Monsoon And Bathing: ಮಳೆಗಾಲದಲ್ಲಿ ಸ್ನಾನ ಮಾಡದೇ ಇರುವುದು ಯಾವ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ?

ಹಲವು ಜನರು ಮಳೆಗಾಲದ ಚಳಿಯ ವಾತಾವರಣ ಕಾರಣದಿಂದಾಗಿ ಹಲವು ಬಾರಿ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ತಣ್ಣೀರಿನಿಂದ ದೂರವಿರುವ ಅನೇಕ ಜನರು ಬಿಸಿ ನೀರಿನಿಂದ ಸ್ನಾನ ಕೂಡ ಮಾಡುವ ಗೋಜಿಗೆ ಹೋಗಲ್ಲ. ಆದರೆ ಯಾರಾದರೂ ಮಳೆಗಾಲದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿದರೆ ಅದು ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಗಾಲದಲ್ಲಿ (Monsoon) ಹರಿಯುವ ನೀರು (Water), ತಂಪಾದ ವಾತಾವರಣ (Cold Weather), ಉಕ್ಕಿ ಹರಿಯುವ ಜಲಪಾತಗಳು, ಹಸಿರಿನಿಂದ ಕಂಗೊಳಿಸುವ ವಾತಾವರಣವನ್ನ ನೋಡೋಕೆ ಸಖತ್ ಖುಷಿ (Happiness) ಆಗುತ್ತೆ. ಜೊತೆಗೆ ಮಳೆಗಾಲದಲ್ಲಿ ಡಿಫರೆಂಟ್ ಮೇಕಪ್, ಹೇರ್ ಸ್ಟೈಲ್, ಡ್ರೆಸ್ ಹಾಕಲು ಆಗದೇ ಒದ್ದಾಡುತ್ತಾರೆ. ಹಾಗಂತ  ಮಳೆಗಾಲ ಎಂದರೆ ಇಷ್ಟವಿಲ್ಲ ಎಂದ ಯಾರೂ ಹೇಳಲ್ಲ. ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರ ಪದಾರ್ಥಗಳ ಸೇವನೆಯ ಕ್ರೇವಿಂಗ್ ಆಗುತ್ತಲೇ ಇರುತ್ತದೆ. ಆಗಾಗ್ಗೆ ಟೀ ಕುಡಿಯುವುದು ಬೇರೆ. ಚಳಿಗಾಲ ಮತ್ತು ಮಳೆಗಾಲ ಬಂತೆಂದರೆ ಜನರು ನೀರಿನ ಸೇವನೆ ಕಡಿಮೆ ಮಾಡುತ್ತಾರೆ. ಬದಲು ಕಾಫಿ, ಟೀ ಹೆಚ್ಚು ಸೇವಿಸುತ್ತಾರೆ.

    ಅಲ್ಲದೆ ಹಲವು ಜನರು ಮಳೆಗಾಲದ ಚಳಿಯ ವಾತಾವರಣ ಕಾರಣದಿಂದಾಗಿ ಹಲವು ಬಾರಿ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ತಣ್ಣೀರಿನಿಂದ ದೂರವಿರುವ ಅನೇಕ ಜನರು ಬಿಸಿ ನೀರಿನಿಂದ ಸ್ನಾನ ಕೂಡ ಮಾಡುವ ಗೋಜಿಗೆ ಹೋಗಲ್ಲ. ಆದರೆ ಯಾರಾದರೂ ಮಳೆಗಾಲದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿದರೆ, ಅದು ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

    ಹಾಗಾಗಿ ತಜ್ಞರು ಪ್ರತಿ ಋತುವಿನಲ್ಲಿ ಪ್ರತಿದಿನ ಸ್ನಾನ ಮಾಡಲು ಸೂಚನೆ ನೀಡುತ್ತಾರೆ. ನೀವೂ ಸಹ ಕೆಲವೊಮ್ಮೆ ತಂಪು ವಾತಾವರಣದ ಕಾರಣ ಮುಂದಿಟ್ಟು ಸ್ನಾನ ಮಾಡುವುದನ್ನು ತಪ್ಪಿಸುತ್ತೀರಾ ಎಂದಾದರೆ ನಿಮ್ಮ ಆರೋಗ್ಯ ಕೆಡುವ ಬಗ್ಗೆ ಜಾಗ್ರತೆ ವಹಿಸಿ. ಮಳೆಗಾಲದಲ್ಲಿ ಸ್ನಾನ ಮಾಡದಿದ್ದರೆ ಆಗುವ ದುಷ್ಪರಿಣಾಮದ ಬಗ್ಗೆ ಇಲ್ಲಿ ತಿಳಿಯಿರಿ.

    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

    ಸೋಂಕು ತಗುಲುವ ಭೀತಿ

    ಹೆಲ್ತ್‌ಲೈನ್ ಪ್ರಕಾರ, ನಮ್ಮ ದೇಹದಲ್ಲಿ ಅನೇಕ ಸೂಕ್ಷ್ಮಜೀವಿಗಳು ಮತ್ತು ಜೀವಕೋಶಗಳಿವೆ. ಯಾರಾದರೂ ಸ್ನಾನ ಮಾಡದೇ ಹೋದರೆ, ಅವರ ದೇಹದಲ್ಲಿ ಸತ್ತ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಅದು ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

    ಮಳೆಗಾಲದಲ್ಲಿ ಸ್ನಾನ ಮಾಡದೇ ಇರುವುದು ಸೊಂಟದ ಭಾಗದಲ್ಲಿ ಸತ್ತ ಜೀವಕೋಶಗಳು ಹೆಚ್ಚು ಬೆಳವಣಿಗೆಯಾಗಲು ಕಾರಣವಾಗಿದೆ. ಇದು ಸೋಂಕು ಮತ್ತು ಬ್ಯಾಕ್ಟೀರಿಯಾ ಸೋಂಕಿನ ಅಪಾಯ ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು. ಹೀಗೆ ಉತ್ಪತ್ತಿಯಾಗುವ ಸೋಂಕು ನಂತರ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

    ದೇಹದಿಂದ ದುರ್ಗಂಧ ಬರುವುದು

    ಮಳೆಗಾಲದಲ್ಲಿ ನಿಮ್ಮ ಮನೆ ಹಾಗೂ ಬಟ್ಟೆಯಿಂದ ತೇವಾಂಶ ಉಳಿಯುವುದು ಕೆಟ್ಟ ವಾಸನೆ ಬರುವಂತೆ ಮಾಡುತ್ತದೆ. ಒಣಗಿದ ಬಟ್ಟೆಗಳು ಸಹ ಮಳೆಯಲ್ಲಿ ಸ್ವಲ್ಪ ಒದ್ದೆಯಾಗಿರುವುದು ನೀವು ಅನುಭವಿಸಿರಬಹುದು. ಮಳೆಗಾಲದಲ್ಲಿ ಇದು ಪ್ರತೀ ಮನೆಯ ಸಮಸ್ಯೆ ಆಗಿದೆ. ಏಕೆಂದರೆ ಅವುಗಳು ಹೆಚ್ಚಿನ ತೇವಾಂಶ ಹೊಂದಿರುತ್ತವೆ.

    ಈಗ ಅಂತಹ ಸಂದರ್ಭದಲ್ಲಿ ನೀವು ಸ್ನಾನ ಮಾಡದೇ ಹೋದರೆ ದುರ್ವಾಸನೆ ಬೀರುವ ಬ್ಯಾಕ್ಟೀರಿಯಾಗಳು ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಇದರ ನಂತರ ದೇಹದಿಂದ ಬಹಳಷ್ಟು ಕೆಟ್ಟ ವಾಸನೆ ಬರುತ್ತದೆ. ಇದು ಇತರೆ ಸೋಂಕು ಉಂಟಾಗಲು ಕಾರಣವಾಗುತ್ತದೆ.

    ಚರ್ಮದ ಸೋಂಕು ತಗುಲುವ ಭೀತಿ

    ಸ್ನಾನ ಮಾಡುವುದು ದೇಹಕ್ಕೆ ತಾಜಾತನ ನೀಡುತ್ತದೆ. ಹೆಲ್ತ್‌ಲೈನ್ ಪ್ರಕಾರ, ಸ್ನಾನ ಮಾಡದೇ ಇರುವುದು ಚರ್ಮದ ಉರಿಯೂತ ಮತ್ತು ಇತರ ಗಂಭೀರ ಪರಿಸ್ಥಿತಿ ಉಂಟು ಮಾಡುತ್ತದೆ. ಹಾಗಾಗಿ ಯಾವಾಗಲೂ ಸ್ನಾನ ಮಾಡಬೇಕು.

    ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು

    ಯಾರು ಸ್ನಾನ ಮಾಡದೆ ಇರುತ್ತಾರೋ, ಅವರ ದೇಹದಲ್ಲಿ ಇರುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಲು ಹೆಚ್ಚಿನ ಸಮಯ ಬೇಡ. ಇದು ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ ಮತ್ತು ಇತರೆ ಕಾಯಿಲೆ ಮತ್ತು ಸೋಂಕುಗಳ ಅಪಾಯ ಹೆಚ್ಚಿಸುತ್ತದೆ.

    ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?

    ಸ್ನಾನ ಮಾಡದೇ ಹೋದರೆ ಸ್ವಲ್ಪ ಸಮಯದ ನಂತರ ದೇಹದ ಒಂದು ನಿರ್ದಿಷ್ಟ ಪ್ರದೇಶದ ಚರ್ಮದ ಬಣ್ಣವು ಗಾಢವಾಗುತ್ತದೆ. ಕಪ್ಪು ಕಲೆ ಉಂಟಾಗುತ್ತವೆ. ಮಳೆಗಾಲದಲ್ಲಿ ಜಿಗುಟುತನ ಅಧಿಕ ತೇವಾಂಶದಿಂದ ಉಂಟಾಗುತ್ತದೆ. ಸ್ನಾನ ಮಾಡದಿದ್ದರೆ ಜಿಗುಟುತನ ಮತ್ತಷ್ಟು ಹೆಚ್ಚುತ್ತದೆ.
    Published by:renukadariyannavar
    First published: