Non-Veg Recipe: ಭಾನುವಾರಕ್ಕೆ ರುಚಿಕರ ಹಳ್ಳಿ ಸ್ಟೈಲ್​ ಫಿಶ್​ ಕರಿ

ಹಿಂದಿನ ಕಾಲದ ರುಚಿಯನ್ನು ಮತ್ತೊಮ್ಮೆ ಪಡೆಯಲು ಮಡಿಕೆಗಳಿಂದ ಅಡುಗೆ ಮಾಡಿ ನೋಡಿ. ಹಳ್ಳಿಯಲ್ಲಿ ಅಜ್ಜಿ ಮಾಡುವ ರೀತಿ ಫಿಶ್​ ಕರಿ ಮಾಡೋದನ್ನು ಇಲ್ಲಿ ತಿಳಿಸಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಯುವಜನತೆಗೆ (Youths) ಇಷ್ಟವಾಗುವ ಫಾಸ್ಟ್ ಫುಡ್‌ಗಿಂತಲೂ (Fast Food) ನಮ್ಮ ಅಜ್ಜಿಯರು ತಮ್ಮ ಹಿಂದಿನ ವಿಧಾನದ ಮೂಲಕ ಕೊಂಚ ನಿಧಾನವಾಗಿಯಾದರೂ ಸರಿ, ತುಂಬಾ ರುಚಿಯಾದ ಅಡುಗೆಗಳನ್ನು ಮಾಡುತ್ತಿದರಲ್ಲ? ಇವರ ಅಡುಗೆಯ ರುಚಿಗೆ ಪ್ರಮುಖ ಕಾರಣವೆಂದರೆ ಇವರು ಬಳಸುತ್ತಿದ್ದ ಪಾತ್ರೆ ಅಥವಾ ಮಣ್ಣಿನ ಮಡಿಕೆ. ಇವರು ಮಣ್ಣಿನ ಮಡಿಕೆಯಲ್ಲಿ ಮೀನು, (Fish) ಮಾಂಸದ ಹಲವಾರು ಅಡುಗೆಗಳನ್ನು (Dishes) ಮಾಡುತ್ತಿದ್ದು ಇದರ ರುಚಿ (Tasty) ನಮ್ಮ ಬಾಲ್ಯವನ್ನು ನೆನೆಸುವಂತಿರುತ್ತದೆ.

ಇಂದಿನ ಗಡಿಬಿಡಿಯ ದಿನಗಳಲ್ಲಿ ಮಡಿಕೆ ನಮ್ಮ ಅಡುಗೆ ಮನೆಗಳಿಂದ ಬಿಡಿ, ಮಾರುಕಟ್ಟೆಯಿಂದಲೇ ಮಾಯವಾಗಿದೆ. ಮಡಿಕೆಯಲ್ಲಿ ಅಡುಗೆ ಮಾಡಲು ತುಂಬಾ ಹೊತ್ತು ಬೇಕೆಂಬುದೇ ಇದರ ಬಳಕೆಗೆ ಇಂದಿನವರು ನೀಡುವ ಮೊದಲ ನೆಪ! ತುಂಬಾ ಹೊತ್ತು ತೆಗೆದುಕೊಂಡರೂ ಹಿಂದಿನ ದಿನದ ರುಚಿಯನ್ನು ಮತ್ತೊಮ್ಮೆ ಪಡೆಯಲು ಈ ಮಡಿಕೆಯ ಅಡುಗೆಯೊಂದನ್ನು ಇಂದೇಕೆ ಪ್ರಯತ್ನಿಸಬಾರದು? ಈ ಮೂಲಕ ನಮ್ಮ ಮಕ್ಕಳಿಗೂ ಹಿಂದಿನ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಂತಾಗುತ್ತದೆ ಅಲ್ಲವೇ?

ಅಗತ್ಯವಿರುವ ಸಾಮಾಗ್ರಿಗಳು

ಮೀನು - 4 (ಮಧ್ಯಮ ಅಥವಾ ಚಿಕ್ಕ ಗಾತ್ರದ, ಇಡಿಯ, ನಿಮ್ಮ ಆಯ್ಕೆಯ ಯಾವುದೇ ತಾಜಾ ಮೀನು)

ಹಸಿಶುಂಠಿ - 1 ಚಿಕ್ಕ ಚಮಚ (ಚಿಕ್ಕದಾಗಿ ಹೆಚ್ಚಿದ್ದು)

ಈರುಳ್ಳಿ - 5-8 (ಹೆಚ್ಚಿದ್ದು)

ಬೆಳ್ಳುಳ್ಳಿ - 5-8 ಎಸಳು (ಹೆಚ್ಚಿದ್ದು)

ಕರಿಬೇವು - 1 ಇಡಿಯ ಎಲೆ

ಹುಣಸೆಹುಳಿಯ ರಸ - ಅರ್ಧ ಕಪ್

ಕೊಬ್ಬರಿ ಎಣ್ಣೆ - 2 ದೊಡ್ಡ ಚಮಚ

ಟೊಮೇಟೋ- 1 (ಹೆಚ್ಚಿದ್ದು)

ಕೆಂಪು ಮೆಣಸಿನ ಪುಡಿ - 2 ಚಿಕ್ಕ ಚಮಚ

ಧನಿಯ ಪುಡಿ - ¾ ಚಿಕ್ಕ ಚಮಚ

ಕಾಳುಮೆಣಸಿನ ಪುಡಿ - 1 ಚಿಕ್ಕ ಚಮಚ

ಅರಿಶಿನ ಪುಡಿ - ¼  ಚಿಕ್ಕ ಚಮಚ

*ಉಪ್ಪು ರುಚಿಗನುಸಾರ

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

ಫಿಶ್​ ಕರಿ ಮಾಡುವ ವಿಧಾನ:

*ಮೊದಲು ಮೀನನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ, ಒಳಭಾಗದಲ್ಲಿ ಯಾವುದೇ ಅಂಗ ಅಥವಾ ರಕ್ತ ಇರದಂತೆ ನೋಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಅಂದರೆ, ಈರುಳ್ಳಿಯ ಅರ್ಧ ಭಾಗ, ಧನಿಯ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಟೊಮೇಟೋ ಎಲ್ಲವನ್ನೂ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

*ಈಗ ಮಡಿಕೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ಪಾತ್ರೆಯ ಮೇಲಿಟ್ಟು ಬಿಸಿಮಾಡಿ.

*ಕೊಂಚ ಬಿಸಿಯಾದ ಬಳಿಕ ಎಣ್ಣೆ ಹಾಕಿ ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಬಾಡಿಸಿ.

*ಬಳಿಕ ಮಿಕ್ಸಿಯಲ್ಲಿ ಕಡೆದಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಈ ಮಸಾಲೆಯಿಂದ ಎಣ್ಣೆ ಬಿಡುವವರೆಗೂ ತಿರುವುತ್ತಿರಿ.

*ಇನ್ನು ಹುಣಸೆ ರಸ ಬೆರೆಸಿ ಮಿಶ್ರಣ ಮಾಡಿ. ನಿಮ್ಮ ಆದ್ಯತೆ ತಕ್ಕಷ್ಟು ನೀರು ಸೇರಿಸಿ ನಡುನಡುವೆ ತಿರುವುತ್ತಾ ಕುದಿಸಿ. ನೀರು ಕುದಿಯಲು ಆರಂಭವಾದ ಬಳಿಕ ಮೀನು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಮೀನು ಬೇಯುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿ.

*ಕೆಲವು ನಿಮಿಷಗಳ ಬಳಿಕ ಸಾರಿನ ರುಚಿಯನ್ನು ನೋಡಿ ಅಗತ್ಯವೆನಿಸಿದಷ್ಟು ಉಪ್ಪು ಸೇರಿಸಿ.

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

*ಮೀನು ಬೆಂದಿದೆ ಎಂದು ಖಾತ್ರಿಯಾದ ಬಳಿಕ ಮಡಕೆಯನ್ನು ಸ್ಟವ್​  ಮೇಲಿನಿಂದ ತೆಗೆದು ಪಕ್ಕಕ್ಕೆ ಇಡಿ.

*ಈ ಸಾರನ್ನು ತಕ್ಷಣವೇ ಬಡಿಸದೇ ಒಂದು ಘಂಟೆಯಾದರೂ ಹೀಗೇ ಇರುವಂತೆ ನೋಡಿಕೊಳ್ಳಿ. ಬಳಿಕ ಬಡಿಸಿ. ಅಜ್ಜಿಯ ಮೀನಿನ ಸಾರಿನ ರುಚಿಯನ್ನು ನಿಮ್ಮ ಮನೆಯ ಸದಸ್ಯರು ಮೆಚ್ಚದೇ ಇರಲಾರರು.

ಮೀನು ತಿನ್ನುವಾಗ ಸ್ವಲ್ಪ ಎಚ್ಚರ ಮೀನುಗಳಿರುವ ಮೀನನ್ನು ನಿಧಾನವಾಗಿ ತಿನ್ನೋದು ಉತ್ತಮವಾಗಿರುತ್ತೆ.
Published by:Pavana HS
First published: