Non-Veg Recipe: ಭಾನುವಾರದ ಬಾಡೂಟಕ್ಕೆ ಮಾಡಿ ಹೋಟೆಲ್ ಸ್ಟೈಲ್ ಮಟನ್ ಸಾಂಬರ್

 ನಾವು ಹೋಟೆಲ್​ ಶೈಲಿಯಲ್ಲಿ ರುಚಿಕರ ಮಟನ್ ಸಾಂಬರ್​ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಿದ್ದೇವೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾನುವಾರ (Sunday) ಅಂದ್ರೆ ಅನೇಕರ ಮನೆಯಲ್ಲಿ ನಾನ್​ ವೆಜ್​ (Non-Veg) ಇರಲೇಬೇಕು. ನಾನ್​ ವೆಜ್​ ಪ್ರಿಯರು ಹೋಟೆಲ್​ ಟೆಸ್ಟ್​ ಬಳಿಕ ಮನೆಯಲ್ಲೂ ಅದೇ ರುಚಿ (Tasty) ಬಯಸುತ್ತಾರೆ.  ಉತ್ತರ ಭಾರತದ ಅಡುಗೆ ರುಚಿ ಮಾಡ ಬಯಸುವುದಾದರೆ ಡಾಬಾ, ಹೋಟೆಲ್​ ಗಳಿಗೆ (Hotel) ಹೋಗಬೇಕು. ಅಲ್ಲಿ ತಯಾರಿಸುವ ಪ್ರತಿಯೊಂದು ಅಡುಗೆಯೂ ರುಚಿಯಾಗಿರುತ್ತವೆ. ಈ ಹೋಟೆಲ್ ಶೈಲಿಯ ಅಡುಗೆಯನ್ನೂ ಅಷ್ಟೇ ರುಚಿಕರವಾಗಿ ನೀವು ಕೂಡ ತಯಾರಿಸಬಹುದು.

ನಾವು ಹೋಟೆಲ್​ ಶೈಲಿಯಲ್ಲಿ ರುಚಿಕರ ಮಟನ್ ಸಾಂಬರ್​ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಿದ್ದೇವೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ

ಬೇಕಾಗುವ ಸಾಮಾಗ್ರಿಗಳು

ಮಟನ್ ಅರ್ಧ ಕೆಜಿ
ಈರುಳ್ಳಿ 2
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಟೊಮೆಟೊ ಪೇಸ್ಟ್ 1 ಕಪ್
ಬೆಳ್ಳುಳ್ಳಿ ಎಸಳು 5-6
ಹಸಿ ಮೆಣಸಿನ ಕಾಯಿ 2
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ 1 ಚಮಚ
ಕೊತ್ತಂಬರಿ ಪುಡಿ 11/2 ಚಮಚ
ಸಕ್ಕರೆ ಅರ್ಧ ಚಮಚ
ಜೀರಿಗೆ 1 ಚಮಚ
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಲವಂಗ 2-3
ಏಲಕ್ಕಿ 2
ಪಲಾವ್ ಎಲೆ1
ರುಚಿಗೆ ತಕ್ಕ ಉಪ್ಪು
ತುಪ್ಪ
ನೀರು 2 ಕಪ್

ತಯಾರಿಸುವ ವಿಧಾನ:

* 4 ಚಮಚ ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಮಟನ್ ಹಾಕಿ ಸಾಧಾರಣ ಉರಿಯಲ್ಲಿ ಮಟನ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ನೀರು ಹಾಕಿ ಸ್ವಲ್ಪ ಗಟ್ಟಿ ಪೇಸ್ಟ್ ರೀತಿ ಮಾಡಿಡಿ.

* ಈಗ ಮತ್ತೊಂದು ಪಾತ್ರೆಯನ್ನು ತೆಗದು ಅದರಲ್ಲಿ 2 ಚಮಚ ತುಪ್ಪ ಹಾಕಿ ಅದಕ್ಕೆ ಪಲಾವ್ ಎಲೆ, ಏಲಕ್ಕಿ, ಚಕ್ಕೆ ಲವಂಗ ಹಾಕಿ 2 ಸೆಕೆಂಡ್ ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ಟೊಮೆಟೊ ಪೇಸ್ಟ್ ಮತ್ತು ಕಲೆಸಿದ ಮಸಾಲೆ ಪೇಸ್ಟ್ ಹಾಕಿ ಕುದಿಸಿ. ನಂತರ ಮಟನ್ ತುಂಡುಗಳನ್ನು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ, ಸಾರು ಕುದಿ ಬರುವಾಗ ಸ್ವಲ್ಪ ಸಕ್ಕರೆ ಹಾಕಿ.

* ಮಟನ್ ಬೆಂದ ಮೇಲೆ ಉರಿಯಿಂದ ಇಳಿಸಿದರೆ ರುಚಿಕರವಾದ ಮಟನ್ ಸಾಂಬರ್​ ರೆಡಿ.

ಮತ್ತೊಂದು ರೆಸಿಪಿ ಗ್ರೀನ್​ ಚಿಲ್ಲಿ ಚಿಕನ್​ 

ಅಗತ್ಯವಾದ ಪದಾರ್ಥಗಳು
 *ಕೋಳಿ ಮಾಂಸ - 1 ಕೆ.ಜಿ

*ಹಸಿ ಮೆಣಸಿನಕಾಯಿಗಳು- 1 ಕಪ್ (ಸಣ್ಣದು)

*ಈರುಳ್ಳಿ - 2 (ಸೀಳಾಗಿ ಕತ್ತರಿಸಿದಂತಹುದು)
 *ಬೆಳ್ಳುಳ್ಳಿ - 10 ತುಂಡು

*ಶುಂಠಿ - 1 ಮಧ್ಯಮ ಗಾತ್ರದ್ದು

*ತಾಜಾ ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದಂತಹುದು)

*ರುಚಿಗೆ ತಕ್ಕಷ್ಟು ಉಪ್ಪು

*ಅರಿಶಿನಪುಡಿ - 1 ಟೀ. ಚಮಚ

*ಕೊತ್ತೊಂಬರಿ ಪುಡಿ- 2 ಟೀ. ಚಮಚ

*ಜೀರಿಗೆ ಪುಡಿ- 1 ಟೀ. ಚಮಚ

*ಗರಂ ಮಸಾಲ ಪುಡಿ- 1ಟೀ. ಚಮಚ

*ಜೀರಿಗೆ - 1 ಟೀ. ಚಮಚ

*ಎಣ್ಣೆ- 3 ಟೀ. ಚಮಚ

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ತಯಾರಿಸುವ ವಿಧಾನ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಮತ್ತು ಉಪ್ಪಿನ ಜೊತೆಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ.

*ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅವುಗಳನ್ನು ಅರ್ಧ ಗಂಟೆಗಳ ಕಾಲ ಈ ಮಿಶ್ರಣದಲ್ಲಿ ನೆನೆಸಿ ಅಂದರೆ ಮೆರಿನೇಟ್ ಮಾಡಿ.

*ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಜೀರಿಗೆಯನ್ನು ಹಾಕಿ ಕೆಲ ನಿಮಿಷಗಳ ಕಾಲ ಉರಿಯಿರಿ.

*ಇದಕ್ಕೆ ಎಲ್ಲಾ ಹಸಿ ಮೆಣಸಿನ ಕಾಯಿಗಳನ್ನು ಹಾಕಿ, ಮೇಲೆ ಸ್ವಲ್ಪ ಉಪ್ಪು ಹಾಕಿ ಮತ್ತು ಮೆಣಸಿನಕಾಯಿಯ ಬಣ್ಣವು ಬದಲಾಗುವವರೆಗೆ ಉರಿಯಿರಿ.

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

*ಈಗ ಕೋಳಿ ಮಾಂಸವನ್ನು ಮಧ್ಯಮ ಗಾತ್ರದ ಉರಿಯಲ್ಲಿ 6-7 ನಿಮಿಷಗಳ ಕಾಲ ಉರಿಯಿರಿ.

*ನಂತರ ಇದಕ್ಕೆ ಕೊತ್ತೊಂಬರಿ ಪುಡಿ, ಉರಿದ ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಗರಂ ಮಸಾಲ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಬೇಯಿಸಿ.

*ಈಗ ಚಿಕನ್ ಹಾಕಿದ ಕಡಾಯಿ ಮುಚ್ಚಿ, ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಆಗಾಗ ಇದನ್ನು ತಿರುವಿ ಕೊಡಿ.

*ಇದೆಲ್ಲ ಮುಗಿದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಉರಿಯನ್ನು ಆರಿಸಿ ಮತ್ತು ನಿಮ್ಮ ಮನೆ ಮಂದಿಗೆ ಬಡಿಸಿ. ಇದೀಗ ನಿಮ್ಮ ಮುಂದೆ ಖಾರವಾದ ಮತ್ತು ಮಸಾಲೆಯುತವಾದ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ಪರೋಟ ರೋಟಿಗಳ ಜೊತೆಗೆ ಸವಿಯಿರಿ.
Published by:Pavana HS
First published: