Norovirus: ಅತಿ ವೇಗವಾಗಿ ಹರಡುತ್ತಿರುವ ನೊರೊ ವೈರಸ್‌ ಲಕ್ಷಣಗಳೇನು? ಇದು ಎಷ್ಟು ಅಪಾಯಕಾರಿ ? ಇಲ್ಲಿದೆ ಸಂಪೂರ್ಣ ಮಾಹಿತಿ

Norovirus : ಯಾರಿಗಾದರೂ ವೈರಸ್‌ ಭಯವಿದ್ದರೆ ತಕ್ಷಣ ಮನೆಯನ್ನು ಸ್ವಚ್ಛಗೊಳಿಸಿ. ಎಲ್ಲಾ ವಸ್ತುಗಳನ್ನು ಚನ್ನಾಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ರೋಗಲಕ್ಷಣಗಳು ನಿಂತ ನಂತರ ಸೋಂಕಿತರು 48 ಗಂಟೆಗಳ ಕಾಲ ಅಡುಗೆ ಮಾಡದಂತೆ ಸಲಹೆ ನೀಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಕೊರೊನಾ ವೈರಸ್(Coronavirus) ಭೀತಿ ಆವರಿಸಿರುವಾಗಲೇ ಇದೀಗ ಕಾಣಿಸಿಕೊಂಡಿರುವ ಮತ್ತೊಂದು ಹೊಸ ವೈರಸ್(New Virus) ಜನರಲ್ಲಿ ಭಯ ಮೂಡಿಸಿದೆ. ಇತ್ತೀಚೆಗೆ ಕೇರಳದಲ್ಲಿ(Kerala) ಅತಿ ವೇಗವಾಗಿ ಹರಡುವ ನೊರೊ ವೈರಸ್‌ (Norovirus)ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ವೈರಸ್ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವೈರಸ್ ಚಳಿಗಾಲದಲ್ಲಿ ಹೆಚ್ಚು ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಕ್ಟೋಬರ್‌ನಲ್ಲಿ ಬ್ರಿಟನ್‌ನಲ್ಲಿ ಈ ರೋಗವು ಹೆಚ್ಚು ಹರಡಿತ್ತು. ಈ ಸಂದರ್ಭದಲ್ಲಿ ಮೂಲ ನೊರೊವೈರಸ್ ಯಾವುದು? ಅದು ಹೇಗೆ ಹರಡುತ್ತದೆ? ರೋಗಲಕ್ಷಣಗಳು, ಚಿಕಿತ್ಸೆ ಮುಂತಾದ ವಿವಿರಗಳು ಇಲ್ಲಿದೆ.  

ನೊರೊವೈರಸ್ ಎಂದರೇನು? ಇದು ಸಾಂಕ್ರಾಮಿಕವೇ?

ನೊರೊವೈರಸ್ ಅನ್ನು ಚಳಿಗಾಲದ ವಾಂತಿ ದೋಷ ಎಂದೂ ಕರೆಯುತ್ತಾರೆ. ಇದು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ವೈರಸ್ ಸೋಂಕಿತ ಜನರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಾರೆ. ಈ ಸೋಂಕಿನ ಹರಡುವಿಕೆಯ ಪ್ರಮಾಣ ಹೆಚ್ಚ ಎನ್ನಲಾಗುತ್ತಿದೆ. ಸೋಂಕಿತ ಜನರೊಂದಿಗೆ ಸಂಪರ್ಕಕ್ಕೆ ಬರುವವರಿಗೆ ಅಥವಾ ಕಲುಷಿತ  ವಸ್ತುಗಳ ಸಂಪರ್ಕಕ್ಕೆ ಬರುವವರಿಗೆ ಇದು ಸುಲಭವಾಗಿ ಹರಡುತ್ತದೆ ಎಂದು ಹೇಳಲಾಗಿದೆ.ವೈರಸ್ ಸೋಂಕು ತಗುಲಿರುವ ಹೆಚ್ಚಿನ ಜನರು ಎರಡರಿಂದ ಮೂರು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. 

ಕಾಲಾವಧಿ ಏನು?

ಸೋಂಕು ತಗುಲಿದ 12 ರಿಂದ 48 ಗಂಟೆಗಳ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ. ಇದರರ್ಥ ಕಾಲಾವಧಿಯು 12-48 ಗಂಟೆಗಳಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲೂ ಸಖತ್ ಟ್ರಿಪ್ ಮಾಡ್ಬಹುದು, ಭಾರತದ ಈ ಸ್ಥಳಗಳು ವಿಂಟರ್ ರಜೆಗೆ ಭಾರೀ ಫೇಮಸ್!

ನೊರೊವೈರಸ್ ಲಕ್ಷಣಗಳು

ನೊರೊವೈರಸ್‌ನ ಮುಖ್ಯ ಲಕ್ಷಣಗಳೆಂದರೆ ಅಸ್ವಸ್ಥತೆ ಅಥವಾ ವಾಕರಿಕೆ, ಅತಿಸಾರ ಮತ್ತು ವಾಂತಿ. ಇತರ ಸಾಮಾನ್ಯ ಲಕ್ಷಣಗಳು ಜ್ವರ, ತಲೆನೋವು ಮತ್ತು ತಲೆತಿರುಗುವಿಕೆ. ಚಿಕಿತ್ಸೆ ಇದೆಯೇ?ಅನೇಕ ನೊರೊವೈರಸ್ ಪೀಡಿತರು ಯಾವುದೇ ಚಿಕಿತ್ಸೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ. ಆದರೂ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಬಹುದು.

ಸೋಂಕಿತರಯ ಸಾಕಷ್ಟು ನೀರನ್ನು ಮತ್ತು ಹಣ್ಣಿನ ಜ್ಯೂಸ್​ಗಳನ್ನು ಸೇವನೆ ಮಾಡಬೇಕು ಮತ್ತು ನಿರ್ಜಲೀಕರಣವನ್ನು ತಡೆಗಟ್ಟಲು ವಿಶ್ರಾಂತಿ ಪಡೆಯಬೇಕು. ಇದರ ಲಕ್ಷಣಗಳು ಸಾಮಾನ್ಯವಾಗಿ ಎರಡು ಮೂರು ದಿನಗಳಲ್ಲಿ  ಕಾಣೆಯಾಗುತ್ತದೆ. ಆದರೂ, ಅದರ ಹೆಚ್ಚಿನ ಹರಡುವಿಕೆಯ ಪ್ರಮಾಣದಿಂದಾಗಿ, ರೋಗಲಕ್ಷಣಗಳು ನಿಂತುಹೋದ ನಂತರ 48 ಗಂಟೆಗಳವರೆಗೆ ಮನೆಯಲ್ಲೇ ಇರಲು ವೈದ್ಯರು ಸೋಂಕಿತರಿಗೆ ಸಲಹೆ ನೀಡುತ್ತಾರೆ.  

ನೊರೊವೈರಸ್ ತಡೆಗಟ್ಟಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ವೈರಸ್ ಸೋಂಕು ಮತ್ತು ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. ರೋಗಲಕ್ಷಣಗಳನ್ನು ನಿಲ್ಲಿಸಿದ ನಂತರ ಸೋಂಕಿತರು 48 ಗಂಟೆಗಳವರೆಗೆ ಮನೆಯಲ್ಲಿಯೇ ಇರಬೇಕು. ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು. ಆಲ್ಕೋಹಾಲ್ ಆಧಾರಿತ ಜೆಲ್ಗಳು ನೊರೊವೈರಸ್ ಅನ್ನು ಕಡಿಮೆ ಮಾಡುವುದಿಲ್ಲ.

ಇದನ್ನೂ ಓದಿ: ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ- ಈ ಸಲಹೆಗಳನ್ನು ಪಾಲಿಸಿ

ಯಾರಿಗಾದರೂ ವೈರಸ್‌ ಭಯವಿದ್ದರೆ ತಕ್ಷಣ ಮನೆಯನ್ನು ಸ್ವಚ್ಛಗೊಳಿಸಿ. ಎಲ್ಲಾ ವಸ್ತುಗಳನ್ನು ಚನ್ನಾಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ರೋಗಲಕ್ಷಣಗಳು ನಿಂತ ನಂತರ ಸೋಂಕಿತರು 48 ಗಂಟೆಗಳ ಕಾಲ ಅಡುಗೆ ಮಾಡದಂತೆ ಸಲಹೆ ನೀಡಲಾಗುತ್ತದೆ.  ಕೇವಲ ಅಡುಗೆ ಎಂದಲ್ಲ ಸಾಧ್ಯವಾದಷ್ಟು ವಿಶ್ರಾಂತಿ  ತೆಗೆದುಕೊಳ್ಳಬೇಕು. ಸೋಂಕಿತರು ಬಳಸುವ ಬಟ್ಟೆಗಳನ್ನು 60 ಡಿಗ್ರಿ ತಾಪಮಾನದಲ್ಲಿ ನೀರು ಮತ್ತು ಡಿಟರ್ಜೆಂಟ್​ ಬಳಸಿ ಸ್ವಚ್ಛಗೊಳಿಸಬಹುದು.
Published by:Sandhya M
First published: