Health tips: ಒತ್ತಡ ನಿವಾರಣೆ, ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಎಷ್ಟು ಅಗತ್ಯ ನೋಡಿ

Health tips: ಬಾಳೆಹಣ್ಣಿನಲ್ಲಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂ ಯಥೇಚ್ಚ ಪ್ರಮಾಣದಲ್ಲಿ ಇದೆ. ಅವುಗಳು ಎಲೆಕ್ಟ್ರೋಲೈಟ್ ಸಮತೋಲನ ನಿಯಂತ್ರಿಸಲು ಮತ್ತು ರಕ್ತದೊತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಮನುಷ್ಯರಲ್ಲಿ (People)ಆತಂಕ , (Anxiety)ಭಯ, ಹೆದರಿಕೆ (Nervousness) ಮತ್ತು ಆತಂಕದ ಭಾವನೆಯು, ಬೆವರು ಹಾಗೂ ಚಡಪಡಿಕೆಯ(Restlessness) ರೂಪದಲ್ಲಿ ಪ್ರಕಟವಾಗಬಹುದು. ಅದರಲ್ಲೂ ಮುಖ್ಯವಾಗಿ, ನಿಮಗೆ ಎದುರಾಗುವ ಒತ್ತಡಗಳಿಗೆ(stressors) ಪ್ರತಿಕ್ರಿಯೆಯ ರೂಪದಲ್ಲಿ ಇಂತಹ ಲಕ್ಷಣಗಳು(Symptoms) ಪದೇ ಪದೇ ಕಂಡು ಬರುತ್ತಿದ್ದರೆ, ನೀವು ನಿಮ್ಮ ಜೀವನ ಶೈಲಿಯಲ್ಲಿ (Lifestyle) ಮತ್ತು ಆಹಾರ ಕ್ರಮದಲ್ಲಿ (Diet)ಕೆಲವು ಬದಲಾವಣೆಗಳನ್ನು ಮಾಡುವುದರ ಬಗ್ಗೆ ಆಲೋಚಿಸಬಹುದು.


ತಜ್ಞರ ಪ್ರಕಾರ

ಆತಂಕವು, ವಿಶ್ವದಾದ್ಯಂತ ಜನರ ಮೇಲೆ ಪರಿಣಾಮ ಬೀರುತ್ತಿರುವ ಒಂದು ವ್ಯಾಪಕವಾದ ಸ್ಥಿತಿಯಾಗಿದೆ. ಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ, ಮತ್ತು ಕೆಲವು ಜನರು ಅದನ್ನು ಆಗೊಮ್ಮೆ ಈಗೊಮ್ಮೆ ಮಾತ್ರ ಅನುಭವಿಸುತ್ತಾರೆ.


ಇದನ್ನೂ ಓದಿ: Diet Plan: ಭಾರತೀಯ ಆಹಾರ ಪದ್ಧತಿಯಿಂದಲೇ ಇಳಿಸಿಕೊಳ್ಳಬಹುದು ತೂಕ

ಬಹಳಷ್ಟು ಪ್ರಕರಣಗಳಲ್ಲಿ, ಚಿಕಿತ್ಸೆಯ ಮುಖ್ಯ ಭಾಗವಾಗಿ, ಔಷಧಿಗಳ ಅಗತ್ಯ ಇರುತ್ತದೆ. ಆದರೆ ನೀವು ಸೇವಿಸುವ ಕೆಲವು ರೀತಿಯ ಆಹಾರಗಳು, ಮುಖ್ಯವಾಗಿ ಅವುಗಳ ಮೆದುಳನ್ನು ಉತ್ತೇಜಿಸುವ ಗುಣ ಲಕ್ಷಣಗಳಿಂದಾಗಿ, ನಿಮ್ಮ ಮೆದುಳಿನ ಕಾರ್ಯ ಬೆಂಬಲಿಸಲು ಮತ್ತು ರೋಗ ಲಕ್ಷಣಗಳ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡಬಹುದು” ಎಂದು ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದಾರೆ.


ಒಮೆಗಾ- 3 ಯಥೇಚ್ಚವಾಗಿರುವ ಆಹಾರಗಳು
ಒಮೆಗಾ - 3 ಉರಿಯೂತ ಮತ್ತು ಮತ್ತು ಆತಂಕ ಕಡಿಮೆ ಮಾಡಬಲ್ಲ ಗುಣ ಹೊಂದಿದೆ. ತುಪ್ಪದಂತಹ ಆಹಾರಗಳು ಅತ್ಯಧಿಕ ಒಮೆಗಾ -3 ಹೊಂದಿವೆ. ಆಹಾರ ಕ್ರಮದಲ್ಲಿ ದಿನಕ್ಕೆ ಕನಿಷ್ಟ ಒಂದು ಟೀ ಸ್ಪೂನ್ ತುಪ್ಪ ತಿನ್ನುವಂತೆ ಕೆಲವು ತಜ್ಞರು ಸಲಹೆ ನೀಡುತ್ತಾರೆ. ಒಮೆಗಾ – 3 ಯಥೇಚ್ಚವಾಗಿರುವ ಇತರ ಆಹಾರಗಳನ್ನು ಕೂಡ ಸೇವಿಸುವುದು ಅತ್ಯಂತ ಪ್ರಯೋಜನಕಾರಿ.


ಟಿಟ್ರಿಪ್ಟೊಫಾನ್ ಅಧಿಕವಿರುವ ಆಹಾರಗಳು
ಮನೆಯಲ್ಲಿ ಮಾಡಿದ ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಅಥವಾ ನಿಮ್ಮ ಜಿಐ ಟ್ರ್ಯಾಕ್ಟ್‌ನಲ್ಲಿ ಇರುವ ಸ್ನೇಹಿ ಬ್ಯಾಕ್ಟೀರಿಯಾ ಇರುತ್ತದೆ. ಹಾನಿ ಉಂಟು ಮಾಡುವ ರೋಗಕಾರಕಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತವೆ. ನಿತ್ಯದ ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳುವುದರಿಂದ ನೈಸರ್ಗಿಕ ಕರುಳಿನ ಬ್ಯಾಕ್ಟೀರಿಯಾಕ್ಕೆ ಪ್ರಯೋಜನ ನೀಡುತ್ತದೆ ಮತ್ತು ಆತಂಕ ಮತ್ತು ಒತ್ತಡ ಕಡಿಮೆ ಮಾಡಬಹುದು.


ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಯಥೇಚ್ಚವಾಗಿರುವ ಆಹಾರಗಳು
ಬಾಳೆಹಣ್ಣಿನಲ್ಲಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂ ಯಥೇಚ್ಚ ಪ್ರಮಾಣದಲ್ಲಿ ಇದೆ. ಅವುಗಬಾಳೆಹಣ್ಣಿನಲ್ಲಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂ ಯಥೇಚ್ಚ ಪ್ರಮಾಣದಲ್ಲಿ ಇದೆ. ಅವುಗಳು ಎಲೆಕ್ಟ್ರೋಲೈಟ್ ಸಮತೋಲನ ನಿಯಂತ್ರಿಸಲು ಮತ್ತು ರಕ್ತದೊತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ. ಳು ಎಲೆಕ್ಟ್ರೋಲೈಟ್ ಸಮತೋಲನ ನಿಯಂತ್ರಿಸಲು ಮತ್ತು ರಕ್ತದೊತ್ತಡ ನಿರ್ವಹಿಸಲು ಸಹಾಯ ಮಾಡುತ್ತದೆ. ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಹೊಂದಿರುವ ಆಹಾರಗಳನ್ನು ತಿನ್ನುವುದರಿಂದ ಆತಂಕ ಮತ್ತು ಒತ್ತಡದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.


ವಿಟಮಿನ್ ಡಿ ( ಸೂರ್ಯನ ವಿಟಮಿನ್)
ವಿಟಮಿನ್ ಡಿ ದೇಹಕ್ಕೆ ಎಷ್ಟು ಅಗತ್ಯ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ವಿಟಮಿನ್ ಡಿ ಕೊರತೆ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ವಿಟಮಿನ್ ಡಿ ಕೊರತೆಯು, ಖಿನ್ನತೆ ಮತ್ತು ಆತಂಕ ಮುಂತಾದ ಮನಸ್ಥಿತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧ ಹೊಂದಿದೆ. ವಿಟಮಿನ್ ಡಿ ಅತ್ಯುತ್ತಮ ಮೂಲವೆಂದರೆ ಸೂರ್ಯನ ಬಿಸಿಲು. ಬೆಳಗಿನ ವೇಳೆ 10 -15 ನಿಮಿಷ ಸೂರ್ಯನ ಬಿಸಿಲಿನಲ್ಲಿ ಕಳೆಯುವುದರಿಂದ ವಿಟಮಿನ್ ಡಿ ಪಡೆಯಬಹುದಾಗಿದೆ.


ಇದನ್ನೂ ಓದಿ: Keto Diet: ಸಣ್ಣ ಆಗೋಕೆ ಕಿಟೋ ಡಯೆಟ್ ಮಾಡ್ತಾ ಇದ್ದೀರಾ? ಹಾಗಿದ್ರೆ ಎಚ್ಚರ..

 ನೀವು ಸೇವಿಸುವ ಆಹಾರವು ಹೇಗೆ ನಿಮ್ಮ ದೇಹದ ತೂಕ, ಹೃದ್ರೋಗ ಸಮಸ್ಯೆ, ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳಂತಹ ದೀರ್ಘಕಾಲೀಕ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತದೆಯೋ, ಹಾಗೆಯೇ ಇದು ನಿದ್ರಾಹೀನತೆಯ ಮೇಲೂ ಸಹ ತುಂಬಾನೇ ಪರಿಣಾಮ ಬೀರಬಹುದು. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಿ ಎಂದರೆ ನಿಮಗೆ ಕೆಲವು ಪೋಷಕಾಂಶಗಳ ಕೊರತೆಯಿದೆ ಎಂದು ಅರ್ಥ

Published by:vanithasanjevani vanithasanjevani
First published: