• Home
  • »
  • News
  • »
  • lifestyle
  • »
  • Hair Care: ಆರೋಗ್ಯಕ್ಕಷ್ಟೇ ಅಲ್ಲ ಚರ್ಮ ಮತ್ತು ಕೂದಲಿನ ಆರೈಕೆಗೆ ತುಳಸಿ ಬಳಸಿ

Hair Care: ಆರೋಗ್ಯಕ್ಕಷ್ಟೇ ಅಲ್ಲ ಚರ್ಮ ಮತ್ತು ಕೂದಲಿನ ಆರೈಕೆಗೆ ತುಳಸಿ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಹಾದಲ್ಲಿ ತುಳಸಿ ಬಳಕೆ ನಿಮಗೆ ಇಷ್ಟನಾ. ತುಳಸಿ ನಿಜವಾಗಿಯೂ ರುಚಿ ಮತ್ತು ಪರಿಮಳ ನೀಡುತ್ತದೆ. ಕಷಾಯ ರೂಪದಲ್ಲಿ ಸೇವಿಸಿದರೆ ಅನೇಕ ಪ್ರಯೋಜನ ನೀಡುತ್ತದೆ. ಒಟ್ಟಾರೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ತುಳಸಿ ಕೂದಲು ಮತ್ತು ತ್ವಚೆಯ ಆರೈಕೆಗೂ ಸಹಕಾರಿ. ಚರ್ಮದ ಆರೋಗ್ಯ ಕಾಪಾಡಲು ಅದ್ಭುತ ಲಾಭ ನೀಡುತ್ತದೆ.

ಮುಂದೆ ಓದಿ ...
  • Share this:

    ನೀವು ಮನೆ (Home) ಮುಂದೆ ತುಳಸಿ (Tulsi) ನೆಟ್ಟಿರಬಹುದು. ಹಿಂದೂಗಳು ತುಳಸಿಯನ್ನು ಪೂಜಿಸುತ್ತಾರೆ. ಜೊತೆಗೆ ದೇವಸ್ಥಾನ ಮತ್ತು ದೇವರಿಗೆ ತುಳಸಿ ಅರ್ಪಿಸುವುದು ನಂಬಿಕೆ ಮತ್ತು ರೂಢಿಯಲ್ಲಿದೆ. ತುಳಸಿಯನ್ನು ಚಹಾ (Tulsi Tea), ಕಷಾಯ ಮತ್ತು ಆರೋಗ್ಯ ತೊಂದರೆ (Health Problem) ನಿವಾರಣೆಗೂ ಬಳಕೆ ಮಾಡ್ತಾರೆ. ಚಳಿಗಾಲದಲ್ಲಿ ಉಂಟಾಗುವ ಗಂಟಲು ನೋವು, ಶೀತ ಮತ್ತು ಕೆಮ್ಮು ನಿವಾರಣೆಗೆ ತುಳಸಿ ದಳ ಸೇವನೆ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ನಂತರದ ದಿನಗಳಲ್ಲಿ ತುಳಸಿ ಪ್ರಭಾವ ಮತ್ತು ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಿದೆ. ತುಂಬಾ ಜನರು ಬೆಳಗ್ಗೆ ತುಳಸಿ ಸೇವನೆ ಮಾಡ್ತಾರೆ. ಇಲ್ಲವೇ ಕಷಾಯದ ರೂಪದಲ್ಲಿ ಸೇವನೆ ಮಾಡ್ತಾರೆ.  


    ಕೂದಲು ಮತ್ತು ತ್ವಚೆಯ ಆರೈಕೆಗೆ ತುಳಸಿ ಬಳಕೆ


    ಚಹಾದಲ್ಲಿ ತುಳಸಿ ಬಳಕೆ ನಿಮಗೆ ಇಷ್ಟನಾ? ತುಳಸಿ ನಿಜವಾಗಿಯೂ ರುಚಿ ಮತ್ತು ಪರಿಮಳ ನೀಡುತ್ತದೆ. ಕಷಾಯ ರೂಪದಲ್ಲಿ ಸೇವಿಸಿದರೆ ಅನೇಕ ಪ್ರಯೋಜನ ನೀಡುತ್ತದೆ. ಶೀತ, ಕೆಮ್ಮು, ನೆಗಡಿಯಿಂದ ಹಿಡಿದು ನಿಮ್ಮ ಒಟ್ಟಾರೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹಾಗೆಯೇ ತುಳಸಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಕೂದಲು ಮತ್ತು ತ್ವಚೆಯ ಆರೈಕೆಗೂ ಸಹಕಾರಿ.


    ತುಳಸಿ ನಿಮ್ಮ ಚರ್ಮದ ಆರೋಗ್ಯ ಕಾಪಾಡಲು ಅದ್ಭುತ ಲಾಭ ನೀಡುತ್ತದೆ. ಹಾಗೆಯೇ ಇದು ನಿಮ್ಮ ಕೂದಲಿಗೆ ಹೊಸ ಹೊಳಪನ್ನು ನೀಡುತ್ತದೆ. ತುಳಸಿಯನ್ನು ನಿಮ್ಮ ಸೌಂದರ್ಯ ಪದ್ಧತಿ ಮತ್ತು ದಿನಚರಿಯಲ್ಲಿ ಬಳಕೆ ಮಾಡಬಹುದು. ತುಳಸಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಇದು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಹಾಗೂ ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ತುಳಸಿ ನಿಮ್ಮ ಚರ್ಮ ಮತ್ತು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.


    ತುಳಸಿ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?


    ತುಳಸಿ ಬಳಕೆ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನ ಮಾಡುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ತುಳಸಿ ವಯಸ್ಸಾದ ವಿರೋಧಿ ಗುಣ ಹೊಂದಿದೆ. ಈ ಪದಾರ್ಥಗಳು ಚರ್ಮವನ್ನು ವಯಸ್ಸಾಗದಂತೆ ರಕ್ಷಿಸುತ್ತದೆ. ಮತ್ತು ಚರ್ಮದ ಗೆರೆ ದೂರ ಮಾಡುತ್ತದೆ.


    ಮೊಡವೆ ತೆಗೆದು ಹಾಕುತ್ತದೆ


    ಮುಖದ ಕಲೆ ಮತ್ತು ಮೊಡವೆ ತೆಗೆದು ಹಾಕಲು ತುಳಸಿಯನ್ನು ಮುಖಕ್ಕೆ ಬಳಕೆ ಮಾಡಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಪೋಷಕಾಂಶ ಹೊಂದಿದ್ದು, ಮುಖದ ಅನಗತ್ಯ ಮೊಡವೆ ತೆಗೆದು ಹಾಕುತ್ತದೆ.


    ಚರ್ಮದ ಆರೈಕೆಗೆ ತುಳಸಿ ಬಳಸುವ ವಿಧಾನ


    ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ. ನಂತರ, ಅರ್ಧ ಟೀಚಮಚ ಮೊಸರು ಹಾಕಿ ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ. ಅದು ಒಣಗುವವರೆಗೆ ಬಿಡಿ. ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಮುಖದಲ್ಲಿ ತ್ವರಿತ ಹೊಳಪು ನೀಡುತ್ತದೆ.


    ತುಳಸಿ ನಿಮ್ಮ ಕೂದಲಿಗೆ ಹೇಗೆ ಪ್ರಯೋಜನಕಾರಿ?


    ತುಳಸಿ ತಲೆ ಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ತುಳಸಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ತಲೆ ಹೊಟ್ಟು ಸಮಸ್ಯೆಯಿಂದ ಕೂದಲನ್ನು ರಕ್ಷಿಸುತ್ತದೆ. ಕೂದಲಿನಿಂದ ತಲೆ ಹೊಟ್ಟು ತೆಗೆದು ಹಾಕಲು ತುಳಸಿಯನ್ನು ಕೂದಲಿಗೆ ಅನ್ವಯಿಸಿ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಡ್ಯಾಂಡ್ರಫ್ ಗುಣಲಕ್ಷಣ ಹೊಂದಿದೆ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ಕೂದಲು ಉದುರುವಿಕೆ ಮತ್ತು ಬಿಳಿಯಾಗುವಿಕೆ ತಡೆಯುತ್ತದೆ


    ತುಳಸಿ ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆ ತಡೆಯುತ್ತದೆ. ವಯಸ್ಸಾದ ವಿರೋಧಿ ಕೂದಲಿನ ಆರೋಗ್ಯ ಕಾಪಾಡುತ್ತದೆ. ತುರಿಕೆ ನಿವಾರಿಸುತ್ತದೆ. ಕೂದಲಿಗೆ ತುಳಸಿ ಸಾರ ಅಥವಾ ತುಳಸಿ ಎಣ್ಣೆ ಜೊತೆ ಬೆಚ್ಚಗಿನ ತೆಂಗಿನ ಎಣ್ಣೆ ಸೇರಿಸಿ, ಕೂದಲಿಗೆ ಮಸಾಜ್ ಮಾಡಿ. ಬೆಳಿಗ್ಗೆ ಅದನ್ನು ತೊಳೆಯಿರಿ.

    Published by:renukadariyannavar
    First published: