Health Care: ತೊಗರಿ ಬೇಳೆಯಲ್ಲಿ ಮಾತ್ರ ಅಲ್ಲ ಅದರ ಸಿಪ್ಪೆಯಲ್ಲೂ ಇದೆ ಕ್ಯಾಲ್ಸಿಯಂ

ಮನುಷ್ಯನ ಮೂಳೆಗಳು ಬಲವಾಗಿ ಇರಬೇಕಾದ್ರೆ ಆತ ನಿತ್ಯವೂ ಕ್ಯಾಲ್ಸಿಯಂ ಭರಿತ ಪದಾರ್ಥಗಳ ಸೇವನೆ ಮಾಡಬೇಕು. ಇದು ವ್ಯಕ್ತಿಯಲ್ಲಿ ಶಕ್ತಿ ನೀಡುತ್ತದೆ. ಮತ್ತು ಮೂಳೆಗಳ ಮುರಿತ ಮತ್ತು ವೀಕ್ ನೆಸ್ ನ್ನು ತೆಗೆದು ಹಾಕುತ್ತದೆ. ಕ್ಯಾಲ್ಸಿಯಂ ಈ ಖನಿಜವು ಹಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕ್ಯಾಲ್ಸಿಯಂ (Calcium) ಒಂದು ಖನಿಜ ಪದಾರ್ಥ (Ingredient) ಆಗಿದೆ. ಕ್ಯಾಲ್ಸಿಯಂ ಪ್ರಾಥಮಿಕವಾಗಿ ವ್ಯಕ್ತಿಯ ಆರೋಗ್ಯಕರ ಮೂಳೆಗಳು (Healthy Bones) ಮತ್ತು ಹಲ್ಲುಗಳ ಆರೋಗ್ಯ ಬಲಪಡಿಸಲು ಸಂಬಂಧ ಪಟ್ಟಿದೆ. ಆದಾಗ್ಯೂ ಇದು ರಕ್ತ (Blood) ಹೆಪ್ಪುಗಟ್ಟುವಿಕೆ, ಸ್ನಾಯುಗಳ ಸಂಕುಚಿತಗೊಳಿಸುವುದು ಮತ್ತು ಹೃದಯ ಬಡಿತ ಮತ್ತು ನರಗಳ ಕಾರ್ಯ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿದಿನ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಸೇವಿಸುವುದು ತುಂಬಾ ಅವಶ್ಯಕ. ಕ್ಯಾಲ್ಸಿಯಂ ಸೇವನೆ ವ್ಯಕ್ತಿಯ ಮೂಳೆಗಳನ್ನು ಬಲಪಡಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳು ಗಟ್ಟಿಯಾಗಿದ್ದಾಗ ಮಾತ್ರ ವ್ಯಕ್ತಿ ಎಲ್ಲಾ ರೀತಿಯ ದೈಹಿಕ ಚಟುವಟಿಕೆ ಮಾಡಲು ಸಮರ್ಥನಾಗಿರುತ್ತಾನೆ.

    ಹಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ

    ಇನ್ನು ಮನುಷ್ಯನ ಮೂಳೆಗಳು ಬಲವಾಗಿ ಇರಬೇಕಾದ್ರೆ ಆತ ನಿತ್ಯವೂ ಕ್ಯಾಲ್ಸಿಯಂ ಭರಿತ ಪದಾರ್ಥಗಳ ಸೇವನೆ ಮಾಡಬೇಕು. ಇದು ವ್ಯಕ್ತಿಯಲ್ಲಿ ಶಕ್ತಿ ನೀಡುತ್ತದೆ. ಮತ್ತು ಮೂಳೆಗಳ ಮುರಿತ ಮತ್ತು ವೀಕ್ ನೆಸ್ ನ್ನು ತೆಗೆದು ಹಾಕುತ್ತದೆ. ಕ್ಯಾಲ್ಸಿಯಂ ಈ ಖನಿಜವು ಹಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.

    ಹಾಗಾಗಿ ಪ್ರತಿ ಮನೆಯಲ್ಲಿ ಪೋಷಕರು ಮಗುವಿಗೆ ಹಾಲು ಕುಡಿಸುತ್ತಾರೆ. ಮಕ್ಕಳ ಆರೋಗ್ಯ ಮತ್ತು ಮೂಳೆಗಳ ಬಲವರ್ಧನೆಗೆ ತಾಯಂದಿರು ಒಂದು ಲೋಟ ಹಾಲು ಕುಡಿಸಿ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸ್ತಾರೆ.

    ಇದನ್ನೂ ಓದಿ: ಹೊಳೆಯುವ ಚರ್ಮ ಕಾಪಾಡಿಕೊಳ್ಳಬೇಕೇ? ಹಾಗಾದ್ರೆ ಕೊತ್ತಂಬರಿ ಮತ್ತು ನಿಂಬೆ ರಸ ಹೀಗೆ ಬಳಸಿ!

    ಬೇಳೆ ಕಾಳುಗಳ ಸಿಪ್ಪೆಯಲ್ಲೂ ಇದೆ ಹೆಚ್ಚು ಕ್ಯಾಲ್ಸಿಯಂ

    ಆರೋಗ್ಯಕರ ಮೂಳೆ ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಭರಿತ ಹಾಲು ಒಳ್ಳೆಯದು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದುವರೆಗೆ ಪಶು ಆಹಾರವಾಗಿ ಬಳಕೆ ಆಗುತ್ತಿರುವ ಬೇಳೆ ಕಾಳುಗಳ ಸಿಪ್ಪೆಯು ಹಾಲಿಗಿಂತ ಕ್ಯಾಲ್ಸಿಯಂಗೆ ಉತ್ತಮವಾಗಿದೆ ಎಂದು ತಿಳಿದು ಬಂದಿದೆ.

    ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ICRISAT) ತೊಗರಿ ಬೇಳೆ ಕಾಳುಗಳ ಸಿಪ್ಪೆಯು ಹಾಲಿಗಿಂತ ಆರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ ಎಂದು ಹೇಳಿದೆ. ಆಸ್ಟಿಯೊಪೊರೋಸಿಸ್ ಮತ್ತು ರಿಕೆಟ್‌ ಗಳ ಚಿಕಿತ್ಸೆಗಾಗಿ ಆಹಾರ ಮತ್ತು ಔಷಧ ತಯಾರಿಸುವ ಕಂಪನಿಗಳಿಗೆ ಇದು ಮೌಲ್ಯಯುತ ಆಗಿದೆ.

    ತೊಗರಿ ಬೇಳೆ ಸಿಪ್ಪೆಯು ಕ್ಯಾಲ್ಸಿಯಂ ಉಗ್ರಾಣ

    ತೊಗರಿ ಬೇಳೆ ಸಿಪ್ಪೆಯು ಕ್ಯಾಲ್ಸಿಯಂನ ಉಗ್ರಾಣ ಆಗಿದೆ. ಹಾಲಿನ ಕುರಿತ ICRISAT ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತೊಗರಿ ಬೇಳೆ ಸಿಪ್ಪೆಯಲ್ಲಿ ಇರುವ ಕ್ಯಾಲ್ಸಿಯಂ ಪ್ರಮಾಣವು ಹಾಲಿಗಿಂತ ಹೆಚ್ಚು. ಮಗುವಿನ ಆಹಾರ ಮತ್ತು ಖನಿಜಯುಕ್ತ ಪೂರಕಗಳಿಗೆ ಇದು ಮುಖ್ಯ ಎಂದು ಸಾಬೀತು ಪಡಿಸಬಹುದು. ಇಲ್ಲಿಯವರೆಗೆ ಈ ಬೀಜ ಸಿಪ್ಪೆಗಳನ್ನು ಕಸ ಅಥವಾ ಪಶು ಆಹಾರವಾಗಿ ವಿಲೇವಾರಿ ಮಾಡಲಾಗುತ್ತಿತ್ತು.

    ದಾಲ್ ಹಾಲಿಗಿಂತ ಆರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಹೊಂದಿದೆ ತೊಗರಿ ಬೇಳೆ ಸಿಪ್ಪೆ

    ICRISAT ನ GeneBank ನೇತೃತ್ವದ ಸಂಶೋಧನೆಯು ಕೇವಲ 100 ಗ್ರಾಂ ತೊಗರಿ ಬೇಳೆ ಕೋಟ್‌ನಲ್ಲಿ 652 mg ಕ್ಯಾಲ್ಸಿಯಂ ಅನ್ನು ಹೊಂದಿದೆ ಎಂದು ಹೇಳಿದೆ. ಆದರೆ 100 ಮಿಲಿ ಹಾಲು 120 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿದೆ.

    ದಿನಕ್ಕೆ ಕ್ಯಾಲ್ಸಿಯಂ ಸೇವನೆ ಪ್ರಮಾಣ ಹೇಗಿರಬೇಕು?

    ಮಾನವನ ದೇಹಕ್ಕೆ ದಿನಕ್ಕೆ 800 ರಿಂದ 1000 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ. ಇದು ಸಮಕಾಲೀನ ಭಾರತೀಯ ಆಹಾರಗಳು ಒದಗಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿವೆ.

    ಯಾವ ರೋಗಗಳು ಕ್ಯಾಲ್ಸಿಯಂ ಕೊರತೆಯಿಂದ ಬರುತ್ತವೆ?

    ಮರೆವು, ಸ್ನಾಯು ಸೆಳೆತ, ಖಿನ್ನತೆ, ಕೈಗಳು, ಕಾಲುಗಳು ಮತ್ತು ಮುಖದಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ, ಭ್ರಮೆ, ದೌರ್ಬಲ್ಯ, ಸುಲಭವಾಗಿ ಉಗುರುಗಳ ಮುರಿತ, ಮೂಳೆ ಮುರಿತ

    ಇದನ್ನೂ ಓದಿ: ಋತುಚಕ್ರ ನಿಲ್ಲುವ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆ ಹೀಗಿದ್ದರೆ ಚೆಂದ

    ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ತಿಳಿಯುವುದು ಹೇಗೆ?

    ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ದೌರ್ಬಲ್ಯ, ಆಯಾಸ, ಸ್ನಾಯು ಸೆಳೆತ, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ, ವಿಶೇಷವಾಗಿ ಬೆರಳುಗಳು ಮತ್ತು ದವಡೆಯಲ್ಲಿ, ಮೂರ್ಛೆ, ನುಂಗಲು ತೊಂದರೆ ಮುಂತಾದ ರೋಗ ಲಕ್ಷಣ ಉಂಟು ಮಾಡುತ್ತವೆ. ಅಂತಹ ಚಿಹ್ನೆಗಳನ್ನು ಅನುಭವಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
    Published by:renukadariyannavar
    First published: