ಕೆಂಪು ದ್ರಾಕ್ಷಿ (Red Grapes) ನೋಡೋಕೆ ತುಂಬಾ ಸುಂದರವಾಗಿರುತ್ತದೆ (Beautiful). ಕೇವಲ ಸುಂದರ ಮಾತ್ರವಲ್ಲದೇ ಹಲವು ಆರೋಗ್ಯ ಪ್ರಯೋಜನಗಳನ್ನೂ (Health Benefits) ಸಹ ಹೊಂದಿದೆ. ದಿನವಿಡೀ ಕೇವಲ ಒಂದು ಬೌಲ್ ಕೆಂಪು ದ್ರಾಕ್ಷಿ ಸೇವನೆ ಮಾಡಿದರೆ ಚರ್ಮ (Skin), ಹೃದಯದ (Heart) ಆರೋಗ್ಯ, ಮೆದುಳು, ಕಣ್ಣು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಚೆನ್ನಾಗಿರುತ್ತದೆ ಎಂದು ತಜ್ಞರು ಹೇಳ್ತಾರೆ. ಇಷ್ಟೇ ಅಲ್ಲದೇ ಕೆಂಪು ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಹಲವು ಕಾಯಿಲೆಗಳನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಹ ಪ್ರಯೋಜನಕಾರಿ ಆಗಿದೆ. ಕೆಂಪು ದ್ರಾಕ್ಷಿ ಸೇವನೆಯು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ.
ಕೆಂಪು ದ್ರಾಕ್ಷಿ ಸೇವನೆಯು ಯಾಕೆ ವಿಶೇಷ?
ಕೆಂಪು ದ್ರಾಕ್ಷಿಯಲ್ಲಿ ಹಲವು ಕ್ಯಾಲೋರಿಗಳು, ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಕೆಂಪು ದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳ ನಿಧಿ. ತ್ವಚೆಯ ಹೊಳಪು ಹೆಚ್ಚಿಸಲು ಆಹಾರ ತಜ್ಞರು ಹೆಚ್ಚಾಗಿ ಕೆಂಪು ದ್ರಾಕ್ಷಿ ಸೇವನೆಗೆ ಸೂಚಿಸುತ್ತಾರೆ.
ಕೆಂಪು ದ್ರಾಕ್ಷಿಯು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಕೆ, ಫೋಲೇಟ್, ಸತು, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ.
ಕೆಂಪು ದ್ರಾಕ್ಷಿಯಲ್ಲಿ ಕಂಡು ಬರುವ ಪ್ರಮುಖ ಅಂಶ ರೆಸ್ವೆರಾಟ್ರೋಲ್ ಆಗಿದೆ. ಇದು ಪಾಲಿಫಿನಾಲ್ ಉತ್ಕರ್ಷಣ ನಿರೋಧಕವಾಗಿದೆ. ಇದು ಉರಿಯೂತದ ಗುಣಲಕ್ಷಣಗಳಿಂದ ಕೂಡಿದೆ. ಉತ್ಕರ್ಷಣ ನಿರೋಧಕವು ಕೆಂಪು ದ್ರಾಕ್ಷಿಯ ಮೇಲಿನ ಪದರದಲ್ಲಿದೆ.
ರೆಸ್ವೆರಾಟ್ರೋಲ್ ಅಂಶವು ಕ್ಯಾನ್ಸರ್, ಹೃದ್ರೋಗ ಸೇರಿ ಅನೇಕ ಸಮಸ್ಯೆ ಕಡಿಮೆ ಮಾಡುತ್ತದೆ.
ಕೆಂಪು ದ್ರಾಕ್ಷಿ ಸೇವನೆಯ ಪ್ರಯೋಜನಗಳು ಹೀಗಿವೆ
ಕೆಂಪು ದ್ರಾಕ್ಷಿ ಸೇವನೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನಿಯಮಿತವಾಗಿ ಕೆಂಪು ದ್ರಾಕ್ಷಿ ಸೇವಿಸಿದರೆ ಅನಾರೋಗ್ಯ ಸಮಸ್ಯೆ ಕಡಿಮೆ ಆಗುತ್ತದೆ. ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಕೆಂಪು ದ್ರಾಕ್ಷಿಯು ಅಂತಹ ಅನೇಕ ಪೋಷಕಾಂಶ ಹೊಂದಿದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಚರ್ಮದ ಕ್ಯಾನ್ಸರ್ ತಡೆಗೆ ಸಹಕಾರಿ
ಕೆಂಪು ದ್ರಾಕ್ಷಿಯಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕವು ರೆಸ್ವೆರಾಟ್ರೊಲ್ ಆಗಿದೆ. ಇದು ಕ್ಯಾನ್ಸರ್ ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ. ಈ ಉತ್ಕರ್ಷಣ ನಿರೋಧಕವು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಚರ್ಮದ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುತ್ತದೆ.
ಕೆಂಪು ದ್ರಾಕ್ಷಿ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಕೆಂಪು ದ್ರಾಕ್ಷಿ ಮತ್ತು ಅದರಿಂದ ತಯಾರಿಸಿದ ವೈನ್ ಆಂಟಿ ಆಕ್ಸಿಡೆಂಟ್ ಗಳಿಂದ ಕೂಡಿದೆ. ಇದು ಹೃದಯದ ಕಾರ್ಯ, ಇದು ಉರಿಯೂತ ಕಡಿಮೆ ಮಾಡುತ್ತದೆ. ರಕ್ತನಾಳಗಳು ಚೆನ್ನಾಗಿ ಕೆಲಸ ಮಾಡಲು ಸಹಕಾರಿ. ಕೆಂಪು ದ್ರಾಕ್ಷಿಯು ದೇಹದ ಪ್ಲೇಟ್‌ಲೆಟ್‌ಗಳ ಹೆಪ್ಪುಗಟ್ಟುವಿಕೆ ಕಾರ್ಯ ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ಈ ವಿಶೇಷ ಬಣ್ಣದ ದ್ರಾಕ್ಷಿಯಲ್ಲಿ ಫೈಬರ್ ಮತ್ತು ನೀರು ಇದೆ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಅನೇಕ ಜನರು ತೂಕ ನಷ್ಟಕ್ಕೆ ಕೆಂಪು ದ್ರಾಕ್ಷಿ ಸೇವಿಸುತ್ತಾರೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಕೆಂಪು ದ್ರಾಕ್ಷಿಯು ಪೊಟ್ಯಾಶಿಯಮ್ ಹೊಂದಿದೆ. ಪೊಟ್ಯಾಶಿಯಮ್ ದೇಹದಲ್ಲಿ ಸೋಡಿಯಂನ ನಕಾರಾತ್ಮಕ ಪರಿಣಾಮ ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.
ಮೆದುಳಿನ ಆರೋಗ್ಯ ಸುಧಾರಿಸುತ್ತದೆ
ಕೆಂಪು ದ್ರಾಕ್ಷಿಯಲ್ಲಿರುವ ರೆಸ್ವೆರಾಟ್ರೋಲ್ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಇದು ಮೆದುಳಿನಲ್ಲಿ ರಕ್ತದ ಹರಿವು ಸರಾಗವಾಗುತ್ತದೆ. ತಾಜಾ ಮತ್ತು ಶಕ್ತಿಯುತ ಅನುಭವ ಮತ್ತು ಕಡಿಮೆ ಒತ್ತಡವಿರುತ್ತದೆ.
ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್
ಮಧುಮೇಹ ನಿಯಂತ್ರಿಸುತ್ತದೆ
ಮಧುಮೇಹ ನಿಯಂತ್ರಿಸಲು ಮತ್ತು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಕೆಂಪು ದ್ರಾಕ್ಷಿ ಸಹಕಾರಿಯಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ