Oats Beauty Tips: ಓಟ್ಸ್ ಆಹಾರಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಬೇಕು! ಇಲ್ಲಿದೆ ಫೇಸ್ ಪ್ಯಾಕ್ ಮಾಡುವ ವಿಧಾನ

ಓಟ್ಸ್ ಮೀಲ್ ಫೇಸ್ ಪ್ಯಾಕ್ ಮಾಡುವುದರಿಂದ ಚರ್ಮದಿಂದ ಹೆಚ್ಚುವರಿ ಎಣ್ಣೆ ತೆಗೆದು ಹಾಕುತ್ತದೆ. ಇದು ಚರ್ಮದ ಟೋನ್ ಅನ್ನು ಹಗುರ ಮಾಡುತ್ತದೆ. ಮೈಬಣ್ಣವನ್ನು ಸುಧಾರಿಸುತ್ತದೆ. ಇದು ತೇವಾಂಶ ತೆಗೆದು ಹಾಕದೇ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಓಟ್ ಮೀಲ್ (Oat Meal) ಸೌಂದರ್ಯ (Beauty) ಚಿಕಿತ್ಸೆ (Treatment) ಮತ್ತು ಫೇಸ್ ಪ್ಯಾಕ್ (Face Pack) ಹಾಗೂ ಫೇಶಿಯಲ್ ಮಾಡುವುದು ಎಲ್ಲಾ ಚರ್ಮದ (Skin) ಪ್ರಕಾರಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ಎಣ್ಣೆಯುಕ್ತ, ಮೊಡವೆ ಪೀಡಿತ ಮತ್ತು ಸೂಕ್ಷ್ಮ ಚರ್ಮಕ್ಕಾಗಿ ಓಟ್ ಮೀಲ್ ಫೇಸ್ ಪ್ಯಾಕ್ ಉತ್ತಮವಾಗಿದೆ. ಇದು ಮುಖದ ಪಫಿನೆಸ್ ನ್ನು ಶಮನಗೊಳಿಸುತ್ತದೆ. ಜೊತೆಗೆ ಬಣ್ಣದ ಹೊಳಪು ಮತ್ತು ಟೋನ್ಡ್ ಚರ್ಮ ಸಮಗೊಳಿಸುತ್ತದೆ. ಇದರ ಬಳಕೆಯಿಂದ ಚರ್ಮವು ಸ್ವಚ್ಛ, ತೇವಭರಿತವಾಗಿ ಮತ್ತು ಎಫ್ಫೋಲಿಯೇಟ್ ಆಗುತ್ತದೆ. ಓಟ್ ಮೀಲ್ ಉತ್ತಮ ಎಕ್ಸ್ಫೋಲಿಯೇಟರ್ ಮತ್ತು ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ.

    ಓಟ್ ಮೀಲ್ ಫೇಸ್ ಪ್ಯಾಕ್ ಪ್ರಯೋಜನಗಳು

    ಓಟ್ ಮೀಲ್ ಫೇಸ್ ಪ್ಯಾಕ್ ಮಾಡುವುದರಿಂದ ಚರ್ಮದಿಂದ ಹೆಚ್ಚುವರಿ ಎಣ್ಣೆ ತೆಗೆದು ಹಾಕುತ್ತದೆ. ಇದು ಚರ್ಮದ ಟೋನ್ ಅನ್ನು ಹಗುರ ಮಾಡುತ್ತದೆ. ಮತ್ತು ಮೈಬಣ್ಣವನ್ನು ಸುಧಾರಿಸುತ್ತದೆ. ಸೋಪು ಮತ್ತು ಫೇಸ್ ವಾಶ್‌ಗಳು ನಿಮ್ಮ ಚರ್ಮಕ್ಕೆ ಹಾನಿಕರವಾಗಿದ್ದರೆ, ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಈ ನೈಸರ್ಗಿಕ ಓಟ್ ಮೀಲ್ ಫೇಸ್ ವಾಶ್‌ಗಳನ್ನು ಬಳಸುವುದು ಉತ್ತಮ.

    ಇದು ತೇವಾಂಶ ತೆಗೆದು ಹಾಕದೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಓಟ್‌ಮೀಲ್‌ನ ಪ್ರಯೋಜನಗಳ ಬಗ್ಗೆ ಷಾಂಪೇನ್ ಬ್ಯೂಟಿ ಸಲೂನ್‌ನ ಬ್ಯೂಟಿ ಎಕ್ಸ್‌ಪರ್ಟ್ ಸುವರ್ಣ ತ್ರಿಪಾಠಿ ಏನು ಹೇಳಿದ್ದಾರೆಂದು ನೋಡೋಣ.

    ಇದನ್ನೂ ಓದಿ: ಪೋಷಕಾಂಶಗಳಿಂದ ತುಂಬಿರುವ ವಿವಿಧ ಬಗೆಯ ಸ್ಮೂಥಿ ಮಾಡಿ ಸವಿಯಿರಿ

    - ತ್ವಚೆಯ ಪರ್ಸ್ ಸ್ವಚ್ಛಗೊಳಿಸಲು ಓಟ್ ಮೀಲ್ ಸಹಕಾರಿ

    - ಓಟ್ ಮೀಲ್ ಫೇಸ್ ಪ್ಯಾಕ್ ನಿಂದ ರಂಧ್ರಗಳಲ್ಲಿ ಕೊಳೆ ಸಂಗ್ರಹವಾಗಲ್ಲ

    - ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ

    ಓಟ್ ಮೀಲ್‌ ಸುಲಭ ಹಾಗೂ ತ್ವರಿತ ಫೇಸ್ ಪ್ಯಾಕ್

    ಒಂದು ಟೇಬಲ್ ಸ್ಪೂನ್ ಜೇನುತುಪ್ಪ, ಒಂದು ಟೇಬಲ್ ಸ್ಪೂನ್ ಓಟ್ಸ್, ಒಂದು ಟೇಬಲ್ ಸ್ಪೂನ್ ಹಾಲು, ಒಂದು ಟೇಬಲ್ ಸ್ಪೂನ್ ಮೊಸರು

    ಬಳಸುವ ವಿಧಾನ

    ಈ ಪ್ಯಾಕ್ ಎಲ್ಲಾ ಚರ್ಮದ ಪ್ರಕಾರಗಳಿಗೆ ಒಳ್ಳೆಯದು. ಒಣ ತ್ವಚೆ ಇರುವವರು ಈ ಪ್ಯಾಕ್ ಗೆ ಹಾಲು ಸೇರಿಸಿದರೆ ಉತ್ತಮ. ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ, ಹಾಲನ್ನು ಸ್ಕಿಪ್ ಮಾಡಿ. ಓಟ್ಸ್ ಅನ್ನು ತಾಜಾ ಮೊಸರು ಮತ್ತು ಹಾಲಿನೊಂದಿಗೆ ಮಿಶ್ರಣ ಮಾಡಿ. ಜೇನುತುಪ್ಪವನ್ನು ಸೇರಿಸಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ಮತ್ತು 15-20 ನಿಮಿಷಗಳ ಕಾಲ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ.

    ಜೇನುತುಪ್ಪ ಮತ್ತು ಹಾಲು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮೊಸರು ಚರ್ಮದಿಂದ ಟ್ಯಾನಿಂಗ್ ಅನ್ನು ತೆಗೆದು ಹಾಕುತ್ತದೆ. ಮತ್ತು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಓಟ್ಸ್ ಚರ್ಮವನ್ನು ಮೃದುಗೊಳಿಸುತ್ತದೆ. ರಂಧ್ರಗಳು ಚಿಕ್ಕದಾಗುತ್ತವೆ.

    ಸ್ಕಿನ್ ವೈಟ್ನಿಂಗ್ ಓಟ್ ಮೀಲ್ ಫೇಸ್ ಪ್ಯಾಕ್

    ಎರಡು ಚಮಚ ಓಟ್ಸ್, ನಾಲ್ಕು ಚಮಚ ಹಸಿ ಹಾಲು ಮತ್ತು ನಾಲ್ಕು ಚಮಚ ನಿಂಬೆ ರಸ

    ಬಳಸುವ ವಿಧಾನ

    ಎರಡು ಚಮಚ ಓಟ್ಸ್ ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಅದಕ್ಕೆ ನಾಲ್ಕು ಚಮಚ ಹಾಲು ಮತ್ತು ನಾಲ್ಕು ಚಮಚ ನಿಂಬೆ ರಸ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನಿಮ್ಮ ಮುಖ, ತೋಳು, ಕತ್ತಿನ ಭಾಗಕ್ಕೆ ಅನ್ವಯಿಸಿ. ಅಥವಾ ನೀವು ಅದನ್ನು ನಿಮ್ಮ ದೇಹದಾದ್ಯಂತ ಬಳಸಬಹುದು. 20 ರಿಂದ 25 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

    ಓಟ್ಸ್ ಮತ್ತು ಬಾದಾಮಿ ಫೇಸ್ ಪ್ಯಾಕ್

    ಓಟ್ಸ್, ಎರಡು ಟೀ ಸ್ಪೂನ್, ಐದು ಬಾದಾಮಿ, ಒಂದು ಟೇಬಲ್ ಸ್ಪೂನ್ ಜೇನುತುಪ್ಪ, ಒಂದು ಟೇಬಲ್ ಸ್ಪೂನ್ ಹಾಲು ಅಥವಾ ಮೊಸರು

    ಇದನ್ನೂ ಓದಿ: ಸಕ್ಕರೆಯಿಂದ ಮಾಡಿದ ಪದಾರ್ಥ ಸೇವನೆ ಬಿಡಿ ಪರ್ಯಾಯ ಪದಾರ್ಥ ಸೇವಿಸಿ, ತೂಕ ಇಳಿಸಿ!

    ಬಳಸುವ ವಿಧಾನ

    ಬಾದಾಮಿ ರುಬ್ಬಿ ಪುಡಿ ಮಾಡಿ. ಇದಕ್ಕೆ ಓಟ್ಸ್ ಸೇರಿಸಿ. ಇದಕ್ಕೆ ಮೊಸರು, ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಸುಮಾರು 15 ನಿಮಿಷ ಅಥವಾ ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ಸ್ವಲ್ಪ ಮಸಾಜ್ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ.  ಮೃದುವಾಗಿಸುತ್ತದೆ.
    Published by:renukadariyannavar
    First published: