ಮೂಗಿನ ಮೂಲಕ ಮೆದುಳು ಪ್ರವೇಶಿಸುತ್ತಿರುವ ಕೊರೋನಾ ವೈರಸ್; ಅಧ್ಯಯನದಿಂದ ಬಯಲು
ಈ ವೈರಸ್ ಮಿದುಳುಅನ್ನು ಮೂಗಿನಿಂದ ಗಂಟಲಿನ ಮೇಲ್ಬಾಗಕ್ಕೆ ತಲುಪುತ್ತದೆ. ಅಲ್ಲಿಂದ ಅದು ಪಸರಿಸುತ್ತದೆ ಎಂಬುದು ತಿಳಿದುಬಂದಿದೆ
news18-kannada Updated:November 30, 2020, 7:37 PM IST

ಪ್ರಾತಿನಿಧಿಕ ಚಿತ್ರ.
- News18 Kannada
- Last Updated: November 30, 2020, 7:37 PM IST
ಒಬ್ಬರಿಂದ ಒಬ್ಬರಿಗೆ ಹರಡಬಲ್ಲ ಕೊರೋನಾ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ ಎಂಬುದು ಹಲವಾರು ಅಧ್ಯಯನಗಳಿಂದ ಈಗಾಗಲೇ ದೃಢಪಟ್ಟಿದೆ. ಹೊಸ ಅಧ್ಯಯನ ಪ್ರಕಾರ ಕೆಲವೊಮ್ಮೆ ಲಕ್ಷಣ ರಹಿತವಾಗಿರುವ ಈ ಕೊರೋನಾ ವೈರಸ್ ಸೋಂಕು ಮೂಗಿನ ಮೂಲಕ ನಮ್ಮ ಮಿದುಳಿಗೆ ಪ್ರವೇಶಿಸಬಹುದು ಎಂಬುದು ಬಯಲಾಗಿದೆ. ಈ ಮೂಲಕ ಕೊರೋನಾ ಲಕ್ಷಣಗಳು ಕಂಡು ಬರುವ ರೋಗಿಗಳ ದೇಹದಲ್ಲಿ ಹೊಕ್ಕ ಸೋಂಕನ್ನು ತಡೆಗಟ್ಟುವ ಕ್ರಮಗಳ ನರವೈಜ್ಞಾನಿಕ ಲಕ್ಷಣ ಪತ್ತೆ ಹಚ್ಚಲು ಇದು ಸಾಧ್ಯವಾಗುತ್ತದೆ. nಏಚರ್ ನ್ಯೂರೋಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ SARS-CoV-2 ಉಸಿರಾಟದ ಮೇಲೆ ಪರಿಣಾಮ ಬೀರುವುದಲ್ಲದೇ, ಕೇಂದ್ರ ನರಮಂಡಲದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿಯೇ ವಾಸನೆ ಗ್ರಹಿಸದಿರುವುದು, ರುಚಿ ತಿಳಿಯದಂತೆ ಆಗುವುದು. ತಲೆ ನೋವು, ಆಯಾಸ ಮತ್ತ ನರವೈಜ್ಞಾನಿಕ ಲಕ್ಷಣಗಳು ಕಂಡು ಬರುತ್ತವೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ಸಂಶೋಧನೆಯಲ್ಲಿ ಮೆದುಳು ಮತ್ತು ಸೆರೆಬ್ರೊಸ್ಪೈನಲ್ ದ್ರವದಲ್ಲಿ ಆರ್ಎನ್ಎ ಇರುವುದನ್ನು ಪತ್ತೆ ಹಚ್ಚಲಾಗಿತ್ತು. ಅಲ್ಲದೇ ಇದು ಈ ವೈರಸ್ ಹೇಗೆ ಮಿದುಳಿಗೆ ಪ್ರವೇಶಿಸಿ, ಹರಡಿಕೊಂಡಿತು ಎಂಬ ಬಗ್ಗೆ ಸ್ಪಷ್ಟವಾಗಿರಲಿಲ್ಲ. ಇದನ್ನು ಓದಿ: ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ
ಈ ವೈರಸ್ ಮಿದುಳುಅನ್ನು ಮೂಗಿನಿಂದ ಗಂಟಲಿನ ಮೇಲ್ಬಾಗಕ್ಕೆ ತಲುಪುತ್ತದೆ. ಅಲ್ಲಿಂದ ಅದು ಪಸರಿಸುತ್ತದೆ ಎಂಬುದು ತಿಳಿದುಬಂದಿದೆ. ಮಿದುಳಿಗೆ ಈ ವೈರಸ್ ಪಸರಿಸಿದ ಪರಿಣಾಮ ಇದುವರೆಗೂ 33 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.
SARS-CoV-2 RNA ಅನುವಂಶಿಕ ಗುಣಗಳು ಮೆದುಳು ಮತ್ತು ನಾಸೊಫಾರ್ನೆಕ್ಸ್ನಲ್ಲಿರುವ ಪ್ರೋಟಿನ್ ಇರುವಿಕೆಯನ್ನು ಪತ್ತೆ ಮಾಡಲಾಗಿದೆ. ಈ ಆರ್ಎನ್ಎ ಹೆಚ್ಚಾಗಿ ಗ್ರಾಣ ಲೋಳಯೆ ಪೊರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಪರಿಣಾಮ ಗ್ರಾಣ ಸಂವೇದನೆ ಇಲ್ಲದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂಶೋಧನೆಯಲ್ಲಿ ಮೆದುಳು ಮತ್ತು ಸೆರೆಬ್ರೊಸ್ಪೈನಲ್ ದ್ರವದಲ್ಲಿ ಆರ್ಎನ್ಎ ಇರುವುದನ್ನು ಪತ್ತೆ ಹಚ್ಚಲಾಗಿತ್ತು. ಅಲ್ಲದೇ ಇದು ಈ ವೈರಸ್ ಹೇಗೆ ಮಿದುಳಿಗೆ ಪ್ರವೇಶಿಸಿ, ಹರಡಿಕೊಂಡಿತು ಎಂಬ ಬಗ್ಗೆ ಸ್ಪಷ್ಟವಾಗಿರಲಿಲ್ಲ.