Railway Recruitment 2019: ಎಸ್​ಎಸ್​ಎಲ್​ಸಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗವಕಾಶ

North Eastern Railway Recruitment 2019: ಗೋರಖ್​ ಪುರ ವರ್ಕ್​ ಶಾಪ್​ನಲ್ಲಿ 411 ಮೆಕಾನಿಕಲ್​, ಸಿಗ್ನಲ್​ 63, ಲಕ್ನೋ ಜಂಕ್ಷನ್​ನಲ್ಲಿ 155 ಕ್ಯಾರಿಯೇಜ್​, ವ್ಯಾಗನ್​ನಲ್ಲಿ 155 ಸೇರಿಂದತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಡಿಸೆಂಬರ್​ 25 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ಗೆ ತೆರಳಿ ಅಧಿಸೂಚನೆ ಬಗ್ಗೆ ತಿಳಿಯಬಹುದಾಗಿದೆ.

Harshith AS | news18-kannada
Updated:November 27, 2019, 9:26 AM IST
Railway Recruitment 2019: ಎಸ್​ಎಸ್​ಎಲ್​ಸಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗವಕಾಶ
North Eastern Railway Recruitment 2019
  • Share this:
ಈಶಾನ್ಯ ರೈಲ್ವೆ ಅಂಪ್ರೇಟಿಸ್​ ಹುದ್ದೆಗಳ ನೇಮಕಾತಿಗೆ ಗೋರಖ್​ಪುರ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ.

ಗೋರಖ್​ ಪುರ ವರ್ಕ್​ ಶಾಪ್​ನಲ್ಲಿ 411 ಮೆಕಾನಿಕಲ್​, ಸಿಗ್ನಲ್​ 63, ಲಕ್ನೋ ಜಂಕ್ಷನ್​ನಲ್ಲಿ 155 ಕ್ಯಾರಿಯೇಜ್​, ವ್ಯಾಗನ್​ನಲ್ಲಿ 155 ಸೇರಿಂದತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಡಿಸೆಂಬರ್​ 25 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ಗೆ ತೆರಳಿ ಅಧಿಸೂಚನೆ ಬಗ್ಗೆ ತಿಳಿಯಬಹುದಾಗಿದೆ.

ವಿದ್ಯಾರ್ಹತೆ:

ಎಸ್​.ಎಸ್​.ಎಲ್​.ಸಿ ವಿದ್ಯಾರ್ಹತೆಯಲ್ಲಿ ಗಳಿಸಿದ ಶೇಕಡ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು.

ಹುದ್ದೆಗಳು:

ಫಿಟ್ಟರ್​, ವೆಲ್ಡರ್​, ಎಲೆಕ್ಟ್ರಿಷಿಯನ್​, ಕಾರ್ಪೆಂಟರ್, ಪೇಟಂರ್​, ಮೆಕಾನಿಕ್​, ಟರ್ನರ್​ ಹುದ್ದೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೇಮಕಾತಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ:
Loading...

ಅರ್ಜಿ ಸಲ್ಲಿಸುವ ಎಸ್​.ಸಿ, ಎಸ್.​ಟಿ  ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಇತರ ವರ್ಗದವರು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅಂಪ್ರೇಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರುhttps://ner.indianrailways.gov.in/ ಭೇಟಿ ನೀಡಿ ಅರ್ಜಿಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

ನವೆಂಬರ್​ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು​, ಡಿಸೆಂಬರ್​ 25 ಸಲ್ಲಿಕೆಯ ಕೊನೆಯ ದಿನವಾಗಿದೆ.

ಇದನ್ನೂ ಓದಿ: JOB: ಮೈಸೂರು ವಿಶ್ವವಿದ್ಯಾಲಯದಲ್ಲಿ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳ ನೇಮಕಾತಿ

ಇದನ್ನೂ ಓದಿ: ಅಭಿಮಾನಿಗಳೆದುರು ತನ್ನ ಸ್ಟೈಲ್​ ಸೀಕ್ರೆಟ್​ ಬಿಚ್ಚಿಟ್ಟ ರಾಕಿಂಗ್​ ಸ್ಟಾರ್​ ಯಶ್​!; ಏನದು ಗೊತ್ತಾ?
First published:November 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...