Weight Loss: ತೂಕ ಇಳಿಸಲು ಜಿಮ್​ಗೆ ಹೋಗಲೇ ಬೇಕಿಲ್ಲ, ಲೈಫ್ ಸ್ಟೈಲ್ ಬದಲಿಸೋ ಈ 5 ಐಡಿಯಾ ಫಾಲೋ ಮಾಡಿ ಸಾಕು!

ಊಟಕ್ಕೆ ಮೊದಲು ಒಂದು ಲೋಟ ನೀರನ್ನು ಕುಡಿಯುವುದರಿಂದ ಬೇಗನೆ ನಿಮ್ಮ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ ಮತ್ತು ಆ ಮೂಲಕ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಹದಲ್ಲಿರುವ ಅತಿಯಾದ ತೂಕವನ್ನು(Lose Weight)  ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರು ಬೆಳಗ್ಗೆ ಎದ್ದು ಜಿಮ್‌ಗೆ ಹೋಗಿ ಗಂಟೆ ಗಟ್ಟಲೆ ತಾಲೀಮು (Workout) ಮಾಡಿ ದೇಹದಲ್ಲಿರುವ ಅತಿಯಾದ ಕ್ಯಾಲೋರಿಗಳನ್ನು ಬರ್ನ್ ಮಾಡಿಕೊಳ್ಳುವುದನ್ನು ನಾವು ದಿನನಿತ್ಯ ನೋಡುತ್ತೇವೆ.ಆದರೆ ದಿನನಿತ್ಯ ಬೆವರು ಸುರಿಸಿ ಕಠಿಣವಾದ ತಾಲೀಮು ಮಾಡುವ ಬದಲಿಗೆ ನಮ್ಮ ಜೀವನಶೈಲಿಯಲ್ಲಿ  (Lifestyle) ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಎಂದು ತಜ್ಞರು (Experts)  ಹೇಳುತ್ತಾರೆ. ಅಂದರೆ ನಿಗದಿತ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರಗಳನ್ನು ಸೇವಿಸುವುದು ಮತ್ತು ಈ ಕೆಳಗಿನ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು ಎಂದು ತಜ್ಞರು ಹೇಳುತ್ತಿದ್ದಾರೆ.


ಯಾವುದೇ ಜಿಮ್‌ಗೆ ಹೋಗಿ ಅಥವಾ ಕಠಿಣವಾದ ತಾಲೀಮುಗಳನ್ನು ಮಾಡುವ ಅವಶ್ಯಕತೆಯೇ ಇಲ್ಲದೆ ಬಹು ಬೇಗನೆ ತೂಕ ಇಳಿಸಿಕೊಳ್ಳಲು ನೆರವಾಗುವ ಕೆಲವು ಸರಳ ಮತ್ತು ನಿರಾಯಾಸ ವಿಧಾನಗಳನ್ನು ಇಲ್ಲಿ ನಿಮಗಾಗಿ ತಿಳಿಸಿ ಕೊಡುತ್ತಿದ್ದೇವೆ ಒಮ್ಮೆ ನೋಡಿ.


1. ನೀವು ಬೆಳಗ್ಗೆ ಎದ್ದ ಸಮಯದ 2 ಗಂಟೆಗಳಲ್ಲಿ ಉಪಾಹಾರ ಸೇವಿಸಿ:ಹಗಲಿನಲ್ಲಿ ಹೆಚ್ಚುವರಿ ಕ್ಯಾಲೋರಿ ಸೇವನೆ ತಪ್ಪಿಸಿಕೊಳ್ಳಲು ಬೆಳಗಿನ ಉಪಾಹಾರವನ್ನು ಕೆಲವರು ಬಿಡುವುದನ್ನು ನಾವು ನೋಡುತ್ತೇವೆ. ಆದರೆ ಹೀಗೆ ಮಾಡುವುದರಿಂದ ದೇಹವು ಹಸಿವಿನಿಂದ ಬಳಲಿ ನಂತರದಲ್ಲಿ ಮಾಡುವ ಊಟದಲ್ಲಿ ನಾವು ಅಗತ್ಯಕ್ಕಿಂತಲೂ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುತ್ತೇವೆ.


2. ಹೆಚ್ಚು ಸೇಬು ತಿನ್ನಿ:ಸೇಬು ಹಣ್ಣು ನಾರು, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಒಂದು ಕಡೆ, ದೀರ್ಘಕಾಲದ ರೋಗಗಳ ಅಪಾಯ ತಪ್ಪಿಸಿಕೊಳ್ಳಲು ಸೇಬುಗಳು ಉತ್ತಮ ಮಾರ್ಗ ಎಂದು ಜನರು ಭಾವಿಸುತ್ತಾರೆ.


ಇದನ್ನೂ ಓದಿ: Eye Care Tips: ದಿನವಿಡೀ ಲ್ಯಾಪ್​ಟಾಪ್, ಫೋನ್ ಜೊತೆಗೇ ಕಾಲ ಕಳಿತೀರಾ? ಕಣ್ಣುಗಳ ರಕ್ಷಣಗೆ ತಪ್ಪದೇ ಈ ಕೆಲಸಗಳನ್ನು ಮಾಡಿ

ಈ ವೈವಿಧ್ಯಮಯ ಹಣ್ಣು ನಿಮ್ಮ ತೂಕ ಇಳಿಸುವ ಗುರಿಗಳನ್ನು ಬೆಂಬಲಿಸುವಲ್ಲಿ ಸಹಾಯ ಮಾಡಬಹುದು. ನೀವು ಮಾಡಬೇಕಾಗಿರುವುದು ನಿಮ್ಮ ಅನಾರೋಗ್ಯಕರ ತಿಂಡಿಗಳು ಮತ್ತು ಪೂರ್ವ ತಾಲೀಮು ಆಹಾರಗಳನ್ನು ಈ ಒಂದು ಹಣ್ಣಿನ ಜೊತೆಯಲ್ಲಿ ಬದಲಾಯಿಸುವುದು. ಇದರಿಂದ ನಿಮಗೆ ಹಸಿವು ಆಗುವುದಿಲ್ಲ.


3. ಸಾಕಷ್ಟು ನೀರು ಕುಡಿಯಿರಿ:ತಜ್ಞರು ಸಾಕಷ್ಟು ನೀರನ್ನು ಕುಡಿಯಿರಿ ಎಂದು ತುಂಬಾನೇ ಹೇಳುತ್ತಾರೆ. ಏಕೆಂದರೆ ಹೆಚ್ಚು ನೀರು ಕುಡಿಯುವುದರಿಂದ ಸಹ ನಮ್ಮ ದೇಹದಲ್ಲಿರುವ ತೂಕ ಕಡಿಮೆಯಾಗುತ್ತದೆ. ಪ್ರತಿದಿನ 8 ಲೋಟ ನೀರನ್ನು ಕುಡಿಯುವುದರಿಂದ ಚರ್ಮದ ಆರೋಗ್ಯ ಮತ್ತು ಚಯಾಪಚಯ ಕ್ರಿಯೆ ಚೆನ್ನಾಗಿರುತ್ತದೆ.


ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಜೇನು ತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ವೇಗ ಗೊಳಿಸುತ್ತದೆ. ಊಟಕ್ಕೆ ಮೊದಲು ಒಂದು ಲೋಟ ನೀರನ್ನು ಕುಡಿಯುವುದರಿಂದ ಬೇಗನೆ ನಿಮ್ಮ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ ಮತ್ತು ಆ ಮೂಲಕ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.


4. ಊಟಕ್ಕೆ ಚಿಕ್ಕ ತಟ್ಟೆ ತೆಗೆದುಕೊಳ್ಳಿ:ನಿಮ್ಮ ಊಟ ಅಥವಾ ತಿಂಡಿಗಳಾಗಿರಬಹುದು, ಚಿಕ್ಕ ತಟ್ಟೆಯಲ್ಲಿ ಮಾಡುವುದರಿಂದ ಮಾನಸಿಕ ದೃಷ್ಟಿಕೋನದಿಂದ ಪರಿಣಾಮಕಾರಿಯಾಗಬಹುದು. ಇದು ನೀವು ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚು ತಿಂದಿದ್ದೀರಿ ಎಂದು ನಿಮಗೆ ಅನ್ನಿಸುತ್ತದೆ. ಕಾಲಾನಂತರದಲ್ಲಿ, ಈ ಟ್ರಿಕ್ ಅನುಸರಿಸುವುದರಿಂದ ಅನಗತ್ಯವಾಗಿ ಸೇವಿಸುವ ಆಹಾರವನ್ನು ಕಡಿಮೆ ಮಾಡಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Eye Donation: ನೀವೂ ನೇತ್ರದಾನ ಮಾಡಬೇಕಾ? ಹಾಗಾದ್ರೆ ಈ ರೀತಿ ಮಾಡಿ

5. ಸುಸ್ಥಿರ ಆಹಾರಕ್ಕೆ ಬದ್ಧರಾಗಿ:ಜನರು ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ನಂತರ ಅದನ್ನು ಮತ್ತೆ ಮರಳಿ ಪಡೆಯಲು ಒಂದು ಮುಖ್ಯವಾದ ಕಾರಣವೆಂದರೆ ಅನೇಕ ಬೇರೆ ಬೇರೆ ತರಹದ ಡಯಟ್ ಅನುಸರಿಸುವುದು. ತಜ್ಞರು ಆಹಾರವನ್ನು ಬದಲಾಯಿಸುವುದರ ಕ್ರಮದ ಬಗ್ಗೆ ಎಚ್ಚರಿಸುತ್ತಾರೆ. ವಾಸ್ತವವಾಗಿ ಪ್ರತಿಯೊಂದು ಸಮತೋಲಿತ ಆಹಾರದ ಭಾಗವಾಗಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಡಯಟ್ ಫಾಲೋ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.


Published by:vanithasanjevani vanithasanjevani
First published: