Breakfast Recipe: ಯುಗಾದಿ ಹೊಸತೊಡಕಿಗೆ ಸ್ಪೆಷಲ್ ಬಿರಿಯಾನಿ ಮಾಡಿ

ಅನೇಕರು ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಬಿರಿಯಾನಿ ಸವಿಯಲು ಇಷ್ಟ ಪಡುತ್ತಾರೆ. ಆದ್ರೆ ಹೊರಗಡೆ ಬಿರಿಯಾನಿ ತಿನ್ನುವುದಕ್ಕಿಂತ ಮನೆಯಲ್ಲೇ ಮಾಡಿ ತಿನ್ನೋದು ಅತ್ಯುತ್ತಮವಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ನಾನ್​ ವೆಜ್(Non-veg) ಅಂದ್ರೆ ಸಾಕು ತಟ್​ ಅಂತ ನೆನಪಾಗೋದು ಬಿರಿಯಾನಿ,  ಈ ಹೆಸರು ಕೇಳಿದರೇ ಸಾಕು ತಕ್ಷಣ ತಿನ್ನುವ ಬಯಕೆಯಾಗುತ್ತದೆ. ಬಹಳ ಮಂದಿ ಇಷ್ಟ ಪಡುವ ಚಿಕನ್ ಬಿರಿಯಾನಿ (Chicken Biryani ) ಮಾಡೋದು ಸ್ವಲ್ಲ ಕಷ್ಟ. ಆದ್ರೂ ಅದನ್ನು ತಿನ್ನಲು ಸಖತ್ ರುಚಿಯಾಗಿದರುತ್ತೆ. ಚಿಕನ್ ಬಿರಿಯಾನಿ ಎಂತಹ ಖಾದ್ಯವೆಂದರೆ, ಎಂಟರಿಂದ ಹದಿನೆಂಟು ವಯಸ್ಸಿನ ಎಲ್ಲರನ್ನು ಆಕರ್ಷಿಸುತ್ತದೆ.  ಹಬ್ಬ (Festival) ಹರಿದಿನಗಳಲ್ಲೂ ಬಿರಿಯಾನಿ ಹೆಚ್ಚಾಗಿ ರೂಢಿಯಾಗಿದೆ. ಯುಗಾದಿ (Ugadi) ಹೊಸತಡುಕಿಗೆ ಬಿರಿಯಾನಿ ಇದ್ರೆ ಸಾಕು. ಮನೆಗಳಲ್ಲಿ ಅನೇಕರಿಗೆ ಕೆಲ  ಸಂದರ್ಭಗಳಲ್ಲಿ ಬಿರಿಯಾನಿ ಇದ್ದರೆ ಸಾಕು ಜನರಿಗೆ ಬೇರೇನು ಬೇಕಿಲ್ಲ.

ನಮ್ಮ ದೇಶದ ಹಲವು ರಾಜ್ಯಗಳಲ್ಲಿ ವಿಭಿನ್ನವಾಗಿ ಬಿರಿಯಾನಿ ಮಾಡ್ತಾರೆ.  ನಿರ್ದಿಷ್ಟವಾಗಿ, ಬಿರಿಯಾನಿ ಅವಾದ್ ಶೈಲಿಯ ಖಾದ್ಯ. ಹೈದರಾಬಾದಿ ಶೈಲಿ ಇದಕ್ಕಿಂತ ವಿಭಿನ್ನ. ನೀವು ಕೋಲ್ಕತ್ತಾ ಬಿರಿಯಾನಿ ಸವಿದರೆ, ಆಲೂ ಗಡ್ಡೆ, ಚಿಕನ್ ಹಾಗೂ ಮಾಂಸದ ಕಾಂಬಿನೇಷನ್ ಮಸಾಲ ಅನ್ನದ ಜೊತೆ ವಿಭಿನ್ನ ರುಚಿಯನ್ನು ಕೊಡುತ್ತದೆ

ವಿವಿಧ ರಾಜ್ಯಗಳಲ್ಲಿ ಬಿರಿಯಾನಿಯನ್ನು ವಿವಿಧ ರೀತಿಯಲ್ಲಿ ತಯಾರಿಸುವುದನ್ನು ನಾವು ಕಾಣುತ್ತೇವೆ. ಮಕ್ಕಳಿಂದ ಮುದುಕರವರೆಗೆ ಬಿರಿಯಾನಿಯನ್ನು ಎಲ್ಲರು ಇಷ್ಟ ಪಡುತ್ತಾರೆ. ಅನೇಕರು ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಬಿರಿಯಾನಿ ಸವಿಯಲು ಇಷ್ಟ ಪಡುತ್ತಾರೆ. ಆದ್ರೆ ಹೊರಗಡೆ ಬಿರಿಯಾನಿ ತಿನ್ನುವುದಕ್ಕಿಂತ ಮನೆಯಲ್ಲೇ ಮಾಡಿ ತಿನ್ನೋದು ಅತ್ಯುತ್ತಮವಾಗಿದೆ.  ಮನೆಗೆ ಬಂದ ಅತಿಥಿಗಳನ್ನು ತೃಪ್ತಿ ಪಡಿಸಲು ಚಿಕನ್ ಬಿರಿಯಾನಿ ಮನೆಯಲ್ಲೇ ತಯಾರಿಸಬೇಕೆಂದರೆ, ಕೆಳಗೆ ನೀಡಲಾಗಿರುವ ಕ್ರಮವನ್ನು ಅನುಸರಿಸಿ.

ಇದನ್ನೂ ಓದಿ: Non-Veg Recipe: ಯುಗಾದಿ ಹೊಸತೊಡಕಿಗೆ ಸುಲಭವಾಗಿ ಮಾಡಿ ಮಟನ್ ಮಸಾಲ

ಚಿಕನ್​ ಬಿರಿಯಾನಿ ಮಾಡಲು ಬೇಕಾಗಿರೋ  ಸಾಮಗ್ರಿಗಳು:

ಚಿಕನ್ - 500 ಗ್ರಾಂ(ಬೋನ್ಲೆಸ್)

ಅರಿಶಿನ ಪುಡಿ - 1 ಟೀ ಚಮಚ

ಮೊಸರು - 1 ಕಪ್

ಗರಂ ಮಸಾಲ - 1 ಟೀ ಚಮಚ

ಅಚ್ಚ ಖಾರದ ಪುಡಿ - 2 ಟೇಬಲ್ ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಶುಂಠಿ ಪೇಸ್ಟ್ - 1 ಟೇಬಲ್ ಚಮಚ

ಬೆಳ್ಳುಳ್ಳಿ ಪೇಸ್ಟ್ - ಒಂದೂವರೆ ಟೇಬಲ್ ಚಮಚ

ತುಪ್ಪ - 3 ಟೇಬಲ್ ಚಮಚ

ಕರಿದ ಈರುಳ್ಳಿ - 1 ಕಪ್

ಬಾಸ್ಮತಿ ಅಕ್ಕಿ - 2 ಕಪ್ಸ್ (ನೀರಿನಲ್ಲಿ ನೆನಸಿರಬೇಕು)

ಮಾಸಾಲೆ ಬೇಕಾಗುವಷ್ಟು

ಡ್ರೈ ಫ್ರೂಟ್ಸ್ - 1 ಕಪ್ (ಹೆಚ್ಚಿದ್ದು)

ಕೇಸರಿ ನೀರು - 2 ಟೇಬಲ್ ಚಮಚ

ರೋಸ್ ವಾಟರ್ - 1 ಟೇಬಲ್ ಚಮಚ

ಕೆವ್ರ ವಾಟರ್ - 1 ಟೇಬಲ್ ಚಮಚ

 ಚಿಕನ್​​​ ಮಾಡುವ ನಿಧಾನ:

1. ಚಿಕನ್ ತುಂಡುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ, ಮೊಸರು, ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಗರಂ ಮಸಾಲ ಪುಡಿಯನ್ನು ಹಾಕಬೇಕು.

2. ಚಿಕನ್ ನನ್ನು ಎಲ್ಲಾ ಮಸಾಲಗಳ ಜೊತೆ ಮ್ಯಾರಿನೇಟ್ ಮಾಡಿ, 2 ಗಂಟೆಗಳ ಕಾಲ ಬಿಡಬೇಕು.

3. ಒಂದು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಮ್ಯಾರಿನೇಟ್ ಮಾಡಿದ ಚಕನ್ ತುಂಡುಗಳನ್ನು ಹಾಕಿ ಕೈ ಆಡಿಸಿ.

ಇದನ್ನೂ ಓದಿ: Non-Veg Recipe: ಸ್ಪೈಸಿ ಪನೀರ್ ಚಿಕನ್ ಮಾಡೋದು ತುಂಬಾ ಸುಲಭ

4. ಅದಕ್ಕೆ ಕರಿದ ಈರುಳ್ಳಿ, ಹಾಗು ಡ್ರೈ ಫ್ರೂಟ್ಸ್ ಹಾಕಿ ಚಿಕನ್ ತುಂಡುಗಳು ಅರ್ಧ ಬೇಯುವವರೆಗೂ ಬೇಯಿಸಿ ಪಕ್ಕಕ್ಕೆ ಇಡಿ.

5. ಒಂದು ಸಾಸ್ ಪ್ಯಾನ್ ಅನ್ನು ತೆಗೆದುಕೊಂಡು ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಎಲ್ಲಾ ಮಸಾಲೆಗಳನ್ನು ಅದಕ್ಕೆ ಹಾಕಿ.

6. ಮೊದಲೇ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ ಶೇಕಡ 80 ರಷ್ಟು ಬೇಯಿಸಿ.

7. ಈಗ ಚಿಕನ್ ಅನ್ನು ತೆಗೆದುಕೊಂಡು ದೊಡ್ಡ ಪಾತ್ರೆಯ ಬುಡದಲ್ಲಿಟ್ಟು ಅದನ್ನು ಅನ್ನದಿಂದ ಮುಚ್ಚಿರಿ.
Published by:Pavana HS
First published: