ಈರುಳ್ಳಿ-ಬೆಳ್ಳುಳ್ಳಿ ಬಳಸದೆ ಮಾಡುವ ರುಚಿಯಾದ ಖಾದ್ಯಗಳು ಇಲ್ಲಿವೆ

ಈರುಳ್ಳಿ-ಬೆಳ್ಳುಳ್ಳಿ ಇಲ್ಲದೆಯೂ ರುಚಿಯಾಗಿ ಅಡುಗೆ ತಯಾರಿಸಬಹುದೆಂಬ ವಿಷಯ ನಿಮಗೆ ಗೊತ್ತೆ? ಹೌದು ಅಡುಗೆಗೆ ಈರುಳ್ಳಿ-ಬೆಳ್ಳುಳ್ಳಿ ಬಳಸದೆ ರುಚಿ-ರುಚಿಯಾದ ಖಾದ್ಯಗಳನ್ನು ಮಾಡಬಹುದಾಗಿದೆ. ಹೇಗೆ ಅಂತೀರಾ. ಇಲ್ಲಿದೆ ಪಟ್ಟಿ.

ಆಲೂ ಪಾಲಾಕ್​​

ಆಲೂ ಪಾಲಾಕ್​​

  • Share this:
ದೇಶಾದ್ಯಂತ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದೆ. ಅಡುಗೆ ಮನೆಯಲ್ಲಿ ಈರುಳ್ಳಿ ಇಲ್ಲದೇ ಅಡುಗೆ ಮಾಡುವುದಾದರೂ ಹೇಗೆ ಎಂದು ಗೃಹಿಣಿಯರು ಚಿಂತೆಯಲ್ಲಿದ್ದಾರೆ. ಈರುಳ್ಳಿ-ಬೆಳ್ಳುಳ್ಳಿ ಇಲ್ಲದೆಯೂ ರುಚಿಯಾಗಿ ಅಡುಗೆ ತಯಾರಿಸಬಹುದೆಂಬ ವಿಷಯ ನಿಮಗೆ ಗೊತ್ತೆ? ಹೌದು ಅಡುಗೆಗೆ ಈರುಳ್ಳಿ-ಬೆಳ್ಳುಳ್ಳಿ ಬಳಸದೆ ರುಚಿ-ರುಚಿಯಾದ ಖಾದ್ಯಗಳನ್ನು ಮಾಡಬಹುದಾಗಿದೆ. ಹೇಗೆ ಅಂತೀರಾ. ಇಲ್ಲಿದೆ ಪಟ್ಟಿ.

1. ಪರಂಗಿ ಹಣ್ಣಿನ ಕಟ್ಟಾ-ಮಿಟ್ಟಾ

ಪರಂಗಿ ಹಣ್ಣಿನ ಕಟ್ಟಾ-ಮಿಟ್ಟಾ ಮಾಡಲು ಈರುಳ್ಳಿ-ಬೆಳ್ಳುಳ್ಳಿ ಬೇಡ. ಅತಿ ಸುಲಭವಾಗಿ ರುಚಿಯಾಗಿ ತಯಾರಿಸಬಹುದಾದ ಖಾದ್ಯ ಇದಾಗಿದೆ.

ಬೇಕಾಗಿರುವ ಸಾಮಗ್ರಿಗಳು
ಪರಂಗಿ ಹಣ್ಣು- 1
ಹಸಿರು ಮೆಣಸಿನಕಾಯಿ-2
ನಿಂಬೆಹಣ್ಣಿನ ಜ್ಯೂಸ್​- 1 ಟೀ ಚಮಚ
ಕೊತ್ತಂಬರಿ ಸೊಪ್ಪು
ಉಪ್ಪು- ರುಚಿಗೆ ತಕ್ಕಷ್ಟು
ಸಕ್ಕರೆ-ರುಚಿಗೆ ತಕ್ಕಷ್ಟು
ವೆಜಿಟೇಬಲ್ ಆಯಿಲ್-1 ಟೇಬಲ್ ಚಮಚ

ಕಟ್ಟಾ-ಮಿಟ್ಟಾ


ಮಾಡುವ ವಿಧಾನ
ಪರಂಗಿ ಹಣ್ಣಿನ ಸಿಪ್ಪೆ ತೆಗೆದು, ತುರಿದುಕೊಳ್ಳಬೇಕು. ಹಸಿರು ಮೆಣಸಿನಕಾಯಿಯನ್ನು ಕಟ್​ ಮಾಡಿಕೊಳ್ಳಬೇಕು. ಬಳಿಕ ಒಲೆ ಹಚ್ಚಿ ನಾನ್-ಸ್ಟಿಕ್ ಪ್ಯಾನ್‌ನಲ್ಲಿ, ಒಂದು ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ. ತುರಿದ ಪಪ್ಪಾಯಿ, ಕತ್ತರಿಸಿದ ಹಸಿ ಮೆಣಸಿನಕಾಯಿ, ಸಕ್ಕರೆ ಮತ್ತು ಉಪ್ಪು ಸೇರಿಸಿ. ಪರಂಗಿ ಮೃದುವಾಗುವವರೆಗೆ ಒಂದೆರಡು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬಾಡಿಸಬೇಕು. ನಿಂಬೆ ರಸ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ಪರಂಗಿ ಹಣ್ಣಿನ ಕಟ್ಟಾ-ಮಿಟ್ಟಾ ಈಗ ತಿನ್ನಲು ಸಿದ್ಧವಾಗಿದೆ.

2. ಆಲೂ ಪಾಲಾಕ್​

ಈರುಳ್ಳಿ ಬೆಳ್ಳುಳ್ಳಿ ಬಳಸದೆ ಆಲೂಗೆಡ್ಡೆಯಿಂದ ರುಚಿಯಾದ ಆಲೂ ಪಾಲಾಕ್​​ ಖಾದ್ಯ ತಯಾರಿಸಿ.

ಬೇಕಾಗಿರುವ ಸಾಮಗ್ರಿಗಳು
ಬೇಯಿಸಿದ ಆಲೂಗೆಡ್ಡೆ-3
ಪಾಲಾಕ್​ ಸೊಪ್ಪು-ಒಂದು ಕಟ್ಟು
ಯಂಗರ್ಟ್​​-1/2 ಕಪ್​
ಜೀರಿಗೆ ಪುಡಿ - 1/2 ಟೀಸ್ಪೂನ್
ಕೊತ್ತಂಬರಿ ಪುಡಿ - 1 ಟೀಸ್ಪೂನ್
ಅರಿಶಿನ ಪುಡಿ - 1/2 ಟೀಸ್ಪೂನ್
ಹಸಿ ಮೆಣಸಿನಕಾಯಿ - 2-3
ಎಣ್ಣೆ - 2 ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಎಳ್ಳು - 2 ಟೀ ಚಮಚ

ಆಲೂ ಪಾಲಾಕ್​


ಬೇಯಿಸಿದ ಆಲೂಗೆಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ತೊಳೆದ ಪಾಲಾಕ್​ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಳ್ಳನ್ನು ಬಾಣಲಿಯಲ್ಲಿ ಉರಿದುಕೊಳ್ಳಿ. ನಂತರ ನಾನ್​ ಸ್ಟಿಕ್​ ಪಾನ್​ಗೆ 2 ಟೀ ಚಮಚ ಎಣ್ಣೆ ಹಾಕಿ, ಅದು ಬಿಸಿಯಾದ ಬಳಿಕ ಜೀರಿಗೆ, ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ. ಜೀರಿಗೆ ಮತ್ತು ಉಪ್ಪನ್ನು ಹಾಕಿ. ನಂತರ ಆಲೂಗೆಡ್ಡೆಯನ್ನು ಹಾಕಿ ಬಾಡಿಸಿ. ಸುಮಾರು 5 ನಿಮಿಷ ಬೇಯಿಸಿಕೊಳ್ಳಿ. ಅದರ ಜೊತೆಗೆ ಕತ್ತರಿಸಿಟ್ಟುಕೊಂಡಿರುವ ಪಾಲಾಕ್​ ಸೊಪ್ಪನ್ನು ಹಾಕಿ, ಯಂಗರ್ಟ್​​​ನ್ನು ಹಾಕಿ ಮತ್ತೆ 5 ನಿಮಿಷ ಬೇಯಿಸಿಕೊಳ್ಳಿ. ಈಗ ಆಲೂ ಪಾಲಾಕ್​ ಸಿದ್ದವಾಗಿದೆ. ಉರಿದ ಎಳ್ಳನ್ನು ಆಲೂ ಪಾಲಾಕ್​ ಮೇಲೆ ಉದುರಿಸಿ, ಚಪಾತಿ ಜೊತೆ ತಿನ್ನಲು ಆಲೂ ಪಾಲಾಕ್​ ಚೆನ್ನಾಗಿರುತ್ತದೆ.
First published: