Oats Meal Bath: ಓಟ್ಸ್​ ಮೀಲ್​ ಬಾತ್​ ಅಂದ್ರೆ ಏನು ಗೊತ್ತಾ? ಕೂದಲು ಮತ್ತು ಚರ್ಮದ ಮೇಲೆ ಅದರ ಮ್ಯಾಜಿಕ್ ಏನು ? ಇಲ್ಲಿದೆ..

Benefits Of Oats Meal Bath: ನಿಮಗೆ ಬೇಕಾದ ಓಟ್ಸ್ ಮೀಲ್ಸ್ ಆಯ್ಕೆ ಮಾಡಿಕೊಳ್ಳಿ. ಓಟ್ ಮೀಲ್ ಸ್ನಾನ ಮಾಡುವಾಗ, ನೀವು ಬೇಯಿಸದ ಓಟ್ ಮೀಲ್ ಅಥವಾ ಕೊಲೊಯ್ಡಲ್ ಓಟ್ ಮೀಲ್ ಅನ್ನು ಬಳಸಬಹುದು, ನಿಮಗೆ ಬೇಕಾದಷ್ಟು ಓಟ್ಸ್ ಮೀಲ್ ತೆಗೆದುಕೊಂಡು ಸ್ನಾನದ ಬಕೆಟ್​ಗೆ ಹಾಕಿ ಮಿಶ್ರಣ ಮಾಡಿ. ನೀರಿಗೆ ಹಾಕುವಾಗ ಬೆಚ್ಚಗಿನ ನೀರನ್ನು ಆಯ್ಕೆ ಮಾಡಿ. ಹೆಚ್ಚು ಬಿಸಿ ನೀರು ಬಳಕೆ ಮಾಡುವುದು ಕೂದಲಿನ ಆರೋಗ್ಯಕ್ಕೆ ಸೂಕ್ತವಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚರ್ಮದ(Skin Care) ಆರೋಗ್ಯವನ್ನು ಪೋಷಿಸುವಲ್ಲಿ ಓಟ್ಸ್ ಬಹು ಮುಖ್ಯವಾದ ಪಾತ್ರವನ್ನು  ನಿರ್ವಹಿಸುತ್ತದೆ.  ನಿಮ್ಮ ಅಡುಗೆಮನೆಯಲ್ಲಿ ಮತ್ತು ನಿಮ್ಮ ಬಾತ್ರೂಮ್ ಕಪಾಟಿನಲ್ಲಿ  ಇದು ಬಹಳ ಅನಿವಾರ್ಯ ಎಂಬತಾಗಿದೆ. ಆದರೆ ಓಟ್ ಮೀಲ್ ಬಾತ್(Oats meal Bath) ಬಗ್ಗೆ ಕೇಳಿದ್ದೀರಾ? ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ರಕ್ಷಿಸಲು ಇದು ಬಹಳ ಸಹಾಯ ಮಾಡುತ್ತದೆ.

ಓಟ್ಸ್ ಉರಿಯೂತ ನಿವಾರಕ.

ನೀವು ಓಟ್ ಮೀಲ್ ಸ್ನಾನವನ್ನು  ಮಾಡುವುದರಿಂದ ಊರಿಯುತ ನಿವಾರಣೆಯಾಗುತ್ತದೆ.  ಅಲ್ಲದೇ ಓಟ್ ಮೀಲ್ ಉರಿಯೂತದ ಚರ್ಮ, ಅಲರ್ಜಿ ಮತ್ತು ದದ್ದುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ, ಅವೆನಾಂತ್ರಾಮೈಡ್ಸ್ ಮತ್ತು ಫೆರುಲಿಕ್ ಆಸಿಡ್ ನಂತಹ  ಆ್ಯಂಟಿ ಆಕ್ಸಿಡೆಂಟ್​ಗಳ ಕಾರಣದಿಂದಾಗಿ ಓಟ್ ಮೀಲ್ ಸ್ನಾನವು ಚರ್ಮದ ಕಿರಿಕಿರಿಯನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಇದು ಚರ್ಮದ ಶುಷ್ಕತೆ, ಸ್ಕೇಲಿಂಗ್, ಒರಟುತನ ಮತ್ತು ತುರಿಕೆಯ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಓಟ್ಸ್ ಬಾತ್  ತಲೆಹೊಟ್ಟು ನಿವಾರಣೆ ಮಾಡುತ್ತೆ ಎಂಬುದು ಸಾಬೀತಾಗಿದೆ. ವಿಶೇಷವಾಗಿ ಕೂದಲ ಬುಡ  ಶುಷ್ಟವಾದಾಗ ನಮಗೆ ತಲೆಹೊಟ್ಟು ಬರುತ್ತದೆ.. ಆದರೆ ಓಟ್ ಮೀಲ್ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ನೆತ್ತಿಯನ್ನು ತೇವಗೊಳಿಸುತ್ತದೆ ಮತ್ತು ತೇವಾಂಶ ಉಳಿಯುವಂತೆ ಮಾಡುತ್ತದೆ. ಓಟ್ ಮೀಲ್​ ನೀರಿಗೆ ಹಾಕಿ  ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ ಪ್ರಯತ್ನಿಸಿ.  ಓಟ್ಸ್ ಮೀಲ್ ಸ್ನಾನ ಮಾಡುವುದು ಹೇಗೆ ಎಂಬ ಆಲೋಚನೆಗಳು ಸಾಮಾನ್ಯವಾಗಿ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಕಳಲೆ ಅಂದ್ರೆ ಮೂಗು ಮುರಿತೀರಾ? ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಗೊತ್ತಾದ್ರೆ ತಿನ್ನದೇ ಇರಲ್ಲ..

ನಿಮಗೆ ಬೇಕಾದ ಓಟ್ಸ್ ಮೀಲ್ಸ್ ಆಯ್ಕೆ ಮಾಡಿಕೊಳ್ಳಿ. ಓಟ್ ಮೀಲ್ ಸ್ನಾನ ಮಾಡುವಾಗ, ನೀವು ಬೇಯಿಸದ ಓಟ್ ಮೀಲ್ ಅಥವಾ ಕೊಲೊಯ್ಡಲ್ ಓಟ್ ಮೀಲ್ ಅನ್ನು ಬಳಸಬಹುದು, ನಿಮಗೆ ಬೇಕಾದಷ್ಟು ಓಟ್ಸ್ ಮೀಲ್ ತೆಗೆದುಕೊಂಡು ಸ್ನಾನದ ಬಕೆಟ್​ಗೆ ಹಾಕಿ ಮಿಶ್ರಣ ಮಾಡಿ. ನೀರಿಗೆ ಹಾಕುವಾಗ ಬೆಚ್ಚಗಿನ ನೀರನ್ನು ಆಯ್ಕೆ ಮಾಡಿ. ಹೆಚ್ಚು ಬಿಸಿ ನೀರು ಬಳಕೆ ಮಾಡುವುದು ಕೂದಲಿನ ಆರೋಗ್ಯಕ್ಕೆ ಸೂಕ್ತವಲ್ಲ. ಇದನ್ನು ಬಾತ್​ ಟಬ್​ನಲ್ಲಿ ಬಳಕೆ ಮಾಡುವುದು ಉತ್ತಮ.  ಯಾಕೆಂದರೆ ಬಾತ್​ಟಬ್​ ನಲ್ಲಿ ನೀವು ಆರಾಮವಾಗಿ ಮಲಗಿ , ಹೆಚ್ಚು ಸಮಯ ಕಳೆಯಬಹುದು.

ನೀವು ಒಣ ಚರ್ಮದ ಸಮಸ್ಯೆ ಎದುರಿಸುತ್ತಿದ್ದರೆ, ಅದಕ್ಕೆ ಓಟ್ಟ್ ಮೀಲ್ ಸ್ನಾನ ಉತ್ತಮ ಪರಿಹಾರ. ನೀವು ಎಷ್ಟೇ ಲೋಷನ್‌ಗಳನ್ನು ಹಚ್ಚಿದರೂ ಕೂ ಅದು ಓಟ್ ಮೀಲ್‌ನಷ್ಟು  ಪ್ರಯೋಜನ ನೀಡುವುದಿಲ್ಲ. ಇದು ನಿಮ್ಮ ಚರ್ಮದಲ್ಲಿನ ತೇವಾಂಶವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಆರೋಗ್ಯಕರ ಹೊಳಪನ್ನು ನೀಡುತ್ದೆ ಎಂಬುದು ಸಾಬೀತಾಗಿದೆ. ಓಟ್ಸ್ ಹ್ಯೂಮೆಕ್ಟಂಟ್ ಮಾತ್ರವಲ್ಲದೆ, ಅವುಗಳಲ್ಲಿ ಮೃದುಗೊಳಿಸುವ ಗುಣಗಳನ್ನು ಹೊಂದಿವೆ.

ಓಟ್ ಮೀಲ್  ಸ್ನಾನ ಮಾಡುವುದು ಒಣ ಚರ್ಮಕ್ಕೆ ಓಟ್ ಮೀಲ್ ಲೋಷನ್ ಹಚ್ಚುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಒಣ ಚರ್ಮವು ಸತ್ತ ಜೀವಕೋಶದ ಪದರವನ್ನು ನಿರ್ಮಿಸುತ್ತದೆ.

ಇದನ್ನೂ ಓದಿ: ಎಮ್ಮೆ ಹಾಲನ್ನು ಕುಡಿಯೋದು ಎಷ್ಟು ಒಳ್ಳೆದು ಗೊತ್ತಾ?

ಹಲವಾರು ಅಂಶಗಳು ನಮ್ಮ ಚರ್ಮದ ನೈಸರ್ಗಿಕ ಪಿಎಚ್ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.  ಇದು ತೀವ್ರ ಹಾನಿಯನ್ನುಂಟುಮಾಡುತ್ತದೆ. ಆದರೆ ನೀವು ಒಟ್ ಮೀಲ್ ಸ್ನಾನ ಮಾಡಿದರೆ ಈ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು. ಓಟ್ ಮೀಲ್ ನಿಮ್ಮ ಚರ್ಮದ ನೈಸರ್ಗಿಕ ಪಿಎಚ್ ಅನ್ನು ಸಾಮಾನ್ಯಗೊಳಿಸುತ್ತದೆ ಮತ್ತು ತೇವಾಂಶವನ್ನು ಉಳಿಸಲು ಸಹಾಯ ಮಾಡುತ್ತದೆ.
Published by:Sandhya M
First published: