Women Health Care: ಪಿರಿಯಡ್ಸ್​​ ವೇಳೆ ನಿಮ್ಮ ಆಹಾರ ಕ್ರಮ ಈ ರೀತಿ ಇರಲಿ, ಆರೋಗ್ಯಕರ ಮುಟ್ಟಿಗೆ ಇಲ್ಲಿದೆ ತಜ್ಞರ ಸಲಹೆ

ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಸಮಸ್ಯೆಗಳು ಹಲವು. ಮೂಡ್ ಸ್ವಿಂಗ್ಸ್‌ನಿಂದ ಹಿಡಿದು ಹೊಟ್ಟೆ ನೋವಿನವರೆಗೆ ಒಂದಲ್ಲ ಒಂದು ಸಮಸ್ಯೆ ಪ್ರತಿಯೊಬ್ಬರು ಮಹಿಳೆಯನ್ನು ಈ ಸಂದರ್ಭದಲ್ಲಿ ಕಾಡುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಟ್ಟಿನ (Period) ದಿನಗಳಲ್ಲಿ ಮಹಿಳೆಯರು (Womens) ಅನುಭವಿಸುವ ಸಮಸ್ಯೆಗಳು ಹಲವು. ಮೂಡ್ ಸ್ವಿಂಗ್ಸ್‌ನಿಂದ ಹಿಡಿದು ಹೊಟ್ಟೆ ನೋವಿನವರೆಗೆ ಒಂದಲ್ಲ ಒಂದು ಸಮಸ್ಯೆ ಪ್ರತಿಯೊಬ್ಬರು ಮಹಿಳೆಯನ್ನು ಈ ಸಂದರ್ಭದಲ್ಲಿ ಕಾಡುತ್ತವೆ. ಆಗ ಬಹಳಷ್ಟು ಮಂದಿಯಲ್ಲಿ, ಸಿಹಿ ತಿನಿಸು (Sweets), ಕರಿದ ಅಥವಾ ಮಸಾಲೆಯುಕ್ತ ಆಹಾರಗಳನ್ನು ಸೇವಿಸುವ ಬಯಕೆ ಕೂಡ ಉಂಟಾಗುವುದು ಸಾಮಾನ್ಯ. ಅಂತಹ ಅನಾರೋಗ್ಯಕರ ಆಹಾರಗಳನ್ನು ಸೇವಿಸುವ ಬದಲು, ಆರೋಗ್ಯಕ್ಕೆ ಉತ್ತಮವಾದ ಮತ್ತು ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡುವ ಆಹಾರವನ್ನು ಸೇವಿಸುವುದು ಉತ್ತಮ. ಅಂತಹ ಆಹಾರಗಳು (Foods) ಯಾವುವು ಮತ್ತು ಹೇಗೆ ಸೇವಿಸಬೇಕು? ಪಿಸಿಓಸ್ ಮತ್ತು ಗಟ್ ಹೆಲ್ತ್ ನ್ಯೂಟ್ರಿಶಿಯನಿಸ್ಟ್ ಅವಂತಿ ದೇಶಪಾಂಡೆ ಅವರು ಈ ಕುರಿತು ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ. ಅಂತಹ ಸಲಹೆಗಳು ಇಲ್ಲಿವೆ ನೋಡಿ.

ಮುಟ್ಟಿನ ವೇಳೆ ಯಾವ ರೀತಿ ಇರಬೇಕು:

1. ಸೀಡ್ ಸೈಕ್ಲಿಂಗ್:
ಸೀಡ್ ಸೈಕ್ಲಿಂಗ್ ಒಂದು ಪ್ರಕೃತಿ ಚಿಕಿತ್ಸಾ ಪರಿಹಾರವಾಗಿದ್ದು, ಮುಟ್ಟಿನ ಮೊದಲಾರ್ಧದಲ್ಲಿ ಈಸ್ಟೋಜನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‍ಗಳನ್ನು ನಿಯಂತ್ರಿಸುವ ಮೂಲಕ ಹಾರ್ಮೋನ್‍ಗಳನ್ನು ಸಮತೋಲನಗೊಳಿಸುತ್ತದೆ ಎನ್ನಲಾಗುತ್ತದೆ. ಋತುಚಕ್ರದ ಮೂರು ಹಂತಗಳಿದ್ದು, 1ನೇ ದಿನದಿಂದ 11ನೇ ದಿನದವರೆಗೆ ಫೋಲಿಕ್ಯುಲರ್ ಹಂತ, 12ನೇ ದಿನದಿಂದ 17ನೇ ದಿನದವರೆಗೆ ಅಂಡೋತ್ಪತ್ತಿ ಹಂತ, 18 ರಿಂದ 25ನೇ ದಿನದವರೆಗೆ ಲೂಟಿಯಲ್ ಹಂತ.
ಸೀಡ್ ಸೈಕ್ಲಿಂಗ್‍ನಲ್ಲಿ, ಋತುಚಕ್ರದ ಮೊದಲ 13 ರಿಂದ 14 ದಿನಗಳವರೆಗೆ ಅಗಸೆ ಮತ್ತು ಕುಂಬಳಕಾಯಿ ಬೀಜದ ಪುಡಿಗಳನ್ನು ದಿನಕ್ಕೆ ಒಂದು ಚಮಚದಷ್ಟು ಸೇವಿಸಬೇಕು. ಲೂಟಿಯಲ್ ಹಂತದಲ್ಲಿ ಮುಂದಿನ ಮುಟ್ಟಿನ ಮೊದಲ ದಿನದವರೆಗೆ ಸೂರ್ಯಕಾಂತಿ ಬೀಜ ಮತ್ತು ಎಳ್ಳಿನ ಪುಡಿಯನ್ನು ಸೇವಿಸಬೇಕು.

ಇದನ್ನೂ ಓದಿ: Women Health Care: ಮಹಿಳೆಯರು ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರಕ

2. ಅತ್ಯಧಿಕ ಕ್ಯಾಲ್ಸಿಯಂ ಆಹಾರಗಳು:

ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಮೂಡ್ ಸ್ವಿಂಗ್ಸ್, ಮುಟ್ಟಿನ ನೋವು ಮತ್ತಿತರ ಸಮಸ್ಯೆಗಳನ್ನು ಕಡಿಮೆ ಮಾಡಲು ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್‍ನಿಂದ ಸಮೃದ್ಧವಾಗಿರುವ ಆಹಾರಗಳು ಸಹಾಯಕ ಎಂಬುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ಮುಖ್ಯವಾಗಿ ಮೊಸರು, ಜೊತೆಗೆ ಒಣ ಬೀಜಗಳು, ಕಡು ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಅಕ್ಕಿ, ಗೋಧಿ, ಬೇಳೆಗಳು ಮತ್ತು ಮೊಳಕೆ ಕಾಳುಗಳಲ್ಲಿ ಮ್ಯಾಂಗನೀಸ್ ಇರುತ್ತದೆ. ಆಹಾರ ಕ್ರಮದಲ್ಲಿ ಅವುಗಳನ್ನು ಸೇರಿಸಿಕೊಳ್ಳಿ.

3. ಅತ್ಯಧಿಕ ಮೆಗ್ನೀಶಿಯಂ ಇರುವ ಆಹಾರಗಳು:

ಮೆಗ್ನೀಶಿಯಂ ಅತ್ಯಧಿಕ ಪ್ರಮಾಣದಲ್ಲಿ ಇರುವ ಆಹಾರಗಳು ಪ್ರೊಜೆಸ್ಟರಾನ್ ಮಟ್ಟವನ್ನು ಸುಧಾರಿಸುತ್ತವೆ ಮತ್ತು ಋತುಬಂಧದ ಹಂತಕ್ಕೆ ಹತ್ತಿರವಾಗುತ್ತಿರುವ ಮಹಿಳೆಯರಿಗೆ ಇದು ತುಂಬಾ ಪ್ರಯೋಜನಕಾರಿ. ಮೆಗ್ನೀಶಿಯಂ ಗರ್ಭಾಶಯದ ನಯವಾದ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡಿಸುತ್ತದೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಓಟ್ಸ್, ವೀಟ್ ಜರ್ಮ್, ಬೀಜಗಳು, ಬಾದಾಮಿ, ಮೊಸರು, ಮೀನು, ಬ್ರೊಕೋಲಿ, ಕ್ಯಾರೆಟ್ ಮತ್ತು ಬಾಳೆಹಣ್ಣು, ಕಿವಿ, ಪಪಾಯ, ಸೀಬೆ ಕಾಯಿ, ಒಣ ಅಂಜೂರ, ಬೆರ್ರಿಗಳು ಮುಂತಾದವುಗಳು ಮೆಗ್ನೀಶಿಯಂ ಸಮೃದ್ಧವಾಗಿರುತ್ತದೆ. ದಿನಕ್ಕೆ ಎರಡು ಬಾರಿಯಾದರೂ ಹಣ್ಣುಗಳನ್ನು ತಿನ್ನಿ.

4. ಒಮೆಗಾ 3 ಕೊಬ್ಬಿನ ಆಮ್ಲಗಳು:
ಒಮೆಗಾ 3 ಕೊಬ್ಬಿನ ಆಮ್ಲಗಳು, ಅಂದರೆ ಡಿಹೆಚ್‍ಎ ಮತ್ತು ಇಪಿಎಗಳು ಪ್ರಮುಖ ಕೊಬ್ಬಿನ ಆಮ್ಲಗಳಾಗಿದ್ದು, ಅದು ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ, ಆಹಾರದ ಮೂಲಕವೇ ಪೂರೈಕೆ ಮಾಡಬೇಕಾಗುತ್ತದೆ. ಸಾರ್ಡಿನ್ ಮತ್ತು ಸಾಲ್ಮನ್‍ನಂತಹ ಫ್ಯಾಟಿ ಮೀನುಗಳಲ್ಲಿ ಡಿಹೆಚ್‍ಎ ಮತ್ತು ಇಪಿಎಗಳು ಅತ್ಯಧಿಕವಾಗಿರುತ್ತದೆ ಹಾಗೂ ಅಗಸೆ ಬೀಜ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ವಾಲ್‍ನಟ್, ಬಾದಾಮಿಗಳಲ್ಲಿ ಎಎಲ್‍ಎ ಸಮೃದ್ಧವಾಗಿದ್ದು, ಅವು ದೇಹದಲ್ಲಿ ಡಿಹೆಚ್‍ಎ ಮತ್ತು ಇಪಿಎ ಆಗಿ ಪರಿವರ್ತನೆಗೊಳ್ಳುತ್ತವೆ.

ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರದ ವೇಳೆ ಈ ಮುನ್ನೆಚ್ಚರಿಕೆಗಳನ್ನು ನೆನಪಿನಲ್ಲಿಡಿ

ಮುಟ್ಟಿನ ಸಂದರ್ಭದಲ್ಲಿ ಮೆಗ್ನೀಶಿಯಂ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳನ್ನು ಪಡೆಯಲು ಒಣ ಬೀಜಗಳನ್ನು ತಿನ್ನಬೇಕು. ಒಮೆಗಾ 3 ಕೊಬ್ಬಿನ ಆಮ್ಲಗಳು, ಮಹಿಳೆಯರಲ್ಲಿ ಮುಖ್ಯವಾ ಪಿಸಿಓಎಸ್ ಹೊಂದಿರುವವರಲ್ಲಿ ರಕ್ತದಲ್ಲಿನ ಟೆಸ್ಟೋಸ್ಟೆರೋನ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.

5. ಕಬ್ಬಿಣಾಂಶ:
ಮುಟ್ಟಿನ ಸಮಯದಲ್ಲಿ ಬಹಳಷ್ಟು ರಕ್ತವನ್ನು ಕಳೆದುಕೊಳ್ಳಬೇಕಾಗುತ್ತದೆ, ಆದ್ದರಿಂದ ಭಾರತದಲ್ಲಿ ಮುಟ್ಟಾಗುವ ವಯಸ್ಸಿನ ಮಹಿಳೆಯರು ರಕ್ತ ಹೀನತೆಯಿಂದ ಬಳಲುವುದು ಸಾಮಾನ್ಯ. ಪುರುಷರಿಗಿಂತ ಮಹಿಳೆಯರಲ್ಲಿ, ಕಬ್ಬಿಣಾಂಶದ ಸಮೀಕರಣವು ಉತ್ತಮವಾಗಿದ್ದರೂ, ಹಿಮೋಗ್ಲೋಬಿನ್ ಮಟ್ಟ 11g/dl ಗಿಂತ ಹೆಚ್ಚು ಇರುವುದು ಬಹಳ ಮುಖ್ಯ. ರಾಗಿ, ರಾಜ್‍ಗೀರ, ಕಡಲೆಕಾಯಿ, ಬಾದಾಮಿ, ವಾಲ್‍ನಟ್ ಮುಂತಾದ ಕಬ್ಬಿಣಾಂಶ ಹೆಚ್ಚಿರುವ ಪದಾರ್ಥಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ಒಂದು ಬಟ್ಟಲು ಬೇಯಿಸಿದ ಸೊಪ್ಪನ್ನು ತಿನ್ನಿ, ಅದು ಕೂಡ ಕಬ್ಬಿಣಾಂಶವನ್ನು ಪೂರೈಸುತ್ತದೆ. ಕಬ್ಬಿಣಾಂಶದ ಮಟ್ಟವನ್ನು ಉತ್ತಮಗೊಳಿಸಲು ನೀವು ಬೀಟ್ರೂಟ್ ಮತ್ತು ಖರ್ಜೂರವನ್ನು ಕೂಡ ನೀಡಬಹುದು.

ಕಬ್ಬಿಣಾಂಶದ ಸರಿಯಾದ ಹೀರುವಿಕೆಗೆ ಪ್ರೋಟೀನ್‌ ಕೂಡ ಅತ್ಯಗತ್ಯ. ಹಾಗಾಗಿ ನಿಮ್ಮ ನಿತ್ಯದ ಆಹಾರದಲ್ಲಿ ಕನಿಷ್ಟ 50 ಗ್ರಾಂನಷ್ಟು ಪ್ರೋಟೀನ್‌ ಇರುವಂತೆ ನೋಡಿಕೊಳ್ಳಿ.

ಮುಟ್ಟಿನ ಸಂದರ್ಭದಲ್ಲಿ ಸಿಹಿ ತಿನ್ನಬೇಕು ಎಂದು ಆಸೆ ಆದರೆ, ಯಾವ್ಯಾವುದೋ ಬೇಕರಿ ತಿನಿಸುಗಳನ್ನು ತಿನ್ನುವ ಬದಲು ಚಿಕ್ಕಿ, ಲಡ್ಡು, ಡಾರ್ಕ್ ಚಾಕೊಲೇಟ್‍ನಂತಹ ಆರೋಗ್ಯಕರ ತಿನಿಸುಗಳನ್ನು ಆರಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಅವಂತಿ ದೇಶಪಾಂಡೆ.
Published by:shrikrishna bhat
First published: