Non-Veg Recipe: ಸೈಡ್ ಡಿಶ್​ಗೆ ಮಾಡಿ ಸ್ಪೈಸಿ ಚಿಕನ್ ಸ್ಟಿಕ್, ರೆಸಿಪಿ ಇಲ್ಲಿದೆ ನೋಡಿ

ಮನೆಯಲ್ಲಿ ಸಾಮಾನ್ಯ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಸವಿರುಚಿಯ ಚಿಕನ್​ ಸ್ಟಿಕ್ ತಯಾರಿಸಬಹುದು. ಸುಲಭವಾಗಿ ಫಟಾಫಟ್​ ಎಂದು ಮಾಡಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ? ಇಂದೇ ಮನೆಯಲ್ಲಿ ಮಾಡಿ ಸ್ಪೈಸಿ ಚಿಕನ್ ಸ್ಟಿಕ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕನ್ (Chicken)​ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ನಾನ್​-ವೆಜ್​ ತಿನ್ನುವವರು ಹೆಚ್ಚಾಗಿ ಚಿಕನ್​ ಡಿಶ್​ಗಳನ್ನೇ ಇಷ್ಟ ಪಡುತ್ತಾರೆ. ಹಾಗೇ ಚಿಕನ್​ನನ್ ಅನೇಕ ವೆರೈಟಿ ಡಿಶ್​ಗಳನ್ನು ಮಾಡಬಹುದು. ಇನ್ನು ನಿತ್ಯ ಒಂದೇ ವಿಧದ ಸೈಡ್ಸ್​ ತಿಂದು ಬೇಜಾರ್​ ಆಗಿದ್ಯಾ ಆಗಿದ್ರೆ ಸ್ಪೈಸಿ ಚಿಕನ್​ ಸ್ಟಿಕ್​ (Chicken Stick) ಮಾಡಿ. ಚಿಕನ್ ಸ್ಟಿಕ್ ತಯಾರಿಸಲು ಅದಕ್ಕಾಗಿಯೇ ಸ್ಪೆಷಲ್ ಮಸಾಲ (Masala) ಹಾಗೂ ಸಾಮಾಗ್ರಿಗಳನ್ನು ಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಸಾಮಾನ್ಯ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಸವಿರುಚಿಯ ಚಿಕನ್​ ಸ್ಟಿಕ್ ತಯಾರಿಸಬಹುದು. ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದ್ದು , ಹೇಗೆ ಮಾಡುವುದು ಎಂದು ಈ ಕೆಳಗೆ ನೀಡಲಾಗಿದೆ ನೋಡಿ:

 ಚಿಕನ್​ ಸ್ಟಿಕ್ ಮಾಡಲು ಬೇಕಾಗುವ ಸಾಮಾಗ್ರಿಗಳು

* ಚಿಕನ್ ಲೆಗ್ ಪೀಸ್ 10

* ಶುಂಠಿ ಚಮಚ 1 ಚಮಚ

* ಬೆಳ್ಳುಳ್ಳಿ ಪೇಸ್ಟ್ 1 ಚಮಚ

* ಖಾರದ ಪುಡಿ 1 ಚಮಚ

* ಕರಿ ಮೆಣಸಿನ ಪುಡಿ 1 ಚಮಚ

Non-veg Recipe: ಈಸ್ಟರ್ ಸಂಡೇಗಾಗಿ ಸ್ಪೆಷಲ್ ಸ್ಪೈಸಿ ಚಿಕನ್ ಫ್ರೈ

* ಹಸಿ ಮೆಣಸಿನ ಕಾಯಿ ಪೇಸ್ಟ್ 2-3

* ವಿನಿಗರ್ 1 ಚಮಚ

* ಕೊತ್ತಂಬರಿ ಸೊಪ್ಪು 2 ಚಮಚ

* ಕಡಲೆ ಹಿಟ್ಟು 1 ಕಪ್

* ಬ್ರೆಡ್ ಚುರು 1 ಕಪ್

* ರುಚಿಗೆ ತಕ್ಕ ಉಪ್ಪು

 ಚಿಕನ್​ ಸ್ಟಿಕ್​ ಮಾಡುವ ವಿಧಾನ:

* ಚಿಕನ್ ಅನ್ನು ಸ್ವಲ್ಪ ಉದ್ದದ ತುಂಡುಗಳಾಗಿ ಕತ್ತರಿಸಿ, ಸ್ವಚ್ಛ ಮಾಡಿ ಅದಕ್ಕೆ ವಿನಿಗರ್ ಸವರಿ 10 ನಿಮಿಷ ಇಡಿ.

* ಇದೇ ಸಮಯದಲ್ಲಿ ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿ ಮೆಣಸಿನ ಪುಡಿ, ಖಾರದ ಪುಡಿ ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ, ಇದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿ 1 ಗಂಟೆ ಇಡಿ.

* ಕಡಲೆ ಹಿಟ್ಟಿಗೆ ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲೆಸಿ.

* ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಎಣ್ಣೆ ಕುದಿಯುವಾದ ಚಿಕನ್ ತುಂಡುಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚುರುಗಳಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿ-ರುಚಿಯಾದ

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ಚಿಕನ್ ಪೊಟ್ಯಾಟೊ (ಆಲೂಗಡ್ಡೆ) ಕಬಾಬ್ ಮಾಡುವ ವಿಧಾನ:

ಚಿಕನ್ ಆಲೂಗಡ್ಡೆ ಕಬಾಬ್ ಅನ್ನು ಹೇಗೆ ತಯಾರಿಸುವುದು ಎಂದು ಇಲ್ಲಿ ನೋಡಿಕೊಳ್ಳಿರಿ. ಈ ಪಾಕ ವಿಧಾನವನ್ನು ಪ್ರಾರಂಭಿಸಲು, ಮೊದಲು ಒಂದು ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆ ಮತ್ತು ಬೇಯಿಸಿದ ಚಿಕನ್ ಅನ್ನು ಅದಕ್ಕೆ ಸೇರಿಸಿ ಅವುಗಳನ್ನು ಸರಿಯಾಗಿ ಕಲಸಿ ಕೊಳ್ಳಿ. ಈಗ ಒಂದು ಟೇಬಲ್ ಚಮಚದಷ್ಟು ಗರಂ ಮಸಾಲ, ಉಪ್ಪು, ಹುರಿದ ಜೀರಾ ಪುಡಿ, ಕಾಲಿ ಮಿರ್ಚ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಗಳನ್ನು ಅದರಲ್ಲಿ ಸೇರಿಸಿಕೊಳ್ಳಿ.

ಎಲ್ಲವೂ ಮಿಶ್ರಣ ಮಾಡಿದ ನಂತರ, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳನ್ನು ಅದಕ್ಕೆ ಸೇರಿಸಿ ಮತ್ತು ಎಲ್ಲವನ್ನೂ ಮತ್ತೆ ಮಿಶ್ರಣ ಮಾಡಿಕೊಳ್ಳಿರಿ. ನಂತರ 10 ರಿಂದ 15 ನಿಮಿಷಗಳ ಕಾಲ ಆ ಮಿಶ್ರಣವನ್ನು ನಿಮ್ಮ ಫ್ರಿಜ್‌ ನಲ್ಲಿಡಿ. ಸ್ವಲ್ಪ ಸಮಯದ ನಂತರ ಆ ಕಬಾಬ್ ಮಿಶ್ರಣವನ್ನು ಹೊರಕ್ಕೆ ತೆಗೆದಿಡಿ. ನಂತರ ಅದಕ್ಕೆ ಒಂದು ದುಂಡನೆಯ ಆಕಾರ ನೀಡಿ ಎಲ್ಲಾ ಟಿಕ್ಕಿಗಳನ್ನು ಎಣ್ಣೆಯಲ್ಲಿ ಹಾಕಿಕೊಂಡು ಡೀಪ್ ಆಗಿ ಫ್ರೈ ಮಾಡಿ ಮತ್ತು ನಿಮ್ಮ ಕಬಾಬ್‌ಗಳು ಸೇವಿಸಲು ಸಿದ್ಧವಾಗಿರುತ್ತವೆ. ನಿಮ್ಮ ಮನೆಯವರಿಗೂ ಇಷ್ಟವಾಗುತ್ತೆ
Published by:Pavana HS
First published: