Breakfast Recipe: ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕ ಶೈಲಿಯ ಮಂಡಕ್ಕಿ ಅವಲಕ್ಕಿ ಮಾಡುವ ವಿಧಾನ

ಬೆಳಗ್ಗೆ ಮಂಡಕ್ಕಿ ಅವಲಕ್ಕಿ ಜೊತೆ ಮೊಸರು ಹಾಕಿಕೊಂಡು ತಿಂದ್ರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಮಕ್ಕಳ ಟಿಫನ್ ಬಾಕ್ಸ್ ಗೂ ಇದನ್ನ ತುಂಬಿಸಿ ಕಳಿಸಬಹುದು.

ಮಂಡಕ್ಕಿ ಅವಲಕ್ಕಿ

ಮಂಡಕ್ಕಿ ಅವಲಕ್ಕಿ

  • Share this:
ಪ್ರತಿದಿನ ಒಂದೇ ತರಹನಾದ ತಿಂಡಿ (Tiffin) ತಿಂದು ಬೇಜಾರಾಗಿದ್ರೆ, ಇವತ್ತು ಉತ್ತರ ಕರ್ನಾಟಕ (North Karnataka) ಶೈಲಿಯ ಮಂಡಕ್ಕಿ ಅವಲಕ್ಕಿ (Mandakki Avalakki) ಅಥವಾ ಚುರುಮುರಿ ಸುಸಲಾ (Churumuri Susala) ಒಮ್ಮೆ ಟ್ರೈ ಮಾಡಿ. ಇದರ ರುಚಿ ಸವಿದವರೂ ಈ ತಿಂಡಿಯನ್ನು ಪದೇ ಪದೇ ಸವಿಯಬೇಕೆಂಬ ಆಸೆ ಹೊರ ಹಾಕುತ್ತಾರೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗಿರ್ ಮಿಟ್ (Girmit) ಎಂದು ಮಾರಲಾಗುತ್ತದೆ. ಇದರಲ್ಲಿ ಹಸಿ ಖಾರ ಬಳಕೆ ಮಾಡೋದರಿಂದ ಕೆಲವರ ಆರೋಗ್ಯದಲ್ಲಿ (Health) ಏರುಪೇರು ಉಂಟಾಗಬಹುದು. ಹಾಗಾಗಿ ಇಂದು ನಾವು ಹೇಳುವ ಮಂಡಕ್ಕಿ ಅವಲಕ್ಕಿ ತಯಾರಿಸಿ. ಯಾವಾಗಲೂ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರು ಆಗಿದ್ರೆ, ಇದು ನಿಮಗೆ ಹೊಸ ರುಚಿಯನ್ನ ನೀಡುತ್ತದೆ.

ಉತ್ತರ ಕರ್ನಾಟಕ ಭಾಗದಲ್ಲಿ ಎರಡು ಬಗೆಯ ಚುರುಮುರಿ ಅಂದ್ರೆ ಕಡ್ಲೇಪುರಿ ಸಿಗುತ್ತದೆ. ಆದ್ರೆ ಇವುಗಳಲ್ಲಿ ಉಪ್ಪುಪುರಿ ಮಂಡಕ್ಕಿ ಅವಲಕ್ಕಿ ಮಾಡಲು ಸೂಕ್ತ.  ಒಂದು ವೇಳೆ ಉಪ್ಪು ಪುರಿ ಸಿಗದಿದ್ರೆ, ತೆಳುವಾದ ಮಂಡಕ್ಕಿಯಿಂದಲೂ ಮಾಡಬಹುದು. ಹಾಗಾದ್ರೆ ಮಂಡಕ್ಕಿ ಅವಲಕ್ಕಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ

ಮಂಡಕ್ಕಿ ಅವಲಕ್ಕಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಮಂಡಕ್ಕಿ/ಚುರುಮುರಿ/ಕಡ್ಲೆಪುರಿ: 250 ಗ್ರಾಂ

ಈರುಳ್ಳಿ: 2 (ದೊಡ್ಡ ಗಾತ್ರದ್ದು)

ಟೊಮ್ಯಾಟೋ: 2 (ದೊಡ್ಡ ಗಾತ್ರದ್ದು)

ಕಡಲೇಬೀಜ; 50 ಗ್ರಾಂ

ಹುರಿಗಡಲೆ ಅಥವಾ ಪುಟಾಣಿ: 50 ಗ್ರಾಂ

ಹಸಿ ಮೆಣಸಿನಕಾಯಿ: 7 ರಿಂದ 8

ಕೋತಂಬರಿ ಸೊಪ್ಪು

ಅರಿಶಿಣ: ಚಿಟಿಕೆ

ಕರೀಬೇವು; 10 ರಿಂದ 15 ಎಲೆ

ಎಣ್ಣೆ: 7 ರಿಂದ 8 ಟೀ ಸ್ಪೂನ್

ಜೀರಿಗೆ: 1 ಟೀ ಸ್ಪೂನ್

ಸಾಸವೆ: 1 ಟೀ ಸ್ಪೂನ್

ನಿಂಬೆ ರಸ: 2 ಟೀ ಸ್ಪೂನ್

ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಮೊದಲಿಗೆ ಈರುಳ್ಳಿ, ಟೊಮಾಟೋ ಮತ್ತು ಹಸಿ ಮೆಣಸಿನಕಾಯಿಯನ್ನು ಕತ್ತರಿಸಿಕೊಳ್ಳಿ. ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಿ.

ಮಂಡಕ್ಕಿಯಲ್ಲಿ ಕಡ್ಡಿ ಮತ್ತು ಧೂಳು ಇರುತ್ತೆ. ಹಾಗಾಗಿ ಇದನ್ನ ಸ್ವಚ್ಛ ಮಾಡಿಕೊಳ್ಳಬೇಕು.

ಇದನ್ನೂ ಓದಿ:  Health Tips: ಸುಲಭವಾಗಿ ತೂಕ ಇಳಿಸಲು ನಿಮ್ಮ ಡಯಟ್‍ನಲ್ಲಿ ಈ 5 ಕಾರ್ಬ್ ಕೆಟೋ ರೊಟ್ಟಿಗಳು ಇರಲಿ

ನಂತರ ಗ್ಯಾಸ್ ದೊಡ್ಡ ಪಾತ್ರೆಯನ್ನು ಇರಿಸಿ. ಮಧ್ಯಮ ಉರಿಯಲ್ಲಿ ಗ್ಯಾಸ್ ಹಚ್ಚಿಕೊಳ್ಳಿ.

ಪಾತ್ರೆ ಬಿಸಿಯಾಗುತ್ತಿದ್ದಂತೆ ಎಣ್ಣೆ ಹಾಕಿ. ತದನಂತರ ಸಾಸವೆ ಮತ್ತು ಜೀರಿಗೆ ಹಾಕಿ.

ಜೀರಿಗೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಕಡಲೇ ಬೀಜ ಹಾಕಿ ಹುರಿಯಿರಿ.

ನಂತರ ಕತ್ತರಿಸಿಕೊಂಡಿರುವ ಈರುಳ್ಳಿ, ಕರಿಬೇವು ಮತ್ತು ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.

ಈರುಳ್ಳಿಯ ಹಸಿ ವಾಸನೆ ಹೋಗುತ್ತಿದ್ದಂತೆ ಟೊಮ್ಯಾಟೋ ಹಾಕಿ ಕಲಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಪಾತ್ರೆಯನ್ನು ಕೆಳಗೆ ಇಳಿಸಿಕೊಳ್ಳಿ.

ಈಗ ಮತ್ತೊಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ. ಇದರಲ್ಲಿ ಸ್ವಚ್ಛ ಮಾಡಿಟ್ಟುಕೊಂಡಿರುವ ಮಂಡಕ್ಕಿಯನ್ನು ಹಾಕಿ, ಕ್ಷಣಾರ್ಧದಲ್ಲಿಯೇ ಹೊರ ತೆಗೆದು ಮತ್ತೊಂದು ಪಾತ್ರೆಯಲ್ಲಿ ಹಾಕಬೇಕು. ಮಂಡಕ್ಕಿಯನ್ನು ಹಿಂಡಿ ನೀರು ಹೊರ ತೆಗೆಯಬೇಕು.

ಈಗ ಮಾಡಿಕೊಂಡಿರುವ ಮಸಾಲೆಯ ಪಾತ್ರೆಗೆ ನೀರಿನಲ್ಲಿ ಅದ್ದಿ ತೆಗೆದ ಮಂಡಕ್ಕಿ ಹಾಕಿಯನ್ನು ಹಾಕಿ. ಮೇಲೆ ಕೆಳಗೆ ಮಾಡುತ್ತಾ ಚೆನ್ನಾಗಿ ಕಲಸಿಕೊಳ್ಳಿ.

ಇದನ್ನೂ ಓದಿ:  Banana Fruit Secret: ಬಾಳೆಹಣ್ಣಿನಲ್ಲಿ ಹುಳುಗಳು ಏಕೆ ಬೆಳೆಯುವುದಿಲ್ಲ? ಇದನ್ನು ಮಧುಮೇಹಿಗಳು ತಿನ್ನಬಹುದೇ?

ಈಗ ಮೊದಲೇ ಸಿದ್ಧ ಮಾಡಿಕೊಂಡಿದ್ದ ಹುರಿಗಡಲೇ ಪುಡಿ, ನಿಂಬೆ ಹಣ್ಣಿನ ರಸ ಹಾಗೂ ಕೋತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲಸಿದ್ರೆ ಮಂಡಕ್ಕಿ ಅವಲಕ್ಕಿ ಸಿದ್ಧ.

ಬೆಳಗ್ಗೆ ಮಂಡಕ್ಕಿ ಅವಲಕ್ಕಿ ಜೊತೆ ಮೊಸರು ಹಾಕಿಕೊಂಡು ತಿಂದ್ರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಮಕ್ಕಳ ಟಿಫನ್ ಬಾಕ್ಸ್ ಗೂ ಇದನ್ನ ತುಂಬಿಸಿ ಕಳಿಸಬಹುದು.
Published by:Mahmadrafik K
First published: