Belly Fat: ಹೊಟ್ಟೆ ಬೊಜ್ಜು ಕರಗಿಸಲು ನೀವು ಕುಡಿಯುವ ಪಾನೀಯ ಸಹ ಮುಖ್ಯವಂತೆ

ಆಹಾರ ಕ್ರಮ, ವ್ಯಾಯಾಮ, ಕ್ಯಾಲೊರಿ ಕಡಿತ ವಿಧಾನಗಳು ನಿಮ್ಮ ಕೋರ್ ಅನ್ನು ಟೋನ್ ಮಾಡಿ, ನಿಮ್ಮ ಹೊಟ್ಟೆಯ ಭಾಗದ ಸುತ್ತಲೂ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇವಷ್ಟೇ ಅಲ್ಲದೇ ಕೆಲವು ಪಾನೀಯಗಳು ಕೂಡ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಹೊಟ್ಟೆಯ ಬೊಜ್ಜು (Belly Fat) ಕರಗಿಸಲು ಲೆಕ್ಕವಿಲ್ಲದಷ್ಟು ಜನ ಹೆಣಗಾಡುತ್ತಿದ್ದಾರೆ ಎನ್ನಬಹುದು. ಹೆಚ್ಚುವರಿ ಬೊಜ್ಜನ್ನು ಕರಗಿಸಿ ಚಪ್ಪಟೆಯಾದ ಹೊಟ್ಟೆ ಪಡೆದು ಸಕತ್ ಫಿಟ್ (Fit) ಆಗಿರಲು ಬೊಜ್ಜು ಹೊಂದಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಆಶಿಸುತ್ತಾರೆ. ಹಾಗಂತ ಇದು ಅಸಾಧ್ಯ ಅಂತೇನಿಲ್ಲ, ಸರಿಯಾದ ಆಹಾರ ಕ್ರಮ, ವ್ಯಾಯಾಮ, ಕ್ಯಾಲೊರಿ ಕಡಿತ, ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಬೊಜ್ಜಿಲ್ಲದ ಹೊಟ್ಟೆಯನ್ನು ಪಡೆಯಬಹುದು.  ಕ್ಯಾಲೋರಿ ಭರಿತ ಆಹಾರ (Calorie rich food), ಮಸಾಲೆಯುಳ್ಳ ರುಚಿಕರ ಆಹಾರ, ಎಣ್ಣೆಯಲ್ಲಿ ಕರಿದ ಆಹಾರ, ಸಕ್ಕರೆ ಪಾನೀಯ ಇವುಗಳ ಹೆಚ್ಚಿನ ಸೇವನೆಯಿಂದಾಗಿ ಹೊಟ್ಟೆ ಬೊಜ್ಜು ಬರುತ್ತದೆ. ಈ ರೀತಿಯ ಆಹಾರ ಕ್ರಮ (diet) ಅನುಸರಿಸುವವರಲ್ಲಿ ಒಬೆಸಿಟಿ ಎನ್ನುವುದು ಹೆಚ್ಚಾಗಿ ಕಂಡು ಬರುತ್ತದೆ.


ಈ ಮೇಲೆ ಹೇಳಿದಂತೆ ಆಹಾರ ಕ್ರಮ, ವ್ಯಾಯಾಮ, ಕ್ಯಾಲೊರಿ ಕಡಿತ ವಿಧಾನಗಳು ನಿಮ್ಮ ಕೋರ್ ಅನ್ನು ಟೋನ್ ಮಾಡಿ, ನಿಮ್ಮ ಹೊಟ್ಟೆಯ ಭಾಗದ ಸುತ್ತಲೂ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇವಷ್ಟೇ ಅಲ್ಲದೇ ಕೆಲವು ಪಾನೀಯಗಳು ಕೂಡ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ.


ಈ ಪಾನೀಯಗಳಿಂದ ದೂರವಿರಿ


ಡಯಟ್ ವಿಚಾರದಲ್ಲಿ ನೀವು ಏನು ತಿನ್ನುತ್ತಿದ್ದೀರಿ ಎಂಬುವುದರ ಬಗ್ಗೆ ಗಮನ ಕೊಡುವುದರ ಜೊತೆಗೆ ಏನು ಕುಡಿಯುತ್ತಿದ್ದೀರಾ ಎಂಬುದರ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಕೆಲವು ಪಾನೀಯಗಳು ಹೆಚ್ಚಿನ ಬೊಜ್ಜಿಗೆ ಕೊಡುಗೆ ನೀಡಿದರೆ, ಇನ್ನೂ ಕೆಲ ಪವರ್ ಫುಲ್ ಪಾನೀಯಗಳು ಹೊಟ್ಟೆ ಸೇರಿ ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ. ಸಕ್ಕರೆ ಪಾನೀಯಗಳು ಮತ್ತು ಆಲ್ಕೋಹಾಲ್ ಹೊಟ್ಟೆ ಬೊಜ್ಜಿಗೆ ಕಾರಣವಾಗುವ ಮುಖ್ಯವಾದ ಪಾನೀಯಗಳು. ಇವುಗಳು ಕ್ಯಾಲೊರಿಗಳಲ್ಲಿ ಭಾರೀ ಪ್ರಮಾಣದಲ್ಲಿರುವುದರಿಂದ, ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುತ್ತದೆ.


ಇದನ್ನೂ ಓದಿ: Weight Loss Tips: ಈರುಳ್ಳಿ ತಿಂದ್ರೆ ನಿಮ್ಮ ಕೊಬ್ಬು ಬೇಗ ಕರಗುತ್ತಂತೆ, ಹೇಗೆ? ಇಲ್ಲಿದೆ ನೋಡಿ

ಗ್ರೀನ್ ಟೀ, ನೀರು, ಬ್ಲ್ಯಾಕ್ ಟೀಗೆ ಬದಲಾಗಿ
ನೀವು ನಿಮ್ಮ ಹೊಟ್ಟೆಯನ್ನು ಟೋನ್ ಮಾಡಲು ಬಯಸಿದರೆ, ಈ ರೀತಿಯ ಪಾನೀಯಗಳನ್ನು ಮಿತಿಗೊಳಿಸಬೇಕು. ಅದರ ಬದಲಿಗೆ ಹಸಿರು ಅಥವಾ ಕಪ್ಪು ಚಹಾ, ಕಪ್ಪು ಕಾಫಿ ಮತ್ತು ನೀರಿನಂತಹ ಹೆಚ್ಚಿನ ಶೂನ್ಯ ಕ್ಯಾಲೋರಿ ಆಯ್ಕೆಗಳನ್ನು ಅಳವಡಿಸಿಕೊಳ್ಳಬೇಕು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಹೇಳುವ ಪ್ರಕಾರ, ಹೆಚ್ಚು ನೀರು ಸೇವನೆ ಚಪ್ಪಟೆ ಹೊಟ್ಟೆಗೆ ಕಾರಣವಾಗುತ್ತದೆ ಎಂದು ತಿಳಿಸಿದೆ. ಹೆಚ್ಚಿನ ನೀರು ಸೇವನೆ ಕೊಬ್ಬು ಕರಗಿಸುವುದು ಮಾತ್ರವಲ್ಲದೇ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ, ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.


ತಜ್ಞರು ಹೇಳುವ ಪ್ರಕಾರ ನಿಮ್ಮ ನಿತ್ಯ ಸೇವನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕಂತಿಲ್ಲ. ಬದಲಿಗೆ, ದಿನವಿಡೀ ನೀವು ಏನನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಸರಳವಾಗಿ ಟ್ರ್ಯಾಕ್ ಮಾಡುವ ಮೂಲಕ ಚಪ್ಪಟೆ ಹೊಟ್ಟೆಗಾಗಿ ಆರೋಗ್ಯಕರ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು .


ಕುಡಿಯುವ ಪಾನೀಯದ ಮೇಲೂ ಗಮನವಿರಲಿ
ಕ್ಯಾಲೋರಿಗಳ ಮಿತಿಮೀರಿದ ಸೇವನೆಯು ದೇಹದ ತೂಕದ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ. ಆದ್ದರಿಂದ ನಾವು ಕುಡಿಯುವ ಪಾನೀಯದ ಮೇಲೂ ನಮ್ಮ ಗಮನವಿರಬೇಕು.
ಯಾವುದೇ ಆಹಾರದಂತೆಯೇ, ನೀವು ಏನು ಕುಡಿಯುತ್ತೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಕ್ಯಾಲೊರಿಗಳ ಪ್ರಮಾಣವನ್ನು ಮಿತಿಗೊಳಿಸುವುದು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ:  Weight Loss: ತೂಕ ಕಡಿಮೆ ಮಾಡೋಕೆ ಈ ಆಹಾರ ಖಂಡಿತಾ ಕೆಲಸ ಮಾಡುತ್ತಂತೆ ನೋಡಿ, ವೈದ್ಯರೇ ಹೇಳಿದ್ದು

ಮೇಲೆ ಹೇಳಿದಂತೆ ಸಕ್ಕರೆ ತುಂಬಿದ ಪಾನೀಯ, ಆಲ್ಕೋಹಾಲ್ ಇವುಗಳ ಅಭ್ಯಾಸ ಮಿತಿಗೊಳಿಸಿ ಗ್ರೀನ್ ಟೀ, ಕಪ್ಪು ಚಹಾ, ಪ್ರೋಟೀನ್ ಭರಿತ ಪಾನೀಯ, ಹೆಚ್ಚು ನೀರು ಇವೆಲ್ಲಾವನ್ನು ಹೆಚ್ಚಾಗಿ ಸೇವಿಸಿದ್ದಲ್ಲಿ ಮಾತ್ರ ನಾವು ಚಪ್ಪಟೆ ಹೊಟ್ಟೆ ಪಡೆಯಬಹುದು. ಸರಿಯಾದ ಪಾನೀಯ ಸೇವನೆ ಜೊತೆಗೆ, ಪೌಷ್ಠಿಕ ಮತ್ತು ಪ್ರೋಟೀನ್ ಭರಿತ ಆಹಾರ, ವ್ಯಾಯಾಮ ಕೂಡ ಹೆಚ್ಚುವರಿ ಬೊಜ್ಜನ್ನು ಕರಗಿಸುವ ಫಿಟ್ ನೆಸ್ ಮಂತ್ರಗಳಾಗಿವೆ.

Published by:Ashwini Prabhu
First published: