ನಿವೃತ್ತಿ ಬಳಿಕ ಹಣದ ಚಿಂತೆ ಬಿಟ್ಟು ಬಿಡಿ!; ಜೀವನಪೂರ್ತಿ ಆದಾಯ ನೀಡುವ ಈ ಯೋಜನೆ ನಿಮ್ಮದಾಗಿಸಿಕೊಳ್ಳಿ

ನಿವೃತ್ತಿಯ ನಂತರದ ಸುಖಮಯ ಬದುಕಿನ ನಿರ್ವಹಣೆಗೆ ಬಜಾಜ್ ಅಲಯನ್ಸ್​ ಲೈಫ್ ಗ್ಯಾರಂಟಿಡ್​ ಪೆನ್​​ಷನ್ ಗೋಲ್ ಉತ್ತಮ ಆದಾಯದ ಮೂಲವಾಗಿದ್ದು, ಹೆಚ್ಚು ಜನರ ಆಯ್ಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿವೃತ್ತಿಯ ನಂತರ ಬಹುತೇಕ ಜನರು ಆರ್ಥಿಕ ಸಂಕಷ್ಟಕ್ಕೀಡಾಗುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ವಯಸ್ಸಾದ ಬಳಿಕ ಇನ್ನಿಲ್ಲದ ಕಾಯಿಲೆಗಳು ದೈಹಿಕವಾಗಿ ಬಾಧಿಸುವುದಲ್ಲದೇ ಆರ್ಥಿಕ ಹೊಡೆತವನ್ನು ನೀಡುತ್ತವೆ. ಅದರಲ್ಲೂ ಇವತ್ತಿನ ದುಬಾರಿ ಕಾಯಿಲೆಗಳ ವೆಚ್ಚವನ್ನು ಭರಿಸುವುದು ಇಳಿ ವಯಸ್ಸಿನಲ್ಲಿ ಬಹು ದೊಡ್ಡ ಮಾನಸಿಕ ಯಾತನೆಯನ್ನೇ ನೀಡುತ್ತದೆ. ನಿವೃತ್ತಿಯ ನಂತರವೂ ವ್ಯಕ್ತಿಯು ನೆಮ್ಮದಿಯ ಜೀವನ ನಡೆಸಲು ಒಂದು ನಿಶ್ಚಿತ ಆದಾಯ ಅಗತ್ಯವೆನ್ನುವುದು ಎಲ್ಲರೂ ಒಪ್ಪಲೇಬೇಕಾದ ಸತ್ಯ.

ಇಂತಹ ಪರಿಸ್ಥಿತಿಗಳನ್ನು ಮೊದಲೇ ಊಹಿಸಿ ನಿವೃತ್ತಿಯ ನಂತರ ಒಂದು ಸುಭದ್ರ ನಿವೃತ್ತಿ ಹಣಕಾಸು ಯೋಜನೆಯನ್ನು ಮಾಡಿಕೊಳ್ಳುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ನೀವು ಮಾಡಿಕೊಳ್ಳುವ ಯೋಜನೆ ವ್ಯಕ್ತಿಯ ಜೀವಿತಾವಧಿಯವರೆಗೂ ನಿಶ್ಚಿತ ಆದಾಯ ನೀಡುವ ಯೋಜನೆಯಾಗಿರಬೇಕು. ಆ ಮೂಲಕ ಇಳಿ ವಯಸ್ಸಿನಲ್ಲಿ ಬಾಧಿಸುವ ಎಲ್ಲಾ ಆರ್ಥಿಕ ಜವಾಬ್ದಾರಿಯನ್ನು ಒತ್ತಡವಿಲ್ಲದೇ ನಿಭಾಯಿಸಬಹುದು. ಅಷ್ಟೇ ಅಲ್ಲದೇ ಆ ವ್ಯಕ್ತಿಯ ಅಗಲಿಕೆಯ ನಂತರವೂ ಆತನ ಕುಟುಂಬದವರಿಗೂ ಈ ಯೋಜನೆ ಅನುಕೂಲವಾಗಿರಬೇಕು.

ಅಂತಹ ಯೋಜನೆ ಯಾವುದು ? ಇಲ್ಲಿದೆ ನೋಡಿ!:

ಬಜಾಜ್​ ಅಲಯನ್ಸ್​​ ಅವರ ಆರ್ಥಿಕ ಪರಿಹಾರದ ಯೋಜನೆಗಳು ನಿಮಗೆ ಭರವಸೆಯನ್ನು ನೀಡುತ್ತಿದೆ. ಬಜಾಜ್ ಅಲಯನ್ಸ್ ಲೈಫ್ ಗ್ಯಾರಂಟೀಡ್ ಪೆನ್ಷನ್​​ ಗೋಲ್- ನಿವೃತ್ತಿಯ ನಂತರ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಇದು ನೆರವು ನೀಡುತ್ತದೆ. ವ್ಯಕ್ತಿ ಬದುಕಿರುವಾಗ ಆತನಿಗೆ ರೆಗ್ಯುಲರ್ ಆದಾಯ ನೀಡುವ ಗ್ಯಾರಂಟಿಯನ್ನು ಸಹ ನೀಡುತ್ತಿದೆ. ಈ ಯೋಜನೆಯಲ್ಲಿ ಪಾಲಿಸಿ ಖರೀದಿಸುವ ಸಮಯದಲ್ಲಿ ಜೀವನ ಪೂರ್ತಿ ಹಣವನ್ನು ಲಾಕ್​ ಮಾಡಲಾಗುತ್ತದೆ. ಬಜಾಜ್ ಅಲಯನ್ಸ್ ಲೈಫ್ ಗ್ಯಾರಂಟೀಡ್ ಪೆನ್ಷನ್ ಪ್ಲಾನ್‌ ಖರೀದಿಸುವವರಿಗೆ ಜೀವನ ಪೂರ್ತಿ ಆದಾಯನ್ನು ನೀಡುತ್ತದೆ. ಅಲ್ಲದೇ ಪಾಲಿಸಿ ಖರೀದಿದಾರರಿಗೆ 9 ಆನ್ಯೂಟಿ(ಒಪ್ಪಂದದ ಮೂಲಕ ಆದಾಯ ಪಡೆಯುವಿಕೆ) ಆಯ್ಕೆಗಳನ್ನು ಸಹ ನೀಡಲಾಗುತ್ತದೆ. ಪಾಲಿಸಿ ಖರೀದಿದಾರರು ತಮಗೆ ಅನುಕೂಲವಾದ ಆಯ್ಕೆಯನ್ನು ಮಾಡಲು ಇಲ್ಲಿ ಅವಕಾಶವಿದೆ.

ಬಜಾಜ್ ಅಲಯನ್ಸ್ ಲೈಫ್ ಗ್ಯಾರಂಟೀಡ್​ ಪೆನ್ಷನ್ ಗೋಲ್ ಪಾಲಿಸಿಯಲ್ಲಿ 'ಇಮೀಡಿಯೆಟ್ ಆನ್ಯೂಟಿ ಪ್ಲಾನ್' ಆಯ್ಕೆ ಮಾಡಿಕೊಳ್ಳುವ ಮೂಲಕ 'ಇಮೀಡಿಯೆಟ್ ರೆಗ್ಯೂಲರ್ ಆದಾಯ'ವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಇಲ್ಲವಾದರೆ ತಕ್ಷಣಕ್ಕೆ ಆದಾಯದ ಅಗತ್ಯವಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪಡೆಯುವ ಅವಕಾಶವೂ ಸಹ ಈ ಪ್ಲಾನ್​ನಲ್ಲಿದೆ. ಪಾಲಿಸಿ ಆರಂಭದಲ್ಲೇ ಆನ್ಯೂಟಿ ಹಣ ಫಿಕ್ಸ್ ಮಾಡಿದರೆ ಪಾಲಿಸಿದಾರರು ಗ್ಯಾರಂಟೀಡ್​ ಲೈಫ್​ಟೈಮ್​ ರೆಗ್ಯೂಲರ್ ಆದಾಯವನ್ನು ಪಡೆಯಬಹುದು. ಇದರ ಜೊತೆಗೆ ಜಾಯಿಂಟ್ ಲೈಫ್​ ಆಯ್ಕೆ ಇದ್ದು, ಪಾಲಿಸಿದಾರರು ಜಾಯಿಂಟ್​ ಲೈಫ್ ಆನ್ಯೂಟಿಯನ್ನು ಪಡೆಯುವ ಅವಕಾಶವಿದೆ. ಈ ಆಯ್ಕೆಯಲ್ಲಿ ಪಾಲಿಸಿದಾರನ ಅಗಲಿಕೆಯ ನಂತರ ಆತನ ಮಡದಿಗೆ ಶೇಕಡ 50 ಅಥವಾ 100 ರಷ್ಟು ಆದಾಯವನ್ನು ನೀಡುತ್ತದೆ.

ಪಾಲಿಸಿಯನ್ನು ಹೇಗೆ ಮತ್ತು ಎಲ್ಲಿ ಪಡೆಯಬಹುದು?
ಬಜಾಜ್ ಅಲಯನ್ಸ್​​ ಲೈಫ್ ಗ್ಯಾರಂಟೀಡ್ ಪೆನ್ಷನ್ ಗೋಲ್​ ಇದರೊಟ್ಟಿಗೆ ಹೆಚ್ಚು ಲಾಭಗಳನ್ನು ಹೊಂದಿದ್ದು ಫ್ಲೆಕ್ಸಿಬಲ್ ಆಗಿದೆ. 5 ರಿಂದ 10 ವರ್ಷಗಳ ಪೀರಿಯಡ್​ಗೆ ಪ್ರೀಮಿಯಂ ಕಟ್ಟುವ ಅವಕಾಶ, ಪಾಲಿಸಿ ಆನಿವರ್ಸರಿಗಳಲ್ಲಿ ಆನ್ಯೂಟಿ ಪಾವತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ, ಅಲ್ಲದೇ ಸಿಂಗಲ್ ಪ್ರೀಮಿಯಂ ಪಾಲಿಸಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ಲಾ ಕಾರಣಗಳಿಂದಾಗಿ ನಿವೃತ್ತಿಯ ನಂತರದ ಸುಖಮಯ ಬದುಕಿನ ನಿರ್ವಹಣೆಗೆ ಬಜಾಜ್ ಅಲಯನ್ಸ್​ ಲೈಫ್ ಗ್ಯಾರಂಟಿಡ್​ ಪೆನ್​​ಷನ್ ಗೋಲ್ ಉತ್ತಮ ಆದಾಯದ ಮೂಲವಾಗಿದ್ದು, ಹೆಚ್ಚು ಜನರ ಆಯ್ಕೆಯಾಗಿದೆ. ಗ್ರಾಹಕರು ​ಬಜಾಜ್​ ಅಲಯನ್ಸ್​ ಲೈಫ್​​ ಇನ್ಶೂರೆನ್ಸ್‌ ಏಜೆಂಟ್ಸ್​​ ಮತ್ತು ಬ್ಯಾಂಕ್​ ಪಾಲುದಾರರ ಮೂಲಕ ಆನ್​ಲೈನ್ ಮತ್ತು ಆಫ್​ಲೈನ್ ಪಾಲಿಸಿಯನ್ನು ಪಡೆಯಬಹುದಾಗಿದೆ.
Published by:Sushma Chakre
First published: