Hair Care: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

ಪೋಷಕಾಂಶಗಳಿಂದ ಸಮೃದ್ಧವಾಗಿರುವ ನಿಂಬೆ ಹಣ್ಣು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನಿಂಬೆ ಹಣ್ಣಿನ ರಸವು ಕಾಲಜನ್ ಉತ್ಪಾದನೆಯಿಂದ ಹಿಡಿದು ನೆತ್ತಿಯ ಆರೋಗ್ಯ ಕಾಪಾಡುವವರೆಗೆ ಅನೇಕ ಪ್ರಮುಖ ಗುಣ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಪ್ಪ ಮತ್ತು ಕಪ್ಪು ಹಾಗೂ ನೇರ ಕೂದಲು (Thick and Black and Straight Hair) ಯಾರಿಗೆ ತಾನೇ ಬೇಡ ಹೇಳಿ? ದಿನನಿತ್ಯದ ಕೆಲಸ (Work) ಹಾಗೂ ಜಂಜಾಟದ ನಡುವೆ ನಮ್ಮ ಕೂದಲು ಹಾಳಾಗುತ್ತವೆ. ಕಚೇರಿಗೆ ಪ್ರಯಾಣ ಮಾಡುವಾಗ, ಮನೆಯಲ್ಲಿ ಕೆಲಸ ಮಾಡುವಾಗ, ಹೊರಗೆ ಓಡಾಡುವಾಗ, ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಹೀಗೆ ಹಲವು ವಿಷಯಗಳಲ್ಲಿ ಕೂದಲು ಹಾಳಾಗುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲು ಕೆಟ್ಟದಾಗಿ ಹಾಳಾಗಲು ಕಾರಣವೂ ಆಗುತ್ತದೆ. ಇದಿಷ್ಟೇ ಅಲ್ಲ, ನಿಮ್ಮ ಕೂದಲನ್ನು ಹಾಳು ಮಾಡುವ ಕಾರಣಗಳಲ್ಲಿ ಸೂರ್ಯನ ಹಾನಿಕಾರಕ ಕಿರಣಗಳು, ಧೂಳು ಮತ್ತು ಮಾಲಿನ್ಯವು ಸಹ ಕೂಡಿವೆ.

    ಪೋಷಕಾಂಶಗಳಿಂದ ಸಮೃದ್ಧವಾಗಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಸಹಕಾರಿ

    ಇವುಗಳು ನಿಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ನಿಂಬೆ ಹಣ್ಣು, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ನಿಂಬೆ ಹಣ್ಣಿನ ರಸವು ಕಾಲಜನ್ ಉತ್ಪಾದನೆಯಿಂದ ಹಿಡಿದು ನೆತ್ತಿಯ ಆರೋಗ್ಯ ಕಾಪಾಡುವವರೆಗೆ ಅನೇಕ ಪ್ರಮುಖ ಗುಣ ಹೊಂದಿದೆ.

    ನಿಂಬೆಯನ್ನು ನೇರವಾಗಿ ಚರ್ಮ ಮತ್ತು ಕೂದಲಿಗೆ ಬಳಸಬಹುದು. ಹಾಗಾದರೆ ಇದು ನಿಮ್ಮ ಕೂದಲ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯೋಣ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಕೂದಲ ಆರೈಕೆಗೆ ನಿಂಬೆ ರಸ ಹೇಗೆ ಪ್ರಯೋಜನಕಾರಿ?

    ನೆತ್ತಿಯ ಆರೋಗ್ಯ ಕಾಪಾಡುತ್ತದೆ ನಿಂಬೆ ರಸ

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ ನಿಂಬೆ ಹಣ್ಣಿನ ರಸವು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ನೆತ್ತಿಯಿಂದ ಹೊರ ಬರುವ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ನೆತ್ತಿಯ ಸೋಂಕು ಮತ್ತು ತುರಿಕೆ ಸಾಧ್ಯತೆ ಕಡಿಮೆ ಮಾಡುತ್ತದೆ.

    ನೆತ್ತಿಯ ಆರೋಗ್ಯಕ್ಕೆ ನಿಂಬೆ ರಸ, ಮೆಂತ್ಯ ಮತ್ತು ಮೆಹಂದಿ ಹೇರ್ ಮಾಸ್ಕ್

    ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿ ಮತ್ತು 4 ರಿಂದ 5 ಗಂಟೆಗಳ ಕಾಲ ಬಿಡಿ. ಮೆಂತ್ಯ ಬೀಜಗಳು ಮತ್ತು ಗೋರಂಟಿ ಎಲೆಗಳನ್ನು ಒಟ್ಟಿಗೆ ರುಬ್ಬುವ ಮೂಲಕ  ಪೇಸ್ಟ್ ಮಾಡಿ. ಈಗ ಸಿದ್ಧಪಡಿಸಿದ ಪೇಸ್ಟ್ ಗೆ ಮೂರರಿಂದ ನಾಲ್ಕು ಚಮಚ ನಿಂಬೆ ರಸ ಸೇರಿಸಿ.

    ಈಗ ನಿಮ್ಮ ಹೇರ್ ಮಾಸ್ಕ್ ಸಿದ್ಧವಾಗಿದೆ. ಅದನ್ನು ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಅನ್ವಯಿಸಿ. ಅನ್ವಯಿಸಿದ ನಂತರ ಕೂದಲಿನ ಮೇಲೆ 30 ನಿಮಿಷ ಬಿಡಿ. ನಂತರ ಸಾಮಾನ್ಯ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ನಿಮ್ಮ ನೆತ್ತಿಯ ಆರೋಗ್ಯವನ್ನು ದೀರ್ಘಕಾಲ ಕಾಪಾಡುತ್ತದೆ.

    ಕೂದಲು ಬೆಳವಣಿಗೆ ಉತ್ತೇಜಿಸಲು

    ನಿಂಬೆ ರಸದಲ್ಲಿರುವ ವಿಟಮಿನ್ ಸಿ ಪೋಷಕಾಂಶ ಜನರಿಗೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಇದು ಕಾಲಜನ್ ಉತ್ಪಾದನೆ ಉತ್ತೇಜಿಸುತ್ತದೆ. ಕೂದಲಿನ ಬೆಳವಣಿಗೆ ಉತ್ತೇಜಿಸಲು ಕಾಲಜನ್ ಬಹಳ ಮುಖ್ಯ. ನಿಂಬೆ ರಸದ ಆಮ್ಲೀಯ ಗುಣವು ಕೂದಲಿನ ಕಿರುಚೀಲಗಳ ಆರೋಗ್ಯ ಕಾಪಾಡುತ್ತದೆ. ಇದು ಕೂದಲು ಉದುರುವಿಕೆ ಚಿಕಿತ್ಸೆಗೆ ಉತ್ತಮ ಚಿಕಿತ್ಸೆಯಾಗಿದೆ.

    ಕೂದಲಿನ ಬೆಳವಣಿಗೆಗೆ ನಿಂಬೆ ರಸ, ಆಲಿವ್ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಮಾಸ್ಕ್

    ನಿಂಬೆ ರಸ, ಆಲಿವ್ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಒಟ್ಟಿಗೆ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಸ್ವಲ್ಪ ಬೆಚ್ಚಗಾಗಿಸಿ. ಈ ಎಣ್ಣೆಯನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. 1 ರಿಂದ 2 ಗಂಟೆಗಳ ಕಾಲ ಬಿಡಿ. ನಂತರ ಕೂದಲು ತೊಳೆಯಿರಿ. ವಾರದಲ್ಲಿ ಕನಿಷ್ಠ 2 ದಿನ ಬಳಸಿ.

    ನಿಂಬೆ ರಸವು ತಲೆಹೊಟ್ಟು ಕಡಿಮೆ ಮಾಡುತ್ತದೆ. ಪಬ್‌ಮೆಡ್ ಸೆಂಟ್ರಲ್ ಪ್ರಕಟಿಸಿದ ಅಧ್ಯಯನದ ಪ್ರಕಾರ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ನೆತ್ತಿಯ ಪಿಹೆಚ್ ಮೌಲ್ಯ ಹೆಚ್ಚಿಸುತ್ತದೆ. ನಿಂಬೆ ರಸವು ನೆತ್ತಿಯ ಮೇದೋಗ್ರಂಥಿಗಳ ಸ್ರಾವವನ್ನು ಸಮತೋಲನಗೊಳಿಸುತ್ತದೆ. ನೆತ್ತಿಯ ತುರಿಕೆ ಮತ್ತು ಒಣ ನೆತ್ತಿ ಸಮಸ್ಯೆ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ನಿಂಬೆ ರಸ ಮತ್ತು ಅಗಸೆ ಬೀಜಗಳು

    ಒಂದು ಕಪ್ ಫ್ಲಾಕ್ಸ್ ಸೀಡ್ ಅನ್ನು ನೀರಿನಲ್ಲಿ ನೆನೆಸಿ, ನಂತರ ನೀರು ಹಾಕಿ ಕುದಿಸಿ. ಸ್ವಲ್ಪ ದಪ್ಪವಾದಾಗ, ಗ್ಯಾಸ್ ಆಫ್ ಮಾಡಿ ಮತ್ತು ಅದಕ್ಕೆ ನಿಂಬೆ ರಸ ಹಿಂಡಿ. ತಣ್ಣಗಾದ ನಂತರ ಕೂದಲಿಗೆ ಚೆನ್ನಾಗಿ ಹಚ್ಚಿ. ಇಡೀ ರಾತ್ರಿ ಹೀಗೆ ಬಿಡಿ. ಮರುದಿನ ಬೆಳಿಗ್ಗೆ ಕೂದಲನ್ನು ಶಾಂಪೂ ಮಾಡಿ.
    Published by:renukadariyannavar
    First published: