ಭಾರತೀಯರು ಕಾಮ ಕಥೆಗಳ ವ್ಯಸನಿಗಳಾಗುತ್ತಿದ್ದಾರೆ; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ವಿಚಾರ

ಹೊಸ ಸಂಶೋಧನೆ ಹೇಳುವ ಪ್ರಕಾರ ಎಲ್ಲ ವರ್ಗದವರೂ ಪರರ ಸೆಕ್ಸ್​​ ಸ್ಟೋರಿಸ್​ಗಳನ್ನು ಆಲಿಸಲು, ಓದಲು ಇಷ್ಟಪಡುತ್ತಾರಂತೆ! ಇದೇ ಕಾರಣಕ್ಕೆ, ಆನ್​ಲೈನ್​ ಮೊರೆ ಹೋಗುತ್ತಾರೆ.

news18
Updated:July 12, 2019, 7:43 AM IST
ಭಾರತೀಯರು ಕಾಮ ಕಥೆಗಳ ವ್ಯಸನಿಗಳಾಗುತ್ತಿದ್ದಾರೆ; ಸಂಶೋಧನೆಯಿಂದ ಬಯಲಾಯ್ತು ಆಘಾತಕಾರಿ ವಿಚಾರ
ಪ್ರಾತಿನಿಧಿಕ ಚಿತ್ರ.
  • News18
  • Last Updated: July 12, 2019, 7:43 AM IST
  • Share this:
ಇಂದು ಮೊಬೈಲ್​ ಬಳಕೆ ಹೆಚ್ಚಿದೆ. ಮೊಬೈಲ್​ನಿಂದ ಸಾಕಷ್ಟು ಜ್ಞಾನ ಲಭ್ಯವಾಗುತ್ತಿದೆ. ಇದರ ಜೊತೆಗೆ ಸಾಕಷ್ಟು ಬೇಡದ ವಿಚಾರಗಳನ್ನು ಮಕ್ಕಳು-ಯುವ ಜನತೆ ತಲೆಗೆ ತುಂಬಿಕೊಳ್ಳುತ್ತಿದೆ. ಈ ಬಗ್ಗೆ ಅನೇಕ ಅಧ್ಯಯನಗಳು ಎಚ್ಚರಿಕೆ ನೀಡಿವೆ. ಈಗ ಇದೇ ಮಾದರಿಯ ಎಚ್ಚರಿಕೆಯನ್ನು ಹೊಸ ಸಂಶೋಧನೆಯೊಂದು ನೀಡಿದೆ. ಭಾರತದ ಎಲ್ಲ ವರ್ಗದವರು ಆನ್​ಲೈನ್​ನಲ್ಲಿ ಸಿಗುವ ಕಾಮ ಕಥೆಯನ್ನು ಓದಲು ಹಾತೊರೆಯುತ್ತಾರೆ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹೊಸ ಸಂಶೋಧನೆ ಹೇಳುವ ಪ್ರಕಾರ, ಯುವಕರು, ಕಮಿಟ್​ ಆಗಿರುವವರು, ಮದುವೆ ಆಗಿರುವವರು ಹೀಗೆ ಎಲ್ಲ ವರ್ಗದವರೂ ಪರರ ಸೆಕ್ಸ್​​ ಸ್ಟೋರಿಸ್​ಗಳನ್ನು ಆಲಿಸಲು, ಓದಲು ಇಷ್ಟಪಡುತ್ತಾರಂತೆ! ಇದೇ ಕಾರಣಕ್ಕೆ, ಆನ್​ಲೈನ್​ ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ಕಥೆಗಳನ್ನು ಓದಿ ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.

“ಈ ಮೊದಲು ನೀಲಿಚಿತ್ರಗಳನ್ನು ಯುವಕರು ಹೆಚ್ಚು ನೋಡುತ್ತಿದ್ದರು. ಆದರೆ, ಈಗ ಈ ಕ್ರೇಜ್​ ಮೊದಲಿನಷ್ಟಿಲ್ಲ. ಈಗ ಸೆಕ್ಸ್​​ ಸ್ಟೋರಿಗಳನ್ನು ಓದಲು ಜನರು ಹೆಚ್ಚು ಇಷ್ಟಪಡುತ್ತಾರೆ. ಭಾರತದಲ್ಲಿ ಇದು ಹೆಚ್ಚಾಗುತ್ತಿದೆ. ಕಥೆ ಒಧುವವರಿಗೆ ವಯಸ್ಸಿನ ಮಿತಿ ಇಲ್ಲ,” ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: ಓರಲ್​ ಸೆಕ್ಸ್​ ಎಷ್ಟು ಒಳ್ಳೆಯದು? ಇಲ್ಲಿದೆ ಆಘಾತಕಾರಿ ವಿಷಯ

ಸಾಮಾನ್ಯವಾಗಿ ಆನ್​ಲೈನ್​ನಲ್ಲಿ ಸಿಗುವ ಕಥೆಗಳು ಕಾಲ್ಪನಿಕವಾಗಿರುತ್ತವೆ. ಆದರೆ, ಅವುಗಳನ್ನು ಹೆಚ್ಚು ರಸವತ್ತಾಗಿ ಬರೆಯುವುದರಿಂದ ಕೆಲ ವರ್ಗದವರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ಅನೇಕರು ಇದರ ವ್ಯಸನಿಗಳಾಗುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಅಧ್ಯಯನ ಎಚ್ಚರಿಸಿದೆ.

ಮೂಲಗಳ ಪ್ರಕಾರ ಗೂಗಲ್​ನಲ್ಲಿ ಸೆಕ್ಸ್​ ಸ್ಟೋರಿಸ್​​ಗಳನ್ನು ಹುಡುಕುವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆಯಂತೆ. ಇನ್ನು, ಇದು ಯುವಕರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಅತ್ಯಾಚಾರಕ್ಕೆ ಪ್ರೋತ್ಸಾಹಿಸುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅತಿ ದೊಡ್ಡ ಸ್ಪೈಕ್ಯಾಮ್​ ಸೆಕ್ಸ್​ ಜಾಲ ಬಯಲು: 800 ದಂಪತಿಗಳ ಸರಸ ವಿಡಿಯೋ ಲೈವ್..!
First published:July 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ