Non-Veg Recipe: ಭಾನುವಾರಕ್ಕೆ ಮೀನೂಟ; ಮನೆಯಲ್ಲಿ ಮಾಡಿ ಸ್ಪೆಷಲ್ ಫಿಶ್ ಫ್ರೈ ಮಾಡಿ

ಮನೆಯಲ್ಲಿ ಏನಾದರೂ ಮಾಂಸಾಹಾರದ ಅಡುಗೆ ಮಾಡಬೇಕು ಎಂದು ಎಷ್ಟೋ ಜನ ಅಂದುಕೊಂಡಿರುತ್ತಾರೆ ಹಾಗಾಗಿ ಈ ವಾರ ರುಚಿರುಚಿಯಾದ ಸ್ಪೆಷಲ್​ ಫಿಶ್​ ಫ್ರೈ ಮಾಡಿಕೊಂಡು ಮನೆಯಲ್ಲಿ ಸೇವನೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಲ್ಲಾ ವಯಸ್ಸಿನವರಿಗೂ ಮೀನು (Fish) ಒಂದು ಆರೋಗ್ಯವಂತ ಪದಾರ್ಥವಾಗಿದೆ. ಮೀನಿನಲ್ಲಿರುವ ನ್ಯೂಟ್ರೀಶಿಯನ್ ಅಂಶಗಳು ಪ್ರತಿಯೊಂದು ರೋಗಕ್ಕೂ ರಾಮಬಾಣ. ಹೃದಯ, (Heart) ಕಣ್ಣು (Eyes) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಮೀನು ಹೊಂದಿದೆ. ಇತರ ಮಾಂಸಕ್ಕೆ (Meat) ಹೋಲಿಸಿದರೆ ಮೀನಿನಲ್ಲಿ ಕೊಬ್ಬಿನ ಅಂಶಗಳು ಕಡಿಮೆ ಇದ್ದು ಮಿನರಲ್ಸ್, ಅಮೀನೊ ಹಾಗೂ ಪೊಸೋರಿಯಾಸಿಸ್ ಮೀನಿನಲ್ಲಿ ಹೇರಳವಾಗಿ ಕಂಡುಬರುತ್ತದೆ.

ಅಗತ್ಯವಾದ ವಸ್ತುಗಳು

*ಮೀನು - 1/2 ಕೆಜಿ

*ಕೆಂಪು ಮೆಣಸಿನಕಾಯಿ ಪುಡಿ - 1 1/2 ಟೀ.ಚಮಚ

*ಅರಿಶಿಣ ಪುಡಿ- 1 1/2 ಟೀ ಚಮಚ

*ಮೆಣಸು ಪುಡಿ- 1 1/2 ಟೀ ಚಮಚ

*ಶುಂಠಿ - 5-6 ತುಂಡು

*ಬೆಳ್ಳುಳ್ಳಿ- 1/2

*ರುಚಿಗೆ ತಕ್ಕಷ್ಟು ಉಪ್ಪು

*ತೆಂಗಿನ ಎಣ್ಣೆ

ತಯಾರಿಸುವ ವಿಧಾನ

1. ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಮೆಣಸು ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿಗಳ ಜೊತೆಗೆ 2-3 ಟೀ, ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

2. ಇದನ್ನು ಪೇಸ್ಟ್ ರೀತಿ ಬರುವಂತೆ ರುಬ್ಬಿಕೊಳ್ಳಿ.

3. ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗು 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.

4. ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ಇದರ ಮೇಲೆ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ. ಮೀನು ಹೊಂಬಣ್ಣಕ್ಕೆ ತಿರುಗುವವರೆಗು ಇದನ್ನು ಬೇಯಿಸಿ. ಈ ರುಚಿಕರವಾದ ಮೀನಿನ ಖಾದ್ಯವನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.

ಫಿಶ್​ ಕರಿ ಮಾಡುವ ವಿಧಾನ

*ಈರುಳ್ಳಿ - 2 (ಕತ್ತರಿಸಿದ್ದು)

*ಕೊತ್ತಂಬರಿ ಬೀಜ - 2 ಚಮಚ

*ಕೆಂಪು ಮೆಣಸಿನ ಕಾಯಿ - 9-10

*ತುರಿದ ತೆಂಗಿನ ಕಾಯಿ - 2 ಕಪ್‌ಗಳು

*ಶುಂಠಿ - 1 ತುಂಡು

*ಹುಳಿ - 1 ತುಂಡು

*ಹಸಿಮೆಣಸು - 5 (ಸೀಳಿದ್ದು)

*ತೆಂಗಿನ ಹಾಲು - 1/2 ಕಪ್

*ಎಣ್ಣೆ - 2 ಚಮಚ

*ಗರಂ ಮಸಾಲಾ - 1 ಚಮಚ

*ಸ್ವಲ್ಪ ಅರಶಿನ

*ಉಪ್ಪು ರುಚಿಗೆ ತಕ್ಕಷ್ಟು

ಇದನ್ನೂ ಓದಿ: Chicken Recipe: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ

ಫಿಶ್​ ಕರಿ ಮಾಡುವ ವಿಧಾನ:

1. ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ.

2. ಕೆಂಪು ಮೆಣಸು ಹಾಗೂ ಕೊತ್ತಂಬರಿ ಬೀಜವನ್ನು ಎಣ್ಣೆಗೆ ಹಾಕಿ ಹಾಗೂ ಅದು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.

3. ಇನ್ನು ಒಂದು ಕಪ್‌ನಷ್ಟು ನೀರು ಬಿಸಿ ಮಾಡಿಕೊಳ್ಳಿ ಹಾಗೂ ಸ್ವಲ್ಪ ಹುಳಿ ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಹುಳಿ ನೀರನ್ನಾಗಿ ಮಾಡಿಕೊಳ್ಳಿ.

4. ಹುರಿದ ಮೆಣಸು, ಕೊತ್ತಂಬರಿ ಬೀಜ, ಹುಳಿ ನೀರು, ತೆಂಗಿನ ಹಾಲು, ಹಾಗೂ ಶುಂಠಿಯನ್ನು ಜೊತೆಗೆ ಕಡೆಯಿರಿ.

5. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ತದನಂತರ ಈರುಳ್ಳಿಯನ್ನು ಚಿನ್ನ ಮಿಶ್ರಿತ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

6. ಗ್ರೈಂಡ್ ಮಾಡಿದ ಮಿಶ್ರಣ, ಅರಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

7. ಒಮ್ಮೆ ನೀವು ಮಿಶ್ರಣವನ್ನು ಸರಿಯಾಗಿ ಬೆರೆಸಿಕೊಂಡ ನಂತರ, 2 ಕಪ್‌ಗಳಷ್ಟು ನೀರು ಹಾಕಿ ಮತ್ತು ಅದನ್ನು ಕುದಿಸಿ.

8. ಗ್ಯಾಸ್ ಹೆಚ್ಚಿಸಿ ನೀರನ್ನು ಚೆನ್ನಾಗಿ ಕುದಿಸಿ ನಂತರ ಮೀನಿನ ತುಂಡುಗಳನ್ನು ಸೇರಿಸಿ.

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

9. ಮೀನು ಚೆನ್ನಾಗಿ ಬೇಯುವವರೆಗೆ ಅದನ್ನು ಕುದಿಸಿ. ನಿಮ್ಮ ಮಂಗಳೂರು ಮೀನು ಕರಿ ಸಿದ್ಧವಾಗಿದೆ. ಕರಿ ಮಿಶ್ರಣವನ್ನು ತಿರುಗಿಸಬೇಡಿ ಇದರಿಂದ ಮೃದುವಾದ ಮೀನಿನ ಮಾಂಸಗಳು ತುಂಡಾಗಬಹುದು. ಪದಾರ್ಥವನ್ನು ಅರ್ಧಗಂಟೆಯವರೆಗೆ ಹಾಗೆಯೇ ಬಿಡಿ. ನಂತರ ಅನ್ನದೊಂದಿಗೆ ಸವಿಯಿರಿ.

ಮೀನು ತಿನ್ನೋದು ಆರೋಗ್ಯಕ್ಕೂ ಉತ್ತಮವಾಗಿದೆ. ಮೀನಿನಲ್ಲಿ ದೇಹಕ್ಕೆ ಅಗತ್ಯವಾಗಿರೋ ಪೋಷಕಾಂಶ ದೊರೆಯುತ್ತದೆ. ಮಕ್ಕಳಿಗೆ ಮೀನಿನ ಅಡುಗೆ ತಯಾರಿಸಿ ಕೊಡಿ. ಮಕ್ಕಳಿಗೆ ಪೋಷಕಾಂಶದ ಆಹಾರ ನೀಡಲು ಮೀನು ಅತ್ಯುತ್ತಮ ಆಹಾರವಾಗಿದೆ. ಮಂಗಳೂರು ಶೈಲಿಯಲ್ಲಿ ಮೀನಿನ ಕರಿ ಮಾಡಿ ತಿನ್ನಿ
Published by:Pavana HS
First published: