Milk Test: ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಇನ್ನು ಸುಲಭ: ಮನೆಯಲ್ಲೇ ವೈಜ್ಞಾನಿಕ ವಿಧಾನ ಅನುಸರಿಸಿ

ಈ ತಂತ್ರಜ್ಞಾನವು ಹಾಲಿನ ಕಲಬೆರಕೆಯನ್ನು ತ್ವರಿತವಾಗಿ ಪತ್ತೆ ಹಚ್ಚುವ ಗುರಿಯನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಹಾಲು (Milk) ದೇಹಕ್ಕೆ ಅಗತ್ಯವಾಗಿರುವ ಆಹಾರ ಪದಾರ್ಥ. ಇದು ನಮ್ಮ ಮೂಳೆ, ಹಲ್ಲುಗಳನ್ನು ಗಟ್ಟಿ ಮುಟ್ಟಾಗಿಸುತ್ತದೆ. ಆದರೆ ನಾವು ಕುಡಿಯುವ ಹಾಲು ನಿಜಕ್ಕೂ ಗುಣಮಟ್ಟದ್ದಾಗಿದೆಯೇ (Quality)  ಎಂದು ತಿಳಿದುಕೊಳ್ಳುವುದು ಮುಖ್ಯ, ಆದರೆ ಇದನ್ನು ಮನೆಯಲ್ಲಿ ಕಂಡುಕೊಳ್ಳುವುದು ಕಷ್ಟ. ನಮ್ಮ ಮನೆಗೆ ಪ್ರತಿನಿತ್ಯ ಹಾಲು ಸರಬರಾಜು ಮಾಡುವವರು ಯಾವ ಮಟ್ಟದ ಹಾಲು ಪೂರೈಕೆ ಮಾಡುತ್ತಾರೆ, ಅದು ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು.ಮನೆಯಲ್ಲಿ ಪ್ರತಿದಿನ ಬಳಕೆ ಮಾಡುವ ಹಾಲು ಶುದ್ಧವೋ, ಇಲ್ಲ ಕಲಬೆರಕೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಕಷ್ಟ ಪಡುವ ಅಗತ್ಯವಿಲ್ಲ. ಏಕೆಂದರೆ ಹಾಲಿನ ಗುಣಮಟ್ಟ ಪರೀಕ್ಷಿಸಲು ಡಿಪ್‌ಸ್ಟಿಕ್ ತಂತ್ರಜ್ಞಾನವು ನಿಮ್ಮ ಮನೆ ಬಾಗಿಲಿಗೆ ಬರಲಿದೆ.

1 ರೂಪಾಯಿಯಲ್ಲಿ ಪರೀಕ್ಷೆ

ಹಾಲಿನಲ್ಲಿರುವ ಕಲಬೆರಕೆಗಳನ್ನು ಪತ್ತೆಹಚ್ಚಲು ಈ ನ್ಯಾನೋತಂತ್ರಜ್ಞಾನ ಆಧಾರಿತ ಡಿಪ್‌ಸ್ಟಿಕ್ ಅನ್ನು ಕಾಮಧೇನು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಗುಜರಾತ್‌ನ ಅಮ್ರೇಲಿಯ ಡೈರಿ ಸೈನ್ಸ್ ಕಾಲೇಜ್ ಅಭಿವೃದ್ಧಿಪಡಿಸಿದೆ. ಈ ಸಾಧನವು ಹಾಲಿನಲ್ಲಿರುವ ಎಂಟು ಬಗೆಯ ಕಲಬೆರಕೆಗಳನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಅಲ್ಲದೇ ಪರೀಕ್ಷೆ ಪ್ರಕ್ರಿಯೆಯ ವೆಚ್ಚ ಅಗ್ಗವಾಗಿದ್ದು, ಕೇವಲ 1 ರೂಪಾಯಿಯಲ್ಲಿ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ನ್ಯಾನೋ ತಂತ್ರಜ್ಞಾನ ಆಧಾರಿತ ಉಪಕರಣದ ಮೂಲಕ ಪರೀಕ್ಷೆ

ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಭಾರತೀಯ ಕೃಷಿ ಪರಿಷತ್ತು ಸಂಶೋಧನೆ (ICAR) ಆಯೋಜಿಸಿದ ‘ಕೃತಗ್ಯ ಹ್ಯಾಕಥಾನ್ 2.0’ ಸ್ಪರ್ಧೆಯಲ್ಲಿ ದೇಶಾದ್ಯಂತ 1,974 ಸ್ಪರ್ಧಿಗಳ ಸಾಧನಗಳಲ್ಲಿ ನ್ಯಾನೋ ತಂತ್ರಜ್ಞಾನ ಆಧಾರಿತ ಡಿಪ್‌ಸ್ಟಿಕ್ ಉಪಕರಣವು ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಇದರ ಮಧ್ಯೆ, ಅಮ್ರೇಲಿಯ ಡೈರಿ ಸೈನ್ಸ್ ಕಾಲೇಜ್ ಸಾಧನದ ನೋಂದಣಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದೆ. ಪೇಟೆಂಟ್ ಪಡೆದ ನಂತರ ಈ ತಂತ್ರಜ್ಞಾನವನ್ನು ವಾಣಿಜ್ಯ ಉತ್ಪಾದನೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಮನೆಯಲ್ಲೂಈ ಪತ್ತೆ ಮಾಡಬಹುದು ಹಾಲಿನ ಗುಣಮಟ್ಟ

ಈ ತಂತ್ರಜ್ಞಾನವು ಹಾಲಿನ ಕಲಬೆರಕೆಯನ್ನು ತ್ವರಿತವಾಗಿ ಪತ್ತೆ ಹಚ್ಚುವ ಗುರಿಯನ್ನು ಹೊಂದಿದೆ. ಹಳ್ಳಿ ಜನ, ನಗರದ ಜನ ತಮ್ಮ ಮನೆಗಳಲ್ಲಿಯೇ ಹಾಲಿನ ಗುಣಮಟ್ಟ ಪರೀಕ್ಷಿಸಬಹುದು.

ಪ್ರಯೋಗಾಲಯಗಳಲ್ಲಿ ಹಾಲಿನ ಪರೀಕ್ಷೆ, ಪ್ರಕ್ರಿಯೆಯು ದೀರ್ಘವಾಗಿರುತ್ತದೆ, ಹಾಗೂ ದುಬಾರಿ, ಮತ್ತು ತಜ್ಞರ ಮಾರ್ಗದರ್ಶನದ ಅಗತ್ಯವಿರುತ್ತದೆ. ಆದರೆ ಈ ಡಿಪ್‌ಸ್ಟಿಕ್‌ ಮೂಲಕ ಭವಿಷ್ಯದ ಕೆಲಸ ಸುಲಭವಾಗುತ್ತದೆ ಮತ್ತು ಕೇವಲ 1 ರೂಪಾಯಿಯಲ್ಲಿ ಬಳಸಬಹುದು ಎನ್ನಲಾಗಿದೆ.

ಹಾಲಿನಲ್ಲಿದೆ 20ಕ್ಕೂ ಹೆಚ್ಚು ಕಲಬೆರಕೆ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಲಿನಲ್ಲಿ 20ಕ್ಕೂ ಹೆಚ್ಚು ಕಲಬೆರೆಕೆ ವಿಧಗಳಿವೆ ಎಂದು ಹೇಳುತ್ತದೆ. ಪಿಷ್ಟ, ಯೂರಿಯಾ, ಡಿಟರ್ಜೆಂಟ್, ಮಾಲ್ಟೋಡೆಕ್ಸ್ಟ್ರಿನ್ ಸೇರಿದಂತೆ ನ್ಯೂಟ್ರಾಲೈಸರ್, ಬೋರಿಕ್ ಆಮ್ಲ, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಅಮೋನಿಯಂ ಸೇರಿ ಅನೇಕ ಕಲ್ಮಶಗಳಿವೆ ಎಂದಿದೆ.

ಇದನ್ನು ಓದಿ: ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬರೆ: ಉಬರ್ ಪ್ರಯಾಣ ದರ ಶೇ. 10ರಷ್ಟು ಹೆಚ್ಚಳ..!

ಹಾಲನ್ನು ಕಲಬೆರಕೆ ಮಾಡಲು ಇಲ್ಲಿ ಎರಡು ಮಾರ್ಗಗಳಿವೆ – ಒಂದು ಕೆನೆ ತೆಗೆದ ಪುಡಿಯಿಂದ ಸಂಶ್ಲೇಷಿತ ಹಾಲನ್ನು ತಯಾರಿಸುವ ಮೂಲಕ ಅಥವಾ ನೈಸರ್ಗಿಕ ಹಾಲಿನಲ್ಲಿ ಯೂರಿಯಾ, ಬೋರಿಕ್ ಆಸಿಡ್, ಹೈಡ್ರೋಜನ್ ಪೆರಾಕ್ಸೈಡ್, ಪಿಷ್ಟ ಮತ್ತು ನ್ಯೂಟ್ರಾಲೈಸರ್ ಮಿಶ್ರಣ ಮಾಡುವ ಮೂಲಕ ಮಾಡಬಹುದು. ಹೆಚ್ಚು ಆದಾಯವನ್ನು ಪಡೆಯಲು ಈ ಕ್ರಮಗಳನ್ನು ಅನುಸರಿಸುತ್ತಾರೆ.

ಹೇಗೆ ಮಾಡುವುದು ಪತ್ತೆ

ಸಂಶೋಧಕರ ಪ್ರಕಾರ, ಮೊದಲ ಕಲಬೆರಕೆ ವಿಧಾನದಲ್ಲಿ, ಸಂಶ್ಲೇಷಿತ ಹಾಲನ್ನು ನೀರು, ಯೂರಿಯಾ, ಉಪ್ಪು, ಖಾದ್ಯ ತೈಲ, ಸಕ್ಕರೆ, ಕಾಸ್ಟಿಕ್ ಸೋಡಾ, ಡಿಟರ್ಜೆಂಟ್ ಮತ್ತು ಕೆನೆ ತೆಗೆದ ಹಾಲಿನ ಪುಡಿ ಇವುಗಳ ಜೊತೆ ಮಿಶ್ರಣ ಮಾಡಿ ನಂತರ ಹಾಲಿಗೆ ಬೆರೆಸಲಾಗುತ್ತದೆ. ಈ ಸಂಶ್ಲೇಷಿತ ಹಾಲು, ಯಾವುದೇ ಆರೋಗ್ಯ ಲಾಭಗಳನ್ನು ನೀಡುವುದಿಲ್ಲ, ಬದಲಿಗೆ ಮಾನವನಿಗೆ ತುಂಬಾ ಹಾನಿಕಾರಕವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನು ಓದಿ: ಬೆಂಗಳೂರಿಗೆ ಬಂದಿಳಿದ ದೆಹಲಿ ಸಿಎಂ; ನಾಳೆ ಬೃಹತ್​ ರೈತ ಸಮಾವೇಶದಲ್ಲಿ ಭಾಗಿ

ಹಾಲನ್ನು ಕಲಬೆರಕೆ ಮಾಡಲು ಬಳಸುವ ಎರಡನೆಯ ವಿಧಾನವೆಂದರೆ ಯೂರಿಯಾ, ಬೋರಿಕ್ ಆಮ್ಲ, ಹೈಡ್ರೋಜನ್ ಪೆರಾಕ್ಸೈಡ್, ಪಿಷ್ಟದೊಂದಿಗೆ ನೈಸರ್ಗಿಕ ಹಾಲನ್ನು ಮಿಶ್ರಣ ಮಾಡುವುದು.

ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ವಿಶ್ವವಿದ್ಯಾನಿಲಯದ ಡೀನ್ ಮತ್ತು ಡೈರಿ ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ, ವಿ.ಎಮ್ ರಮಣಿ ಹೇಳುವ ಪ್ರಕಾರ "ಈ ತಂತ್ರಜ್ಞಾನದ ವೈಶಿಷ್ಟ್ಯವೆಂದರೆ ಅದರ ಬಳಕೆಯ ಸುಲಭ, ಮತ್ತು ತ್ವರಿತ ಫಲಿತಾಂಶ, ಕಡಿಮೆ ವೆಚ್ಚ, ಮತ್ತು ಇದಕ್ಕೆ ಯಾವುದೇ ಪರಿಣತಿಯ ಅಗತ್ಯವಿಲ್ಲ ಮತ್ತು ಎಲ್ಲರೂ ಬಳಸಬಹುದು" ಎಂದಿದ್ದಾರೆ.
Published by:Seema R
First published: