Breakfast Recipe: 10 ನಿಮಿಷದಲ್ಲಿ ಸಿದ್ಧವಾಗುವ ಉತ್ತರ ಕರ್ನಾಟಕ ಶೈಲಿಯ ಪೋಹಾ ಮಾಡುವ ವಿಧಾನ

ಈ ತಿಂಡಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟವಾಗುತ್ತದೆ. ಹಾಗಾದ್ರೆ ಪೋಹಾ ಮಾಡೋದು ಹೇಗೆ ಎಂಬುದರ ಮಾಹಿತಿ ನೋಡೋಣ ಬನ್ನಿ.

ಪೋಹಾ

ಪೋಹಾ

  • Share this:
ಬೆಳಗ್ಗೆ ಎದ್ದ ಕೂಡಲೇ ಬಹುತೇಕ ಗೃಹಿಣಿಯರಿಗೆ (Woman) ತಿಂಡಿ ಏನು ಮಾಡಬೇಕು ಎಂಬ ಯಕ್ಷ ಪ್ರಶ್ನೆ ಎದುರಾಗುತ್ತದೆ. ಅದರಲ್ಲಿಯೂ ಹೊರಗೆ ಹೋಗಿ ಕೆಲಸ ಮಾಡುವ ಮಹಿಳೆಯರಿಗೆ ಇದು ದೊಡ್ಡ ಸವಾಲು. ಬೆಳಗ್ಗೆ ತಿಂಡಿ (Breakfast) ಮಾಡಿ, ಮಧ್ಯಾಹ್ನದ ಊಟವೂ (Meal) ರೆಡಿ ಮಾಡಿಟ್ಟು ಹೋಗಬೇಕಾಗುತ್ತದೆ. ಹಾಗಾಗಿ ಬೆಳಗಿನ ತಿಂಡಿ ಮಾಡಲು ಹೆಚ್ಚು ಸಮಯ (Time) ತೆಗೆದುಕೊಂಡರೆ ಊಟದ ಯಾವುದದ್ರೂ ಐಟಂ ಕಡಿಮೆ ಆಗುತ್ತದೆ. ಇಂದು ನಾವು ಆಂತಹ ಮಹಿಳೆಯರಿಗಾಗಿ ಕೇವಲ 10 ನಿಮಿಷದಲ್ಲಿ ಸಿದ್ಧಪಡಿಸುವ ಮತ್ತು ರುಚಿಕರವಾಗಿರುವ ಪೋಹಾ ಅಥವಾ ಅವಲಕ್ಕಿ (Poha or Avalakki Recipe) ಮಾಡುವ ವಿಧಾನವನ್ನು ಹೇಳುತ್ತಿದ್ದೇವೆ.

ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಮನೆಗಳಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ಪೋಹಾ ಸಿದ್ಧವಾಗಿರುತ್ತದೆ. ಬಿಸಿ ಬಿಸಿಯಾಗಿರುವ ಪೋಹಾ ಜೊತೆ ಗಟ್ಟಿ ಮೊಸರು ಹಾಕಿಕೊಂಡು ಸವಿಯುವ ಆ ಕ್ಷಣ ಕಣ್ಮುಂದೆ ಬಾಯಲ್ಲಿ ನೀರು ಬರುತ್ತದೆ. ಈ ತಿಂಡಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟವಾಗುತ್ತದೆ. ಹಾಗಾದ್ರೆ ಪೋಹಾ ಮಾಡೋದು ಹೇಗೆ ಎಂಬುದರ ಮಾಹಿತಿ ನೋಡೋಣ ಬನ್ನಿ.

ಇದನ್ನೂ ಓದಿ: Breakfast Recipe: ಭಾನುವಾರ ಸಿಂಪಲ್ ಆಗಿ ಬ್ಯಾಚೂಲರ್ ಗಳು ತಯಾರಿಸುವ ಬೆಳ್ಳುಳ್ಳಿ ಉಪ್ಪಿಟ್ಟು ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು

ಅವಲಕ್ಕಿ: 200 ಗ್ರಾಂ

ಹಸಿ ಮೆಣಸಿನಕಾಯಿ: 5 ರಿಂದ 6

ಟೊಮಾಟೋ: ಒಂದು

ಈರುಳ್ಳಿ : 1 ಮಧ್ಯಮ ಗಾತ್ರದ್ದು

ಸಾಸವೆ: 1 ಟೀ ಸ್ಪೂನ್

ಜೀರಿಗೆ: 1 ಟೀ ಸ್ಪೂನ್

ಅರಿಶಿನ: ಚಿಟಿಕೆ

ಶೇಂಗಾ/ಕಡಲೆಬೀಜ: 2 ಟೀ ಸ್ಪೂನ್

ಹುರಿಗಡಲೆ/ ಪುಟಾಣಿ ಪುಡಿ: 2 ಟೀ ಸ್ಪೂನ್

ಕರಿಬೇವು: 4 ರಿಂದ 5

ಕೊತಂಬರಿ ಸೊಪ್ಪು

ಎಣ್ಣೆ : 3 ರಿಂದ 5 ಟೀ ಸ್ಪೂನ್

ಉಪ್ಪು: ರುಚಿಗೆ ತಕ್ಕಷ್ಟು

ನಿಂಬೆ ರಸ: 1 ಟೀ ಸ್ಪೂನ್

ಪೋಹಾ ಮಾಡುವ ವಿಧಾನ

*ಮೊದಲಿಗೆ ಹಸಿಮೆಣಸಿನಕಾಯಿ, ಟೊಮಾಟೋ, ಈರುಳ್ಳಿ ಮತ್ತು ಕೊತಂಬರಿ ಸೊಪ್ಪನ್ನು ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.

*ತದನಂತರ ಸ್ಟೌವ್ ಆನ್ ಮಾಡಿಕೊಂಡು ದೊಡ್ಡ ಪಾತ್ರೆಯನ್ನು ಇಟ್ಟುಕೊಂಡು ಎಣ್ಣೆ ಹಾಕಿ.

*ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಮತ್ತು ಜೀರಿಗೆ ಹಾಕಿ. ಚಟಪಟ ಅಂತ ಸಾಸವೆ ಸದ್ದು ಮಾಡುತ್ತಿದ್ದಂತೆ ಕಡಲೆ ಬೀಜ ಹಾಕಿ ಮಿಕ್ಸ್ ಮಾಡಿಕೊಳ್ಳಿ.

*ಕಡಲೆ ಬೀಜ ಫ್ರೈ ಆಗುತ್ತಿದ್ದಂತೆ ಈರುಳ್ಳಿ ಹಾಕಿ, ಹಸಿ ವಾಸನೆ ಹೋಗುವರೆಗೂ ಹುರಿದುಕೊಳ್ಳಿ. ಹಸಿ ವಾಸನೆ ಹೋಗುತ್ತಿದ್ದಂತೆ ಹಸಿ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ.

*ತದನಂತರ ಟೊಮಾಟೋ ಹಾಕಿ ಮಿಕ್ಸ್ ಮಾಡಿಕೊಂಡು ಕೈ ಆಡಿಸುತ್ತಿರಬೇಕು. ಇಲ್ಲವಾದರೆ ಒಗ್ಗರಣೆ ಸೀದು ಹೋಗುತ್ತೆ. ಈಗ ಚಿಟಿಕೆ ಅರಿಶಿನ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಒಗ್ಗರಣೆ ಸಿದ್ಧವಾಗುತ್ತಿದ್ದಂತೆ ಗ್ಯಾಸ್ ಉರಿಯನ್ನು ಕಡಿಮೆ ಮಾಡಿಕೊಳ್ಳಿ.

ಇದನ್ನೂ ಓದಿ: Breakfast Recipe: 10 ನಿಮಿಷದಲ್ಲೇ ರೆಡಿಯಾಗುತ್ತೆ ಈ ಸ್ಪೆಷಲ್ ತಿಂಡಿ- ನೀವ್ಯಾಕೆ ಟ್ರೈ ಮಾಡ್ಬಾರ್ದು ?

*ಈಗ ಮಾರುಕಟ್ಟೆಯಿಂದ ತಂದಿರುವ ಅವಲಕ್ಕಿಯನ್ನ ತೊಳೆದುಕೊಳ್ಳಬೇಕು. ನೀರು ಸಂಪೂರ್ಣವಾಗಿ ಇಂಗುವಂತೆ ಹಿಂಡಿ ಒಗ್ಗರಣೆಯ ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

*ಈಗ ಸಿದ್ಧವಾದ ಪೋಹಾಗೆ ನಿಂಬೆ ಹಣ್ಣಿನ ರಸ ಮತ್ತು ಕಡಲೆಪುರಿ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಸಣ್ಣದಾಗಿ ಕತ್ತರಿಸಿರುವ ಕೊತಂಬರಿ ಸೊಪ್ಪು ಉದುರಿಸಿದ್ರೆ ಗರಂ ಗರಂ ಪೋಹಾ ಸಿದ್ಧವಾಗುತ್ತದೆ.

ಕೆಲವರು ಪೋಹಾ ಮಾಡುವಗ ಇಂಗು, ಉದ್ದಿನಬೇಳೆ, ಕಡಲೆ ಬೇಳೆ ಸಹ ಬಳಕೆ ಮಾಡುತ್ತಾರೆ. ಕಡಲೆಪುರಿ ಪೌಡರ್ ಹಾಕುವದರ ಜೊತೆಗೆ ಸಿಹಿ ಇಷ್ಟಪಡುವವರು ಸಕ್ಕರೆ ಸಹ ಮಿಕ್ಸ್ ಮಾಡುತ್ತಾರೆ. ಸಿದ್ಧವಾದ ಪೋಹಾಗೆ ಗಟ್ಟಿ ಮೊಸರು ಆಥವಾ ಯಾವುದಾದರು ಚಟ್ನಿ ಪುಡಿ ಹಾಕಿಕೊಂಡು ಸವಿಯಬಹುದು. ಇನ್ನೂ ಮಾರುಕಟ್ಟೆಯಲ್ಲಿ ಹಲವು ಬಗೆಯ ಅವಲಕ್ಕಿ ಸಿಗುತ್ತದೆ. ನಿಮಿಷ್ಟದ ಅವಲಕ್ಕಿಯನ್ನೇ ಖರೀದಿಸಿಕೊಳ್ಳಿ.
Published by:Mahmadrafik K
First published: