NPCIL Recruitment: ಎನ್​ಪಿಸಿಐಎಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 35 ಸಾವಿರ ರೂ.

NPCIL Recruitment 2020: ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ npcilcareers.co.in ಮೂಲಕ 15 ಜನವರಿ 2020 ರಿಂದ 31 ಜನವರಿ 2020 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

zahir | news18-kannada
Updated:January 17, 2020, 3:01 PM IST
NPCIL Recruitment: ಎನ್​ಪಿಸಿಐಎಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 35 ಸಾವಿರ ರೂ.
JOB
  • Share this:
NPCIL Recruitment 2020 : ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)ನಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ನೇಮಕಾತಿಯಡಿಯಲ್ಲಿ ಸೈಂಟಿಫಿಕ್ ಸಹಾಯಕ-ಬಿ ಮತ್ತು ತಂತ್ರಜ್ಞ ಬಿ. ಖಾಲಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ವಿವರ:
ಹುದ್ದೆಗಳ ಸಂಖ್ಯೆ: 112

ಹುದ್ದೆಗಳ ಹೆಸರು: ವೈಜ್ಞಾನಿಕ ಸಹಾಯಕ-ಬಿ ಮತ್ತು ತಂತ್ರಜ್ಞ ಬಿ.

ವಯೋಮಿತಿ:
ಈ ಸೈಂಟಿಫಿಕ್ ಅಜಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸನ್ನು 18 ವರ್ಷ ಮತ್ತು ಗರಿಷ್ಠ 30 ವರ್ಷ ಎಂದು ನಿಗದಿಪಡಿಸಲಾಗಿದೆ. ಹಾಗೆಯೇ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 25 ವರ್ಷದೊಳಗಿರಬೇಕು.

ವಿದ್ಯಾರ್ಹತೆ:ವಿಜ್ಞಾನ ಮತ್ತು ಗಣಿತದೊಂದಿಗೆ ಎಸ್‌ಎಸ್ಎಲ್​ಸಿ ಅಥವಾ ಎಚ್‌ಎಸ್‌ಸಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಹಾಗೆಯೇ ಸರ್ವೇಯರ್ / ಡ್ರಾಫ್ಟ್‌ಮ್ಯಾನ್ / ಫಿಟ್ಟರ್ / ಟರ್ನರ್ / ಮೆಷಿನಿಸ್ಟ್ / ಎಲೆಕ್ಟ್ರಿಷಿಯನ್ / ವೈರ್‌ಮ್ಯಾನ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್ / ಇನ್ಸ್ಟ್ರುಮೆಂಟ್ ಮೆಕ್ಯಾನಿಕ್‌ನಲ್ಲಿ 1 ವರ್ಷದ ಅವಧಿಯ ಟ್ರೇಡ್ ಸರ್ಟಿಫಿಕೇಟ್ ಪಡೆದ ಅಭ್ಯರ್ಥಿಗಳು ತಂತ್ರಜ್ಞ ಹುದ್ದೆಗೆ ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ npcilcareers.co.in ಮೂಲಕ 15 ಜನವರಿ 2020 ರಿಂದ 31 ಜನವರಿ 2020 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,700 ರಿಂದ  35,400 ರೂ.ವರೆಗೆ ವೇತನ ಸಿಗಲಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ - ಜನವರಿ 15, 2020
ಆನ್‌ಲೈನ್ ಅರ್ಜಿ ನಮೂನೆ ಸಲ್ಲಿಸಲು ಕೊನೆಯ ದಿನಾಂಕ - 31 ಜನವರಿ 2020

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ


First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ