Coconut And Health: ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಹೃದಯದ ಆರೋಗ್ಯಕ್ಕೆ ಎಷ್ಟು ಪರಿಣಾಮಕಾರಿ?

ಸಾಕಷ್ಟು ಪೊಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಸೂಪರ್‌ಫುಡ್ ಆಗಿದೆ. ಹಣ್ಣಿನ ರೂಪದಲ್ಲಿ ಹಸಿ ತೆಂಗಿನಕಾಯಿಯನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಜೊತೆಗೆ ಒಣ ತೆಂಗಿನಕಾಯಿ ಕೊಬ್ಬರಿಯನ್ನು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಾಜಾ ತೆಂಗಿನಕಾಯಿಯಿಂದ (Fresh Coconut) ತಯಾರಿಸಿದ ತೆಂಗಿನ ಎಣ್ಣೆ (Coconut Oil), ತೆಂಗಿನಕಾಯಿ ಗಂಜಿ, ತೆಂಗಿನ ಹಾಲು ಮತ್ತು ಕೊಬ್ಬರಿಯನ್ನು ಭಾರತೀಯ ಅಡುಗೆ (Recipe) ಮತ್ತು ಆಹಾರ (Food) ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ತೆಂಗಿನಕಾಯಿಯಲ್ಲಿರುವ ಪೌಷ್ಟಿಕಾಂಶದ ಕೊಬ್ಬು ನಮ್ಮ ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಹಾಗಾಗಿ ತೆಂಗಿನಕಾಯಿಯನ್ನು ಪೂಜೆ, ಅಡುಗೆ, ಆರೋಗ್ಯ ದಿನಚರಿಯಲ್ಲಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪೊಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಸೂಪರ್‌ಫುಡ್ ಆಗಿದೆ. ಹಣ್ಣಿನ ರೂಪದಲ್ಲಿ ಹಸಿ ತೆಂಗಿನಕಾಯಿಯನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಜೊತೆಗೆ ಒಣ ತೆಂಗಿನಕಾಯಿ ಕೊಬ್ಬರಿಯನ್ನು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ.

    ತೆಂಗಿನಕಾಯಿಯನ್ನು ವಿವಿಧ ರೂಪಗಳಲ್ಲಿ ಬಳಸುವುದು

    ಸಸ್ಯಾಹಾರಿಗಳಿಗೆ ತೆಂಗಿನ ಹಾಲು ಅತ್ಯುತ್ತಮ ಪರ್ಯಾಯ ಪದಾರ್ಥವಾಗಿದೆ. ತೆಂಗಿನಕಾಯಿಯನ್ನು ಸಿಹಿ ತಿಂಡಿ, ಸಾಂಬಾರು, ಪಲ್ಯ, ಪೂಜಾ ವಿಧಿ ವಿಧಾನ ಸೇರಿದಂತೆ ಹಲವು ರೂಪಗಳಲ್ಲಿ ಬಳಸುತ್ತಾರೆ. ಒಣ ಕೊಬ್ಬರಿ, ಎಳನೀರು, ತಾಜಾ ಕೊಬ್ಬರಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ತೆಂಗಿನಕಾಯಿ ನಮ್ಮ ಹೃದಯವನ್ನು ಸಹ ಆರೋಗ್ಯವಾಗಿರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಪೋಷಕಾಂಶಗಳಿಂದ ಸಮೃದ್ಧ ತೆಂಗಿನಕಾಯಿ

    ತೆಂಗಿನಕಾಯಿಯನ್ನು ಸಾಮಾನ್ಯವಾಗಿ ಉತ್ತಮ ಕೊಬ್ಬಿನ ಮೂಲವೆಂದು ಹೇಳುತ್ತಾರೆ. ಪ್ರೋಟೀನ್ ಮತ್ತು ಫೈಬರ್ ಜೊತೆಗೆ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸೆಲೆನಿಯಮ್, ಪೊಟ್ಯಾಸಿಯಮ್, ಸತು, ರಂಜಕ, ಮೆಗ್ನೀಸಿಯಮ್ ಕೂಡ ಇದರಲ್ಲಿ ಸಾಕಷ್ಟು ಕಂಡು ಬರುತ್ತದೆ.

    ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

    35 ಕ್ಯಾಲೋರಿಗಳು, ಒಂದು ಗ್ರಾಂಗಿಂತ ಕಡಿಮೆ ಪ್ರೋಟೀನ್, 3 ಗ್ರಾಂ ಕೊಬ್ಬು, 2 ಗ್ರಾಂ ಕಾರ್ಬೋಹೈಡ್ರೇಟ್ಗಳು, 1 ಗ್ರಾಂ ಫೈಬರ್, 1 ಗ್ರಾಂ ಸಕ್ಕರೆ 2 ಟೀಸ್ಪೂನ್ ತಾಜಾ ತೆಂಗಿನಕಾಯಿಯಲ್ಲಿ ಇದೆ. ತೆಂಗಿನಕಾಯಿಯನ್ನು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಎಂದು ಪರಿಗಣಿಸಲಾಗಿದೆ.

    ತೆಂಗಿನಕಾಯಿ ತೂಕ ಇಳಿಕೆಯಲ್ಲೂ ಸಹಾಯ ಮಾಡುತ್ತದೆ. ಜೊತೆಗೆ ರಕ್ತದ ಸಕ್ಕರೆ ಮಟ್ಟ ಸಹ ನಿರ್ವಹಿಸುತ್ತದೆ. ತೆಂಗಿನಕಾಯಿ ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ಹಾಗೂ ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ತೆಂಗಿನಕಾಯಿ ಸೇವನೆಯು ಹೃದಯದ ಆರೋಗ್ಯಕ್ಕೆ ಹೇಗೆ ಕೆಲಸ ಮಾಡುತ್ತದೆ ಮತ್ತು ಇದರ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ನೋಡೋಣ.

    ಹೃದಯದ ಆರೋಗ್ಯ ಮತ್ತು ತೆಂಗಿನಕಾಯಿ

    ಯುಎಸ್ ನ್ಯಾಷನಲ್ ಮೆಡಿಸಿನ್ಸ್ ಲೈಬ್ರರಿ ಪಬ್‌ಮೆಡ್ ಪ್ರಕಾರ ಹಸಿ ತೆಂಗಿನಕಾಯಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ತೆಂಗಿನಕಾಯಿಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

    ಸ್ಯಾಚುರೇಟೆಡ್ ಕೊಬ್ಬು ಕೆಟ್ಟ ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದು ಅಪಧಮನಿಗಳನ್ನು ನಿರ್ಬಂಧಿಸಬಹುದು. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಕಚ್ಚಾ ತೆಂಗಿನಕಾಯಿ ಅಥವಾ ಎಣ್ಣೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

    ತೆಂಗಿನ ಹಾಲಿನ ಬಗ್ಗೆ ಪಬ್‌ಮೆಡ್, 35 ಆರೋಗ್ಯವಂತ ವಯಸ್ಕರರನ್ನು 8 ವಾರಗಳವರೆಗೆ ಅಧ್ಯಯನ ಮಾಡಿದೆ. ತೆಂಗಿನ ಹಾಲಿನಿಂದ ತಯಾರಿಸಿದ 200 ಗ್ರಾಂ ಓಟ್ ಮೀಲ್ ಸೇವನೆ ಮಾಡುವವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ನಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಸೋಯಾ ಹಾಲಿನೊಂದಿಗೆ ತಯಾರಿಸಿದ ಓಟ್ ಮೀಲ್ ಸೇವನೆ ಮಾಡುವವರಿಗೆ ಹೋಲಿಸಿದರೆ ಎಚ್‌ಡಿಎಲ್ ಅಥವಾ ಉತ್ತಮ ಕೊಲೆಸ್ಟ್ರಾಲ್ ಇವರಲ್ಲಿ ಹೆಚ್ಚಾಗಿದೆ.

    ಹೃದ್ರೋಗಿಗಳಿಗೆ ತೆಂಗಿನೆಣ್ಣೆ ತುಂಬಾ ಒಳ್ಳೆಯದಲ್ಲ

    ನ್ಯೂಜಿಲೆಂಡ್‌ನ ಹಾರ್ಟ್ ಫೌಂಡೇಶನ್‌ನ ಸಂಶೋಧನೆಯು ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ಬೆಣ್ಣೆಗಿಂತ ತೆಂಗಿನ ಎಣ್ಣೆ ಉತ್ತಮ ಎಂದು ಸೂಚಿಸುತ್ತದೆ. ಆದರೆ ಇದು ಇತರ ಸಸ್ಯ ತೈಲಗಳಂತೆ ಉತ್ತಮವಾಗಿಲ್ಲ. ಹಾಗಾಗಿ ತೆಂಗಿನ ಎಣ್ಣೆಯಲ್ಲಿ ಬೇಯಿಸಿದ ಆಹಾರವು ಹೃದ್ರೋಗಿಗಳಿಗೆ ಸೂಕ್ತವಲ್ಲ.

    ತೆಂಗಿನ ಎಣ್ಣೆಯಲ್ಲಿ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇವೆ. ಪ್ರಮುಖ ಕೊಬ್ಬಿನಾಮ್ಲ ಲಾರಿಕ್ ಆಮ್ಲ, ಇದು ದೇಹದಲ್ಲಿ ದೀರ್ಘ ಸರಪಳಿ ಕೊಬ್ಬಿನಾಮ್ಲದಂತೆ ಕೆಲಸ ಮಾಡುತ್ತದೆ.

    ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

    ಬಿಪಿ ರೋಗಿಗಳು ತೆಂಗಿನ ನೀರನ್ನು ತಪ್ಪಿಸಬೇಕು

    ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನವು, ತೆಂಗಿನ ನೀರು ಅಪಕ್ವವಾದ ರೂಪವಾಗಿದೆ. ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಆದರೆ ನೀವು ಅಧಿಕ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಹೆಚ್ಚು ತೆಂಗಿನ ನೀರನ್ನು ಕುಡಿಯಬೇಡಿ ಎನ್ನುತ್ತದೆ.
    Published by:renukadariyannavar
    First published: