ವೈದ್ಯಕೀಯ ಗಾಂಜಾ ಎಂದರೇನು? ಅದನ್ನು ಏಕೆ ಬಳಸಲಾಗುತ್ತದೆ..?

ವೈದ್ಯಕೀಯ ಗಾಂಜಾ ಸಹ ಅಡ್ಡಪರಿಣಾಮಗಳನ್ನು ಹೊಂದಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಖಿನ್ನತೆ, ಆಯಾಸ, ಗೊಂದಲ, ಕಡಿಮೆ ರಕ್ತದೊತ್ತಡದಂತಹ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಕಂಡುಬರುತ್ತವೆ.

medical marijuana

medical marijuana

 • Share this:
  ಯುನಿಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 15 ರಾಜ್ಯಗಳಲ್ಲಿ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸಿದೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇಡೀ ಅಮೆರಿಕಾದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸುವ ಸಾಧ್ಯತೆಯಿದೆ. ಯುಎಸ್​ಎ ಉಳಿದ 36 ರಾಜ್ಯಗಳಲ್ಲಿ ಔಷಧೀಯ ಬಳಕೆಗೆ ಗಾಂಜಾ ಕಾನೂನುಬದ್ಧವಾಗಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಥಾರಿಟಿ (ಎಫ್‌ಡಿಎ) ಗಾಂಜಾವನ್ನು ಡ್ರಾವೆಟ್ ಸಿಂಡ್ರೋಮ್ ಮತ್ತು ಲೆಂಕ್ಸ್ ಗ್ಯಾಸ್ಟಾಟ್ ಸಿಂಡ್ರೋಮ್ ಚಿಕಿತ್ಸೆಗೆ ಶಾಸನಬದ್ಧ ಪರಿಹಾರವೆಂದು ಗುರುತಿಸಿದೆ. ಸುದೀರ್ಘ ಕಾಲದಿಂದ ಅಮೆರಿಕಾದಲ್ಲಿ ಮರಿಜುವಾನಾ (ಗಾಂಜಾ)ವನ್ನು ಕಾನೂನುಬದ್ಧಗೊಳಿಸುವಿಕೆ ಚರ್ಚೆ ನಡೆಯುತ್ತಿದೆ.

  ಹಲವು ದೇಶಗಳಲ್ಲಿ ನಿಷೇಧವಿದ್ದರೂ ಅಮೆರಿಕಾದಲ್ಲಿ ಯಾಕೆ ಗಾಂಜಾವನ್ನು ಕಾನೂನುಬದ್ಧಗೊಳಿಸುತ್ತಿದ್ದಾರೆ. ವೈದ್ಯಕೀಯ ಗಾಂಜಾ ಯಾವುದು? ಇದಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು ಇಲ್ಲಿ ತಿಳಿಸಲಾಗಿದೆ.

  ವೈದ್ಯಕೀಯ ಗಾಂಜಾ ಎಂದರೇನು?
  ಇದು ಕೂಡ ಗಾಂಜಾವೇ. ಅಂದರೆ ಗಾಂಜಾ ಸಸ್ಯದಿಂದ ಪಡೆದ ವೈದ್ಯಕೀಯ ಗಾಂಜಾ. ಅಂದರೆ ಇದನ್ನು ಸಮತೋಲಿತ ಪ್ರಮಾಣದಲ್ಲಿ, ರೋಗದ ಚಿಕಿತ್ಸೆಗಾಗಿ, ಔಷಧದ ಉತ್ಪಾದನೆಯಲ್ಲಿ ಬಳಸಿದಾಗ ಅದನ್ನು ವೈದ್ಯಕೀಯ ಗಾಂಜಾ ಎನ್ನಲಾಗುತ್ತದೆ. ತಾಂತ್ರಿಕವಾಗಿ 100 ಕ್ಕೂ ಹೆಚ್ಚು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಈ ಸಸ್ಯದಿಂದ ಔಷಧಿಗಾಗಿ ಮಾದಕ ದ್ರವ್ಯವನ್ನು ತಯಾರಿಸಲಾಗುತ್ತದೆ.

  ಉದಾಹರಣೆಗೆ, ಗಾಂಜಾದಲ್ಲಿರುವ ಡೆಲ್ಟಾ -9-ಟೆಟ್ರಾಹೈಡ್ರೊಕಾನ್ನಾಬಿನಾಲ್ (ಟಿಎಚ್‌ಸಿ) ಮತ್ತು ಕ್ಯಾನಬಿಡಿಯಾಲ್ (ಸಿಬಿಡಿ) ಎಂಬ ಎರಡು ರಾಸಾಯನಿಕಗಳನ್ನು ಮುಖ್ಯವಾಗಿ ಔಷಧಿಗಾಗಿ ಬಳಸಲಾಗುತ್ತದೆ. ಇದು ರಾಸಾಯನಿಕ ಟಿಎಚ್‌ಸಿ, ಇದರ ಮೂಲಕ ಜನರು ಮಾದಕತೆಯ ಸ್ಥಿತಿಯನ್ನು ಅನುಭವಿಸಬಹುದು.

  ವೈದ್ಯಕೀಯ ಗಾಂಜಾವನ್ನು ಯಾವ ರೋಗಗಳಿಗೆ ಬಳಸಲಾಗುತ್ತದೆ?
  ಆಲ್​ಝೈಮರ್, ಕ್ಯಾನ್ಸರ್, ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ರೋಗಗಳು, ಅಪಸ್ಮಾರ, ಗ್ಲುಕೋಮಾ, ಸ್ಕಿಜೋಫ್ರೇನಿಯಾ, ನೌಸಲಿಯಾ, ಸ್ನಾಯು ಮತ್ತು ಮಾನಸಿಕ ಸಮಸ್ಯೆಗಳ ಕ್ಷೇತ್ರದಲ್ಲಿ ಗಾಂಜಾ ಔಷಧಿ ಬಳಕೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಅಲ್ಲದೆ ನೋವು ನಿವಾರಕ, ನೋಸಿಯಾ ಮುಂತಾದ ಸಮಸ್ಯೆಗಳಿಗೆ ಇದನ್ನು ಬಳಸಲಾಗುತ್ತದೆ. ಹಾಗೆಯೇ ಕೀಮೋಥೆರಪಿಯ ನಂತರ ಕಂಡುಬರುವ ಕೆಲವು ರೋಗಲಕ್ಷಣಗಳನ್ನು ವೈದ್ಯಕೀಯ ಗಾಂಜಾ ಸಹಾಯದಿಂದಲೂ ನಿವಾರಿಸಲಾಗುತ್ತಿದೆ.

  ವೈದ್ಯಕೀಯ ಗಾಂಜಾವನ್ನು ಹೇಗೆ ಬಳಸಲಾಗುತ್ತದೆ?
  ಗಾಂಜಾವನ್ನು ಔಷಧಿಯಾಗಿ ಬಳಸಲು ಧೂಮಪಾನ ಸುಲಭ ಮಾರ್ಗ. ಹಾಗೆಯೇ ಮೂಗಿನ ಮೂಲಕ ಉಸಿರಾಟ ನೀಡಲಾಗುತ್ತದೆ. ಇದಲ್ಲದೆ, ವೈದ್ಯಕೀಯ ಗಾಂಜಾವನ್ನು ಆಹಾರ, ಕೆನೆ, ಲೋಷನ್ ಇತ್ಯಾದಿಗಳನ್ನು ಬೆರೆಸಿ ಚರ್ಮಕ್ಕೆ ಹಚ್ಚುವುದು ಅಥವಾ ನಾಲಿಗೆಗೆ ಕೆಲವು ಹನಿಗಳನ್ನು ಸೇರಿಸಿ ಮತ್ತು ಸ್ವಲ್ಪ ದ್ರವದೊಂದಿಗೆ ಬೆರೆಸುವುದು ಮುಂತಾದ ವಿಧಾನಗಳಲ್ಲಿ ಬಳಸಲಾಗುತ್ತದೆ. ರೋಗದ ಸ್ಥಿತಿ ಮತ್ತು ಚಿಕಿತ್ಸೆಯ ದೃಷ್ಟಿಯಿಂದ ಇದರ ಸೇವನೆಯು ಎಷ್ಟು ಸೂಕ್ತ ಎಂದು ತಜ್ಞರು ನಿರ್ಧರಿಸುತ್ತಾರೆ.

  ವೈದ್ಯಕೀಯ ಗಾಂಜಾ ಸಹ ಅಡ್ಡಪರಿಣಾಮಗಳನ್ನು ಹೊಂದಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಖಿನ್ನತೆ, ಆಯಾಸ, ಗೊಂದಲ, ಕಡಿಮೆ ರಕ್ತದೊತ್ತಡದಂತಹ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದಲ್ಲದೆ, ರೋಗಿಯ ಸ್ಥಿತಿಗೆ ಅನುಗುಣವಾಗಿ ಇತರ ಕೆಲವು ಅಡ್ಡಪರಿಣಾಮಗಳನ್ನು ಕಾಣಬಹುದು.
  Published by:zahir
  First published: