Non-Veg Recipe: ಜಿಟಿಜಿಟಿ ಮಳೆಗೆ ಮಂಡ್ಯ ಶೈಲಿಯ ನಾಟಿ ಪೆಪ್ಪರ್ ಕಬಾಬ್; ಸಖತ್ ಟೇಸ್ಟಿ ರೆಸಿಪಿ

ಜಿಟಿ ಜಿಟಿ ಮಳೆಗೆ ಮಂಡ್ಯ ಶೈಲಿಯ ನಾಟಿ ಪೆಪ್ಪರ್ ಕಬಾಬ್ ಮಾಡಿ ತಿನ್ನಿ. ಸಖತ್ತಾಗಿರೋ ಈ ಕಬಾಬ್​ ರೆಸಿಪಿಯನ್ನ ಒಮ್ಮೆ ಮಾಡಿ ನೋಡಿ.

ಪೆಪ್ಪರ್​ ಕಬಾಬ್​

ಪೆಪ್ಪರ್​ ಕಬಾಬ್​

  • Share this:
ಮಳೆಗಾಲ (Monsoon) ಬಂತು ಅಂದ್ರೆ ಸಾಕು ಅಪ್ಪಳ ಸಂಡಿಗೆಯನ್ನ ಮಾಡಿಕೊಂಡು ತಿನ್ನೊದು ವಾಡಿಕೆ. ಆದ್ರೆ ಮಳೆಗಾಲದಲ್ಲಿ ಖಾರ ಖಾರವಾಗಿ ಪೆಪ್ಪರ್ ಕಬಾಬ್ (Papper Kabab) ಮಾಡಿಕೊಂಡು ತಿಂದ್ರೆ ಹೇಗಿರುತ್ತೆ ಅಲ್ವಾ..? ಅರೆ ಇದ್ಯಾವುದಪ್ಪಾ ಪೆಪ್ಪರ್ ಕಬಾಬ್ ಅಂತಿದ್ದಾರೆ ಅಂತ ಯೋಚಿಸ್ತಿದ್ದೀರಾ.? ಹೌದು ಇದು ಮಂಡ್ಯ (Mandya) ಜನರ ಫೆವರೆಟ್ ಆಗಿರೋ ಹೆಲ್ದಿ ಪೆಪ್ಪರ್ ಕಬಾಬ್. ಈ ಪೆಪ್ಪರ್ ಕಬಾಬ್ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತಿನಿ ಈ ಸ್ಟೋರಿ ನೋಡಿ..

ಮಂಡ್ಯ ಜನ್ರ ಫೆವರೆಟ್ ಪೆಪ್ಪರ್ ಕಬಾಬ್, ಆರೋಗ್ಯಕ್ಕೂ ಲಾಭ

ಹೌದು.., ಪೆಪ್ಪರ್ ಕಬಾಬ್ ಮಂಡ್ಯ ಜನರ ಫೆವರೆಟ್ ಕಬಾಬ್ ಆಗಿದೆ. ಯಾಕಂದ್ರೆ ಈ ಕಬಾಬ್​ಗೆ ಯಾವುದೇ ಕೆಮಿಕಲ್ ಯುಕ್ತ ಬಣ್ಣ ಇರಲ್ಲ. ಇದು ಪಕ್ಕಾ ನಾಟಿ ಶೈಲಿಯ ರೆಸಿಪಿಯಾಗಿದೆ. ಸದ್ಯ ಈ ಪೆಪ್ಪರ್ ಕಬಾಬ್ ತಿನ್ನೋಕೆ ಮಂಡ್ಯ ಅಕ್ಕ ಪಕ್ಕದ ಜಿಲ್ಲೆಯಿಂದ ಕೂಡ ಜನರು ಆಗಮಿಸ್ತಿದ್ದಾರೆ. ಕಾರಣ ಈ ಪೆಪ್ಪರ್ ಕಬಾಬ್ ಅಷ್ಟೊಂದು ರುಚಿಕರವಾಗಿರತ್ತೆ. ಇನ್ನು ಈ ಕಬಾಬ್ ತಿನ್ನೊಕೆ ಕೂತ್ರೆ ಒಬ್ಬ ವ್ಯಕ್ತಿ ಸುಮಾರು 1 ಕೆಜಿ ವರೆಗೂ ತಿನ್ನೊದ್ರಲ್ಲಿ ಡೌಟೆ ಇಲ್ಲಾ. ಹಾಗಿದ್ಮೇಲೆ ಏಕೆ ತಡ ಈ ರೆಸಿಪಿಯನ್ನ ಹೇಗೆ ಮಾಡೋದು ಅನ್ನೋದನ್ನ ತಿಳಿದುಕೊಳ್ಳಣ ಬನ್ನಿ..

ಇದನ್ನೂ ಓದಿ: Non-Veg Recipe: ಬಕ್ರೀದ್ ಹಬ್ಬಕ್ಕೆ ಸ್ಪೆಷಲ್ ಮಟನ್ ಖೀಮಾ ರೆಸಿಪಿ

ಹೆಲ್ದಿ ಮತ್ತು ರುಚಿಕರ ಪೆಪ್ಪರ್ ಕಬಾಬ್​ಗೆ ಬೇಕಾದ ಸಾಮಗ್ರಿಗಳು..

ಹೆಲ್ದಿ ಮತ್ತು ರುಚಿಕರ ಪೆಪ್ಪರ್ ಕಬಾಬ್ ಮಾಡೋಕೆ ಬೇಕಾದ ಸಾಮಾಗ್ರಿಗಳ ಬಗ್ಗೆ ಮೊದಲು ತಿಳಿಸಿಕೊಡ್ತಿನಿ. ಆನಂತರ ಅದನ್ನ ಯಾವ ರೀತಿ ಮಾಡೋದು ಅನ್ನೊದನ್ನ ಕೂಡ ತಿಳಿಸಿಕೊಡ್ತಿನಿ.

1 ಕೆಜಿ ಚಿಕನ್

30 ಗ್ರಾಂ ಕಾಳು ಮೆಣಸು

50 ಗ್ರಾಂ ಹಸಿರು ಮೆಣಸಿನಕಾಯಿ

50 ಗ್ರಾಂ ನಾಟಿ ಬೆಳ್ಳುಳ್ಳಿ

20 ಗ್ರಾಂ ಹಸಿ ಶುಂಠಿ

ಒಂದು ಹಿಡಿ ನಾಟಿ ಪುದೀನ

ನಾಟಿ ಕೊತ್ತಂಬರಿ ಸೊಪ್ಪು

ಉಪ್ಪು

ಕಾನ್ ಫ್ಲೋರ್ 4 ಸ್ಪೋನ್

ಅರ್ಧ ನಿಂಬೆ ಹಣ್ಣು

ಮಾಡುವ ವಿಧಾನ..

ಚಿಕನ್ ಅನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಸಿದ್ದಪಡಿಸಿಟ್ಟುಕೊಂಡಿರುವ 30 ಗ್ರಾಂ ಮೆಣಸನ್ನು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ತೆಗೆದಿಟ್ಟುಕೊಂಡ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ನಾಲ್ಕು ಹನಿ ನೀರಿನೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಕೆಜಿ ಚಿಕನ್ ಹಿಡಿಸುವ ಪಾತ್ರೆಯಲ್ಲಿ ಚಿಕನ್ ಹಾಕಿ ನಂತರ ಕಾನ್ ಫ್ಲೋರ್ ಮತ್ತು ಪುಡಿ ಮಾಡಿದ ಮೆಣಸು ಹಾಗೂ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಟ್ ಮಾಡಿಟ್ಟುಕೊಂಡಿದ್ದ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 15 ನಿಮಿಷಗಳ ಕಾಲ ನೆನೆಯಲು ಬಿಡಿ. ಹೀಗೆ 15 ನಿಮಿಷಗಳ ಕಾಲ ಮ್ಯಾರಿನೆಟ್ ಆದ ಚಿಕನ್ ಅನ್ನು ಕಾದ ಎಣ್ಣೆಗೆ ಹಾಕಬೇಕು. ಹೀಗೆ ಎಣ್ಣೆಗೆ ಹಾಕಿದ ಚಿಕನ್ ಅನ್ನ ಕಡಿಮೆ‌ ಉರಿಯಲ್ಲಿ ಕರಿಯಬೇಕು. ನಾವು ಎಷ್ಟು ಕಡಿಮೆ ಉರಿಯಲ್ಲಿ ಈ ಕಬಾಬ್ ಕರಿಯುತ್ತೇವೋ, ಅಷ್ಟು ಚೆನ್ನಾಗಿ ಚಿಕನ್ ಒಳಭಾಗದಲ್ಲಿ ಬೆಯ್ಯುತ್ತದೆ.

ಇದನ್ನೂ ಓದಿ: Monsoon Snacks: ಮಳೆಗಾಲದ ಹಾಟ್ ಫೆವರಿಟ್‍ಗಳ ತಿನಿಸುಗಳ ಪಟ್ಟಿಯಲ್ಲಿ ಏನೇನಿದೆ ನೋಡಿ

ಪೆಪ್ಪರ್ ಕಬಾಬ್​ಗೆ  ರೆಡ್ ಚಟ್ನಿ ಅದ್ಬುತ

ಪೆಪ್ಪರ್ ಕಬಾಬ್ ರೆಡಿಯಾದ ಬಳಿಕ ಅದಕ್ಕೆ ರಡ್ ಚಟ್ನಿ ಅದ್ಬುತ ಕಾಂಬಿನೇಷನ್ ಆಗಿದೆ. ಹೀಗಾಗಿ ಈ ಕಬಾಬ್ ಜೊತೆಗೆ ರೆಡ್ ಚಟ್ನಿ ಕೂಡ ಮಾಡಿಕೊಂಡ್ರೆ ಒಳ್ಳೆಯದು.

ರೆಡ್ ಚಟ್ನಿ ಮಾಡಲು ಬೇಕಾದ ಸಾಮಾಗ್ರಿ ಮತ್ತು ಮಾಡುವ ವಿಧಾನ

ಚಟ್ನಿಗೆ ಬೇಕಾದಷ್ಟು ಒಣ ಮೆಣಸಿನಕಾಯಿ, ನಾಟಿ ಬೆಳ್ಳುಳ್ಳಿ, ಮೆಣಸು ಜೀರಿಗೆ, ಸ್ವಲ್ಪ ಉಳಿಗೆ ತಕ್ಕಷ್ಟು ಹುಣಸೆ ಹೆಣ್ಣು, ರುಚಿಗೆ ತಕ್ಕಷ್ಟು ಉಪ್ಪು. ಕೊತ್ತಂಬರಿ ಸೊಪ್ಪು. ಇದಿಷ್ಟು ಸಾಮಾಗ್ರಿಗಳನ್ನ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ರಡ್ ಚೆಟ್ಣಿ ರೆಡಿಯಾಗುತ್ತೆ. ಇದು ಮಂಡ್ಯದಲ್ಲಿ ಫೇಮಸ್ ಆಗಿರೋ ಪೆಪ್ಪರ್ ಕಬಾಬ್ ಮತ್ತು ರೆಡ್ ಚಟ್ನಿ. ಅಂಗಡಿಯಲ್ಲಿ ಖರೀದಿಸುವ ಕೆಮಿಕಲ್ ಪೂರಿತ ಕಬಾಬ್ ಪೌಡರ್ ಗಿಂತ, ನಾವೇ ಮನೆಯಲ್ಲಿ ಮಾಡಿಕೊಳ್ಳುವ ಈ ಪೆಪ್ಪರ್ ಕಬಾಬ್ ಸಖತ್ತಾಗಿ ರುಚಿ ಕೊಡುತ್ತೆ
Published by:Pavana HS
First published: