Work Tips: ಹೊಸದಾಗಿ ಕೆಲಸಕ್ಕೆ ಸೇರಿದವರು ಗಮನಿಸಿ, ಈ ಟಿಪ್ಸ್ ತಪ್ಪದೆ ಫಾಲೋ ಮಾಡಿ

Work Tips: ಕೆಲವೊಮ್ಮೆ ನಮಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಕೈ ತುಂಬಾ ಸಂಬಳ ಬರುತ್ತದೆ. ಆದರೆ ಆತ್ಮ ತೃಪ್ತಿ ಅಂತ ಇರುವುದಿಲ್ಲ ಹಾಗಿದ್ದಾಗಾ ಏನು ಮಾಡ್ಬೇಕು ಅನ್ನೊದಿಕ್ಕೆ ಇಲ್ಲಿದೆ ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಬ್ಬ ವ್ಯಕ್ತಿ ಜೀವನದಲ್ಲಿ (Life) ಹಣ ಗಳಿಸಲು ಮತ್ತು ಯಶಸ್ವಿ ಅಂತ ಅನ್ನಿಸಿಕೊಳ್ಳಲು ಒಂದು ಒಳ್ಳೆಯ ಕೆಲಸ ಇರುವುದು ತುಂಬಾನೇ ಮುಖ್ಯವಾಗುತ್ತದೆ. ಅದು ಬೇರೆಯವರ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಸ್ವಂತ ಒಂದು ಬಿಸಿನೆಸ್ (Business) ಮಾಡುತ್ತಿರಲಿ. ಕೆಲಸ (Work) ಅಂತೂ ಮಾಡಲೇಬೇಕು. ಕೆಲಸದಲ್ಲಿ ಪರಿಶ್ರಮ ಪಟ್ಟಷ್ಟು ಅದರಲ್ಲಿ ಯಶಸ್ಸು ಸಿಗುತ್ತದೆ ಅಂತ ಬಹುತೇಕರಿಗೆ ಗೊತ್ತೇ ಇರುತ್ತದೆ. ಹಾಗಂತ ತುಂಬಾ ತಲೆ (Mind) ಕೆಡೆಸಿಕೊಂಡು ಕೆಲಸ ಮಾಡಬೇಡಿ, ಹಾಗೆ ಮಾಡಿದರೆ ನೀವು ಮಾಡುವ ಕೆಲಸದಲ್ಲಿ ನಿಮಗೆ ಖುಷಿ (Happy) ಸಿಗುವುದಿಲ್ಲ.

ಕೆಲವೊಮ್ಮೆ ನಮಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಕೈ ತುಂಬಾ ಸಂಬಳ ಬರುತ್ತದೆ. ಆದರೆ ಆತ್ಮ ತೃಪ್ತಿ ಅಂತ ಇರುವುದಿಲ್ಲ. ಹಾಗಾಗಿ ನಾವು ಆ ಕೆಲಸದಲ್ಲಿ ಪದೇ ಪದೇ ವಿಫಲರಾಗುತ್ತೇವೆ ಮತ್ತು ಅತಿಯಾದ ಮಾನಸಿಕ ಒತ್ತಡದಿಂದ ಕಂಡ ಕಂಡವರ ಮೇಲೆಲ್ಲಾ ಕೋಪ ಮಾಡಿಕೊಂಡು ಹಲವಾರು ವೃತ್ತಿಪರ ಸಂಬಂಧಗಳನ್ನು ಸಹ ನಾವು ಹಾಳು ಮಾಡಿಕೊಳ್ಳುತ್ತೇವೆ. ನಾವು ವೃತ್ತಿಜೀವನದ ಪ್ರಮುಖವಾದ ಪಾಠಗಳನ್ನು ಕಲಿಯುವ ಮೊದಲೇ ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿರುತ್ತೇವೆ.

ಹೀಗೆ ನಿಮ್ಮ ವೃತ್ತಿಜೀವನದ ಒತ್ತಡ ನಿಮ್ಮ ಶಾಂತಿಯುತ ಜೀವನವನ್ನು ಸಹ ಹಾಳು ಮಾಡುತ್ತದೆ. ಹಾಗಾಗಿ ನೀವು ಹೊಸದಾಗಿ ಕೆಲಸ ಶುರು ಮಾಡಿಕೊಂಡಿದ್ದರೆ, ಈ ವೃತಿಜೀವನದ ಪಾಠಗಳನ್ನು ನೀವು ಆದಷ್ಟು ಬೇಗ ಕಲಿತುಕೊಳ್ಳುವುದು ಒಳ್ಳೆಯದು.

1. ನೀವು ಆನಂದಿಸುವ ಕೆಲಸವನ್ನು ಮಾಡಿರಿ

ನೀವು ನಿಜವಾಗಿಯೂ ಆನಂದಿಸುವ ವೃತ್ತಿಯನ್ನು ಕಂಡುಕೊಳ್ಳುವುದು ಕೆಲವೊಮ್ಮೆ ತುಂಬಾನೇ ಕಷ್ಟಕರವಾಗಿರುತ್ತದೆ. ಆದ್ದರಿಂದ, ನಮ್ಮಲ್ಲಿ ಹೆಚ್ಚಿನವರು ತಾವು ಇಷ್ಟಪಡದ ಅಥವಾ ತಮಗೆ ಸೂಕ್ತವಲ್ಲದ ಕೆಲಸಗಳನ್ನು ಮಾಡುತ್ತಾರೆ. ಇದರ ಪರಿಣಾಮವಾಗಿ, ಅವರ ವೈಯಕ್ತಿಕ ಜೀವನವು ಸಹ ತೊಂದರೆಗೊಳಗಾಗುತ್ತದೆ. ಏಕೆಂದರೆ ನಾವು ನಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲಿ ಕಳೆಯುತ್ತೇವೆ. ಆದ್ದರಿಂದ, ನಾವು ನಿಜವಾಗಿಯೂ ಆನಂದಿಸುವ ವೃತ್ತಿಜೀವನವನ್ನು ಕಂಡುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: ಕುಂತ್ರೂ, ನಿಂತ್ರೂ ಮಲಗಿದ್ರೂ ಮೊಬೈಲ್ ನೋಡ್ತೀರಾ? ಹಾಗಿದ್ರೆ ಕ್ಯಾನ್ಸರ್‌ ಬರಬಹುದು ಹುಷಾರ್!

2. ಎಲ್ಲದಕ್ಕೂ ‘ಆಯ್ತು’ ಅಂತ ಹೇಳಬೇಡಿ

ಜನರು ಆಗಾಗ್ಗೆ ಎಲ್ಲದಕ್ಕೂ ‘ಆಯ್ತು’ ಅಂತ ಹೇಳುತ್ತಾರೆ ಮತ್ತು ತಮ್ಮ ಮೇಲಾಧಿಕಾರಿಗಳನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಹೊಸ ವೃತ್ತಿಪರ ಉದ್ಯಮವನ್ನು ಪ್ರಾರಂಭಿಸುವಾಗ ಹೆಚ್ಚುವರಿ ಕೆಲಸವನ್ನು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ಒಬ್ಬ ವ್ಯಕ್ತಿ ತಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ಬಲಿಕೊಟ್ಟು ಕೆಲಸವನ್ನು ಮಾಡಬಾರದು. ಎಲ್ಲದಕ್ಕೂ ಆಯ್ತು ಅಂತ ಹೇಳುವ ಬದಲು ಇಲ್ಲ ಅಂತ ಹೇಗೆ ಹೇಳಬೇಕೆಂದು ನೀವು ತಿಳಿದಿರಬೇಕು ಮತ್ತು ನಿಮಗೆ ಆ ಹೆಚ್ಚುವರಿ ಕೆಲಸವನ್ನು ಮಾಡಬಹುದು ಅಂತ ಅನ್ನಿಸಿದಾಗ ಮಾತ್ರ ಅದನ್ನು ತೆಗೆದುಕೊಳ್ಳಿರಿ.

3. ನಿಮ್ಮ ಆರೋಗ್ಯವು ನಿಮ್ಮ ಆದ್ಯತೆಯಾಗಿರಬೇಕು

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ನಿಮ್ಮ ಕೆಲಸವು ನಿಮ್ಮ ಆರೋಗ್ಯಕ್ಕೆ ಅಡ್ಡಿಯುಂಟು ಮಾಡಿದರೆ ಮತ್ತು ನೀವು ಆತಂಕ, ಒತ್ತಡ ಅಥವಾ ದೈಹಿಕವಾಗಿ ಅನಾರೋಗ್ಯಕ್ಕೆ ಕಾರಣವಾದಾಗ ನಿಮ್ಮ ಕೆಲಸವನ್ನು ಬದಲಾಯಿಸುವುದು ಅಥವಾ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸೂಕ್ತ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಿಮ್ಮ ಆರೋಗ್ಯವನ್ನು ಬಲಿ ಕೊಡಬಾರದು.

ಇದನ್ನೂ ಓದಿ: ತೂಕ ಇಳಿಸುವ ಪ್ರಯಾಣಕ್ಕೆ ಕೇವಲ ವಸ್ತುಗಳು ಅಲ್ಲ, ನಿಮ್ಮ ಸ್ವಯಂಪ್ರೇರಣೆ ಹೆಚ್ಚಿಸುವ ಅಂಶಗಳೂ ಮುಖ್ಯ!

4. ಕೆಲಸವನ್ನು ಬಿಡುವಾಗ ತಂಟೆ ತಕರಾರು ಮಾಡಿಕೊಳ್ಳಬೇಡಿ

ಕೆಲಸವನ್ನು ತೊರೆಯುವಾಗ ನೀವು ನಿಮ್ಮ ಬಾಸ್ ಬಗ್ಗೆ ಎಂತಹ ಅಭಿಪ್ರಾಯ ಹೊಂದಿದ್ದೀರಿ ಅಂತ ಹೇಳಿ ಹೋಗುವುದು ಸುಲಭವಾಗಬಹುದು. ಆದರೆ ಒಂದು ವಿಷಯ ನೆನಪಿಡಿ, ಈ ವೃತ್ತಿಜೀವನದಲ್ಲಿ ಮತ್ತೆ ಅವರು ನಮ್ಮ ಮುಂದೆ ಬರಬಹುದು. ಆದ್ದರಿಂದ, ನೀವು ನಿಮ್ಮ ಹಿಂದಿನ ಉದ್ಯೋಗದಾತರೊಂದಿಗಿನ ದ್ವೇಷವನ್ನು ಇರಿಸಿಕೊಳ್ಳಬಾರದು. ಎಲ್ಲರೊಂದಿಗೂ ಸೌಜನ್ಯದಿಂದ ವರ್ತಿಸಬೇಕು ಮತ್ತು ಕೆಲಸವನ್ನು ಬಿಡುವಾಗ ನಿಮ್ಮ ವರ್ತನೆ ಚೆನ್ನಾಗಿರಬೇಕು.

5. ಕೆಲಸದ ಜೊತೆಗೆ ನಿಮ್ಮ ಜೀವನವನ್ನು ನಗುತ್ತಾ ಜೀವಿಸಿ

ನೀವು ರಜೆಗಳನ್ನು ತೆಗೆದುಕೊಳ್ಳಬಾರದು ಮತ್ತು ನಿಮ್ಮ ಕೆಲಸವು ನಿಮ್ಮ ಆದ್ಯತೆಯಾಗಿರಬೇಕು ಎಂದು ಭಾವಿಸುವುದು ಸಾಮಾನ್ಯವಾಗಿದೆ. ಆದಾಗ್ಯೂ, ನಿಮಗಾಗಿ ಅನೇಕ ಅನುಭವಗಳು ಕಾಯುತ್ತಿವೆ, ಕೆಲಸ ಮಾಡುವುದರ ಜೊತೆಗೆ ನಮ್ಮ ಜೀವನವನ್ನು ಎಷ್ಟರ ಮಟ್ಟಿಗೆ ಆನಂದಿಸುತ್ತಿದ್ದೇವೆ ಅಂತ ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ನೀವು ಸಾಧ್ಯವಾದಷ್ಟು ಮನೆ ಮತ್ತು ಕಚೇರಿಯಿಂದ ಹೊರ ಹೋಗಬೇಕು, ನಿಮ್ಮ ರಜಾದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಬೇಕು.
First published: