ಪ್ರತಿಯೊಬ್ಬರ ಮನೆಯಲ್ಲೂ (Home) ತರಕಾರಿ (Vegetables) ಇರುತ್ತೆ. ಅದರಲ್ಲಿ ಅಗ್ರಸ್ಥಾನ ಟೊಮ್ಯಾಟೋಗೆ (Tomato) ಇದೆ. ಪಲ್ಯ, ಸಾಂಬಾರ್, ಪುಲಾವ್ ಸೇರಿದಂತೆ ಹಲವು ಖಾದ್ಯಗಳ (Recipe) ರುಚಿ (Taste) ಹೆಚ್ಚಿಸುತ್ತದೆ ಕೆಂಪು ಟೊಮ್ಯಾಟೋ. ಪ್ರತಿ ಮನೆಯಲ್ಲೂ ಟೊಮ್ಯಾಟೋ ಸುಲಭವಾಗಿ ಕಂಡು ಬರುತ್ತದೆ. ಕೆಲವೊಮ್ಮೆ ತರಕಾರಿ ಬೆಲೆ ಗಗನಕ್ಕೇರಿ, ಟೊಮ್ಯಾಟೋ ಬೆಲೆ ಕೆಜಿಗೆ 150 ರೂ. ಗಡಿ ದಾಟಿದ ಉದಾಹರಣೆಯಿದೆ. ಕೆಲವರಂತೂ ಟೊಮ್ಯಾಟೋ ಇಲ್ಲದೇ ಅಡುಗೆ ಮಾಡೋದೇ ಇಲ್ಲ. ಟೊಮ್ಯಾಟೋವನ್ನು ಸಲಾಡ್, ಚಟ್ನಿ, ಜ್ಯೂಸ್ ಮತ್ತು ತ್ವಚೆಯ ಆರೈಕೆಗೂ ಬಳಕೆ ಮಾಡಲಾಗುತ್ತದೆ. ಕೆಲವರು ಟೊಮ್ಯಾಟೋದಿಂದ ಫೇಸ್ ಪ್ಯಾಕ್ ಮಾಡಿ, ಬಳಕೆ ಮಾಡ್ತಾರೆ.
ಒಣಗಿದ ಟೊಮ್ಯಾಟೋ ಸೇವನೆಯಿಂದ ಆರೋಗ್ಯ ಲಾಭ
ಮಾರುಕಟ್ಟೆಯಲ್ಲಿ ಕೆಂಪು ತಾಜಾ ಟೊಮ್ಯಾಟೋ ಖರೀದಿ ಮಾಡಲಾಗುತ್ತದೆ. ಅದರಂತೆ ಒಣಗಿದ ಟೊಮ್ಯಾಟೋ ತಿಂದರೆ ಹಲವು ಮಾರಕ ರೋಗಗಳನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ತಾಜಾ ಟೊಮ್ಯಾಟೋಗಳನ್ನು ಬಿಸಿಲಿನಲ್ಲಿ ಮಾತ್ರ ಒಣಗಿಸಿ, ಸೇವಿಸಬೇಕು ಅಂತಾರೆ ತಜ್ಞರು. ಒಣಗಿದ ಟೊಮ್ಯಾಟೋ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದ್ದು, ಇದನ್ನು ತರಕಾರಿ, ಪಿಜ್ಜಾ, ಸ್ಯಾಂಡ್ವಿಚ್ ಇತ್ಯಾದಿಗಳಲ್ಲಿ ಬಳಕೆ ಮಾಡ್ಬಹುದು.
ಪೋಷಕಾಂಶದಿಂದ ಸಮೃದ್ಧವಾಗಿವೆ ಒಣಗಿದ ಟೊಮ್ಯಾಟೋ
ವರದಿಯೊಂದರ ಪ್ರಕಾರ, ಒಣಗಿದ ಟೊಮ್ಯಾಟೋದಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಹಲವು ಲಾಭ ಇದೆ. ವಿಟಮಿನ್ ಸಿ, ವಿಟಮಿನ್ ಕೆ, ನಿಯಾಸಿನ್, ಮ್ಯಾಂಗನೀಸ್, ಪೊಟ್ಯಾಸಿಯಮ್, ತಾಮ್ರ, ಪ್ರೋಟೀನ್, ಫೈಬರ್ ಹೊಂದಿದೆ.
ಒಣಗಿದ ಟೊಮ್ಯಾಟೋ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ ಒಣಗಿದ ಟೊಮ್ಯಾಟೋ. ಶೀತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ ತಡೆಯಲು ವಿಟಮಿನ್ ಸಿ ಸಹಕಾರಿ. ಒಣಗಿದ ಟೊಮ್ಯಾಟೋ ನ್ಯೂಮೋನಿಯಾ ಮತ್ತು ಶ್ವಾಸಕೋಶ ಸೋಂಕು ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಒಣಗಿದ ಟೊಮ್ಯಾಟೋ ರಕ್ತದೊತ್ತಡ ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಒಣಗಿದ ಟೊಮ್ಯಾಟೋಗಳು ಅಧಿಕ ರಕ್ತದೊತ್ತಡ ತಡೆಯುತ್ತವೆ. ಒಣಗಿದ ಟೊಮ್ಯಾಟೋ ಸೇವನೆಯಿಂದ ದೇಹವು ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಕಡಿಮೆ ಸೋಡಿಯಂ ಪಡೆಯುತ್ತದೆ. ಅಧಿಕ ರಕ್ತದೊತ್ತಡ ಮಟ್ಟ ಸಾಮಾನ್ಯಗೊಳಿಸುತ್ತದೆ.
ಹೃದಯದ ಆರೋಗ್ಯಕ್ಕೆ ಸಹಕಾರಿ
ಬಿಸಿಲಿನಲ್ಲಿ ಒಣಗಿದ ಒಂದು ಟೊಮ್ಯಾಟೋ ಸೇವನೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಒದಗಿಸಿ, ಹೃದಯದ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಕ್ಯಾಲ್ಸಿಯಂ ಮೂಳೆ ಆರೋಗ್ಯ ಕಾಪಾಡುತ್ತದೆ. ಹೃದಯ ಸ್ನಾಯುವನ್ನು ಬಲಪಡಿಸುತ್ತದೆ.
ಮೆಗ್ನೀಸಿಯಮ್ ಹೃದಯ ಸ್ನಾಯುವನ್ನು ವಿಶ್ರಾಂತಿ ಮಾಡಲು ಸಹಕಾರಿ ಆಗಿದೆ. ಸಾಮಾನ್ಯ ಹೃದಯ ಬಡಿತವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಆಹಾರದಲ್ಲಿ ಒಣಗಿದ ಟೊಮ್ಯಾಟೋ ಸೇರಿಸಿ.
ಇದನ್ನೂ ಓದಿ:
ಜೀರ್ಣಕ್ರಿಯೆ ಬಲಪಡಿಸುತ್ತದೆ
100 ಗ್ರಾಂ ಒಣಗಿದ ಟೊಮ್ಯಾಟೋ ಕರಗುವ ಮತ್ತು ಕರಗದ ಫೈಬರ್ ನ್ನು ಹೊಂದಿದೆ. ಆಹಾರದ ಫೈಬರ್ ಸೇವನೆಯ 40 ಪ್ರತಿಶತಕ್ಕಿಂತ ಹೆಚ್ಚು ಹೊಂದಿರುತ್ತದೆ. ಒಣಗಿದ ಟೊಮ್ಯಾಟೋ ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ನಿವಾರಿಸಲು ಸಹಕಾರಿ ಆಗಿದೆ.
ಇದನ್ನೂ ಓದಿ: ಬಾಳೆ ಹೂವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ, ಈ ರೀತಿಯಾಗಿ ಬಳಸಿ
ಒಣಗಿದ ಟೊಮ್ಯಾಟೋ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ
ಬಿಸಿಲಿನಲ್ಲಿ ಒಣಗಿಸಿದ ಟೊಮೆಟೊಗಳು ಲೈಕೋಪೀನ್ ಉತ್ತಮ ಮೂಲ. ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಸೇರಿದಂತೆ ಹಲವು ಆರೋಗ್ಯ ಅಸ್ವಸ್ಥತೆ ಸಮಸ್ಯೆ ಮತ್ತು ಅಪಾಯ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ