Workout And Health: ವ್ಯಾಯಾಮ ಮಾಡದಿರುವುದು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವಾಸ್ತವದಲ್ಲಿ ನಿಮ್ಮ ಮೆದುಳು ನಿಯಮಿತ ವ್ಯಾಯಾಮ ಮಾಡಲು ಇಷ್ಟ ಪಡುತ್ತದೆ. ನೀವು ಅದನ್ನು ಮಾಡಲು ಸಾಧ್ಯವಾಗದೇ ಹೋದರೆ ನಿಮ್ಮಲ್ಲಿ ಕಿರಿಕಿರಿ ಭಾವನೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಇದರ ಬಗ್ಗೆ ವಿವಿಧ ಸಂಶೋಧನೆಗಳು ಏನು ಹೇಳಿವೆ ಎಂದು ಇಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವೊಮ್ಮೆ ಪ್ರಯಾಣ (Travelling), ಪ್ರವಾಸ (Tour), ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು (Special Functions), ಆಫೀಸಿಗೆ (Office) ಹೋಗುವ ತರಾತುರಿ, ಲೇಟ್ ಆಗಿ ಎದ್ದೇಳುವುದು, ಬಿಡುವಿಲ್ಲದ ಸಮಯ ಹೀಗೆ ಸಾಕಷ್ಟು ಕಾರಣದಿಂದ ನಮ್ಮಲ್ಲಿ ಅನೇಕರು ತಮ್ಮ ನಿತ್ಯದ ವರ್ಕೌಟ್‌ (Workout) ಮಾಡದೇ ಮಿಸ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡದ ದಿನ, ವ್ಯಾಯಾಮ ಮಾಡದೇ ಇದ್ದ ದಿನ ನೀವು ಕಿರಿಕಿರಿ ಮತ್ತು ಮೂಡ್ ಸ್ವಿಂಗ್‌ ಉಂಟಾಗಿದೆಯೇ? ಅಥವಾ ಹೀಗೆ ಬದಲಾವಣೆ ಆಗಿರುವುದನ್ನು ನೀವು ಕಂಡಿದ್ದೀರಾ? ಹೀಗೆ ಒಂದು ಅಥವಾ ಎರಡು ದಿನ ಖುಷಿಯಾಗಿರುವುದು, ನಂತರ ದುಃಖ ಅನುಭವಿಸುವುದು ಇದೆಲ್ಲವೂ ನಿಮ್ಮ ಮೆದುಳಿಗೆ ಸಂಬಂಧಿಸಿದ ಕ್ರಿಯೆ ಆಗಿರುತ್ತದೆ.

    ಫಿಟ್ ಆಗಿರಲು ವರ್ಕ್ ಔಟ್ ಉತ್ತಮ ಮತ್ತು ಆರೋಗ್ಯಕರ ಮಾರ್ಗ

    ವಾಸ್ತವದಲ್ಲಿ ನಿಮ್ಮ ಮೆದುಳು ನಿಮ್ಮ ನಿಯಮಿತ ವ್ಯಾಯಾಮ ಮಾಡಲು ಇಷ್ಟ ಪಡುತ್ತದೆ. ನೀವು ಅದನ್ನು ಮಾಡಲು ಸಾಧ್ಯವಾಗದೇ ಹೋದರೆ ನಿಮ್ಮಲ್ಲಿ ಕಿರಿಕಿರಿ ಭಾವನೆ ಮತ್ತು ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಇದರ ಬಗ್ಗೆ ವಿವಿಧ ಸಂಶೋಧನೆಗಳು ಏನು ಹೇಳಿವೆ ಎಂದು ಇಲ್ಲಿ ನೋಡೋಣ.

    ಫಿಟ್ ಆಗಿರಲು ವರ್ಕ್ ಔಟ್ ಉತ್ತಮ ಮತ್ತು ಆರೋಗ್ಯಕರ ಮಾರ್ಗ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಕಾರಿ. ಜೊತೆಗೆ ಇದು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ವ್ಯಾಯಾಮ ಮಾಡದಿರುವುದು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

    ಆದರೆ ನೀವು ಯಾವುದೋ ಕಾರಣದಿಂದ ವ್ಯಾಯಾಮ ಮಾಡದೇ ಹೋದಾಗ ಅದರ ಪರಿಣಾಮವು ನಿಮ್ಮ ದೇಹದ ಮೇಲೆ ಕಾಣಿಸಿಕೊಳ್ಳುತ್ತದೆ. ತ್ವರಿತ ತೂಕ ಹೆಚ್ಚಾಗುವುದು, ದೌರ್ಬಲ್ಯ ಅಥವಾ ರೋಗಗಳ ನಿರಂತರ ಹೆಚ್ಚಾಗುವಿಕೆ ಕಂಡು ಬರುತ್ತದೆ. ಹಾಗೆಯೇ ವ್ಯಾಯಾಮ ಮಾಡದೇ ಇರುವುದು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

    ಎದೆಯುರಿ ಮತ್ತು ನಿದ್ರೆಗೆ ತೊಂದರೆ

    ಉತ್ತಮ ನಿದ್ದೆಯಿಂದ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸಂಪಾದಿಸುತ್ತೇವೆ. ಜರ್ನಲ್ ಆಫ್ ಬಿಹೇವಿಯರಲ್ ಮೆಡಿಸಿನ್ ಪ್ರಕಾರ, ದೈನಂದಿನ ವ್ಯಾಯಾಮವು ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ನಿಮ್ಮ ನಿದ್ರೆಯ ಸಮಯವೂ ಹೆಚ್ಚಾಗುತ್ತದೆ. ಇದು ದಿನದಲ್ಲಿ ಹೆಚ್ಚು ಸಕ್ರಿಯವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಆದರೆ ನೀವು ನಡುವೆ ವ್ಯಾಯಾಮ ಮಾಡದೇ ಇದ್ದರೆ ಅದು ನಿಮ್ಮ ನಿದ್ರೆಯ ಮಾದರಿ ಮೇಲೆ ಪರಿಣಾಮ ಬೀರುತ್ತದೆ.

    ಖಿನ್ನತೆಯ ಅಪಾಯ

    ವರ್ಕೌಟ್ ಮಾಡುವುದರಿಂದ ಮಾನಸಿಕವಾಗಿ ವ್ಯಕ್ತಿ ಕ್ರಿಯಾಶೀಲನಾಗಿರ್ತಾನೆ. ಏಕೆಂದರೆ ಇದರೊಂದಿಗೆ ನಿಮ್ಮ ಮಿದುಳಿನ ಜೀವಕೋಶಗಳು ಕೂಡ ಕ್ರಿಯಾಶೀಲವಾಗಿರುತ್ತವೆ. ನೀವು ವ್ಯಾಯಾಮ ಮಾಡುವುದನ್ನು ನಿಲ್ಲಿಸಿದರೆ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

    ಅಡಿಲೇಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ವ್ಯಾಯಾಮ ಮಾಡದೇ ಬಿಟ್ಟ ಮೂರು ದಿನಗಳ ನಂತರ ವ್ಯಕ್ತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಿಮ್ಮ ಮನಸ್ಥಿತಿ ಕೂಡ ಬಹಳ ಬೇಗನೆ ಬದಲಾಗುತ್ತದೆ. ವ್ಯಕ್ತಿಯು ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ರಕ್ತವು ನಿಮ್ಮ ಮೆದುಳಿಗೆ ತಲುಪುವುದಿಲ್ಲ ಎಂದು ತಿಳಿಸಿದೆ.

    ಗಮನ ಕೇಂದ್ರೀಕರಿಸಲಾಗದ ಸಮಸ್ಯೆ

    ಮಾನಸಿಕ ಆರೋಗ್ಯ ಮತ್ತು ಗಮನ ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೂ ವ್ಯಾಯಾಮ ಮಾಡದೇ ಇರುವುದು ಪರಿಣಾಮ ಬೀರುತ್ತದೆ. ಧ್ಯಾನ ಮತ್ತು ವ್ಯಾಯಾಮವು ಉತ್ತಮ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಹಾಗೆಯೇ ವ್ಯಾಯಾಮ ಮಾಡದಿರುವುದು ಏಕಾಗ್ರತೆಗೆ ತೊಂದರೆ ಉಂಟು ಮಾಡುತ್ತದೆ.

    ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಾರ, 10 ರಿಂದ 40 ನಿಮಿಷಗಳ ವ್ಯಾಯಾಮ ಏಕಾಗ್ರತೆ ಹೆಚ್ಚಿಸುತ್ತದೆ. ನಿಮ್ಮ ಮೆದುಳಿಗೆ ರಕ್ತದ ಹರಿವು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ಮೂಡ್ ಸ್ವಿಂಗ್ ಹೆಚ್ಚಾಗುವುದು

    ವ್ಯಾಯಾಮ ಮಾಡದೇ ಇರುವುದು ಮನಸ್ಥಿತಿಯಲ್ಲಿ ತ್ವರಿತ ಬದಲಾವಣೆ ಉಂಟು ಮಾಡುತ್ತದೆ. ವರ್ಕ್ ಔಟ್ ಮಾಡುವ ಮೂಲಕ, ನೀವು ಉಲ್ಲಾಸ ಮತ್ತು ಕ್ರಿಯಾಶೀಲರಾಗಿರುತ್ತೀರಿ. ತಾಲೀಮು ಬಿಟ್ಟ ನಂತರ, ನೀವು ದಣಿದ, ಆಲಸ್ಯ ಮತ್ತು ಮೂಡ್ ಸ್ವಿಂಗ್ ಅನುಭವಿಸುತ್ತೀರಿ.
    Published by:renukadariyannavar
    First published: