ್ಲೂ ಬೆರ್ರಿ ಹಣ್ಣುಗಳನ್ನು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.


    ಬ್ಲೂಬೆರ್ರಿ ಹಣ್ಣು


    ಬ್ಲೂಬೆರ್ರಿ ಯನ್ನು ಹೆಚ್ಚಾಗಿ, ಕೇಕ್, ಐಸ್ ಕ್ರೀಂ, ಮೊಸರು, ಓಟ್ ಮೀಲ್ ಜೊತೆಗೆ ಬ್ಲೂಬೆರ್ರಿ ಸ್ಮೂಥಿಯಲ್ಲಿ ಹೆಚ್ಚು ಬಳಸುವುದನ್ನು ಕಾಣಬಹುದು. ಹೀಗೆ ವಿವಿಧ ರೆಸಿಪಿಗಳಲ್ಲಿ ತಯಾರಿಸಿ ಸೇವನೆ ಮಾಡಬಹುದು. ಬೆರಿಹಣ್ಣುಗಳನ್ನು ದೋಸೆ, ಪ್ಯಾನ್‌ಕೇಕ್‌, ಫ್ರೂಟ್ ಚಾಟ್, ಫ್ರೂಟ್ ಸಲಾಡ್ ಪದಾರ್ಥಗಳಲ್ಲಿ ಅಲಂಕಾರ ಮಾಡಲು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.


    ಬ್ಲೂಬೆರ್ರಿ ಹಣ್ಣು ಮತ್ತು ಹೃದಯದ ಆರೋಗ್ಯದ ಬಗ್ಗೆ ಸಂಶೋಧನೆ


    2020 ರಲ್ಲಿ ಅಮೇರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಬ್ಲೂಬೆರ್ರಿ ಹಣ್ಣುಗಳು ತಮ್ಮ ಪೋಷಕಾಂಶಗಳ ಕಾರಣದಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ನಂಬಲಾಗಿದೆ.


    ಇದನ್ನೂ ಓದಿ: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ


    ಇದಕ್ಕಾಗಿ ಮಾನವ ವೀಕ್ಷಣೆ, ಕ್ಲಿನಿಕಲ್ ಸಂಶೋಧನೆ, ಪ್ರಾಣಿ ಮತ್ತು ವಿಟ್ರೊ ಮಾದರಿ ಬಳಸಿ ಸಂಶೋಧನೆ ಮಾಡಲಾಯಿತು. ಸಂಶೋಧನೆ ಪ್ರಕಾರ, ಬ್ಲೂಬೆರ್ರಿ ಹಣ್ಣು ಫೈಟೊಕೆಮಿಕಲ್ಸ್ ಮತ್ತು ಆಂಥೋಸಯಾನಿನ್ ವರ್ಣದ್ರವ್ಯಗಳು ಹೇರಳವಾಗಿವೆ. ಆಂಥೋಸಯಾನಿನ್‌ಗಳಿಂದಾಗಿ ಇದರ ಬಣ್ಣ ನೀಲಿ ಆಗಿದೆ.


    ಸೋಂಕುಶಾಸ್ತ್ರದ ಅಧ್ಯಯನ ಹೇಳುವ ಪ್ರಕಾರ ಆಂಥೋಸಯಾನಿನ್‌ ನಿಯಮಿತ ಸೇವನೆ ಹೃದಯರಕ್ತನಾಳ ಕಾಯಿಲೆ, ಟೈಪ್ 2 ಮಧುಮೇಹ ತಡೆಯುತ್ತದೆ. ಆಂಥೋಸಯಾನಿನ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ತೂಕ ನಿರ್ವಹಣೆಗೆ ಸಹಕಾರಿ. ನ್ಯೂರೋಪ್ರೊಟೆಕ್ಷನ್ ಒದಗಿಸುತ್ತದೆ.


    ವಯಸ್ಸಾದ ಪ್ರಕ್ರಿಯೆಯ ಮೇಲೆ ಪರಿಣಾಮಕಾರಿ


    ಬ್ಲೂಬೆರ್ರಿ ಹಣ್ಣುಗಳು ಅವುಗಳ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ನಾಳೀಯ ಮತ್ತು ಗ್ಲುಕೋರೆಗ್ಯುಲೇಟರಿ ಕಾರ್ಯಕ್ಕೆ ಪ್ರಯೋಜನಕಾರಿ. ಬ್ಲೂಬೆರ್ರಿ ಫೈಟೊಕೆಮಿಕಲ್‌ಗಳು ಜಠರಗರುಳಿನ ಮೈಕ್ರೋಫ್ಲೋರಾ ಬಾಧಿಸುವ ಮೂಲಕ ಹೋಸ್ಟ್ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಈ ಅಂಶಗಳು ಮತ್ತು ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ.


    ಬ್ಲೂಬೆರ್ರಿ ಹಣ್ಣುಗಳಲ್ಲಿನ ಪೋಷಕಾಂಶಗಳು


    ಬ್ಲೂಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಮ್ಯಾಂಗನೀಸ್, ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಬಿ 6, ಫೈಟೊನ್ಯೂಟ್ರಿಯೆಂಟ್‌ಗಳು ಸಹ ಇವೆ.


    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


    ಒಂದು ಕಪ್ ಬ್ಲೂಬೆರ್ರಿ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೆ 24 ಪ್ರತಿಶತ ವಿಟಮಿನ್ ಸಿ ಒದಗಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ವಿಟಮಿನ್ ಸಿ ವ್ಯಕ್ತಿಯ ಪೋಷಣೆಗೆ ಸಹಕಾರಿ.


    ಬೊಜ್ಜು ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ


    ಇದು 14 ಪ್ರತಿಶತ ಆಹಾರದ ಫೈಬರ್ ಮತ್ತು ನೀರನ್ನು ಹೊಂದಿದೆ. ದೇಹವನ್ನು ಚೈತನ್ಯದಿಂದಿಡುತ್ತದೆ. ಕೊಬ್ಬನ್ನು ಸುಡುವಿಕೆ ಮತ್ತು ಶೇಖರಣೆ ನಿಯಂತ್ರಿಸುತ್ತದೆ. ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುತ್ತದೆ. ಮತ್ತು ತೂಕ ನಿಯಂತ್ರಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸುತ್ತದೆ.


    ಆರೋಗ್ಯಕರ ಬ್ಲೂ ಬೆರ್ರಿ ಬನಾನಾ ಮಫಿನ್ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ಗೋಧಿ ಹಿಟ್ಟು, ಅಡಿಗೆ ಸೋಡಾ, ಉಪ್ಪು, ಬಾಳೆಹಣ್ಣು ಅಥಚಾ ಕುಂಬಳಕಾಯಿ ಪ್ಯೂರೀ ಬಳಸಬಹುದು. ಹರಳಾಗಿಸಿದ ಸಕ್ಕರೆ ಸೇರಿಸಿ. ಮೊಸರು, ಒಂದು ಟೀ ಸ್ಪೂನ್ ಅಗಸೆ ಬೀಜ, ಮೂರು ಟೀ ಸ್ಪೂನ್ ನೀರಿನಿಂದ ರುಬ್ಬಿದ ವೆನಿಲ್ಲಾ ಅಥವಾ ಬಾದಾಮಿ ಸಾರ ಬ್ಲೂಬೆರ್ರಿ ಹಣ್ಣುಗಳು ಒಂದು ಕಪ್


    ಬ್ಲೂ ಬೆರ್ರಿ ಬನಾನಾ ಮಫಿನ್ ರೆಸಿಪಿ ಹೇಗೆ ತಯಾರಿಸುವುದು


    ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಫಿನ್‌ಗಳು ಗಟ್ಟಿಯಾಗದಂತೆ ನೋಡಿಕೊಳ್ಳಿ. ಬಟ್ಟಲಿನಲ್ಲಿ ಹಿಟ್ಟನ್ನು ಮಿಶ್ರಣ ಮಾಡುವಾಗ ಎಲ್ಲಾ ಹಿಟ್ಟನ್ನು ಒಂದು ಟೀ ಸ್ಪೂನ್ ಸೇರಿಸಿ.


    ಇದನ್ನೂ ಓದಿ: ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದ್ರೆ ಸಾಕು ಲಿವರ್ ಆರೋಗ್ಯ ಚೆನ್ನಾಗಿರುತ್ತೆ


    ಮಫಿನ್ ಬೌಲ್ ಪ್ಯಾನ್ ಅನ್ನು ತುಪ್ಪದೊಂದಿಗೆ ಗ್ರೀಸ್ ಮಾಡಿ. ಅದರಲ್ಲಿ ಹಿಟ್ಟನ್ನು ಸುರಿಯಿರಿ ಮತ್ತು ಒಲೆಯಲ್ಲಿ ಬೇಯಿಸಿ. ಮೊದಲ ಐದು ನಿಮಿಷ ಹೆಚ್ಚು ಬೇಯಿಸಿ. ನಂತರ ಅದನ್ನು ಕಡಿಮೆ ಮಾಡಿ. ಹದಿನೈದು ನಿಮಿಷಗಳಲ್ಲಿ ಪೌಷ್ಟಿಕ ಮಫಿನ್‌ ಸಿದ್ಧವಾಗುತ್ತವೆ.

    Published by:renukadariyannavar
    First published: