Lemon And Health: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಂಬೆ ಎಲೆಗಳ ಸೇವನೆ ಮಾಡುವುದು ಮತ್ತು ಅದರ ರಸದ ವಾಸನೆ ತೆಗೆದುಕೊಳ್ಳು ವುದು ಹಲವು ಪ್ರಯೋಜನಗಳು ಇವೆ ಎಂದು ಹೇಳಲಾಗುತ್ತದೆ. ನಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆದರೆ ಇದನ್ನು ಅಗಿದು ತಿನ್ನುವುದನ್ನು ತಪ್ಪಿಸಬೇಕು. ನೀವು ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು.

ಮುಂದೆ ಓದಿ ...
  • Share this:

ದೇಹಕ್ಕೆ (Body) ಎಲ್ಲಾ ರೀತಿಯ ಪದಾರ್ಥಗಳ (Ingredients) ಸೇವನೆ ಮುಖ್ಯ. ಅದರಲ್ಲೂ ರೋಗ ನಿರೋಧಕ ಶಕ್ತಿ ಪಡೆಯಲು ಮುಖ್ಯವಾಗಿ ನಿಂಬೆ (Lemon) ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಹಲವು ಆರೋಗ್ಯ ಪ್ರಯೋಜನಗಳು (Health Benefits) ಹಾಗೂ ಪೂಜಾ ವಿಧಿ ವಿಧಾನಗಳಲ್ಲೂ ನಿಂಬೆ ಬಳಕೆ ಮಾಡುತ್ತಾರೆ. ನಿಂಬೆ ಹಣ್ಣು ಮಾತ್ರವಲ್ಲದೇ ಇದರ ಎಲೆಗಳು (Leaves) ಸಹ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ನಿಂಬೆ ಎಲೆಗಳನ್ನು ಬಳಕೆ ಮಾಡುವುದು ರುಢಿಯಲ್ಲಿದೆ. ಆದರೆ ಅನೇಕ ಜನರು ನಿಂಬೆ ಎಲೆಗಳು ಕಹಿ. ಮತ್ತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸುತ್ತಾರೆ.


ನಿಂಬೆ ಎಲೆಗಳ ಸೇವನೆ


ನಿಂಬೆ ಎಲೆಗಳ ಸೇವನೆ ಮಾಡುವುದು ಮತ್ತು ಅದರ ರಸದ ವಾಸನೆ ತೆಗೆದುಕೊಳ್ಳು ವುದು ಹಲವು ಪ್ರಯೋಜನಗಳು ಇವೆ ಎಂದು ಹೇಳಲಾಗುತ್ತದೆ. ನಿಂಬೆ ಎಲೆಗಳನ್ನು ಸೇವನೆ ಮಾಡುವುದು ಹೇಗೆ? ನಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.


ಆದರೆ ಇದನ್ನು ಅಗಿದು ತಿನ್ನುವುದನ್ನು ತಪ್ಪಿಸಬೇಕು. ನೀವು ಇದನ್ನು ಜ್ಯೂಸ್ ರೂಪದಲ್ಲಿ ಸೇವನೆ ಮಾಡಬಹುದು. ಚಹಾದಲ್ಲಿ ಹಾಕಿ ಮಿಶ್ರಣ ಮಾಡಿ ಸೇವನೆ ಮಾಡಬಹುದು.


ಇದನ್ನೂ ಓದಿ: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ


ನಿಂಬೆ ಎಲೆಗಳ ಔಷಧೀಯ ಗುಣಗಳು ಯಾವವು?


ಇದು ಆಂಟಿವೈರಲ್, ಆಂಟಿ-ಆಕ್ಸಿಡೆಂಟ್, ಆಲ್ಕಲಾಯ್ಡ್‌, ಟ್ಯಾನಿನ್‌, ಫ್ಲೇವನಾಯ್ಡ್‌ ಮತ್ತು ಫೀನಾಲಿಕ್ ಅಂಶಗಳನ್ನು ಹೊಂದಿದೆ. ಇದರ ಜೊತೆ ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಕೊಬ್ಬಿನಂತಹ ಪೋಷಕಾಂಶಗಳು ಸಹ ಇದರಲ್ಲಿ ಇವೆ.


ಅಲ್ಲದೆ ಇದು ಆಂಥೆಲ್ಮಿಂಟಿಕ್, ಆಂಟಿ-ಫ್ಲಾಟ್ಯುಲೆಂಟ್, ಆಂಟಿಮೈಕ್ರೊಬಿಯಲ್, ಕ್ಯಾನ್ಸರ್ ವಿರೋಧಿ, ಉರಿಯೂತ ಪರಿಣಾಮ ಸಹ ಹೊಂದಿದೆ.


ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಬಿಡಲ್ಲ


ಎನ್‌ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಂಬೆ ಎಲೆಗಳಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ಮತ್ತು ಬೆಳವಣಿಗೆ ತಡೆಯುತ್ತದೆ. ಹೀಗೆ ಪದೇ ಪದೇ ಕಿಡ್ನಿಯಲ್ಲಿ ಕಲ್ಲುಗಳು ಬಂದರೆ ಇದು ನಿಮಗೆ ದಿವ್ಯೌಷಧ ಆಗಿದೆ.


ಮೈಗ್ರೇನ್ ನೋವಿನಿಂದ ಪರಿಹಾರ ನೀಡುತ್ತದೆ


ಅಧ್ಯಯನದ ಪ್ರಕಾರ, ಮೈಗ್ರೇನ್ ನಿಂದ ಬಳಲುತ್ತಿರುವವರಿಗೆ ನಿಂಬೆ ಎಲೆಗಳು ಪ್ರಯೋಜನಕಾರಿ. ವಾಸ್ತವದಲ್ಲಿ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ನಿಂಬೆ ಎಲೆಗಳಲ್ಲಿ ಕಂಡು ಬರುತ್ತವೆ. ದೇಹದ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ಮೂಲಕ ಮೈಗ್ರೇನ್ ಸಮಸ್ಯೆ ನಿವಾರಿಸುತ್ತವೆ.


ಇದಕ್ಕೆ ಪೂರಕವಾಗಿ ಸುಧಾರಿಸಲು ಆಂಟಿ-ಆಕ್ಸಿಡೆಂಟ್ ಪರಿಣಾಮವು ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ. ಮೈಗ್ರೇನ್ ಮತ್ತು ಮಾನಸಿಕ ಕಾಯಿಲೆಗಳಿಂದ ಪರಿಹಾರ ಪಡೆಯಲು ನಿಂಬೆ ಎಲೆಗಳ ವಾಸನೆ ತೆಗೆದುಕೊಳ್ಳುವುದು ಸಹಕಾರಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.


ನಿದ್ರೆಯ ಸಮಸ್ಯೆ ಪರಿಹರಿಸುತ್ತದೆ


ಸಂಶೋಧನೆ ಹೇಳುವ ಪ್ರಕಾರ, ನೀವು ರಾತ್ರಿ ನಿದ್ರೆ ಸಮಸ್ಯೆ ಹೊಂದಿದ್ದರೆ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆ ಎಲೆಗಳು ನಿಮಗೆ ಔಷಧಿಯಾಗಿ ಕೆಲಸ ಮಾಡುತ್ತದೆ.


ಇದರಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಆಲ್ಕಲಾಯ್ಡ್‌ಗಳು ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸಲು ಕೆಲಸ ಮಾಡುತ್ತವೆ. ಅಂತಹ ವೇಳೆ ನಿಂಬೆ ಎಲೆಗಳಿಂದ ತಯಾರಿಸಿದ ಎಣ್ಣೆಯು ನಿಮಗೆ ಪ್ರಯೋಜನಕಾರಿ ಎಂದು ಹೇಳಲಾಗಿದೆ.


ತೂಕ ಇಳಿಕೆಗೆ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ


ತೂಕ ಹೆಚ್ಚಾಗುವುದು ನಿಮಗೆ ತೊಂದರೆ ಉಂಟು ಮಾಡುತ್ತದೆ. ಹಲವು ಗಂಭೀರ ಕಾಯಿಲೆಗಳಿಗೆ ನೂಕುತ್ತದೆ. ನಿಂಬೆ ಎಲೆಗಳು ನಿಮ್ಮ ಸಮಸ್ಯೆ ಕೊನೆಗೊಳಿಸಲು ಸಹಕಾರಿ. ನಿಂಬೆ ಎಲೆಗಳಿಂದ ತಯಾರಿಸಿದ ರಸವು ಪೆಕ್ಟಿನ್ ಎಂಬ ಕರಗಬಲ್ಲ ಫೈಬರ್ ಅನ್ನು ಹೊಂದಿದೆ. ಇದು ತೂಕ ನಷ್ಟದಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ. ನಿಂಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಸೇವಿಸಿ.


ಇದನ್ನೂ ಓದಿ: ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದ್ರೆ ಸಾಕು ಲಿವರ್ ಆರೋಗ್ಯ ಚೆನ್ನಾಗಿರುತ್ತೆ


ಕರುಳಿನ ಹುಳುಗಳನ್ನು ಸಾಯಿಸುತ್ತದೆ

top videos


    ವೈದ್ಯಕೀಯ ಸಂಶೋಧನೆ ಪ್ರಕಾರ, ನಿಂಬೆ ಎಲೆಗಳು ಜಂತುಹುಳು ನಿವಾರಕ ಗುಣ ಹೊಂದಿವೆ. ಹೊಟ್ಟೆಯ ಹುಳುಗಳನ್ನು ತೊಡೆದು ಹಾಕಲು ಕೆಲಸ ಮಾಡುತ್ತದೆ. ಹೊಟ್ಟೆಯ ಹುಳುಗಳನ್ನು ತೊಡೆದು ಹಾಕಲು ನಿಂಬೆ ಎಲೆಗಳನ್ನು ಬಳಸಬಹುದು. ನಿಂಬೆ ರಸವನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವಿಸಬಹುದು.

    First published: