ನಮ್ಮಲ್ಲಿ ಹೆಚ್ಚಿನವರು ಒಂದಲ್ಲಾ ಒಂದು ವಿಷಯಕ್ಕೆ ನಿದ್ರೆಕೆಡುವವರೇ! (Sleepless Nights) ಯಾವುದೋ ಸಿನಿಮಾ ನೋಡಲೆಂದೋ, ನೈಟ್ ಶಿಫ್ಟ್ ಪ್ರಭಾವಕ್ಕೊಳಗಾಗಿಯೋ, ಪರೀಕ್ಷಾ (Exam) ಒತ್ತಡದಿಂದಲೇ ಹೀಗೆ ಮರುದಿನ ತರಗತಿಗಳಿಗೆ ಉದ್ಯೋಗಗಳಿಗೆ ಹೋಗಬೇಕಾದ ಅದೆಷ್ಟೋ ಜನರು ರಾತ್ರಿ ನಿದ್ರೆಯಿಂದ (Sleep) ವಂಚಿತರಾಗಿ ಹಗಲು ತೂಕಡಿಸುತ್ತಾರೆ. ಇನ್ನು ಕೆಲವೊಮ್ಮೆ ನಿದ್ರೆಕೆಡುವುದೇ ಅಭ್ಯಾಸವಾಗಿ ಹೋದರೆ ಸರಿಯಾದ ಸಮಯಕ್ಕೆ ನಿದ್ದೆಬರುವುದಿಲ್ಲ ಹಾಗೂ ಮಧ್ಯೆ ಮಧ್ಯೆ ಎಚ್ಚರಗೊಳ್ಳುತ್ತೇವೆ. ನಿದ್ರಾಹೀನತೆ ಮುಂದೊಂದು ದಿನ ಸಮಸ್ಯೆಗಳನ್ನುಂಟು ಮಾಡುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ನಿದ್ರೆಕೆಡುವುದು ಅಪಾಯಕ್ಕೆ ಆಹ್ವಾನ
ಹೀಗೆ ರಾತ್ರಿ ನಿದ್ರೆ ಮಾಡದಿರುವುದು ನಮ್ಮ ಕೆಲವೊಂದು ಅಗತ್ಯಗಳಿಗೆ ಅನುಗುಣವಾಗಿ ಸರಿ ಎಂದು ತೋರಿದರೂ ವಿಜ್ಞಾನಿಗಳು ಹಾಗೂ ಸಂಶೋಧಕರ ಪ್ರಕಾರ ಚಿಂತಾಜನಕ ಪ್ರಕರಣ ಎಂಬುದಾಗಿದೆ.
ಮೆದುಳಿನ ಸಂಪೂರ್ಣ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಈ ಒಂದು ಜೀವನ ಶೈಲಿಗಿದೆ ಎಂದರೆ ನೀವು ನಿಬ್ಬೆರಗಾಗುವುದು ಖಂಡಿತ.
ನಿದ್ರಾಹೀನತೆಯಿಂದ ಮೆದುಳಿಗೆ ವಯಸ್ಸಾಗುತ್ತದೆ
ಇದಕ್ಕೆ ಸಂಬಂಧಿಸಿದ ಹೊಸ ಅಧ್ಯಯನ ತಿಳಿಸುವುದೇನೆಂದರೆ, ಒಂದು ರಾತ್ರಿಯ ನಿದ್ರೆಯ ತ್ಯಜಿಸುವಿಕೆ ವಯಸ್ಸಾದ ನಂತರ ಒಂದೆರಡು ವರ್ಷಗಳಲ್ಲಿ ಕಂಡುಬರುವ ಅದೇ ಬದಲಾವಣೆಗಳನ್ನು ಮೆದುಳಿಗೆ ಉಂಟು ಮಾಡುತ್ತದೆ ಎಂಬುದಾಗಿದೆ. ಹಾಗಿದ್ದರೆ ಇದು ಹೇಗೆ ಎಂಬುದನ್ನು ಅರಿತುಕೊಳ್ಳೋಣ
ನಿದ್ರಾ ನಷ್ಟದ ಪರಿಣಾಮವನ್ನು ತಿಳಿಸುವ ಮೆದುಳಿನ ಸ್ಕ್ಯಾನ್‌ಗಳು
ಈ ಅಧ್ಯಯನಕ್ಕಾಗಿ ಸಂಶೋಧಕರು ಬ್ರೇನೇಜ್ಆರ್ ಎಂಬ ಯಂತ್ರ ಕಲಿಕೆ ಉಪಕರಣವನ್ನು ಅನ್ನು ರೂಪಿಸಿದ್ದು, ಇದು ಅಧ್ಯಯನದಲ್ಲಿ ಪಾಲ್ಗೊಳ್ಳುವವರ ಮೆದುಳಿನ ವಯಸ್ಸನ್ನು ಪರಿಶೀಲಿಸಲು ಮೆದುಳಿನ ಸ್ಕ್ಯಾನ್ ಅನ್ನು ಆಧರಿಸಿ ವ್ಯಕ್ತಿಯ ಕಾಲಾನುಸಾರವಾದ ವಯಸ್ಸನ್ನು ಊಹಿಸುತ್ತದೆ.
ಮೆದುಳಿನ ಅಂಗಾಂಶ ಹಾಗೂ ದ್ರವದ ಪರಿಮಾಣ
ಈ ಅಂಕಿಅಂಶ ನಿಖರವಾದ ವಯಸ್ಸನ್ನು ಸೂಚಿಸುವುದಿಲ್ಲ ಆದರೆ ಮೆದುಳಿನ ಅಂಗಾಂಶ ಹಾಗೂ ದ್ರವದ ಪರಿಮಾಣದ ಮೇಲಿನ ಪ್ರಭಾವವನ್ನು ಸೂಚಿಸುತ್ತದೆ.
ವಯಸ್ಸಾದಾಗ ಇವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಸುತ್ತದೆ. ನಿದ್ರೆಯಿಂದ ವಂಚಿತರಾದ ಅಧ್ಯಯನದಲ್ಲಿ ಪಾಲ್ಗೊಂಡವರ ಮಿದುಳಿನ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನ್‌ಗಳನ್ನು ಈ ಉಪಕರಣ ವಿಶ್ಲೇಷಿಸಿತು ಹಾಗೂ ಅವುಗಳನ್ನು ಸಂಪೂರ್ಣವಾಗಿ ನಿದ್ರಿಸಿದವರ ಮೆದುಳಿನ MRI ಗಳಿಗೆ ಹೋಲಿಸಿತು.
134 ಪಾಲ್ಗೊಳ್ಳುವವರ ಮಾಹಿತಿಗಳನ್ನು ಈ ಅಧ್ಯಯನಕ್ಕಾಗಿ ತೆಗೆದುಕೊಳ್ಳಲಾಗಿದ್ದು ಅವರನ್ನು ಮೊದಲಿಗೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು ಅವುಗಳೆಂದರೆ ಮೂರು ವಿಭಿನ್ನ ಮಟ್ಟದ ನಿದ್ರಾಹೀನತೆ ಮತ್ತು ಒಂದು ನಿಯಂತ್ರಣ ಗುಂಪು.
ಒಳ್ಳೆಯ ನಿದ್ದೆಯಿಂದ ಅಪಾಯವನ್ನು ತಡೆಯಬಹುದು
ಒಟ್ಟು 24 ಗಂಟೆ ಅಥವಾ ಅದಕ್ಕಿಂತ ಹೆಚ್ಚು ನಿದ್ರಾಹೀನತೆ ಹೊಂದಿರುವ ಭಾಗವಹಿಸುವವರಲ್ಲಿ, 'ಮೆದುಳಿನ ವಯಸ್ಸು' 1-2 ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಕಂಡುಬಂದಿದೆ.
ಇದನ್ನೂ ಓದಿ: ಸ್ನಾನ ಮಾಡುವಾಗ ಈ ಭಾಗಗಳನ್ನು ನಿರ್ಲಕ್ಷಿಸಬೇಡಿ; ದುರ್ವಾಸನೆ ಬರುವುದು ಖಂಡಿತ!
ಆದರೆ ಇಲ್ಲೂ ಒಂದು ಶುಭಸುದ್ದಿ ಇದ್ದು, ಒಂದು ರಾತ್ರಿಯ ಸವಿ ನಿದ್ದೆಯು ನಿದ್ರಾಹೀನತೆಯುಂಟಾದ ಪರಿಣಾಮಗಳನ್ನು ತಡೆಯುತ್ತದೆ ಎಂದಾಗಿದೆ. ಹಾಗಾಗಿ ಸಾಕಷ್ಟು ನಿದ್ದೆ ಮಾಡುವುದು ನಿದ್ರಾಹೀನತೆಯ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬುದು ಅಧ್ಯಯನಕಾರರ ಮಾತಾಗಿದೆ.
ಅಧ್ಯಯನದ ನಿಯಂತ್ರಣ ಗುಂಪಿಗೆ ಹೋಲಿಸಿದಾಗ ಭಾಗಶಃ ನಿದ್ರಾಹೀನತೆ (ಒಂದು ರಾತ್ರಿ ಮೂರು ಗಂಟೆಗಳ ನಿದ್ರೆ) ಮತ್ತು ದೀರ್ಘಕಾಲದ ನಿದ್ರಾಹೀನತೆ (ಪ್ರತಿ ರಾತ್ರಿ ಐದು ದಿನಗಳಿಗೆ ಐದು ಗಂಟೆಗಳ ನಿದ್ರೆ) ಉಂಟಾಗುವ ಬದಲಾವಣೆಗಳು ಗಮನಾರ್ಹವಾಗಿ ಭಿನ್ನವಾಗಿರುವುದಿಲ್ಲ ಎಂಬುದಾಗಿದೆ.
ಭಾಗಶಃ ಅಥವಾ ದೀರ್ಘಕಾಲದ ನಿದ್ರೆಯ ನಷ್ಟವು ದೀರ್ಘಾವಧಿಯಲ್ಲಿ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಇದು ಸೂಚಿಸುವುದಿಲ್ಲ.
ಇನ್ನಷ್ಟು ಅಧ್ಯಯನ ಸಂಶೋಧನೆ ಅಗತ್ಯವಿದೆ
ಪ್ರಸ್ತುತ ಅಧ್ಯಯನವು ನಿದ್ರಾಹೀನತೆ ಹಾಗೂ ಗಾಢ ನಿದ್ದೆಯ ಮೇಲಿನ ಕೆಲವೊಂದು ಅಂಕಿಅಂಶಗಳನ್ನು ಮಾತ್ರವೇ ನೀಡಿದ್ದು ಈ ಕುರಿತು ದೊಡ್ಡ-ಪ್ರಮಾಣದ ಅಧ್ಯಯನಗಳು ಹಾಗೂ ಇನ್ನಷ್ಟು ಆಧಾರಗಳನ್ನು ಕಲೆಹಾಕಬೇಕಾಗಿದೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ? ಹುಷಾರ್, ಇದರಿಂದ ನಿಮ್ಗೆ ಕಾದಿದೆ ಡೇಂಜರ್!
ನಿದ್ರಾಹೀನತೆ ಮತ್ತು ಮೆದುಳಿನ ಆರೋಗ್ಯದ ಮೇಲೆ ಅದರ ಪರಿಣಾಮಗಳ ಹೆಚ್ಚು ಸಮಗ್ರವಾದ ವಿವರ ಅರಿತುಕೊಳ್ಳಬೇಕು ಎಂದಾದರೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಬೇಕಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ