Non-veg Recipe: ಈಸ್ಟರ್ ಸಂಡೇಗಾಗಿ ಸ್ಪೆಷಲ್ ಸ್ಪೈಸಿ ಚಿಕನ್ ಫ್ರೈ

ಮಾಂಸ ಪ್ರಿಯರಿಗೆ ಚಿಕನ್ ಅಂದ್ರೆ ಅಚ್ಚು-ಮೆಚ್ಚು, ಅದ್ರೂ ವಿವಿಧ ಬಗೆ ಚಿಕನ್ ಫ್ರೈಗಳನ್ನು ಟೇಸ್ಟ್ ಮಾಡಲು ಕಾಯ್ತಿರುತ್ತಾರೆ. ಮನೆಯಲ್ಲೇ ಸುಲಭವಾಗಿ ಚಿಕನ್ ಫ್ರೈ ಮಾಡಬಹುದು ಹೇಗೆ ಎಂದು ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ ಶೈಲಿಯ (Keral) ಚಿಕನ್ ಫ್ರೈಯನ್ನು ನೀವು ನಿಮ್ಮ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಮಾಡಿಕೊಳ್ಳಬಹುದು. ಈ ಭಾರತೀಯ ಖಾದ್ಯವನ್ನು(Indian Food)  ನೀವು ಕೆಲವೊಂದು ಮಸಾಲೆ ಪದಾರ್ಥಗಳನ್ನು ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ಮಾಡಿಕೊಳ್ಳಬಹುದು. ನಿಸ್ಸಂಶಯವಾಗಿ ಈ ಖಾದ್ಯವನ್ನು ನೀವು ಅತಿ ಸುಲಭವಾಗಿ ತಯಾರಿಸಿಕೊಳ್ಳಬಹುದು. ಮಲೆಯಾಳಿಗಳಷ್ಟೇ ಅಲ್ಲದೆ ಇಡೀ ದಕ್ಷಿಣ ಭಾರತದ ಜನರು ಈ ಕೇರಳ ಶೈಲಿಯ ಚಿಕನ್ ಫ್ರೈಯನ್ನು (Chicken Fry) ಇಷ್ಟಪಡುತ್ತಾರೆ.  ಕೇರಳದ ರೆಸಿಪಿಗಳು (Recipes) ತಮ್ಮದೇ ಆದ ವಿಶೇಷ ಬಗೆಯ ಮಸಾಲೆ (Masala) ಪದಾರ್ಥಗಳನ್ನು ಒಳಗೊಂಡಿರುತ್ತವೆ. ಈ  ಖಾದ್ಯವನ್ನು ತಯಾರಿಸುವುದು ಸುಲಭ ಮತ್ತು ಇದರ ರುಚಿಯು ಅದ್ಭುತ. ಬನ್ನಿ ಇದನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ನಿಮಗೆ ಬೇಕಾಗಿರುವುದು

ಕೋಳಿ ಮಾಂಸ - 1/2 ಕೆ.ಜಿ (ಕತ್ತರಿಸಿದ ಮತ್ತು ಬೇಯಿಸಿದ)

ಜೀರಿಗೆ ಪುಡಿ = 2 ಟೇಬಲ್ ಸ್ಪೂನ್

ಕೆಂಪು ಮೆಣಸಿನ ಕಾಯಿ- 5-6 (ಕತ್ತರಿಸಿದಂತಹುದು)

ಬೆಳ್ಳುಳ್ಳಿ - 6-7 ತುಂಡುಗಳು

ಕರಿ ಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

1.ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಉಪ್ಪು ಮತ್ತು ಕರಿ ಬೇವುಗಳನ್ನು ಸ್ವಲ್ಪ ನೀರಿನ ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ, ಅಲ್ಲದೆ ಇದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ.

2.ಇದಾದ ಮೇಲೆ, ಈ ಪೇಸ್ಟಿನಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ಅದ್ದಿ, ನೆನೆಸಿ.

3.ತದನಂತರ ಒಂದು ಗಂಟೆಯವರೆಗೆ ಇದನ್ನು ನೆನೆಯಲು ಬಿಡಿ.

4.ಈ ಮಸಾಲೆಯು ಚೆನ್ನಾಗಿ ಕೋಳಿ ಮಾಂಸಕ್ಕೆ ಹಿಡಿದ ಮೇಲೆ, ಅದನ್ನು ತೆಂಗಿನ ಕಾಯಿ ಎಣ್ಣೆಯಲ್ಲಿ 10 ನಿಮಿಷಗಳ ಕಾಲ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿಕೊಂಡರೆ, ರುಚಿ ರುಚಿಯಾದ ಕೇರಳ ಚಿಕನ್ ಫ್ರೈ ರೆಸಿಪಿ ರೆಡಿ! ಈ ಕೇರಳ ಶೈಲಿಯ ಚಿಕನ್ ಫ್ರೈಯನ್ನು ಅನ್ನ ಅಥವಾ ರೋಟಿಗಳ ಜೊತೆಗೆ ಸೇವಿಸಬಹುದು. 

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ಚಿಕನ್ ಪೆಪ್ಪರ್ ಫ್ರೈ ಮಾಡಿ ನೋಡಿ ಸಖತ್​ ಟೇಸ್ಟಿ

ಬೇಕಾಗುವ ಪದಾರ್ಥಗಳು
*ಮೆಣಸು ಪುಡಿ - 1 ಟೀ ಚಮಚ
*ನಿಂಬೆ ರಸ - 5 ಟೀ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಅರಿಶಿಣ ಪುಡಿ -1/2 ಟೀ ಚಮಚ
*ಮಸಾಲೆ ಚಿಕನ್‍ಗೆ - ಅರ್ಧ ಕೆ.ಜಿ (ಕತ್ತರಿಸಿದಂತಹುದು)
*ಈರುಳ್ಳಿ - 3 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿಗಳು - 5 (ಉದ್ದಕ್ಕೆ ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 1 (ಜಜ್ಜಿದಂತಹುದು)
*ಶುಂಠಿ - 1 (ಜಜ್ಜಿದಂತಹುದು)
*ಕರಿಮೆಣಸಿನ ಕಾಳುಗಳು - 2 ಟೀ ಚಮಚ
*ಗರಂ ಮಸಾಲ - 1 ಟೀ ಚಮಚ
*ಜೀರಿಗೆ ಪುಡಿ - 1 ಟೀ ಚಮಚ
*ತೆಂಗಿನಕಾಯಿ ಎಣ್ಣೆ - 5 ಟೀ ಚಮಚ
*ಕರಿ ಬೇವಿನ ಎಲೆಗಳು
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ-

ಕೋಳಿ ಮಾಂಸವನ್ನು ಕುಕ್ಕರಿನಲ್ಲಿ ಹಾಕಿ ಮೂರು ನಾಲ್ಕು ವಿಷಲ್ ಕೇಳುವವರೆಗು ಬೇಯಿಸಿ.ಕೋಳಿ ಮಾಂಸ ಬೆಂದ ನಂತರ ಅದು ತಂಪಗಾಗಲು ಸ್ವಲ್ಪ ಹೊತ್ತು ಪಕ್ಕದಲ್ಲಿರಿಸಿ.  ನಂತರ, ಕೋಳಿ ಮಾಂಸದ ತುಂಡುಗಳನ್ನು ಮೆಣಸಿನ ಪುಡಿ,ನಿಂಬೆ ರಸ, ಉಪ್ಪು ಮತ್ತು ಅರಿಶಿಣ ಪುಡಿಯ ಜೊತೆಗೆ ಕಲೆಸಿ, ಹಾಗು ಇದನ್ನು 30 ನಿಮಿಷ ಹಾಗೆಯೇ ನೆನೆಸಿ.ಇನ್ನು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು, ಕರಿ ಬೇವಿನ ಎಲೆಗಳನ್ನು ಮತ್ತು ಹಸಿ ಮೆಣಸಿನ ಕಾಯಿಗಳ ಜೊತೆಗೆ ಜಜ್ಜಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ. ಈ ಮಿಶ್ರಣವನ್ನು ಪದಾರ್ಥಗಳ ಸುವಾಸನೆ ನಿಮಗೆ ತಿಳಿಯುವವರೆಗು ಚೆನ್ನಾಗಿ ಕಲೆಸಿ ಕೊಡಿರಿ. ಈರುಳ್ಳಿಗಳು ಹೊಂಬಣ್ಣಕ್ಕೆ ತಿರುಗಬೇಕು.

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

ಇದಕ್ಕೆ ಕರಿ ಮೆಣಸಿನ ಪುಡಿ, ಗರಂ ಮಸಾಲ ಮತ್ತು ಜೀರಿಗೆ ಪುಡಿಯನ್ನು ಹಾಕಿ ಒಂದು ನಿಮಿಷದವರೆಗೆ ಕಲೆಸಿಕೊಡಿ. ಪಾತ್ರೆಯಲ್ಲಿರುವ ಈ ಮಿಶ್ರಣಕ್ಕೆ ಮೆರಿನೇಟ್ ಮಾಡಿರುವ ಕೋಳಿ ಮಾಂಸದ ತುಂಡುಗಳನ್ನು ಹಾಕಿ, ಚೆನ್ನಾಗಿ ಈ ಮಿಶ್ರಣವನ್ನು ಕಲೆಸಿ ಕೊಡಿ. ಈಗ ಉರಿಯನ್ನು ಕಡಿಮೆ ಮಾಡಿ, ಮುಚ್ಚಳದಿಂದ ಬಾಣಲೆಯನ್ನು ಮುಚ್ಚಿ. ಈ ಮಿಶ್ರಣವನ್ನು ಮತ್ತೆ 20 ನಿಮಿಷಗಳ ಕಾಲ ಹಾಗೆಯೆ ಬಿಡಿ. ಆದರೆ ಪ್ರತಿ ಐದು ನಿಮಿಷಗಳಿಗೆ ಒಮ್ಮೆ ಈ ಮಿಶ್ರಣವನ್ನು ಕಲೆಸಿ ಕೊಂಡಿರಿ . ಒಮ್ಮೆ ಈ ಕೋಳಿ ಮಾಂಸದ ಖಾದ್ಯವು ತಯಾರಾದ ಮೇಲೆ, ಈ ಮಿಶ್ರಣವು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಒಮ್ಮೆ ಖಾದ್ಯದ ರುಚಿಯನ್ನು ಪರೀಕ್ಷಿಸಿ, ನಂತರ ಬಡಿಸಬಹುದು.
Published by:Pavana HS
First published: